Click below to get 2n puc results of Karnataka
Monday, 30 April 2018
Sunday, 29 April 2018
Wednesday, 25 April 2018
KANNADA jokes
ಅವಳು ಕೈ ಹಿಡಿದಾಗ ಪಾರ್ಕಿನಲ್ಲಿ ನಡೆದು
ನಕ್ಕಿದ್ದೇ ನಕ್ಕಿದ್ದು. 😃 😀
ಅವಳು ಕೈ ಕೊಟ್ಟಾಗ ಬಾರಿನಲ್ಲಿ ಕುಡಿದು
ಕಕ್ಕಿದ್ದೇ ಕಕ್ಕಿದ್ದು. 😜 __________________________
ಕಾಲೇಜಿನಲ್ಲಿ ಭೂತವೇಷ ಸ್ಪರ್ಧೆ ನಡೆಯುತ್ತಿತ್ತು.
ಹುಡುಗಿಯರು ಮೇಕಪ್ ಇಲ್ಲದೇ ಬಂದರು.
ಗೆದ್ದರು.
-The end-😄___________________________
ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳು ತುಂಬಾ ನೋವನ್ನು ಕೊಡುತ್ತವೆ.
ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ ಕುಳಿತು ನೋಡಿ!!😂
___________________________
ವಿಪರ್ಯಾಸ :
🍌🍌ಬಾಳೆಹಣ್ಣು ತಿಂದರೆ ಎಲುಬುಗಳು ಗಟ್ಟಿಯಾಗುತ್ತವೆ.
ಅದೇ ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ಟರೆ ಎಲುಬುಗಳು ಪುಡಿ ಪುಡಿಯಾಗುತ್ತೇವೆ😃😂🍌🍌
🍌🍌🍌🍌🍌🍌🍌🍌
------------------------------------------
ಗಂಡ : ನಾನು ತಪ್ಪಿಸಿಕೊಂಡ್ರೆ ನೀನೇನು ಮಾಡ್ತೀಯಾ ?
ಹೆಂಡತಿ : ಪೇಪರ್‌ನಲ್ಲಿ ಜಾಹಿರಾತು ಕೊಡ್ತೀನಿ.
ಗಂಡ : ವಾಹ್ ! ಏನಂತ ಕೊಡ್ತೀಯಾ ?
ಹೆಂಡತಿ : ಗಂಡ ಬೇಕಾಗಿದ್ದಾನೆ !😜
--------------------------------------------
👉🏻 ಜೀವನದಲ್ಲಿ ಏನಾದರು ಸಾಧನೆ ಮಾಡುವುದಾದರೆ ಮದುವೆಗಿಂತ ಮೊದಲೇ ಮಾಡಿ.
ನಂತರ ಏನಾದರು ಸಾಧನೆ ಮಾಡಿದರೆ ಜನ ಹೆಂಡತಿ ಕಾಲ್ಗುಣ ಎನ್ನುತ್ತಾರೆ.😒🤔
😂😂😂
ನೀವು ತುಂಬಾ ಇಷ್ಟ ಪಡುವ ವರಿಗೆ ಕಳಿಸಿ ಅವರನ್ನು ನಗಿಸಿ.
ನೀವು ತುಂಬಾ ಇಷ್ಟ ಪಡುವವರ ಸಾಲಿನಲ್ಲಿ ನಾನು ಇದ್ದರೆ ನನ್ನಗು ಕಳಿಸಿ.
Tuesday, 24 April 2018
ಪ್ರಸಿದ್ಧ ವ್ಯಕ್ತಿಗಳು* & *ಅವರ ಬಿರುದುಗಳು*
ಪ್ರಸಿದ್ಧ ವ್ಯಕ್ತಿಗಳು* &
*ಅವರ ಬಿರುದುಗಳು*
━━━━━━━━━━━━
1.ಇಂದಿರಾ ಗಾಂಧಿ
=ಪ್ರೀಯದರ್ಶಿನಿ
2. ಬಾಲಗಂಗಾಧರ ತಿಲಕ್
=ಲೋಕಮಾನ್ಯ
3. ಸುಭಾಸ್ ಚಂದ್ರ ಬೋಸ್
=ನೇತಾಜಿ
4. ಲಾಲ ಬಹದ್ದೂರ್ ಶಾಸ್ತ್ರೀ
=ಶಾಂತಿದೂತ
5. ಸರದಾರ್ ವಲ್ಲಬಾಯಿ ಪಟೇಲ್
=ಉಕ್ಕಿನ ಮನುಷ್ಯ, ಸರದಾರ್
6. ಜವಾಹರಲಾಲ ನೆಹರು
=ಚಾಚಾ
7. ರವೀಂದ್ರನಾಥ ಟ್ಯಾಗೋರ್
=ಗುರುದೇವ
8. ಎಂ. ಎಸ್. ಗೋಳಲ್ಕರ್
=ಗುರೂಜಿ
9. M.K.ಗಾಂಧಿ
=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ
10. ಸರೋಜಿನಿ ನಾಯ್ಡು
=ಭಾರತದ ಕೋಗಿಲೆ.
11. ಪ್ಲಾರೆನ್ಸ್ ನೈಟಿಂಗೇಲ್
=ದೀಪಧಾರಣಿ ಮಹಿಳೆ
12.ಖಾನ್ ಅಬ್ದುಲ್ ಗಫಾರ್ ಖಾನ್
=ಗಡಿನಾಡ ಗಾಂಧಿ
13. ಜಯಪ್ರಕಾಶ ನಾರಾಯಣ
=ಲೋಕನಾಯಕ
14. ಪಿ.ಟಿ.ಉಷಾ
=ಚಿನ್ನದ ಹುಡುಗಿ
15. ಸುನೀಲ್ ಗವಾಸ್ಕರ್
=ಲಿಟಲ್ ಮಾಸ್ಟರ್
16. ಲಾಲಾ ಲಜಪತರಾಯ
=ಪಂಜಾಬಿನ ಕೇಸರಿ
17. ಷೇಕ್ ಮಹ್ಮದ್ ಅಬ್ಧುಲ್
=ಕಾಶ್ಮೀರ ಕೇಸರಿ
18. ಸಿ. ರಾಜಗೋಪಾಲಾಚಾರಿ
=ರಾಜಾಜಿ
19. ಸಿ. ಎಫ್. ಆಂಡ್ರೋಸ್
=ದೀನಬಂಧು
20. ಟಿಪ್ಪು ಸುಲ್ತಾನ
=ಮೈಸೂರ ಹುಲಿ
21. ದಾದಾಬಾಯಿ ನವರೋಜಿ
=ರಾಷ್ಟ್ರಪಿತಾಮಹ
(ಭಾರತದ ವಯೋವೃದ್ಧ)
22. ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.
23. ಡಾ ಶ್ರೀಕೃಷ್ಣ ಸಿಂಗ್
=ಬಿಹಾರ ಕೇಸರಿ
24. ಟಿ ಪ್ರಕಾಶಂ
=ಆಂಧ್ರ ಕೇಸರಿ
25. ಚಿತ್ತರಂಜನ್ ದಾಸ್
=ದೇಶಬಂಧು
26. ಶೇಖ್ ಮುಜಿಬತ್ ರಹಮಾನ್
=ಬಂಗಬಂಧು
27. ಕರ್ಪೂರಿ ಠಾಕೂರ್
=ಜನ ನಾಯಕ
28. ಪುರುಷೋತ್ತಮ್ ದಾಸ್ ಟಂಡನ್
=ರಾಜಶ್ರೀ
29. ಡಾ. ರಾಜೇಂದ್ರ ಪ್ರಸಾದ್
=ದೇಶ ರತ್ನ ಮತ್ತು ಅಜಾತಶತ್ರು
30. ಮದನ ಮೋಹನ ಮಾಳವೀಯ
=ಮಹಾಮಾನ
31. ಮೇಜರ್ ಜನರಲ್ ರಾಜಿಂದರ್ ಸಿಂಗ್
=ಗುಬ್ಬಚ್ಚಿ(Sparrow)
32. ಚಂದ್ರಶೇಖರ್
=ಯುವ ಟರ್ಕ್ (Young Turk)
33. ಚೌಧರಿ ದೇವಿಲಾಲ
=ತೌ(Tau)
34. ಭಗತ್ ಸಿಂಗ್
=ಶಹೀದ್ ಇ ಅಜಾಮ್
35. ಮದರ್ ತೆರೇಸಾ
=ತಾಯಿ
36. ಅಮೀರ್ ಖುಸ್ರೋ
=ಹಿಂದುಸ್ಥಾನದ ಗಿಳಿ
37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್
=ಲಾಲ್, ಬಾಲ್, ಪಾಲ್
38. ಡಾ ಅನುಗ್ರಹ ನಾರಾಯಣ ಸಿಂಗ್
=ಬಿಹಾರದ ವಿಭೂತಿ
39. ಜಗಜೀವನ್ ರಾಮ್
=ಬಾಬುಜಿ
40. ಸಮುದ್ರ ಗುಪ್ತ
=ಭಾರತದ ನೆಪೋಲಿಯನ್
41. ಮಹಾಕವಿ ಕಾಳಿದಾಸ
=ಭಾರತದ ಶೇಕ್ಸ್ಪಿಯರ್
42. ಚಾಣಕ್ಯ
=ಭಾರತದ ಮ್ಯಾಕೆವೇಲಿ
43.ಜೈನುಲ್ ಅಬ್ದಿನ್
=ಕಾಶ್ಮೀರದ ಅಕ್ಬರ್
44. ರವಿಶಂಕರ್ ಮಹಾರಾಜ್
=ಗುಜರಾತದ ಪಿತಾಮಹ
45. ದುಂಡಿರಾಜ್ ಗೋವಿಂದ ಫಾಲ್ಕೆ
=ಭಾರತೀಯ ಚಲನಚಿತ್ರದ ಪಿತಾಮಹ
46. ರಾಜಾರಾಮ್ ಮೋಹನ್ ರಾಯ್
=ಭಾರತದ ನವೋದಯದ ದೃವತಾರೆ
47. ಕಪಿಲ್ ದೇವ್
=ಹರಿಯಾಣದ ಸುಂಟರಗಾಳಿ (ಹರಿಕೇನ್)
48. ಧ್ಯಾನ್ ಚಂದ್
=ಹಾಕಿಯ ಜಾದೂಗಾರ (ಮಾಂತ್ರಿಕ)
49.ಕೆ.ವಿ. ಪುಟ್ಟಪ್ಪ
=ಕುವೆಂಪು
50. ದೇಶ ಪ್ರೀಯ
=ಯತೀಂದ್ರ ಮೋಹನ್ ಸೇನ್ ಗುಪ್ತ
━━━━━━━━━━━
ಸಾಮಾನ್ಯ ಕನ್ನಡ
ಕನ್ನಡ ಸಾಮಾನ್ಯ ಜ್ಞಾನ + English Knowledge..:
ಸಾಮಾನ್ಯ ಕನ್ನಡ
1 'ಗಾಳಿಗೋಪುರ' ಇದೊಂದು
A ಉಪಮೆ
B ರೂಪಕ
C ಶ್ಲೇಷೆ
D ಶಬ್ದಾಲಂಕಾರ
B✅✅
2 ಸಂಚಿಯ ಹೊನ್ನಮ್ಮ ಎಂಬಲ್ಲಿಯ 'ಸಂಚಿಯ ' ಎಂದರೆ
A ಸಂಚುಮಾಡುವ
B ಸಂಚಿ ಊರಿನ
C ತಾಂಬೂಲಸೇವೆ ಮಾಡುತ್ತಿದ್ದ
D ಸುಣ್ಣವನ್ನು ಒದಗುಸುತ್ತಿದ್ದ
C✅✅
3 ಅವನೊಬ್ಬ ಪ್ರಚಂಡ ವ್ಯಕ್ತಿ ಇಲ್ಲಿ ಪ್ರಚಂಡ ಎಂಬುದು
A ಸಂಖ್ಯಾವಾಚಕ
B ಭಾವವಾಚಕ
C ಗುಣವಾಚಕ
D ಕ್ರಿಯಾವಾಚಕ
C✅✅
4 ನಾಳೆ ಮಳೆ ಬರಬಹುದು ಈ ವಾಕ್ಯವು ---------ವಾಗಿದೆ
A ಆಶ್ಚರ್ಯಾರ್ಥಕ
B ಪ್ರಶ್ನಾರ್ಥಕ
C ಭಾವಾರ್ಥಕ
D ಸಂಭವನೀಯಾರ್ಥಕ
D✅✅
5 ಅವರು ಚೆನ್ನಾಗಿ ಕತೆ ಬರೆಯುತ್ತಾರೆ ಇಲ್ಲಿ ಚೆನ್ನಾಗಿ ಎಂಬುದು
A ವಾಶೇಷಣ
B ಸರ್ವನಾಮ
C ಕ್ರಿಯಾವಿಶೇಷಣ
D ನಾಮಪದ
C✅✅
6 ನೀವು ಕೊಟ್ಟ ಹಣ್ಣು ಚೆನ್ನಾಗಿದೆ ಇಲ್ಲಿ ಕೊಟ್ಟ ಎಂಬುದು
A ವಿಶೇಷಣ
B ಕರೆದಂತೆ ವಿಶೇಷಣ
C ಕ್ರಿಯಾಪದ
D ಗುಣವಾಚಕ
B✅✅
7 ನಾನು ಮನೆಯಿಂದಲೇ ಬಂದಿದ್ದೇನೆ ಇಲ್ಲಿ ಮನೆಯಿಂದಲೇ ಎಂಬಲ್ಲಿ ------ ಇದೆ
A ಅವಧಾರಣೆ
B ಸಂದೇಹಾರ್ಥ
C ಆಜ್ಞಾರ್ಥ
D ಉತ್ಪ್ರೇಕ್ಷೆ
A✅✅
8 ನೋವು ಮನೆಗೆ ಹೋಗಿ. ಇದು ಒಂದು ----------- ವಾಕ್ಯವಾಗಿದೆ
A ಹೇಳಿಕೆಯ
B ವಿದ್ಯರ್ಥಕ
C ಸಂಯೋಜಕ
D ಭಾವಾರ್ಥಕ
B✅✅
9 'ನಾನು ಎಂಬುದು ' ----------- ಸರ್ವನಾಮ.
A ಉತ್ತಮ ಪುರುಷ
B ಮಧ್ಯಮ ಪುರುಷ
C ಪ್ರಥಮ ಪುರುಷ
D ಅನ್ಯ ಪುರುಷ
A✅✅
10 ಶೂರ ಎಂಬ ಪದ ಒಂದು ----------- ಪದ
A ಅಂಕಿತ
B ಅನ್ವರ್ಥ
C ರೂಢ
D ಸರ್ವ
B✅✅
11 ' ಎತ್ತು ' ಎಂಬ ಪದ -------- ದಲ್ಲಿದೆ
A ಪುಲ್ಲಿಂಗ
B, ಸ್ತ್ರಿರಿಲಿಂಗ
C ನಪುಂಸಕ ಲಿಂಗ
D ಉಭಯಲಿಂಗ
C ✅✅
12 ದೇವರು ---------- ಎಂಬಲ್ಲಿ ಸಾಮಾನ್ಯವಾಗಿ ಜೋತೆಗೂಡಿ ಬರುವ ಪದ
A ರಾಕ್ಷಸರು
B ಮಾನವರು
C ದಿಂಡರು
D ಗಂಧರ್ವರು
C✅✅
13 ಆ ದೊಡ್ಡ ಮರದಲ್ಲಿ ಒಂದು ಚಿಕ್ಕ ಹಣ್ಣಿದೆ ಇದೊಂದು -----------ವಾಕ್ಯ
A ಸರಳ
B ಸಮ್ಮಿಶ್ರ
C ಸಂಯುಕ್ತ
D ಸಂಕೀರ್ಣ
A✅✅
14 'ಹುಡುಗರು ಹಾಡುತ್ತಿದ್ದಾರೆ ' ಎಂಬಲ್ಲಿ ಹುಡುಗರು ಎಂಬುದು ------------ ಪದ
A ಪುಲ್ಲಿಂಗ
B ಸ್ತ್ರಿಲಿಂಗ
C ನಪುಂಸಕ ಲಿಂಗ
D ಉಭಯಲಿಂಗ
D✅✅
15 'ನಿಧ್ರಿಸು ' ಎಂಬುದು ---------- ಕ್ರಿಯಾಪದ
A ಅಕರ್ಮಕ
B ಸಕರ್ಮಕ
C ಭೂತಕಾಲವಾಚಕ
D ಭವಿಷ್ಯತ್ ವಾಚಕ
A✅✅
16 ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು ಇಲ್ಲಿ ಕರ್ತೃ ಪದ
A ವಿದ್ಯಾರ್ಥಿಗಳು
B ಸಿಹಿ
C ಹಂಚು
D ಇಲ್ಲ
D✅✅
17 'ಬಂದರೆ ' ಎಂಬ ಪದ --------- ಪದವಾಗಿದೆ
A ಪಕ್ಷಾರ್ಥಕ
B ನಿಷೇಧಾರ್ಥಕ
C ಅವಧಾರಣಾರ್ಥಕ
D ನಿಶ್ಚಯಾರ್ಥಕ
A✅✅
18 'ಗಾವಿಲ ' ಎಂದರೆ
A ಕುರುಡು
B ಹೆಡ್ಡ
C ಕ್ರೂರಿ
D ಪಂಡಿತ
B✅✅
19 ಕೊಡಗೂಸು ಎಂದರೆ
A ಕೋಡಹೋತ್ತ ಕನ್ನೆ
B ಎಳೆಯ ವಯಸ್ಸಿನವಳು
C ಕೂಡಗಿನ ಕೂಸು
D ಮುದುಕಿ
B✅✅
20 ಶಿಥಿಲ ಎಂಬ ಶಬ್ದದ ತದ್ಬವ ರೂಪ
A ಶೀತಲ
B ಶತಕ
C ಸಡಿಲ
D ಸಲಿಲ
C✅✅
21 ಚಂದಶೇಖರ ಎಂಬುದಕ್ಕೆ ಸಮನಾರ್ಥಕ ಪದ
A ನೋಸಲುಗಣ್ಣ
B ಮುರಾರಿ
C ಆರ್ಮೋಗಂ
D ಕಮಲಾಸನ
A✅✅🙈
22 ತಿಳುವಳಿಕೆ ಎಂಬುದರಲ್ಲಿನ ಧಾತು
ಪ್ರತ್ಯಯಗಳ ರಚನೆ ಇದು
A ತಿಳಿ+ಅಳಿಕೆ
B ತಿಳು +ಅಳಿಕೆ
C ತಿಳಿ+ಅಳಿ+ಕೆ
D ತಿಳಿ+ವಳಿ+ಕೆ
D✅✅
23 ಪುಸ್ತಕ -ಗಿಸ್ತಕ ಎಂಬಲ್ಲಿ ಗಿಸ್ತಕ ಎಂಬುದು ಒಂದು ------------ ಪದ
A ಸರ್ವನಾಮ
B ಪ್ರತಿಧ್ವನಿ
C ನಿಷೇಧಾರ್ಥಕ
D ಅನುಕರಣಾವಾಚಕ
B✅✅
24 ಇವುಗಳಲ್ಲಿ ಸಮಾಸ ಪದ
A ಶಕುನದ ಹಕ್ಕಿ
B ಹಕ್ಕಿಗೂಡು
C ಹಕ್ಕಿ ಪಿಕ್ಕಿ
D ಹಕ್ಕಿ ಗಿಕ್ಕಿ
B✅✅
25 ಶ್ಲೇಷ ಎಂಬುದು ------------ ಗಳಲ್ಲಿ ಒಂದು
A ಶಬ್ದಾಲಂಕಾರ
B ಅರ್ಥಾಲಂಕಾರ
C ಉಭಯಾಲಂಕಾರ
D ಅನುಪ್ರಾಸ
B✅✅
ಅನಾಮಿಕ👮:
Q.1.'ತಿರುಳ್ಗನ್ನಡ ತಿರುಕ' ಯಾರು ?
ಎ. ಕಾಪಸೆ ರೇವಪ್ಪ
ಬಿ. ಸಿಂಪಿ ಲಿಂಗಣ್ಣ
ಸಿ. ಉತ್ತಂಗಿ ಚನ್ನಪ್ಪ
ಡಿ. ಫ.ಗು.ಹಳಕಟ್ಟಿ
C✅✅
Q.2. . 'ಘೃತ' ಎಂಬ ಪದದ ಅರ್ಥ ಯಾವುದು ?
ಎ. ನೀರು
ಬಿ. ಎಣ್ಣೆ
ಸಿ. ಹಾಲು
ಡಿ. ತುಪ
D✅👌👌
Q.3. 'ಉತ್ತರ ಪುರಾಣ'ದ ಕರ್ತೃ
ಎ. ಪಿಂಗಲ
ಬಿ. ಗುಣಾಢ್ಯ
ಸಿ. ಗುಣಭದ್ರಾಚಾರ್ಯ
ಡಿ. ಶ್ರೀಹರ್ಷ
C✅✅
Q.4. ಇವುಗಳಲ್ಲಿ ಕುಂ.ವೀರಭದ್ರಪ್ಪನವರ ಕಥೆ ಯಾವುದು ?
ಎ. ಅಜ್ಞಾತವಾಸಿ
ಬಿ. ಕಳೇಬರ
ಸಿ. ಬುಗುರಿ
ಡಿ. ಕಥೆಯಾದಳು ಹುಡುಗಿ
B✅✅
Q.5. 'ಮುಂಬೈ ಜಾತಕ' ಎಂಬ ಕವಿತೆಯನ್ನು ಬರೆದವರು
ಎ. ನಿಸಾರ್ ಅಹಮದ್
ಬಿ. ಚನ್ನವೀರ ಕಣವಿ
ಸಿ. ತಿರುಮಲೇಶ್
ಡಿ. ಜಿ.ಎಸ್.ಶಿವರುದ್ರಪ್ಪ
D✅✅👌
Monday, 23 April 2018
Comedy joke funny
ಅಪ್ಪ:- news ಪೇಪರ್ ತಗೊಂಡು ಬಾ ಅಂತ ಹೇಳಿದ್ನಲ್ಲ ಯಾಕೆ ತರ್ಲಿಲ್ಲ???
ಮಗ:- ಪೇಪರ್ ನಲ್ಲಿ ಬಿಸಿ, ಬಿಸಿ ಸುದ್ದಿ ಇದೆ ಅಂತ ಪೇಪರ್ ಮಾರೊ ಹುಡುಗ ಅಂದ, ಕೈ ಸುಡುತ್ತೆ ಅಂತ ತರ್ಲಿಲ್ಲ...😳😜😂
..................................................
ಮಗ:- ಮನೆಗೆ ನೆಂಟ್ರು ಬಂದಿದ್ದಾರೆ ಶರಬತ್ ಮಾಡೊನ ಅಂದ್ರೆ ನಿಂಬೆ ಹಣ್ಣು ಇಲ್ಲ ಏನ್ ಮಾಡ್ಲಿ�
ಅಪ್ಪ:- ಅದಕ್ಕೆ ಯಾಕ್ ಯೋಚನೆ ಮಾಡ್ತಿಯಾ, ಹೊಸ Vim ನಲ್ಲಿ 100 ನಿಂಬೆಗಳ ಶಕ್ತಿ ಇದೆ ಅದನ್ನೆ ಹಾಕಿ ಮಾಡು!😳😬😜
..................................................
ಸರ್ದಾರ್ ಐಸ್ ಗಡ್ಡೆ ಕೈಯಲ್ಲಿ ಹಿಡ್ಕೊಂಡು ಅದನ್ನೆ ನೋಡ್ತಾ ಇದ್ದ
ಗುಂಡ:- ಅವಾಗ್ಲಿಂದ ಏನ್ ನೋಡ್ತಿದಿಯಾ?
ಸರ್ದಾರ್:- ಮಗ ಇದರಲ್ಲಿ ಎಲ್ಲೊ water leak ಆಗ್ತಿದೆ ಎಲ್ಲಿ ಅಂತ ಗೊತ್ತಾಗ್ತಿಲ್ಲ�
..................................................
ಹುಡುಗಿ:- nice ಮೊಬೈಲ್ ಎಲ್ಲಿ ತಗೊಂಡೆ?
ಹುಡುಗ:- running race ನಲ್ಲಿ ವಿನ್ ಆಗಿದ್ದು
ಹುಡುಗಿ:- ಎಷ್ಟು ಜನ ಓಡಿದ್ರು...?
ಹುಡುಗ:- "ಮೊಬೈಲ್ owner"
" ಪೋಲಿಸ್"
" ನಾನು"!!!😜
ಹುಡುಗಿ:- 😳
..................................................
ಮೇಷ್ಟ್ರು:- ಬೀರ್ ಬಲ್ಲ ಯಾರು?
ಗುಂಡ:- ಗೊತ್ತಿಲ್ಲ ಸಾರ್!
ಮೇಷ್ಟ್ರು:- ಸರ್ದಾರ ನೀನ್ ಹೇಳೊ,
ಸರ್ದಾರ:- ಬಾರಿನಲ್ಲಿ ಬೀರಿನ ರುಚಿ ಬಲ್ಲವನೇ ಬೀರ್ ಬಲ್ಲ ಸಾರ್ 😀😃😅
😂😂😂😂😂😂😂😂😂😂😂
..................................................
ತಿಮ್ಮ:- ಯಾಕೋ ಗುಂಡ ನಿನ್ನ ಮದುವೆಗೆ ನಿಮ್ಮ ಅಪ್ಪ,,ಅಮ್ಮನ್ನ ಕರ್ದಿಲ್ಲ..?
ಗುಂಡ:- ಸೇಡು ಕಣೊ ಸೇಡು... ಅವರ ಮದುವೆಗೆ ನನ್ನ ಕರ್ದಿಲ್ಲ ಅದಕ್ಕೆ...😠
..................................................
ಟೀಚರ್:- ಗುಂಡ, ಮನುಷ್ಯನಿಗೂ ಮೊಬೈಲ್ ಗೂ ಏನು ವ್ಯತ್ಯಾಸ...?
ಗುಂಡ:- ಮೇಡಮ್ ಮನುಷ್ಯ ಕಾಲು ಇಲ್ಲದೆ balance ಮಾಡೊಕಾಗಲ್ಲ,,,!
ಮೊಬೈಲ್ ನಲ್ಲಿ balance ಇಲ್ಲದೆ call ಮಾಡೋಕೆ ಆಗಲ್ಲ.....!!!😉😉😉
..................................................
ಟೀಚರ್:- ಯಾಕೊ marks card ನಲ್ಲಿ marks ತಿದ್ದಿದಿಯಾ ?
ಗುಂಡ:- ನೀವೇ ಹೇಳಿದ್ರಲ್ಲ ನಮ್ಮ ತಪ್ಪನ್ನ ನಾವೇ ತಿದ್ಕೊ ಬೇಕು ಅಂತ ಅದಿಕ್ಕೆ...!😊
😉😅😂😂😂😂😂😂😂😂💛❤🌿🤓
General knowledge (gk)
=============
*1. ಶಿವನ ಐದು ಮುಖಗಳಲ್ಲಿ ಇವುಗಳಲ್ಲಿ ಯಾವುದು ಸೇರಿಲ್ಲ?*
*ಅ) ವಾಮದೇವ ಆ) ಶಂಕರ*
*ಇ) ಈಶಾನ ಈ) ಅಘೋರ*
===========
*2. 'ಎಮ್ಮಾ' ಎಂಬ ಇಂಗ್ಲಿಷ್ ಕಾದಂಬರಿಯ ಲೇಖಕಿ ಯಾರು?*
*ಅ) ವರ್ಜಿನಿಯಾ ಉಲ್ಫ್ ಆ) ಅಗಾಥ ಕ್ರಿಸ್ಟ*ಿ
*ಇ) ಜೇನ್ ಆಸ್ಟನ್ ಈ) ಕ್ಯಾಥರಿನಾ*
==========
*3. 'ನೆಫ್ರಾಲಜಿ'ಯು ದೇಹದ ಯಾವ ಅಂಗಕ್ಕೆ ಸಂಬಂಧಿಸಿದ ವೈದ್ಯಶಾಸ್ತ್ರವಾಗಿದೆ?*
*ಅ) ಮೂತ್ರಪಿಂಡ →ಆ) ಕಿವಿ*
*ಇ) ಮೂಗು →ಈ) ಜಠರ*
===========
*4. 'ಫೈಕಸ್ ರಿಲಿಜಿಯೋಸ'ಎನ್ನುವುದು ಯಾವ ಸಸ್ಯದ ಸಸ್ಯಶಾಸ್ತ್ರೀಯ ಹೆಸರು?*
*ಅ) ಅರಳಿ ಮರ →ಆ) ಆಲದ ಮರ*
*ಇ) ಅತ್ತಿ ಮರ →ಈ) ರಬ್ಬರ್ ಮರ*
==========
*5. ಉತ್ತಂಗಿ ಚೆನ್ನಪ್ಪನವರು ಯಾರ ರಚನೆಗಳನ್ನು ಸಂಪಾದಿಸಿದರು?*
*ಅ) ಬಸವಣ್ಣ →ಆ) ಕನಕದಾಸ*
*ಇ) ಅಲ್ಲಮ ಪ್ರಭು →ಈ) ಸರ್ವಜ್ಞ*
============
*6. 1945ರಲ್ಲಿ ಹೊರಬಂದ 'ಮೀರಾ' ಚಲನಚಿತ್ರದ ನಾಯಕಿ ಯಾರು?*
*ಅ) ಕನ್ನಂಬಾಳ್ →ಆ) ಭಾನುಮತಿ*
*ಇ) ಎಂ.ಎಸ್. ಸುಬ್ಬಲಕ್ಷ್ಮಿ →ಈ) ಹರಿಣಿ*
===========
*7. ಭಾರತ ಸಂವಿಧಾನದ ಎಷ್ಟನೇ ಶೆಡ್ಯೂಲ್‍ನಲ್ಲಿ ಅಧಿಕೃತ ಭಾಷೆಗಳ ಪಟ್ಟಿ ಇದೆ?*
*ಅ) ಆರು →→ಆ) ಎಂಟು*
*ಇ) ಮೂರು →→ಈ) ಎರಡು*
==============
*8. 'ಚೌ' ಯಾವ ರಾಜ್ಯದ ಜಾನಪದ ನೃತ್ಯ?*
*ಅ) ಒಡಿಶಾ →→ಆ) ಬಿಹಾರ*
*ಇ) ಹಿಮಾಚಲಪ್ರದೇಶ →ಈ) ಗುಜರಾತ್*
===========
*9. ಗಾಜನ್ನು ತಯಾರಿಸಲು ಬಳಸುವ ಪ್ರಮುಖ ಮೂಲವಸ್ತು ಯಾವುದು?*
*ಅ) ಪ್ಲಾಸ್ಟಿಕ್ →→ಆ) ಸುಣ್ಣ*
*ಇ) ಮರಳು →→ಈ) ಇದ್ದಿಲು*
================
# *10. 'ನವಕೋಟಿ ನಾರಾಯಣ'ರೆನಿಸಿದ್ದ ಮೈಸೂರಿನ ಒಡೆಯರ್ ಯಾರು?*
*ಅ) ಯದುರಾಯ →ಆ) ಕೃಷ್ಣರಾಯ*
*ಇ) ಚಾಮರಾಜ →ಈ) ಚಿಕ್ಕದೇವರಾಯ*
===============
*1. ಶಂಕರ*
*2. ಜೇನ್ ಆಸ್ಟನ್*
*3. ಮೂತ್ರಪಿಂಡ*
*4. ಅರಳಿಮರ*
*5. ಸರ್ವಜ್ಞ*
*6. ಎಂ. ಎಸ್. ಸುಬ್ಬುಲಕ್ಷ್ಮಿ*
*7. ಎಂಟು*
*8. ಒಡಿಶಾ*
*9. ಮರಳು*
*10. ಚಿಕ್ಕದೇವರಾಯ*
================
Current affairs
🌻 ವಿಷಯ : *ಪ್ರಚಲಿತ ಘಟನೆಗಳು* (2017)
೧) *ಭಾರತದ ಮೊದಲ ಲಿಂಗ ಪರಿವರ್ತಕ ( transgender ) ಶಾಲೆಯಾದ " Sahaj international "ಅನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ ?*
1) ತಮಿಳುನಾಡು
2) ಗೋವಾ
3) *ಕೇರಳ*
೪) ತೆಲಂಗಾಣ
👉 ಕೆರಳ ರಾಜ್ಯದ *ಎರ್ನಾಕುಳಂ* ಜಿಲ್ಲೆಯಲ್ಲಿದೆ 👉 ಲಿಂಗ ಪರಿವರ್ತಿತ ಕಾರ್ಯಕರ್ತರು ಇಲ್ಲಿ ಹನ್ನೆರಡನೇ ತರಗತಿಯವರೆಗೆ ಉಚಿತವಾಗಿ ಓದಬಹುದು
೨) *ಈ ಕೆಳಗಿನ ಯಾವ ಸ್ಥಳವೂ ಪ್ರತಿ ವರ್ಷ ಮೊಟ್ಟ ಮೊದಲ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತದೆ ?*
೧) ಬಾಕರ್ ಐಲ್ಯಾಂಡ್
೨) ಸಮೂಹ ದ್ವೀಪ
೩) *ಪೆಸಿಪಿಕ್ ಐಲ್ಯಾಂಡ್*
೪) ಅಮೆರಿಕಾ ದೇಶ
👉 ಅಮೆರಿಕದ *"ಬಾಕರ್ ಐಲೆಂಡ್"* ಮತ್ತು ಅಮೆರಿಕನ್ *"ಸಮೂವಾ ದ್ವೀಪ"*ಪ್ರಪಂಚದ ಎಲ್ಲಾ ಸ್ಥಳಗಳಿಗಿಂತ ಕೊನೆಯಲ್ಲಿ ಹೊಸ ವರ್ಷ ಆಚರಿಸಿಕೊಳುತವೆ
೩) *ಈ ಕೆಳಗಿನ ಯಾವ ದೇಶ ಇತ್ತೀಚೆಗೆ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸಿತು ?*
೧) ಅಫ್ಘಾನಿಸ್ತಾನ
೨) ಸೌದಿ ಅರೇಬಿಯಾ
೩) ಅಮೆರಿಕ
೪) *ಪಾಕಿಸ್ತಾನ*
೪) *RBI ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು ?*
೧) *ಸುರೇಶ್ ಮರಂಡಿ*
೨) ರಘುರಾಮ್ ರಾಜನ್
೩) ಜಾನ್ ವೆಲ್ ಮೊಯ್ಲಿ
೪) ಯಾರೂ ಅಲ್ಲ
೫) *30 ನೇ ಅಂತಾರಾಷ್ಟ್ರೀಯ "ಗಾಳಿಪಟ ಉತ್ಸವ " ಯಾವ ರಾಜ್ಯದಲ್ಲಿ ನಡೆಯಿತು ?*
೧) ಮಹಾರಾಷ್ಟ್ರ
೨) *ಗುಜರಾತ್*
೩) ಉತ್ತರಪ್ರದೇಶ
೪) ತೆಲಂಗಾಣ
೬) *13 ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರಾದ " ಗುಂಡ ಬ್ರಹ್ಮಯ್ಯ ನವರ "ವಿಗ್ರಹ ಇತ್ತೀಚೆಗೆ ಈ ಕೆಳಗಿನ ಯಾವ ಸ್ಥಳದಲ್ಲಿ ದೊರೆತಿದೆ ?*
೧) *ಮಸ್ಕಿ*
೨) ಪಾಲ್ಕಿ ಗೊಂಡ
೩) ಚಿತ್ರದುರ್ಗ
೪) ಬೆಳಗಾವಿ
೭) *ಭಾರತದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕೆಳಗಿನ ಯಾವ ನಗರದಲ್ಲಿ ಆರಂಭಗೊಂಡಿದೆ ?*
೧) ಮುಂಬೈ
೩) *ಗಾಂಧಿನಗರ*
೩) ಪುಣೆ
೪) ನವದೆಹಲಿ
೮) *ಅಮೆರಿಕದ ಕ್ಷಯ ರೋಗ ಜಾಗೃತಿಯ ರಾಯಭಾರಿಯಾಗಿ ಆಯ್ಕೆಯಾದ ಭಾರತೀಯ ಯಾರು ?*
೧) ಶಾರುಖ್ ಖಾನ್
೨) *ಅಮಿತಾಬ್ ಬಚ್ಚನ್*
೩) ಹೃತಿಕ್ ರೋಷನ್
೪) ಸಲ್ಮಾನ್ ಖಾನ್
೯) *ಕೆಳಗಿನ ಯಾವ ನಗರದಲ್ಲಿ " ಇ ಗವರ್ನೆನ್ಸ್ " ಕುರಿತ ರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ನಡೆಯಿತು ?*
೧) *ವಿಶಾಖಪಟ್ಟಣಂ*
೨) ಹೈದರಾಬಾದ್
೩) ವಿಜಯ್ ವಾಡ
೪) ಜೈಪುರ್
👉 20 ನೇ ಆವೃತ್ತಿ
👉 ಧ್ಯೇಯ ವಾಕ್ಯ - *internet of things and e governance*
೧೦) *"ಜಲ ಮಂತನ - 3 " 2017 ರ ರಾಷ್ಟ್ರೀಯ ಸಮ್ಮೇಳನ ಕೆಳಗಿನ ಯಾವ ನಗರದಲ್ಲಿ ನಡೆಯಿತು ?*
೧) ಕೋಲ್ಕತ್ತಾ
೨) ಬೆಂಗಳೂರು
೩) ವಿಜಯಪುರ
೪) *ನವದೆಹಲಿ*
👉 ನಡೆದದ್ದು - *17 ಜನೆವರಿ 2017*
👉 ಚರ್ಚೆ - *ನೀರಿನ ವಲಯದ ವಿವಿಧ ಸಮಸ್ಯೆಗಳ ಕುರಿತು*
👉 ಉದ್ಘಾಟನೆ - *ಜಲಸಂಪನ್ಮೂಲ ಸಚಿವೆ ಉಮಾಭಾರತಿ*
೧೧) *ಇತ್ತೀಚೆಗೆ "ಜಿಂಗ್ ಬರ್ ಸ್ಪೀಡೋಸ್ಪ್ಯಾರೋಸಮ " ಎಂಬ ಶುಂಠಿಯ ಹೊಸ ಪ್ರಭೇದವನ್ನು ಎಲ್ಲಿ ಪತ್ತೆ ಹಚ್ಚಲಾಯಿತು ?*
೧) ಪಶ್ಚಿಮ ಘಟ್ಟಗಳು
೨) ಈಶಾನ್ಯ ಹಿಮಾಲಯ
೩) *ಅಂಡಮಾನ್ ನಿಕೋಬಾರ್ ದ್ವೀಪ*
೪) ಮಧ್ಯೆ ಆಫ್ರಿಕಾ
👉 ಯಾವುದೇ ಹೊಸ ಪ್ರಭೇದದ ಸಸ್ಯ ತಳಿಗಳು *"ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ"*ಕಂಡುಬರುತ್ತವೆ ಉದಾ -ಬಾಳೆಹಣ್ಣು ಶುಂಠಿ
👉 ಯಾವುದೇ ಹೊಸ ಪ್ರಭೇದದ ಪ್ರಾಣಿ ಸೂಕ್ಷ್ಮಾಣು ಜೀವಿ ಆತ ಇತರ ಜೀವಿಗಳ ಪ್ರಬೇಧವು *"ಪಶ್ಚಿಮ ಘಟ್ಟಗಳಲ್ಲಿ"* ಕಂಡು ಬರುತ್ತವೆ
೧೨) *2017 ರ " ರಾಷ್ಟ್ರೀಯ ಯುವಜನ ಉತ್ಸವ "ಈ ಕೆಳಗಿನ ಯಾವ ರಾಜ್ಯದಲ್ಲಿ ನಡೆಯಿತು ?*
೧) ಪಂಜಾಬ್
೨) *ಹರಿಯಾಣ*
೩) ಛತ್ತೀಸ್ಗಡ
೪) ತೆಲಂಗಾಣ
👉 ಸ್ಥಳ - *ರೊಹಟಕ*
👉 ಯಾವಾಗ - *ಜೆನೆವರಿ-12-16*
👉 *"ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ "*ಅಂಗವಾಗಿ ರಾಷ್ಟ್ರೀಯ ಯುವಜನ ಉತ್ಸವವನ್ನು ನಡೆಸಲಾಗುತ್ತದೆ
೧೩) *ಇತ್ತೀಚೆಗೆ ಯಾವ ದೇಶ ತನ್ನ ಪಳೆಯುಳಿಕೆ ಇಂಧನಗಳ ಸಂಪನ್ಮೂಲ ಬಂಡವಾಳ ಹಿಂಪಡೆದ ವಿಶ್ವದ ಮೊದಲ ರಾಷ್ಟ್ರವಾಗಿ ಹೊರಹೊಮ್ಮಿದೆ ?*
೧) ಥೈಲಾಂಡ್
೨) *ಐರ್ಲೆಂಡ್*
೩) ಜಪಾನ್
೪) ಭಾರತ
೧೪) *ಇತ್ತೀಚೆಗೆ ಕೇಂದ್ರ ಸರ್ಕಾರವು ಯಾವ ರಾಜ್ಯದಿಂದ " ದಡಾರ ರುಬೆಲ್ಲಾ ಲಸಿಕಾ ಅಭಿಯಾನವನ್ನು" ಪ್ರಾರಂಭಿಸಿತ್ತು ?*
೧) ತಮಿಳುನಾಡು
೨) ಮಹಾರಾಷ್ಟ್ರ
೩) *ಕರ್ನಾಟಕ*
೪) ಕೇರಳ
೧೫) *ಇತ್ತೀಚೆಗೆ ಸರಕಾರಿ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ಘೋಷಿಸಿದ ರಾಜ್ಯ ಯಾವುದು ?*
೧) ಬಿಹಾರ್
೨) *ಜಾರ್ಖಂಡ್*
೩) ಹರಿಯಾಣ
೪) ಪಂಜಾಬ್
೧೬) *ಸಬ್ಸಿಡಿ ಹಂಚಿಕೆಯ "ಹಜ್ಜ್ ನೀತಿ ಸುಧಾರಿಸಲು" ಕೇಂದ್ರ ಸರ್ಕಾರವು ಕೆಳಗಿನ ಯಾವ ಸಮಿತಿಯನ್ನು ರಚಿಸಿದೆ ?*
೧) *ಅಫ್ಜಲ್ ಅಮಾನುಲ್ಲಾ ಕಮಿಟಿ*
೨) ಮಹಮ್ಮದ್ ಹಿದಾಯಿತುಲ್ಲಾ ಕಮಿಟಿ
೩) ಎಸ್ಎನ್ ರಾಜನ್ ಕಮಿಟಿ
೪) ಸಾತ್ವಿಕ್ ಸಾಯಿರಾಜ್ ಕಮಿಟಿ
೧೭) *ಕೆಳಗಿನ ಯಾವ ನಗರದಲ್ಲಿ "ಅಂತರರಾಷ್ಟ್ರೀಯ ವಾಯುಯಾನ ಮತ್ತು ರಕ್ಷಣಾ ಪ್ರದರ್ಶನವೂ (Aero India )" ನಡೆಯಿತು ?*
೧) ಕೋಲ್ಕತ್ತಾ
೨) ವಿಶಾಖಪಟ್ಟಣಂ
೩) *ಬೆಂಗಳೂರು*
೪) ಚೆನ್ನೈ
೧೮) *ಭಾರತದಲ್ಲೇ ಮೊದಲ ಬಾರಿಗೆ ಯುದ್ಧ ನೌಕೆಯಲ್ಲಿ ಸೌರ ಫಲಕಗಳನ್ನು ಅಳವಡಿಸಿದ ಮೊದಲ ಯುದ್ಧ ನೌಕೆ ಯಾವುದು ?*
೧) ಐ ಎನ್ ಎಸ್ ವಿಕ್ರಾಂತ್
೨) ಐ ಎನ್ ಎಸ್ ಮಹಾಭಾರತ್
೩) *ಐಎನ್ಎಸ್ ಸರ್ವೇಕ್ಷಕ*
೪) ಯಾವುದೂ ಅಲ್ಲ
೧೯) *ಭಾರತದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ತೇಲುವ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ ರಾಜ್ಯ ಯಾವುದು ?*
೧) ಅಸ್ಸಾಂ
೨) ನಾಗಾಲ್ಯಾಂಡ್
೩) *ಮಣಿಪುರ*
೪) ಅರುಣಾಚಲ ಪ್ರದೇಶ
👉 *ಲೊಕತಕ ಸರೋವರದ ಮೇಲೆ*
೨೦) *ಕೆಳಗಿನ ಯಾವ ರಾಜ್ಯ ಸರಕಾರ ಸರಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ಪ್ರವೇಶ ತರಬೇತಿಯನ್ನು ಕಡ್ಡಾಯ ಮಾಡಿದೆ ?*
೧) ತಮಿಳುನಾಡು
೨) *ಕೇರಳ*
೩) ಆಂಧ್ರಪ್ರದೇಶ
೪) ತೆಲಂಗಾಣ
Sunday, 22 April 2018
Geography ಬೆಳೆಗಳ ವರ್ಗೀಕರಣ
▪️
ಗೋಧಿ, ಬಾರ್ಲಿ, ಮೆಕ್ಕೆ ಜೋಳ, ಗ್ರಮ್, ಸಾಸಿವೆ, ಮೆಂತ್ಯೆ, ರೈ, ತಮರಿರಾ, ಇಸಾಬ್ಗೋಲ್, ಜೀರಿಗೆ*
- *ಜೂನ್-ಜುಲೈನಲ್ಲಿ ಬಿತ್ತನೆ. ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ಕೊಯ್ಲು ನಡೆಯುತ್ತದೆ..
-
- *ಮಾರ್ಚ್ ನಿಂದ ಏಪ್ರಿಲ್ ವರೆಗೆ, ಬಿತ್ತನೆಯು ಜೂನ್-ಜುಲೈನಲ್ಲಿ ಬಿತ್ತಲಾಗುತ್ತದೆ ಮತ್ತು ಕತ್ತರಿಸಲಾಗುತ್ತದೆ.*
- ಭಾರತದ ಮುಖ್ಯ ಆಹಾರ ಧಾನ್ಯ.*
(2) ಡ್ಯೂ: - ಶರತ್ಕಾಲ (ಇಬ್ಬನಿಯು ಬಿದ್ದಾಗ)
ಕಬ್ಬು ಉತ್ಪಾದನೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ವಿಶ್ವದ ಉತ್ಪಾದನೆಯ 40% ಭಾರತದಲ್ಲಿದೆ.
======
(ಚಹಾ ಮುಖ್ಯವಾಗಿ ಚೀನಾದ ಬೆಳೆ). ಇದು ತೋಟಗಾರಿಕೆ ಬೆಳೆಯಾಗಿದೆ. ಯಾವ ವರ್ಷಕ್ಕೆ 150-250 ಸೆಂ ಮತ್ತು ತಾಪಮಾನ 25-30 ಸೆಂ ಆಗಿದೆ. ಅಲ್ಲಿ ಇರಬೇಕು.
======
- ಕ್ಯಾಲ್ಸಿಯಂ ಹೊಂದಿರುವ ಮಣ್ಣಿನಲ್ಲಿ ಸಲ್ಫರ್. ಬೆಟ್ಟದ ಇಳಿಜಾರುಗಳಲ್ಲಿ ನೀರು ಉಳಿಯುವುದಿಲ್ಲ ಮತ್ತು ಸೂರ್ಯನ ಕಿರಣಗಳು ಸರಳವಾಗಿರುವುದಿಲ್ಲ, ಚಹಾವನ್ನು ಬೆಳೆಸಲಾಗುತ್ತದೆ.
=========
- ಉತ್ಪಾದನೆ ರಾಜ್ಯ:
==============
- ಅಸ್ಸಾಂ, ಬ್ರಹ್ಮಪುತ್ರ ನದಿ ಕಣಿವೆ, ಸುರ್ಮಾ ನದಿ ಕಣಿವೆ, ಅಸ್ಸಾಂನಲ್ಲಿ ಭಾರತದ ಒಟ್ಟು ಚಹಾ ಉತ್ಪಾದನೆಯ 50%. ಪಶ್ಚಿಮ ಬಂಗಾಳದಲ್ಲಿ, ಡಾರ್ಜಿಲಿಂಗ್, ಕೂಚ್ ಬಿಹಾರ, ಜಲ್ಪೈಗುರಿ, ಗರ್ವಾಲ್ ಕುಮಾಯುನ್, ನೈನಂಚಲ್ನಲ್ಲಿ ನೈನಿತಾಲ್,
ಅಲ್ಮೋರಾ ಹಿಮಾಚಲ ಪ್ರದೇಶದ ಕುಲ್ಲು ಕಣಿವೆ. ತಮಿಳುನಾಡು, ಕೇರಳ, ಕರ್ನಾಟಕ, ದಕ್ಷಿಣದಲ್ಲಿ ಮಹಾರಾಷ್ಟ್ರ. (ದಕ್ಷಿಣದಲ್ಲಿ ತಮಿಳುನಾಡು ಮೊದಲ ಸ್ಥಾನ).
- ವಿಶ್ವದಲ್ಲೇ ಭಾರತದಲ್ಲಿ ಮೊದಲ ಸ್ಥಾನ (ಉತ್ಪಾದನೆಯಲ್ಲಿ).
- ರಫ್ತುದಲ್ಲಿ ಶ್ರೀಲಂಕಾದ ಮೊದಲ ಸ್ಥಾನ..
- ಹರಿ ಟೀ: - ಉತ್ತರಾಂಚಲ್, ಪಶ್ಚಿಮ ಬಂಗಾಳ.
- ಅತ್ಯುತ್ತಮ ಚಹಾ: - ಅಸ್ಸಾಮಿ
ಭಾರತವು ವಿಶ್ವದ ಕಾಫಿಗಳಲ್ಲಿ 2% ರಷ್ಟು ಉತ್ಪಾದಿಸುತ್ತದೆ.
======
- ವಿಶ್ವದ ಅತ್ಯಂತ ರುಚಿಕರವಾದ ಕಾಫಿ ಭಾರತದಲ್ಲಿ ಉತ್ಪಾದಿಸಲ್ಪಡುತ್ತದೆ.
========
- ಉತ್ಪಾದಕ ರಾಜ್ಯ:
- ಕರ್ನಾಟಕದ ಮೊದಲ ಸ್ಥಾನ, ಕೇರಳ, ತಮಿಳುನಾಡು
ದಿನ ವಿಶೇಷ:ಏಪ್ರಿಲ್-22
ದಿನ ವಿಶೇಷ:ಏಪ್ರಿಲ್-22*☀
*ದಿನಾಚರಣೆಗಳು*: ಭೂಮಿ ದಿನ ಏಪ್ರಿಲ್ 22 ದಿನವನ್ನು ವಿಶ್ವದಾದ್ಯಂತ ಭೂಮಿ ದಿನವನ್ನಾಗಿ (Earth Day) ಆಚರಿಸಲಾಗುತ್ತಿದೆ. 1969ರ ವರ್ಷದಲ್ಲಿ ಯುನೆಸ್ಕೋದಲ್ಲಿ ಶಾಂತಿ ಕಾರ್ಯಕರ್ತರಾದ ಜಾನ್ ಮೆಕೊನೆಲ್ ಅವರು ಭೂಮಿಯನ್ನು ಗೌರವಿಸುವ ಇಂತಹ ಒಂದು ದಿನದ ಪ್ರಸಾಪವನ್ನು ಮಂಡಿಸಿದ್ದ ಮೇರೆಗೆ, ಮೊದಲ ಬಾರಿಗೆ 1970ರ ಏಪ್ರಿಲ್ 22ರಂದು ಭೂಮಿ ದಿನವನ್ನು ಆಚರಿಸಲಾಯಿತು. ಭೂಮಿ ದಿನ ಸಂಪರ್ಕಸೇತು ವ್ಯಾಪಿಸಿದಂತೆ 193 ದೇಶಗಳಲ್ಲಿ ಈ ಆಚರಣೆ ವ್ಯಾಪಿಸಿದೆ. ಘಟನೆಗಳು: ಪೋರ್ಚುಗೀಸ್ ನಾವಿಕರಾದ ಪೆಡ್ರೋ ಅಲ್ವರೆಸ್ ಕಬ್ರಾಲ್ ಅವರು ಬ್ರೆಜಿಲ್ನಲ್ಲಿ ಪಾದಾರ್ಪಣ ಮಾಡಿದರು. ಅದಕ್ಕೆ ಅವರು ‘ಐಲ್ಯಾಂಡ್ ಆಫ್ ಟು ಕ್ರಾಸ್’ ಎಂದು ಹೆಸರಿಟ್ಟರು. ಕಾಲಕ್ರಮೇಣದಲ್ಲಿ ಅದು ‘ಹೋಲಿ ಕ್ರಾಸ್’, ನಂತರ ‘ಬ್ರೆಜಿಲ್’ ಎನಿಸಿತು. ಅಲ್ಲಿ ಸಿಗುವ ‘ಪೌ-ಬ್ರೆಜಿಲ್’ ಎಂಬ ಬಣ್ಣದ ಮರ ಈ ಹೆಸರಿಗೆ ಕಾರಣವೆನಿಸಿದೆ. ಅಮೆರಿಕದ ಕಾಂಗ್ರೆಸ್ಸು ನಾಣ್ಯಗಳ ಕುರಿತಾದ ಕಾನೂನನ್ನು ಜಾರಿಗೊಳಿಸಿ ಎಲ್ಲ ನಾಣ್ಯಗಳ ಮೇಲೆ ‘ಇನ್ ಗಾಡ್ ವಿ ಟ್ರಸ್ಟ್’ ಎಂದು ಲಿಖಿಸುವುದನ್ನು ಕಡ್ಡಾಯಗೊಳಿಸಿತು.
*ಭೂಮಿ ದಿನ*
ಏಪ್ರಿಲ್ 22 ದಿನವನ್ನು ವಿಶ್ವದಾದ್ಯಂತ ಭೂಮಿ ದಿನವನ್ನಾಗಿ (Earth Day) ಆಚರಿಸಲಾಗುತ್ತಿದೆ. 1969ರ ವರ್ಷದಲ್ಲಿ ಯುನೆಸ್ಕೋದಲ್ಲಿ ಶಾಂತಿ ಕಾರ್ಯಕರ್ತರಾದ ಜಾನ್ ಮೆಕೊನೆಲ್ ಅವರು ಭೂಮಿಯನ್ನು ಗೌರವಿಸುವ ಇಂತಹ ಒಂದು ದಿನದ ಪ್ರಸಾಪವನ್ನು ಮಂಡಿಸಿದ್ದ ಮೇರೆಗೆ, ಮೊದಲ ಬಾರಿಗೆ 1970ರ ಏಪ್ರಿಲ್ 22ರಂದು ಭೂಮಿ ದಿನವನ್ನು ಆಚರಿಸಲಾಯಿತು. ಭೂಮಿ ದಿನ ಸಂಪರ್ಕಸೇತು ವ್ಯಾಪಿಸಿದಂತೆ 193 ದೇಶಗಳಲ್ಲಿ ಈ ಆಚರಣೆ ವ್ಯಾಪಿಸಿದೆ.
*ಘಟನೆಗಳು:*
1500: ಪೋರ್ಚುಗೀಸ್ ನಾವಿಕರಾದ ಪೆಡ್ರೋ ಅಲ್ವರೆಸ್ ಕಬ್ರಾಲ್ ಅವರು ಬ್ರೆಜಿಲ್ನಲ್ಲಿ ಪಾದಾರ್ಪಣ ಮಾಡಿದರು
1864: ಅಮೆರಿಕದ ಕಾಂಗ್ರೆಸ್ಸು ನಾಣ್ಯಗಳ ಕುರಿತಾದ ಕಾನೂನನ್ನು ಜಾರಿಗೊಳಿಸಿ ಎಲ್ಲ ನಾಣ್ಯಗಳ ಮೇಲೆ ‘ಇನ್ ಗಾಡ್ ವಿ ಟ್ರಸ್ಟ್’ ಎಂದು ಲಿಖಿಸುವುದನ್ನು ಖಡ್ಡಾಯಗೊಳಿಸಿತು.
1889: ‘ಲ್ಯಾಂಡ್ ರಷ್ ಆಫ್ 1989’ ಘಟನೆಯಲ್ಲಿ ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ಮುಗಿಬಿದ್ದ ಜನ
1915: ಮೊದಲನೇ ಮಹಾಯುದ್ಧದಲ್ಲಿ ವಿಷಪೂರಿತ ಅನಿಲಗಳ ಬಳಕೆ ಮೇರೆ ಮೀರಿತು
1944: ಮೊದಲಬಾರಿಗೆ ಯುದ್ಧ ಸಂಬಂಧಿ ಹುಡುಕುವಿಕೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಹೆಲಿಕಾಫ್ಟರ್ ಬಳಕೆಯ ಪ್ರದರ್ಶನ.
1945: ಸೋಲನ್ನು ಒಪ್ಪಿಕೊಂಡು ತನ್ನ ಮುಂದೆ ಆತ್ಮಹತ್ಯೆಯೊಂದೇ ಇರುವ ದಾರಿ ಎಂದ ಅಡಾಲ್ಫ್ ಹಿಟ್ಲರ್
1970: ಅಮೆರಿಕವು ಮೊಟ್ಟ ಮೊದಲ ಬಾರಿಗೆ ‘ಅರ್ಥ್ ಡೇ’ ಆಚರಿಸಿತು.
1977: ಮೊಟ್ಟಮೊದಲ ಬಾರಿಗೆ ದೂರವಾಣಿ ಸಂಪರ್ಕಗಳಿಗೆ ಆಪ್ಟಿಕಲ್ ಫೈಬರ್ ಬಳಸಲಾಯಿತು
2005: ಜಪಾನಿನ ಪ್ರಧಾನಿ ಜುನಿಚಿರೋ ಕೊಯ್ಜುಮಿ ಅವರು ಜಪಾನಿನ ಯುದ್ಧ ಚರಿತ್ರೆಗಳಿಗೆ ಕ್ಷಮೆ ಯಾಚಿಸಿದರು
2006: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮಹಾಜನ್ ಅವರ ಮೇಲೆ ಅವರ ಸಹೋದರ ಪ್ರವೀಣ್ ಮಹಾಜನ್ ಮಾತಿನ ಚಕಮಕಿ ಮಧ್ಯೆ ಸಿಟ್ಟಿಗೆದ್ದು ಗುಂಡು ಹಾರಿಸಿದ
2007: ಪ್ರಖ್ಯಾತ ಕ್ರಿಕೆಟ್ ಆಟಗಾರ ವೆಸ್ಟ್ ಇಂಡೀಸ್ ತಂಡದ ಬ್ರಿಯಾನ್ ಲಾರಾ ನಿವೃತ್ತಿ
2007: ಭಾರತ-ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಯಶಸ್ವೀ ಪರೀಕ್ಷೆ
2016: ಮಧ್ಯಪ್ರದೇಶದ ಉಜ್ಜೈನಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಸಿಂಹಸ್ತ ಕುಂಭಮೇಳಕ್ಕೆ ಚಾಲನೆ
2016: ವಿಶ್ವಸಂಸ್ಥೆಯು ಹವಾಮಾನದಲ್ಲಿ ಉಂಟಾಗುತ್ತಿರುವ ಪ್ರತೀಕೂಲ ಬದಲಾವಣೆಗಳ ಬಗ್ಗೆ ಕಾಳಜಿ ವಹಿಸುವ ಪ್ಯಾರಿಸ್ ಒಡಂಭಡಿಕೆಗೆ ಸಹಿ ಮಾಡಿತು.
*ಜನನ:*
1854: ನೊಬೆಲ್ ಶಾಂತಿ ಪುರಸ್ಕೃತ ಬೆಲ್ಜಿಯನ್ ಬರಹಗಾರ ಮತ್ತು ಕಾರ್ಯಕರ್ತ ಹೆನ್ರಿ ಲಾ ಫಾಂಟೈನ್ ಜನನ
1876: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞ ರಾಬರ್ಟ್ ಬರಾನಿ ಜನನ
1904: ಖ್ಯಾತ ಪತ್ರಿಕೋದ್ಯಮಿ, ಇಂಡಿಯನ್ ಎಕ್ಸ್ಪ್ರೆಸ್ ಸಮೂಹ ಸ್ಥಾಪಕ ರಾಮನಾಥ ಗೋಯೆಂಕಾ ಜನನ
1909: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞೆ ರೀಟಾ ಲೆವಿ-ಮೊಂಟಾಲ್ಸಿನಿ ಜನನ
1914: ಪ್ರಖ್ಯಾತ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಬಿ.ಆರ್. ಚೋಪ್ರಾ ಜನನ
1919: ನೊಬೆಲ್ ಪುರಸ್ಕೃತ ರಸಾಯನ ಶಾಸ್ತ್ರಜ್ಞ ಡೊನಾಲ್ಡ್ ಜೆ ಕ್ರಾಮ್ ಜನನ
1935: ಪ್ರಸಿದ್ಧ ಭಾರತೀಯ-ಅಮೆರಿಕನ್ ಗಣಿತಜ್ಞೆ ಭಾಮಾ ಶ್ರೀನಿವಾಸನ್ ಜನನ
1945: ಭಾರತೀಯ ಆಡಳಿತ ಸೇವೆಯ ಅಧಿಕಾರಿ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಗೋಪಾಲಕೃಷ್ಣ ಗಾಂಧೀ ಜನನ
1945: ಪ್ರಸಿದ್ಧ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದ ಎಂ.ಎಸ್. ಉಮೇಶ್ ಜನನ
1974: ಖ್ಯಾತ ಬರಹಗಾರ ಚೇತನ್ ಭಗತ್ ಜನನ
*ನಿಧನ:*
1933: ಪ್ರಸಿದ್ಧ ರೋಲ್ಸ್ ರಾಯ್ಸ್ ಸಹಸಂಸ್ಥಾಪಕ ಹೆನ್ರಿ ರಾಯ್ಸ್ ನಿಧನ
1989: ನೊಬೆಲ್ ಪುರಸ್ಕೃತ ಭೌತಶಾಸ್ತ್ರಜ್ಞ ಎಮಿಲೋ ಜಿ. ಸೆಗ್ರೆ ನಿಧನ
1994: ಅಮೆರಿಕದ ಅಧ್ಯಕ್ಷ ರಿಚರ್ಡ್ ಎಂ ನಿಕ್ಸನ್ ನಿಧನ
2007: ಮಧುರಂ ನಾರಾಯಣನ್ ಬುದ್ಧಿ ಮಾಂದ್ಯ ಮಕ್ಕಳ ಕೇಂದ್ರದ ಸಂಸ್ಥಾಪಕ ಹಾಗೂ ಮಾಜಿ ಏರ್ ವೈಸ್ ಮಾರ್ಷಲ್ ವಿ. ಕೃಷ್ಣಸ್ವಾಮಿ ನಿಧನ
2009: ಕನ್ನಡದ ಹಿರಿಯ ಕವಿ, ಕತೆಗಾಗಾರ, ವಿಮರ್ಶಕ ದೇಶ ಕುಲಕರ್ಣಿ ನಿಧನ
2011: ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕಾರ ಪಂಡಿತ್ ಮಾಧವ ಗುಡಿ ನಿಧನ
2013: ಸುಪ್ರೀಂ ಕೋರ್ಟಿನ ಪ್ರಧಾನ ನ್ಯಾಯಾಧೀಶರಾದ ಜೆ.ಎಸ್. ವರ್ಮಾ ನಿಧನ
2013: ಪ್ರಸಿದ್ಧ ಪಿಟೀಲು ವಾದಕ ಲಾಲ್ಗುಡಿ ಜಯರಾಮನ್ ನಿಧನ
2013: ‘99 ಸೆಂಟ್ಸ್ ಓನ್ಲಿ’ ಮಾರಾಟ ಮಳಿಗೆಗಳ ಸ್ಥಾಪಕ, ಅಮೆರಿಕದ ಉದ್ಯಮಿ ಡೇವ್ ಗೋಲ್ಡ್ ನಿಧನ.