Thursday, 21 June 2018

ಸೂಪರ್ ಪ್ರಶ್ನೋತ್ತರಗಳು

🌺🌺 ಸೂಪರ್ ಪ್ರಶ್ನೋತ್ತರಗಳು 🌺🌺

1) ಯಾವ ಸಾಮ್ರಾಜ್ಯದ ಪಾಲಿಗೆ 18 ನೆಯ
ಶತಮಾನದ ಮೊದಲಾರ್ಧವು ಮಹಾಪತನದ
ಕಾಲವಾಗಿತ್ತು?

* ಮೊಘಲ್ ಸಾಮ್ರಾಜ್ಯದ.

2) ವಾಸ್ಕೋಡಿಗಾಮ ಯಾವ ದೇಶದ ನಾವಿಕ?

* ಪೋರ್ಚುಗೀಸ್.

3) ಬ್ರಿಟಿಷ್ ಭಾರತದ ಸೃಷ್ಠಿಗೆ ಕಾರಣನಾದ
ಪ್ರಥಮ ಅಧಿಕಾರಿ ಯಾರು?

* ರಾಬರ್ಟ್ ಕ್ಲೈವ್.

4) ದಿವಾನಿ ಹಕ್ಕು ಎಂದರೆ ------.

* ಭೂಕಂದಾಯ ವಸೂಲಿ ಮಾಡುವ ಹಕ್ಕು.

5) ರಾಬರ್ಟ್ ಕ್ಲೈವ್ ದ್ವಿ-ಸರ್ಕಾರವನ್ನು ಎಲ್ಲಿ
ಜಾರಿಗೆ ತಂದನು?

* ಬಂಗಾಳದಲ್ಲಿ.

6) ಈಸ್ಟ್ ಇಂಡಿಯಾ ಕಂಪನಿಯನ್ನು ಯಾವಾಗ
ಸ್ಥಾಪಿಸಲಾಯಿತು?

* 1600 ರಲ್ಲಿ.

7) ಈಸ್ಟ್ ಇಂಡಿಯಾ ಕಂಪನಿಯನ್ನು ಎಲ್ಲಿ
ಸ್ಥಾಪಿಸಲಾಯಿತು?

* ಇಂಗ್ಲೆಂಡ್ ನಲ್ಲಿ.

8) 1781 ರಲ್ಲಿ ಯಾರ ನೇತೃತ್ವದಲ್ಲಿ
ಇಂಗ್ಲೀಷ್ ಸೈನ್ಯವು ಹೈದರಾಲಿಯನ್ನು
ಯುದ್ಧದಲ್ಲಿ ಸೋಲಿಸಿತು?

* ಸರ್ ಐರ್ ಕೂಟ್ ನ.

9) ಶ್ರೀರಂಗಪಟ್ಟಣ ಒಪ್ಪಂದವಾದದ್ದು
ಯಾವಾಗ?

* 1792 ರಲ್ಲಿ.

10) ಯಾವ ಒಡೆಯರ ಕಾಲದಲ್ಲಿ ಮೈಸೂರು
ರಾಜ್ಯವು ರಾಮರಾಜ್ಯ ಎಂಬ ಕೀರ್ತಿಗೆ
ಪಾತ್ರವಾಯಿತು?

* ನಾಲ್ವಡಿ ಕೃಷ್ಣರಾಜ ಒಡೆಯರ್.

11) "ಹಲಗಲಿ" ಬಾಗಲಕೋಟೆ ಜಿಲ್ಲೆಯ ಯಾವ
ತಾಲ್ಲೂಕಿನಲ್ಲಿದೆ?

* ಮುಧೋಳ.

12) 1836 ರಲ್ಲಿ ----- ದಿಂದ
ಬೆಳಗಾವಿಯನ್ನು ಬೇರ್ಪಡಿಸಲಾಯಿತು?

* ಧಾರವಾಡ.

13) ಕನ್ನಡ ಮಾತನಾಡುವ ಬಳ್ಳಾರಿ,
ದಕ್ಷಿಣಕನ್ನಡ ಪ್ರದೇಶಗಳು 19 ನೇ
ಶತಮಾನದಲ್ಲಿ ಯಾವ ಪ್ರಾಂತದ ಆಳ್ವಿಕೆಗೆ
ಒಳಪಟ್ಟಿದ್ದವು?

* ಮದ್ರಾಸ್.

14) ಸುಮಾರು 8 ಶತಮಾನಗಳ ಕಾಲ
ಕೊಡಗನ್ನು ಆಳ್ವಿಕೆ ಮಾಡಿದವರು ಯಾರು?

* ಚೆಂಗಾಳ್ವರು.

15) ಯಾವ ಶಾಸನ ಜಾರಿಗೆ ಬರುವುದರ
ಮೂಲಕ ದ್ವಿಮುಖ ಸರ್ಕಾರ ರದ್ದಾಯಿತು?

* 1773 ರ ರೆಗ್ಯುಲೇಟಿಂಗ್ ಶಾಸನ.

16) ಭಾರತದ ಮೊದಲನೆಯ ಗವರ್ನರ್ ಜನರಲ್
ಯಾರು?

* ವಾರನ್ ಹೆಸ್ಟಿಂಗ್ಸ್.

17) ಪಿಟ್ಸ್ ಇಂಡಿಯಾ ಶಾಸನ ಜಾರಿಗೆ
ಬಂದದ್ದು ಯಾವಾಗ?

* 1784 ರಲ್ಲಿ.

18) ಭಾರತದ ಇತಿಹಾಸದಲ್ಲಿ ಯಾವ
ಶತಮಾನವನ್ನು "ಭಾರತೀಯ ನವೋದಯ"
ಕಾಲವೆಂದು ಕರೆಯಲಾಗಿದೆ?

* 19 ನೇ.

19) "ವೇದಗಳಿಗೆ ಹಿಂದಿರುಗಿ" ಎನ್ನುವ ಘೋಷಣೆ
ಮಾಡಿದವರು ಯಾರು?

* ಸ್ವಾಮಿ ದಯಾನಂದ ಸರಸ್ವತಿ.

20) ಜ್ಯೋತಿಬಾ ಪುಲೇಯವರು ಯಾವ
ಸಮಾಜವನ್ನು ಸ್ಥಾಪಿಸಿದರು?

* ಸತ್ಯಶೋಧಕ ಸಮಾಜ.

21) "ಪ್ರಾರ್ಥನಾ ಸಮಾಜ"ವನ್ನು
ಆತ್ಮಾರಾಂ ಪಾಂಡುರಂಗರವರು ಎಲ್ಲಿ
ಸ್ಥಾಪಿಸಿದರು?

* ಮುಂಬೈನಲ್ಲಿ.

22) "ಶುದ್ಧಿ ಚಳುವಳಿ"ಯನ್ನು
ಪ್ರಾರಂಭಿಸಿದವರು ಯಾರು?

* ಸ್ವಾಮಿ ದಯಾನಂದ ಸರಸ್ವತಿ.

23) ಪುಲೇಯವರು ಶೋಷಣೆಯ ಬಗ್ಗೆ ಯಾವ
ಪುಸ್ತಕದಲ್ಲಿ ತಿಳಿಸಿದ್ದಾರೆ?

* ಗುಲಾಮಗಿರಿ.

24) ರಾಮಕೃಷ್ಣ ಪರಮಹಂಸರು
ದಕ್ಷಿಣೇಶ್ವರದಲ್ಲಿನ ಯಾವ ದೇವಾಲಯದ
ಅರ್ಚಕರಾಗಿದ್ದರು?

* ಕಾಳಿ.

25) ರಾಮಕೃಷ್ಣ ಮಿಷನ್ ನ್ನು ಸ್ಥಾಪಿಸಿದವರು
ಯಾರು?

* ಸ್ವಾಮಿ ವಿವೇಕಾನಂದರು.

26) ಸ್ವಾಮಿ ವಿವೇಕಾನಂದರು ಚಿಕಾಗೋ
ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು
ಯಾವಾಗ?

* 1893 ರಲ್ಲಿ.

27) ಥಿಯಾಸಾಫಿಕಲ್ ಸೊಸೈಟಿಯ ಮೂಲ
ಸ್ಥಾಪಕರು ಯಾರಾರು?

* ಮ್ಯಾಡಮ್ ಬ್ಲಾವಟಿಸ್ಕಿ ಮತ್ತು ಕರ್ನಲ್
ಎಚ್. ಎಸ್.ಅಲ್ಕಾಟ್.

28) 1916 ರಲ್ಲಿ ಹೋಂರೂಲ್
ಚಳುವಳಿಯನ್ನು ಪ್ರಾರಂಭಿಸಿದವರು ಯಾರು?
* ಆನಿ ಬೆಸೆಂಟ್.

29) ಕಾನ್ಪುರ್ ದಲ್ಲಿ ಸಿಡಿದೆದ್ದವನು ಯಾರು?

* ನಾನಾ ಸಾಹೇಬ್.

30) ಝಾನ್ಸೀಯಲ್ಲಿ ಯಾರ ನಾಯಕತ್ವದಲ್ಲಿ
ದಂಗೆ ಉಂಟಾಯಿತು?

* ರಾಣಿ ಲಕ್ಷ್ಮೀ ಬಾಯಿ.

31) 'ನಾನಾ ಸಾಹೇಬ್'ನ ಸಹಾಯಕ ಯಾರು?
* ತಾತ್ಯಾಟೋಪೆ.

32) ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದ್ದು
ಯಾವಾಗ?

* 1858 ರಲ್ಲಿ.

33) "ಟೈಮ್ಸ್ ಆಫ್ ಇಂಡಿಯಾ" ಪ್ರಕಟಗೊಂಡ
ಸ್ಥಳ ಯಾವುದು?

* ಮುಂಬೈ.

34) "ಸೋಮೆ ಪ್ರಕಾಶ" ಎಂಬ ಬಂಗಾಳ
ಪತ್ರಿಕೆಯ ಸಂಪಾದಕರು ಯಾರು?

* ಈಶ್ವರಚಂದ್ರವಿದ್ಯಾಸಾಗರ.

35) "ದಿ ಬೆಂಗಾಲ್ ಗೆಜೆಟ್" ಆರಂಭಿಸಿದವರು
ಯಾರು?

* ಆಗಸ್ಟ್ ಹಿಕಿ.

36) "ಇಲ್ಬರ್ಟ್ ಮಸೂದೆ"ಯನ್ನು ಜಾರಿಗೆ
ತಂದವನು ಯಾರು?

* ಲಾರ್ಡ್ ರಿಪ್ಪನ್.

37) ಬಂಗಾಳದ ವಿಭಜನೆಯನ್ನು ಬ್ರಿಟಿಷ್
ಸರ್ಕಾರವು ಹಿಂಪಡೆದದ್ದು ಯಾವಾಗ?

* 1911 ರಲ್ಲಿ.

38) "ವರ್ತಮಾನ ರಣನೀತಿ" ಪುಸ್ತಕದ ಕರ್ತೃ
ಯಾರು?

* ಅರವಿಂದ್ ಘೋಷ್.

39) "ಹಿಂದ್ ಸ್ವರಾಜ್" ಪತ್ರಿಕೆಯ ಸಂಪಾದಕರು
ಯಾರು?

* ಮಹಾತ್ಮ ಗಾಂಧೀಜಿ.

40) 1919 ರ ರೌಲತ್ ಕಾಯ್ದೆಯು ಯಾವ
ತಿಂಗಳಲ್ಲಿ ಜಾರಿಗೆ ಬಂದಿತು?

* ಫೆಬ್ರವರಿ.

41) "ಗಾಂಧಿಯುಗದ" ಅವಧಿಯನ್ನು ತಿಳಿಸಿರಿ?

* 1920-1947.

42) "ಸ್ವರಾಜ್ ಪಕ್ಷ" ಸ್ಥಾಪನೆಯಾದದ್ದು
ಯಾವಾಗ?

* 1922 ರಲ್ಲಿ.

43) "ಕ್ವಿಟ್ ಇಂಡಿಯಾ ಚಳುವಳಿ" ನಡೆದದ್ದು
ಯಾವಾಗ?

* 1942 ರಲ್ಲಿ.

44) ಕಾರ್ಮಿಕರ ಹೋರಾಟವು 1827 ರಲ್ಲಿ
ಎಲ್ಲಿ ಆರಂಭವಾಯಿತು?

* ಕಲ್ಕತ್ತಾದಲ್ಲಿ.

45) ಬ್ರಿಟಿಷರು ಜಾರಿಗೆ ತಂದ ಖಾಯಂ
ಜಮೀನ್ದಾರಿ ಪದ್ದತಿಯಿಂದ ಯಾವ ಬುಡಕಟ್ಟು
ಜನರು ನಿರ್ಗತಿಕರಾದರು?

* ಸಂತಾಲ.

46) 1938 ರ ಕಾಂಗ್ರೆಸ್ ಅಧಿವೇಶನ ಎಲ್ಲಿ
ನಡೆಯಿತು?

* ತ್ರಿಪುರದಲ್ಲಿ.

47) "ಫಾರ್ವರ್ಡ್ ಬ್ಲಾಕ್" ಎಂಬುವದೊಂದು
-----.
* ಹೊಸ ಪಕ್ಷ.

48) "ಫಾರ್ವರ್ಡ್ ಬ್ಲಾಕ್" ಎಂಬ ಹೊಸ ಪಕ್ಷ
ಕಟ್ಟಿದವರು ಯಾರು?

* ಸುಭಾಷ್ ಚಂದ್ರಬೋಸ್.

49) "ದೆಹಲಿ ಚಲೋ"ಗೆ ಕರೆ ನೀಡಿದವರು
ಯಾರು?

* ಸುಭಾಷ್ ಚಂದ್ರಬೋಸ್.

50) 'ಮಹದ್' ಮತ್ತು 'ಕಾಲಾರಾಂ'
ದೇವಾಲಯ ಚಳುವಳಿಗಳನ್ನು ಆರಂಭಿಸಿದವರು
ಯಾರು?

* ಡಾ.ಬಿ.ಆರ್.ಅಂಬೇಡ್ಕರ್.

Wednesday, 20 June 2018

Indian geography

*Geography General Keywords*

1) ವಲಸೆಯಲ್ಲಿ ಮುಖ್ಯವಾಗಿ ಎಷ್ಟು ವಿಧಗಳಿವೆ?
* ಎರಡು.

2) ಅತೀ ಕಡಿಮೆ ಲಿಂಗಾನುಪಾತ ಹೊದಿರುವ ರಾಜ್ಯ ಯಾವುದು?
* ಹರಿಯಾಣ. (ಪ್ರತಿ ಸಾವಿರ ಪುರುಷರಿಗೆ 877 ಮಹಿಳೆಯರು).

3) 'ಬಿಮಾರು' ಎಂದರೆ ------.
* ರೋಗಗ್ರಸ್ತ ರಾಜ್ಯಗಳು.

4) ಬಿಮಾರು ರಾಜ್ಯಗಳನ್ನು ಹೆಸರಿಸಿರಿ?
* 1) ಬಿಹಾರ.
   2) ಮಧ್ಯಪ್ರದೇಶ.
   3) ರಾಜಸ್ಥಾನ.
   4) ಉತ್ತರಪ್ರದೇಶ.

5) ದಿಹಾಂಗ & ದಿಬಾಂಗ್ ಯಾವ ನದಿಯ ಉಪನದಿಗಳು?
* ಬ್ರಹ್ಮಪುತ್ರ.

6) ರಾಜ್ಯದಲ್ಲಿ ಸಕ್ಕರೆ ಕೈಗಾರಿಕೆಗಳು ಅತಿ ಹೆಚ್ಚು ಕಂಡು ಬರುವ ಜಿಲ್ಲೆ ಯಾವುದು?
* ಬೆಳಗಾವಿ

7) ದೇಶದಲ್ಲಿ ಒಟ್ಟು ಎಷ್ಟು ಕಾಗದ ಕೈಗಾರಿಕೆಗಳಿವೆ?
* 568.

8) ಪ್ರಪಂಚದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರ ಯಾವುದು?
* ಬ್ರೆಜಿಲ್.

9) ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
* ಭಾರತ.

10) ಅಲ್ಯೂಮೀನಿಯಂ ಇತ್ತೀಚೆಗೆ ಅಂದರೆ ----- ರಲ್ಲಿ ಶೋಧಿಸಲ್ಪಟ್ಟಿತು?
* 1886 ರಲ್ಲಿ.

11) ರೊರ್ಕೆಲಾ ಐರನ್ ಮತ್ತು ಸ್ಟೀಲ್ ಕಂಪನಿ ಯಾವ ರಾಜ್ಯದಲ್ಲಿದೆ?
* ಒರಿಸ್ಸಾ.

12) ಕೊಲ್ಕತ್ತಾದ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರು ಯಾವುದು?
* ಹಾಲ್ಡಿಯಾ.

13) ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಬಂದರು ಯಾವುದು?
* ಪಾರಾದೀಪ.

14) ಯಾವ ಬಂದರು ಕಚ್ ಖಾರಿಯ ಶಿರೋಭಾಗದಲ್ಲಿದೆ?
* ಕಾಂಡ್ಲಾ.

15) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
* ಚೆನ್ನೈ.

16) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ಹೆಸರೇನು?
* ಮೀನಂಬಾಕಂ.

17) ಸಾರಿಗೆಯಲ್ಲಿ ಮುಖ್ಯವಾಗಿ ಎಷ್ಟು ಪ್ರಕಾರಗಳಿವೆ?
* 4.

18) ಮೊದಲನೇ ತೈಲ ಬಾವಿಯ ನ್ನು ಎಲ್ಲಿ ಕೊರೆಯಲಾಯಿತು?
* ಅಂಕಲೇಶ್ವರ.

19) ಅಂಕಲೇಶ್ವರ ಯಾವ ರಾಜ್ಯದಲ್ಲಿದೆ?
* ಗುಜರಾತ್.

20) ಸದ್ಯದಲ್ಲಿ ---- ದೇಶದಲ್ಲಿಯೇ ಅತಿಹೆಚ್ಚು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ?
* ಹಟ್ಟಿ ಗಣಿ.

21) ಹಟ್ಟಿ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ?
* ರಾಯಚೂರು.

By RBS

22) ಗಯಾ : ಬಿಹಾರ :: ಧನಭಾದ್ : --------.
* ಜಾರ್ಖಂಡ.

23) ಸೇಲಂ : ತಮಿಳುನಾಡು :: ಉದಯಪುರ : -------.
* ರಾಜಸ್ಥಾನ.

24) ತಿರುವನಂತಪುರ : ಕೇರಳ :: ಜಿಂದ್ವಾರ : -----.
* ಮಧ್ಯಪ್ರದೇಶ.

25) ಕಬ್ಬಿಣೇತರ ವರ್ಗದ ಖನಿಜಗಳಲ್ಲಿ ಯಾವುದು ಅತಿ ಮುಖ್ಯವಾದ ಅದಿರಾಗಿದೆ?
* ಅಭ್ರಕ.

26) ಜಾಮನಗರ : ಗುಜರಾತ್ :: ಕೋರಾಪಟ್ : ------.
* ಒಡಿಶಾ.

27) ಅಲ್ಯೂಮೀನಿಯಂ ಲೋಹದ ಮುಖ್ಯ ಅದಿರು ಯಾವುದು?
* ಬಾಕ್ಸೈಟ್.

28) 20 ನೇ ಶತಮಾನದ ಅದ್ಭುತ ಲೋಹ ಎಂದು ಯಾವುದನ್ನು ಕರೆಯಲಾಗುತ್ತದೆ?
* ಬಾಕ್ಸೈಟ್.

29) ಟಾಟಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
   * ಮಹಾರಾಷ್ಟ್ರ.                                        30) ತಾವಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
* ಬಿಹಾರ.

31) ಭಾರತವು ಉತ್ಪಾದಿಸುತ್ತಿರುವ ವಿದ್ಯುತ್ತಿನಮೂಲಗಳಲ್ಲಿ ಜಲ ವಿದ್ಯುತ್ ಎಷ್ಟನೇ ಸ್ಥಾನವನ್ನು ಹೊಂದಿದೆ?
* ಎರಡನೇ.

32) ಕರ್ನಾಟಕದ ಅತಿದೊಡ್ಡ ನದಿಕಣಿವೆ ಯೋಜನೆ ಯಾವುದು?
* ಕೃಷ್ಣಾ ಮೇಲ್ದಂಡೆ ಯೋಜನೆ.

33) "ಬಿಹಾರದ ಕಣ್ಣಿರಿನ ನದಿ" ಯಾವುದು?
* ಕೋಸಿ ನದಿ.

34) ಭಾರತದಲ್ಲಿಯೇ ಅತ್ಯಂತ ಎತ್ತರವಾದ ನದಿ ಕಣಿವೆ ಯೋಜನೆ ಯಾವುದು?
* ಭಾಕ್ರಾನಂಗಲ್ ಯೋಜನೆ.

35) ಭರತಪುರ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.

36) ಮದಾರಿಹಾತ್ ಮತ್ತು ಜಾಲ್ದಾಪಾರ ವನ್ಯ ಜೀವಿಧಾಮಗಳು ಯಾವ ರಾಜ್ಯದಲ್ಲಿವೆ?
* ಪಶ್ಚಿಮಬಂಗಾಳ.

37) ಅಣ್ಣಾಮಲೈ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.

38) ಭಾರತದಲ್ಲಿ ಅತಿಕಡಿಮೆ ಮಳೆ ಪಡೆಯುವ ಪ್ರದೇಶ ಯಾವುದು?
* ರೂಯ್ಲಿ.

39) ರೂಯ್ಲಿ ರಾಜಸ್ಥಾನದ ಯಾವ ಜಿಲ್ಲೆಯಲ್ಲಿದೆ?
* ಜೈಸಲ್ಮೇರ್.

40) ಬೇಸಿಗೆಯಲ್ಲಿ ದೇಶವು ವಾರ್ಷಿಕ ಮಳೆಯ ಶೇ. ----- ರಷ್ಟನ್ನು ಮಾತ್ರ ಪಡೆಯುತ್ತದೆ?
* 10 '/.

41) ನೈಋತ್ಯ ಮಾನ್ಸೂನ ಕಾಲ ಅಥವಾ ಮುಂಗಾರು ಮಳೆಗಾಲದ ಅವಧಿ ತಿಳಿಸಿರಿ?
* ಜೂನ್ - ಸೆಪ್ಟೆಂಬರ್

Sunday, 17 June 2018

ಪ್ರಮುಖ ಕದನಗಳು

* ಪ್ರಮುಖ ಕದನಗಳು*
━━━━━━━━━━━━━━━━━
1. ಮೊದಲನೆಯ ತರೈನ್ ಕದನ:
* ನಡೆದ ಇಸ್ವಿ : ಕ್ರಿ.ಶ. 1191
* ಫಲಿತಾಂಶ: ಪೃಥ್ವಿರಾಜ್ ಚೌಹಾನ್ ಮೊಹಮ್ಮದ್ ಘೋರಿ ನನ್ನು ಸೋಲಿಸಿದನು.
━━━━━━━━━━━━━━━━━
2. ಎರಡನೆಯ ತರೈನ್ ಕದನ :
* ನಡೆದ ಇಸ್ವಿ : ಕ್ರಿ.ಶ.1192
* ಫಲಿತಾಂಶ: ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾನ್ ನನ್ನು ಸೋಲಿಸಿದನು.
━━━━━━━━━━━━━━━━━
3. ಮೊದಲನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1526
* ಫಲಿತಾಂಶ: ಬಾಬರ್ ಇಬ್ರಾಹಿಂ ಲೋದಿನನ್ನು ಸೋಲಿಸಿದನು.
━━━━━━━━━━━━━━━━━
4. ಖನವಾ ಕದನ :
* ನಡೆದ ಇಸ್ವಿ : ಕ್ರಿ.ಶ.1527
* ಫಲಿತಾಂಶ: ಬಾಬರ್ ರಾಣಾ ಶುಂಗನನ್ನು ಸೋಲಿಸಿದನು. ಇದು ಭಾರತದಲ್ಲಿ ಬಾಬರ್ ಮತ್ತಷ್ಟು ತನ್ನ ಹೆಗ್ಗುರುತು ಬಲಪಡಿಸುವಲ್ಲಿ ಸಹಕಾರಿಯಾಯಿತು.
━━━━━━━━━━━━━━━━━
5. ಘಾಘ್ರ ಕದನ :
* ನಡೆದ ಇಸ್ವಿ : ಕ್ರಿ.ಶ.1529
* ಫಲಿತಾಂಶ: ಬಾಬರ್ ನು ಮಹಮೂದ್ ಲೋದಿ ಮತ್ತು ಸುಲ್ತಾನ್ ನುಸ್ರತ್ ಶಾರನ್ನು ಸೋಲಿಸಿದನು. ಈ ಯುದ್ಧ ಭಾರತದಲ್ಲಿ ಮುಘಲ್ ಆಡಳಿತದ ಸ್ಥಾಪನೆಗೆ ಕಾರಣೀಭೂತವಾಯಿತು.
━━━━━━━━━━━━━━━━━
6. ಎರಡನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1556
* ಫಲಿತಾಂಶ: ಅಕ್ಬರ್ ಹೇಮುನನ್ನು ಸೋಲಿಸಿದನು.
━━━━━━━━━━━━━━━━━
7. ಮೂರನೇಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1761
* ಫಲಿತಾಂಶ: ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು.
━━━━━━━━━━━━━━━━━
8. ತಾಳಿಕೋಟೆ ಕದನ :
* ನಡೆದ ಇಸ್ವಿ : ಕ್ರಿ.ಶ.1565
* ಫಲಿತಾಂಶ: ಡೆಕ್ಕನ್ ಸುಲ್ತಾನರು ಖ್ಯಾತಿವೆತ್ತ ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದರು.
━━━━━━━━━━━━━━━━━
9.ಹಲ್ದಿಘಾಟಿ ಕದನ :
* ನಡೆದ ಇಸ್ವಿ : ಕ್ರಿ.ಶ.1576
* ಫಲಿತಾಂಶ: ಮೊಘಲ್ ಸೇನೆಯ ನೇತೃತ್ವದಲ್ಲಿ ರಾಜ ಮಾನ್ ಸಿಂಗ್ ಮತ್ತು ಮೇವಾರದ ರಾಣ ಪ್ರತಾಪ್ ನಡುವೆ ನಿರ್ಣಾಯಕ ಯುದ್ಧ ನಡೆಯಿತು.
━━━━━━━━━━━━━━━━━
10.ಪ್ಲಾಸೀ ಕದನ :
* ನಡೆದ ಇಸ್ವಿ : ಕ್ರಿ.ಶ.1757
* ಫಲಿತಾಂಶ: ಬ್ರಿಟಿಷರು ಮೀರ್ ಜಾಫರ್ ನ ಸಹಾಯದಿಂದ ಸಿರಾಜ್ - ಉದ್-ದೌಲಾನನ್ನು ಸೋಲಿಸಿದರು. ಈ ಯುದ್ಧ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿತು.
━━━━━━━━━━━━━━━━━
11. ವಾಂಡಿವಾಷ್ ಕದನ :
* ನಡೆದ ಇಸ್ವಿ : ಕ್ರಿ.ಶ.1760
* ಫಲಿತಾಂಶ: ಬ್ರಿಟಿಷರು ಭಾರತದಲ್ಲಿ ನಿರ್ಣಾಯಕವಾಗಿ ಫ್ರೆಂಚರನ್ನು ಸೋಲಿಸಿದರು. ಯೂರೋಪಿನಲ್ಲಿನ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ನಡೆದ ಏಳು ವರ್ಷಗಳ ಯುದ್ಧ (1756 -1763) ಈ ಯುದ್ಧಕ್ಕೆ ಕಾರಣ. ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು ಮತ್ತು ಈ ಯುದ್ಧವು ಮೂರನೇಯ ನೇ ಕಾರ್ನಾಟಿಕ್ ಯುದ್ದದ ಭಾಗವಾಗಿತ್ತು.
━━━━━━━━━━━━━━━━━
12. ಬಕ್ಸಾರ್ ಕದನ :
* ನಡೆದ ಇಸ್ವಿ : ಕ್ರಿ.ಶ.1764
* ಫಲಿತಾಂಶ: ಬ್ರಿಟಿಷರು ಮೀರ್ ಖಾಸಿಮ್, ಶುಜಾ-ಉದ್-ದೌಲಾ (ಔದ್ಧಿನ ನವಾಬ್) ಮತ್ತು ಶಾ ಆಲಮ್ II (ಮೊಘಲ್ ಚಕ್ರವರ್ತಿ) ರು ಒಡಗೂಡಿದ ಸಂಯೋಜಿತ ಪಡೆಗಳನ್ನು ಸೋಲಿಸಿದರು.
━━━━━━━━━━━━━━━━━
13.ಸಮುಘರ್ ಕದನ :
* ನಡೆದ ಇಸ್ವಿ : ಕ್ರಿ.ಶ.1658
* ಫಲಿತಾಂಶ: ಔರಂಗಜೇಬನು ದಾರಾ ಶಿಕೊಹ್ ನನ್ನು ಸೋಲಿಸಿದನು.
━━━━━━━━━━━━━━━━━
14.ಕರ್ನಾಲ್ ಕದನ :
* ನಡೆದ ಇಸ್ವಿ : ಕ್ರಿ.ಶ.1739
* ಫಲಿತಾಂಶ: ನಾದಿರ್ ಷಾನು ಮುಘಲ್ ದೊರೆ ಮೊಹಮ್ಮದ್ ಶಾನನ್ನು ಸೋಲಿಸಿದರು.
━━━━━━━━━━━━━━━━━

━━━━━━━━━━━━━━━━━
1. 3ನೆಯ ಶತಮಾನಕ್ಕಿಂತ ಮುಂಚೆ-- ಶಾತವಾಹನರು
* ಪ್ರಮುಖ ರಾಜರು :---ಶ್ರೀಮುಖ, ಗೌತಮಿಪುತ್ರ
━━━━━━━━━━━━━━━━━
2. ಕ್ರಿ.ಶ. 325-540 -- ಕದಂಬರು
* ಪ್ರಮುಖ ರಾಜರು :--ಮಯೂರವರ್ಮ
━━━━━━━━━━━━━━━━━
3. 325-999 -- ಗಂಗರು
* ಪ್ರಮುಖ ರಾಜರು :--ಅವಿನೀತ, ದುರ್ವಿನೀತ, ರಾಚಮಲ್ಲ
━━━━━━━━━━━━━━━━━
4. 500-757 -- ಬಾದಾಮಿ ಚಾಲುಕ್ಯರು
* ಪ್ರಮುಖ ರಾಜರು :-- ಮಂಗಳೇಶ, ಪುಲಿಕೇಶಿ
━━━━━━━━━━━━━━━━━
5. 757-973 -- ರಾಷ್ಟ್ರಕೂಟರು
* ಪ್ರಮುಖ ರಾಜರು :--ಕೃಷ್ಣ, ಗೋವಿಂದ, ನೃಪತುಂಗ
━━━━━━━━━━━━━━━━━
6. 973-1198 -- ಕಲ್ಯಾಣದ ಚಾಲುಕ್ಯರು
* ಪ್ರಮುಖ ರಾಜರು :--ವಿಕ್ರಮಾದಿತ್ಯ
━━━━━━━━━━━━━━━━━
7. 1198-1312 -- ದೇವಗಿರಿ ಯಾದವರು
* ಪ್ರಮುಖ ರಾಜರು :--ಸಿಂಗಾಹನ
━━━━━━━━━━━━━━━━━
8. 1000-1346 -- ಹೊಯ್ಸಳರು
* ಪ್ರಮುಖ ರಾಜರು :-- ವಿಷ್ಣುವರ್ಧನ
━━━━━━━━━━━━━━━━━
9. 1336-1565 -- ವಿಜಯನಗರದ ಅರಸರು
* ಪ್ರಮುಖ ರಾಜರು :-- ಕೃಷ್ೞದೇವರಾಯ
━━━━━━━━━━━━━━━━━
10. 1347-1527 -- ಬಹಮನಿ ಸುಲ್ತಾನರು
* ಪ್ರಮುಖ ರಾಜರು :-- ಮಹಮದ್ ಷಾ ೧,೨
━━━━━━━━━━━━━━━━━
11. 1490-1696 -- ಬಿಜಾಪುರ ಸುಲ್ತಾನರು
* ಪ್ರಮುಖ ರಾಜರು :-- ಯೂಸುಫ್ ಆದಿಲ್ ಷಾ, ಇಬ್ರಾಹಿಮ್ ಆದಿಲ್ ಷಾ
━━━━━━━━━━━━━━━━━
12. 1500-1763 -- ಕೆಳದಿಯ ಅರಸರು
* ಪ್ರಮುಖ ರಾಜರು :-- ಚೌಡಪ್ಪನಾಯಕ, ರಾಣಿ ಚನ್ನಮ್ಮ, ಶಿವಪ್ಪನಾಯಕ
━━━━━━━━━━━━━━━━━
13. 1399-1761 -- ಮೈಸೂರು ಒಡೆಯರು
* ಪ್ರಮುಖ ರಾಜರು :-- ರಣಧೀರ ಕಂಠೀರವ, ಚಿಕ್ಕದೇವರಾಯ
━━━━━━━━━━━━━━━━━
14. 1761-1799 -- ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
━━━━━━━━━━━━━━━━━
15. 1800-1831 -- ಮೈಸೂರು ಒಡೆಯರು -ಕೃಷ್ೞರಾಜ ಒಡೆಯರ್
━━━━━━━━━━━━━━━━━
16. 1800 -- ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವನ್ನು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಲಾಯಿತು.
━━━━━━━━━━━━━━━━━
17. 1831-1881 -- ಬ್ರಿಟಿಷರು -ಆಂಗ್ಲರ ಆಧಿಪತ್ಯ
━━━━━━━━━━━━━━━━━
18. 1881-1950 -- ಮೈಸೂರು ಒಡೆಯರು -ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
━━━━━━━━━━━━━━━━━
19. 1956 -- ಇಂದಿನ ಕರ್ನಾಟಕದ ರಚನೆ
━━━━━━━━━━━━━━━━━

ಸಮಾಸಗಳು (samaasagalu)
━━━━━━━━━━━━━━━━━

ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.
ಉದಾ:
ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು
ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

ವಿಗ್ರಹ ವಾಕ್ಯ
━━━━━━━━━━━━━━━━━

ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.
ಉದಾ:
ಸಮಸ್ತಪದ = ಪೂರ್ವಪದ + ಉತ್ತರ ಪದ
ದೇವಮಂದಿರ= ದೇವರ + ಮಂದಿರ
ಹೆಜ್ಜೇನು=ಹಿರಿದು + ಜೇನು
ಮುಂಗಾಲು= ಕಾಲಿನ + ಮುಂದು
(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ.)

ಸಮಾಸ ಪದಗಳಾಗುವ ಸನ್ನಿವೇಶಗಳು
━━━━━━━━━━━━━━━━━

1> ಸಂಸ್ಕೃತ-ಸಂಸ್ಕೃತ ಶಬ್ಧಗಳು ಸೇರಿ
2> ಕನ್ನಡ-ಕನ್ನಡ ಶಬ್ಧಗಳು ಸೇರಿ
3> ತದ್ಬವ-ತದ್ಬವ ಶಬ್ಧಗಳು ಸೇರಿ
4> ಅಚ್ಚಗನ್ನಡ ಶಬ್ಧ – ತದ್ಬವ ಶಬ್ಧಗಳು ಸೇರಿ ಸಮಾಸಪದಗಳಾಗುತ್ತವೆ.
ಆದರೆ ಕನ್ನಡಕ್ಕೆ – ಸಂಸ್ಕೃತ ಶಬ್ಧಗಳು ಸೇರಿ ಸಮಾಸವಾಗಲಾರದು.
━━━━━━━━━━━━━━━━━
ಸಮಾಸದ ವಿಧಗಳು
━━━━━━━━━━━━━━━━━

1> ತತ್ಪುರುಷ ಸಮಾಸ
2> ಕರ್ಮಧಾರೆಯ ಸಮಾಸ
3> ದ್ವಿಗು ಸಮಾಸ
4> ಅಂಶಿ ಸಮಾಸ
5> ದ್ವಂದ್ವ ಸಮಾಸ
6> ಬಹುವ್ರೀಹಿ ಸಮಾಸ
7> ಕ್ರಿಯಾ ಸಮಾಸ
8> ಗಮಕ ಸಮಾಸ
━━━━━━━━━━━━━━━━━
1> ತತ್ಪುರುಷ ಸಮಾಸ

ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.
ಉದಾ:
ಮರದ+ಕಾಲು =ಮರಗಾಲು
ಬೆಟ್ಟದ+ತಾವರೆ =ಬೆಟ್ಟದಾವರೆ
ಕೈಯ+ತಪ್ಪು = ಕೈತಪ್ಪು
ಹಗಲಿನಲ್ಲಿ+ಕನಸು =ಹಗಲುಗನಸು
ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು
━━━━━━━━━━━━━━━━━
2> ಕರ್ಮಧಾರೆಯ ಸಮಾಸ

ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.
ಉದಾ:
ಹೊಸದು+ಕನ್ನಡ =ಹೊಸಗನ್ನಡ
ಹಿರಿದು+ಜೇನು =ಹೆಜ್ಜೇನು
ಕಿರಿಯ+ಗೆಜ್ಜೆ =ಕಿರುಗೆಜ್ಜೆ
ಕೆಂದುಟಿ, ಚಿಕ್ಕಮಗು, ಸಿಡಿಮದ್ದು , ಪಂದತಿ
━━━━━━━━━━━━━━━━━
3> ದ್ವಿಗು ಸಮಾಸ

ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.
ಉದಾ:
ಒಂದು + ಕಣ್ಣು = ಒಕ್ಕಣ್ಣು
ಎರಡು+ಬಗೆ=ಇಬ್ಬಗೆ
ಸಪ್ತ+ಸ್ವರ=ಸಪ್ತಸ್ವರ
ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು
━━━━━━━━━━━━━━━━━
4> ಅಂಶಿ ಸಮಾಸ

ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು. ಅಂಶವೆಂದರೆ ‘ಭಾಗ’ ಅಥವಾ ‘ಅವಯವ’
ಉದಾ:
ತಲೆಯ+ಮುಂದು=ಮುಂದಲೆ
ಬೆರಳಿನ+ತುದಿ = ತುದಿಬೆರಳು
ಕರೆಯ+ಒಳಗು= ಒಳಗೆರೆ
ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ
━━━━━━━━━━━━━━━━━
5> ದ್ವಂದ್ವ ಸಮಾಸ

ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.
ಉದಾ:
ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು
ಕಾಫಿಯೂ+ತಿಂಡಿಯೂ=ಕಾಫಿ-ತಿಂಡಿ
ಬೆಟ್ಟವೂ+ಗುಡ್ಡವೂ=ಬೆಟ್ಟಗುಡ್ಡಗಳು
ಅಣ್ಣನು +ತಮ್ಮನು= ಅಣ್ಣತಮ್ಮಂದಿರು
ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ
━━━━━━━━━━━━━━━━━
6> ಬಹುವ್ರೀಹಿ ಸಮಾಸ

ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.
ಉದಾ:
ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ
ಶಾಂತಿಯ + ಖನಿಯಾಗಿರುವನು + ಯಾವನೋ=ಶಾಂತಿಖನಿ
ಸಹಸ್ರ +ಅಕ್ಷಿಗಳು + ಯಾರಿಗೋ =ಸಹಸ್ರಾಕ್ಷ
ಪಂಕದಲ್ಲಿ + ಜನಿಸಿದ್ದು+ಯಾವುದೊ=ಪಂಕಜ
ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ
━━━━━━━━━━━━━━━━━
7> ಕ್ರಿಯಾ ಸಮಾಸ

ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.
ಉದಾ:
ಸುಳ್ಳನ್ನು +ಆಡು=ಸುಳ್ಳಾಡು
ಕಣ್ಣನ್ನು +ತೆರೆ=ಕಣ್ದೆರೆ
ವಿಷವನ್ನು +ಕಾರು =ವಿಷಕಾರು
ಕೈಯನ್ನು +ಮುಗಿ=ಕೈಮುಗಿ
ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು
━━━━━━━━━━━━━━━━━
8> ಗಮಕ ಸಮಾಸ

ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು.
ಉದಾ:
ಸರ್ವನಾಮಕ್ಕೆ
ಅವನು +ಹುಡುಗ=ಆ ಹುಡುಗ
ಇವಳು + ಹುಡುಗಿ = ಈ ಹುಡುಗಿ
ಯಾವುದು+ ಮರ=ಯಾವಮರ
ಕೃಂದತಕ್ಕೆ
ಮಾಡಿದುದು+ಅಡುಗೆ =ಮಾಡಿದಡುಗೆ
ತೂಗುವುದು +ತೊಟ್ಟಿಲು =ತೂಗುವ ತೊಟ್ಟಿಲು
ಉಡುವುದು+ದಾರ=ಉಡುದಾರ
ಸುಡುಗಾಡು, ಬೆಂದಡಿಗೆ, ಕಡೆಗೋಲು
ಗುಣವಾಚಕಕ್ಕೆ
ಹಸಿಯದು +ಕಾಯಿ=ಹಸಿಯಕಾಯಿ
ಹಳೆಯದು +ಕನ್ನಡ=ಹಳೆಗನ್ನಡ
ಕಿರಿಮಗಳು, ಬಿಳಿಯಬಟ್ಟೆ , ಅರಳುಮೊಗ್ಗು
ಸಂಖ್ಯೆಗೆ
ನೂರು +ಹತ್ತು =ನೂರಹತ್ತು
ಮೂವತ್ತು+ಆರು=ಮೂವತ್ತಾರು
ಮೂವತ್ತು, ಹೆಪ್ಪತ್ತು, ಇಪ್ಪತೈದು .
━━━━━━━━━━━━━━━━━* ಪ್ರಮುಖ ಕದನಗಳು*