*____-________________*
*ಭಾರತದ 14 ನಗರಗಳಲ್ಲಿ ವಿಪರೀತ ವಾಯುಮಾಲಿನ್ಯ*
*ವಿಶ್ವದ 20 ಅತ್ಯಂತ ಹೆಚ್ಚು ವಾಯುಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳು ಸ್ಥಾನ ಪಡೆದಿವೆ. ಈ 14ರಲ್ಲಿ ಎಲ್ಲಾ ನಗರಗಳೂ ಉತ್ತರ ಭಾರತದ್ದೇ ಆಗಿದ್ದು, ದಕ್ಷಿಣ ಭಾರತದ ಯಾವ ನಗರಗಳೂ ಈ ಪಟ್ಟಿಯಲ್ಲಿಲ್ಲ. ಬೆಂಗಳೂರಿನಲ್ಲಿ 10 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳು (ಪಿಎಂ 10) ಸುರಕ್ಷಿತ ಮಟ್ಟಕ್ಕಿಂತ ತುಸು ಹೆಚ್ಚಿದೆ. ಆದರೆ ಹೆಚ್ಚು ಅಪಾಯಕಾರಿಯಾದ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳು (ಪಿಎಂ 2.5) ಸುರಕ್ಷಿತ ಮಟ್ಟಕ್ಕಿಂತ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ*
https://goo.gl/images/FXAzRs
*ಗಾಳಿ ಕೆಡಲು ಕಾರಣಗಳು*
👉ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರ ಮತ್ತು ಕೈಗಾರಿಕೆಗಳು
👉ನಿರ್ಮಾಣ ಕಾಮಗಾರಿಗಳಿಂದ ಉದ್ಭವಿಸುವ ಮತ್ತು ಬಿರುಗಾಳಿಗಳಿಂದ ಏಳುವ ದೂಳು
👉ವಾಹನಗಳು ಹೊರಸೂಸುವ ಹೊಗೆ
👉ಕೃಷಿ ತ್ಯಾಜ್ಯಗಳಿಗೆ ಬೆಂಕಿ ಇಡುವುದರಿಂದ
👉ಸೌದೆ ಮತ್ತು ಬೆರಣಿ ಒಲೆಗಳ ಬಳಕೆ
*ವಾಯುಮಾಲಿನ್ಯದಿಂದ ಮೃತಪಟ್ಟವರು ತುತ್ತಾಗಿದ್ದ ಕಾಯಿಲೆಗಳು*
👉21 % ನ್ಯುಮೋನಿಯಾ
👉20 % ಪಾರ್ಶ್ವವಾಯು
👉34 % ಹೃದಯ ಸಂಬಂಧಿ ಕಾಯಿಲೆಗಳು
👉18 % ಉಸಿರಾಟದ ತೊಂದರೆ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಇತರ ರೋಗಗಳು
👉7 % ಶ್ವಾಸಕೋಶದ ಕ್ಯಾನ್ಸರ್
*108 ದೇಶಗಳು*
👉4,300 ನಗರಗಳು
👉90% ಜನರು ಮಾಲಿನ್ಯಪೂರಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ
👉70 ಲಕ್ಷ
ಪ್ರತಿ ವರ್ಷ ಜಗತ್ತಿನಲ್ಲಿ ವಾಯುಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳು
👉300 ಕೋಟಿ
ಜನರು ಈಗಲೂ ಅಡುಗೆಗೆ ಸೌದೆ/ಬೆರಣಿ ಒಲೆಯನ್ನೇ ಬಳಸುತ್ತಿದ್ದಾರೆ
*ಪಿಎಂ 2.5 ಹೆಚ್ಚು ಅಪಾಯಕಾರಿ*
👉ಪಿಎಂ 2.5 (ಪರ್ಟಿಕ್ಯುಲೇಟ್ 2.5) ಕಣಗಳ ಗಾತ್ರ 2.5 ಮೈಕ್ರಾನ್‌ನಷ್ಟಿರುತ್ತದೆ. ಇವು ಅತ್ಯಂತ ಸೂಕ್ಷ್ಮ ಕಣಗಳಾದ್ದರಿಂದ ಉಸಿರಾಟದ ವೇಳೆ ಶ್ವಾಸಕೋಶವನ್ನು ಸುಲಭವಾಗಿ ಸೇರುತ್ತವೆ. ಹೀಗಾಗಿ ಗಾತ್ರದಲ್ಲಿ ಇದಕ್ಕಿಂತಲೂ ದೊಡ್ಡದಾಗಿರುವ ಪಿಎಂ 10 ಕಣಗಳಿಗಿಂತ ಪಿಎಂ 2.5 ಹೆಚ್ಚು ಅಪಾಯಕಾರಿ
*ಉತ್ತರ ಭಾರತದಲ್ಲೇ ವಾಯುಮಾಲಿನ್ಯ ಹೆಚ್ಚು*
*(ಇಂಡಿಕೇಟರ್) ಪ್ರತಿ ಘನ ಮೀಟರ್ ಗಾಳಿಯಲ್ಲಿ ಇರುವ ಪಿಎಂ2.5 ಕಣಗಳ ಸರಾಸರಿ ಸಂಖ್ಯೆ*
ಕಾನ್ಪುರ 173
ಫರಿದಾಬಾದ್ 172
ವಾರಾಣಸಿ 151
ಗಯಾ 149
ಪಟ್ನಾ 144
ದೆಹಲಿ 143
ಲಖನೌ 138
ಆಗ್ರಾ 131
ಮುಜಫ್ಫರ್‌ಪುರ 120
ಶ್ರೀನಗರ 113
ಗುರುಗ್ರಾಮ 113
ಜೈಪುರ 105
ಪಟಿಯಾಲಾ 101
ಜೋಧಪುರ 98
(ಆಧಾರ: ಪಿಟಿಐ)
*______________________*
No comments:
Post a Comment