*_____________________*
*ಮಂಗಳನ ಅಂಗಳಕ್ಕೆ ರೋಬೊಟ್*
*ಕೇಪ್ ಕ್ಯಾನವೆರಲ್ (ಎಪಿ): ಆರು ವರ್ಷಗಳ ನಂತರ ಮಂಗಳ ಗ್ರಹಕ್ಕೆ ಗಗನನೌಕೆ ಕಳುಹಿಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’, ಈ ಬಾರಿ ಅಂಗಳವನ್ನು ಆಳವಾಗಿ ಕೊರೆಯುವ ರೋಬೊಟ್ ಕಳುಹಿಸುತ್ತಿದೆ.*
*ನಾಸಾ, ಇದೇ ಶನಿವಾರ ‘ಇನ್‌ಸೈಟ್’ (ಇಂಟೀರಿಯರ್ ಎಕ್ಸ್‌ಪ್ಲೊರೇಷನ್ ಯೂಸಿಂಗ್ ಸೆಸ್ಮಿಕ್ ಇನ್ವೆಸ್ಟಿಗೇಷನ್ಸ್, ಜಿಯೊಡೆಸಿ ಆ್ಯಂಡ್ ಹೀಟ್ ಟ್ರಾನ್ಸ್*
*ಪೋರ್ಟ್) ಗಗನನೌಕೆಯನ್ನು ಮಧ್ಯ ಕ್ಯಾಲಿಫೋರ್ನಿಯಾದ ವ್ಯಾಂಡೆನ್‌ಬರ್ಗ್ ವಾಯು ನೆಲೆಯಿಂದ ಉಡಾವಣೆ ಮಾಡಲಿದೆ. ಇದರಲ್ಲಿ 16 ಅಡಿ ಆಳದವರೆಗೂ ಅಗೆಯುವ ರೋಬೊಟ್, ಮಂಗಳಗ್ರಹದ ಭೂಕಂಪನದ (ಮಾರ್ಸ್‌ಕ್ವ್ಯಾಕ್) ಕುರಿತು ತಿಳಿಸುವ ಸಿಸ್ಮೊಗ್ರಾಫ್ ಇರಲಿದೆ.*
*ಗಗನನೌಕೆಯ ಈ ಲ್ಯಾಂಡರ್ ಸಾಧನಗಳು ಮಂಗಳ ಗ್ರಹದ ತಾಪಮಾನ ಮತ್ತು ಭೂಕಂಪನಗಳ ಕುರಿತು ಅಧ್ಯಯನ ಮಾಡಲು ನೆರವಾಗಲಿವೆ ಎಂದು ಯೋಜನೆಯ ಮುಖ್ಯ ವಿಜ್ಞಾನಿ ಬ್ರೂಸ್ ಬೇನರ್ಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.*
*ಮಂಗಳಗ್ರಹದ ಅತ್ಯಂತ ಆಳವಾದ ಪ್ರದೇಶವನ್ನು ಅಧ್ಯಯನ ಮಾಡಲು ರೂಪಿಸಿರುವ ಮೊದಲ ಯೋಜನೆ ಇದು. ಅಲ್ಲಿನ ಒಳಭಾಗದ ಅಧ್ಯಯನದಿಂದ 450 ಕೋಟಿ ವರ್ಷಗಳ ಹಿಂದೆ ಭೂಮಿಯೂ ಸೇರಿದಂತೆ ಇತರ ಗ್ರಹಗಳು ಹೇಗೆ ರಚನೆಯಾದವು ಎಂಬುದನ್ನು ಅರ್ಥ ಮಾಡಿಕೊಳ್ಳ ಬಹುದು ಎಂದು ಅವರು ವಿವರಿಸಿದ್ದಾರೆ.*
*ಅಲ್ಲದೆ, ಫ್ಲಾರಿಡಾದ ಕೇಪ್ ಕ್ಯಾನವೆರಲ್ ಬಿಟ್ಟು ಬೇರೆ ಜಾಗದಿಂದ ಉಡಾವಣೆಯಾಗುತ್ತಿರುವ ಮೊದಲ ಅಂತರ್‌ಗ್ರಹ ಗಗನನೌಕೆ ಇದು.*
*ಈ ಯೋಜನೆಯ ಇನ್ನೊಂದು ವಿಶೇಷವೆಂದರೆ ಸೂಟ್‌ಕೇಸ್ ಗಾತ್ರದ ಎರಡು ಉಪಗ್ರಹಗಳನ್ನು (ಕ್ಯೂಬ್‌ಸ್ಯಾಟ್ಸ್) ಈ ಗಗನನೌಕೆ ಜತೆ ಕಳುಹಿಸುತ್ತಿರುವುದು. ಮಂಗಳಗ್ರಹದಲ್ಲಿ ಇಳಿದ ಮೇಲೆ ಈ ಉಪಗ್ರಹಗಳು ಪ್ರತ್ಯೇಕಗೊಂಡು, ಗಗನನೌಕೆಯನ್ನು ಹಿಂಬಾಲಿಸಲಿವೆ.*
*ನಾಸಾ ಈ ಹಿಂದೆ ಮಂಗಳಗ್ರಹಕ್ಕೆ ಕಳುಹಿಸಿದ್ದ ಗಗನನೌಕೆಗಳಲ್ಲಿದ್ದ ಕೊರೆಯುವ ಯಂತ್ರಗಳು ಕೆಲ ಇಂಚುಗಳಿಂದ ಹಿಡಿದು ಗರಿಷ್ಠ 8 ಅಡಿಗಳವರೆಗೂ ಅಗೆದಿದ್ದವು.*
*ಯೋಜನೆಯ ವೆಚ್ಚ ₹6,500 ಕೋಟಿ*
*694 ಕೆಜಿ ತೂಕ*
*______________________*
No comments:
Post a Comment