ದಿನ ವಿಶೇಷ:ಏಪ್ರಿಲ್-22*☀
*ದಿನಾಚರಣೆಗಳು*: ಭೂಮಿ ದಿನ ಏಪ್ರಿಲ್ 22 ದಿನವನ್ನು ವಿಶ್ವದಾದ್ಯಂತ ಭೂಮಿ ದಿನವನ್ನಾಗಿ (Earth Day) ಆಚರಿಸಲಾಗುತ್ತಿದೆ. 1969ರ ವರ್ಷದಲ್ಲಿ ಯುನೆಸ್ಕೋದಲ್ಲಿ ಶಾಂತಿ ಕಾರ್ಯಕರ್ತರಾದ ಜಾನ್ ಮೆಕೊನೆಲ್ ಅವರು ಭೂಮಿಯನ್ನು ಗೌರವಿಸುವ ಇಂತಹ ಒಂದು ದಿನದ ಪ್ರಸಾಪವನ್ನು ಮಂಡಿಸಿದ್ದ ಮೇರೆಗೆ, ಮೊದಲ ಬಾರಿಗೆ 1970ರ ಏಪ್ರಿಲ್ 22ರಂದು ಭೂಮಿ ದಿನವನ್ನು ಆಚರಿಸಲಾಯಿತು. ಭೂಮಿ ದಿನ ಸಂಪರ್ಕಸೇತು ವ್ಯಾಪಿಸಿದಂತೆ 193 ದೇಶಗಳಲ್ಲಿ ಈ ಆಚರಣೆ ವ್ಯಾಪಿಸಿದೆ. ಘಟನೆಗಳು: ಪೋರ್ಚುಗೀಸ್ ನಾವಿಕರಾದ ಪೆಡ್ರೋ ಅಲ್ವರೆಸ್ ಕಬ್ರಾಲ್ ಅವರು ಬ್ರೆಜಿಲ್ನಲ್ಲಿ ಪಾದಾರ್ಪಣ ಮಾಡಿದರು. ಅದಕ್ಕೆ ಅವರು ‘ಐಲ್ಯಾಂಡ್ ಆಫ್ ಟು ಕ್ರಾಸ್’ ಎಂದು ಹೆಸರಿಟ್ಟರು. ಕಾಲಕ್ರಮೇಣದಲ್ಲಿ ಅದು ‘ಹೋಲಿ ಕ್ರಾಸ್’, ನಂತರ ‘ಬ್ರೆಜಿಲ್’ ಎನಿಸಿತು. ಅಲ್ಲಿ ಸಿಗುವ ‘ಪೌ-ಬ್ರೆಜಿಲ್’ ಎಂಬ ಬಣ್ಣದ ಮರ ಈ ಹೆಸರಿಗೆ ಕಾರಣವೆನಿಸಿದೆ. ಅಮೆರಿಕದ ಕಾಂಗ್ರೆಸ್ಸು ನಾಣ್ಯಗಳ ಕುರಿತಾದ ಕಾನೂನನ್ನು ಜಾರಿಗೊಳಿಸಿ ಎಲ್ಲ ನಾಣ್ಯಗಳ ಮೇಲೆ ‘ಇನ್ ಗಾಡ್ ವಿ ಟ್ರಸ್ಟ್’ ಎಂದು ಲಿಖಿಸುವುದನ್ನು ಕಡ್ಡಾಯಗೊಳಿಸಿತು.
*ಭೂಮಿ ದಿನ*
ಏಪ್ರಿಲ್ 22 ದಿನವನ್ನು ವಿಶ್ವದಾದ್ಯಂತ ಭೂಮಿ ದಿನವನ್ನಾಗಿ (Earth Day) ಆಚರಿಸಲಾಗುತ್ತಿದೆ. 1969ರ ವರ್ಷದಲ್ಲಿ ಯುನೆಸ್ಕೋದಲ್ಲಿ ಶಾಂತಿ ಕಾರ್ಯಕರ್ತರಾದ ಜಾನ್ ಮೆಕೊನೆಲ್ ಅವರು ಭೂಮಿಯನ್ನು ಗೌರವಿಸುವ ಇಂತಹ ಒಂದು ದಿನದ ಪ್ರಸಾಪವನ್ನು ಮಂಡಿಸಿದ್ದ ಮೇರೆಗೆ, ಮೊದಲ ಬಾರಿಗೆ 1970ರ ಏಪ್ರಿಲ್ 22ರಂದು ಭೂಮಿ ದಿನವನ್ನು ಆಚರಿಸಲಾಯಿತು. ಭೂಮಿ ದಿನ ಸಂಪರ್ಕಸೇತು ವ್ಯಾಪಿಸಿದಂತೆ 193 ದೇಶಗಳಲ್ಲಿ ಈ ಆಚರಣೆ ವ್ಯಾಪಿಸಿದೆ.
*ಘಟನೆಗಳು:*
1500: ಪೋರ್ಚುಗೀಸ್ ನಾವಿಕರಾದ ಪೆಡ್ರೋ ಅಲ್ವರೆಸ್ ಕಬ್ರಾಲ್ ಅವರು ಬ್ರೆಜಿಲ್ನಲ್ಲಿ ಪಾದಾರ್ಪಣ ಮಾಡಿದರು
1864: ಅಮೆರಿಕದ ಕಾಂಗ್ರೆಸ್ಸು ನಾಣ್ಯಗಳ ಕುರಿತಾದ ಕಾನೂನನ್ನು ಜಾರಿಗೊಳಿಸಿ ಎಲ್ಲ ನಾಣ್ಯಗಳ ಮೇಲೆ ‘ಇನ್ ಗಾಡ್ ವಿ ಟ್ರಸ್ಟ್’ ಎಂದು ಲಿಖಿಸುವುದನ್ನು ಖಡ್ಡಾಯಗೊಳಿಸಿತು.
1889: ‘ಲ್ಯಾಂಡ್ ರಷ್ ಆಫ್ 1989’ ಘಟನೆಯಲ್ಲಿ ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ಮುಗಿಬಿದ್ದ ಜನ
1915: ಮೊದಲನೇ ಮಹಾಯುದ್ಧದಲ್ಲಿ ವಿಷಪೂರಿತ ಅನಿಲಗಳ ಬಳಕೆ ಮೇರೆ ಮೀರಿತು
1944: ಮೊದಲಬಾರಿಗೆ ಯುದ್ಧ ಸಂಬಂಧಿ ಹುಡುಕುವಿಕೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಹೆಲಿಕಾಫ್ಟರ್ ಬಳಕೆಯ ಪ್ರದರ್ಶನ.
1945: ಸೋಲನ್ನು ಒಪ್ಪಿಕೊಂಡು ತನ್ನ ಮುಂದೆ ಆತ್ಮಹತ್ಯೆಯೊಂದೇ ಇರುವ ದಾರಿ ಎಂದ ಅಡಾಲ್ಫ್ ಹಿಟ್ಲರ್
1970: ಅಮೆರಿಕವು ಮೊಟ್ಟ ಮೊದಲ ಬಾರಿಗೆ ‘ಅರ್ಥ್ ಡೇ’ ಆಚರಿಸಿತು.
1977: ಮೊಟ್ಟಮೊದಲ ಬಾರಿಗೆ ದೂರವಾಣಿ ಸಂಪರ್ಕಗಳಿಗೆ ಆಪ್ಟಿಕಲ್ ಫೈಬರ್ ಬಳಸಲಾಯಿತು
2005: ಜಪಾನಿನ ಪ್ರಧಾನಿ ಜುನಿಚಿರೋ ಕೊಯ್ಜುಮಿ ಅವರು ಜಪಾನಿನ ಯುದ್ಧ ಚರಿತ್ರೆಗಳಿಗೆ ಕ್ಷಮೆ ಯಾಚಿಸಿದರು
2006: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮಹಾಜನ್ ಅವರ ಮೇಲೆ ಅವರ ಸಹೋದರ ಪ್ರವೀಣ್ ಮಹಾಜನ್ ಮಾತಿನ ಚಕಮಕಿ ಮಧ್ಯೆ ಸಿಟ್ಟಿಗೆದ್ದು ಗುಂಡು ಹಾರಿಸಿದ
2007: ಪ್ರಖ್ಯಾತ ಕ್ರಿಕೆಟ್ ಆಟಗಾರ ವೆಸ್ಟ್ ಇಂಡೀಸ್ ತಂಡದ ಬ್ರಿಯಾನ್ ಲಾರಾ ನಿವೃತ್ತಿ
2007: ಭಾರತ-ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಯಶಸ್ವೀ ಪರೀಕ್ಷೆ
2016: ಮಧ್ಯಪ್ರದೇಶದ ಉಜ್ಜೈನಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಸಿಂಹಸ್ತ ಕುಂಭಮೇಳಕ್ಕೆ ಚಾಲನೆ
2016: ವಿಶ್ವಸಂಸ್ಥೆಯು ಹವಾಮಾನದಲ್ಲಿ ಉಂಟಾಗುತ್ತಿರುವ ಪ್ರತೀಕೂಲ ಬದಲಾವಣೆಗಳ ಬಗ್ಗೆ ಕಾಳಜಿ ವಹಿಸುವ ಪ್ಯಾರಿಸ್ ಒಡಂಭಡಿಕೆಗೆ ಸಹಿ ಮಾಡಿತು.
*ಜನನ:*
1854: ನೊಬೆಲ್ ಶಾಂತಿ ಪುರಸ್ಕೃತ ಬೆಲ್ಜಿಯನ್ ಬರಹಗಾರ ಮತ್ತು ಕಾರ್ಯಕರ್ತ ಹೆನ್ರಿ ಲಾ ಫಾಂಟೈನ್ ಜನನ
1876: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞ ರಾಬರ್ಟ್ ಬರಾನಿ ಜನನ
1904: ಖ್ಯಾತ ಪತ್ರಿಕೋದ್ಯಮಿ, ಇಂಡಿಯನ್ ಎಕ್ಸ್ಪ್ರೆಸ್ ಸಮೂಹ ಸ್ಥಾಪಕ ರಾಮನಾಥ ಗೋಯೆಂಕಾ ಜನನ
1909: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞೆ ರೀಟಾ ಲೆವಿ-ಮೊಂಟಾಲ್ಸಿನಿ ಜನನ
1914: ಪ್ರಖ್ಯಾತ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಬಿ.ಆರ್. ಚೋಪ್ರಾ ಜನನ
1919: ನೊಬೆಲ್ ಪುರಸ್ಕೃತ ರಸಾಯನ ಶಾಸ್ತ್ರಜ್ಞ ಡೊನಾಲ್ಡ್ ಜೆ ಕ್ರಾಮ್ ಜನನ
1935: ಪ್ರಸಿದ್ಧ ಭಾರತೀಯ-ಅಮೆರಿಕನ್ ಗಣಿತಜ್ಞೆ ಭಾಮಾ ಶ್ರೀನಿವಾಸನ್ ಜನನ
1945: ಭಾರತೀಯ ಆಡಳಿತ ಸೇವೆಯ ಅಧಿಕಾರಿ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಗೋಪಾಲಕೃಷ್ಣ ಗಾಂಧೀ ಜನನ
1945: ಪ್ರಸಿದ್ಧ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದ ಎಂ.ಎಸ್. ಉಮೇಶ್ ಜನನ
1974: ಖ್ಯಾತ ಬರಹಗಾರ ಚೇತನ್ ಭಗತ್ ಜನನ
*ನಿಧನ:*
1933: ಪ್ರಸಿದ್ಧ ರೋಲ್ಸ್ ರಾಯ್ಸ್ ಸಹಸಂಸ್ಥಾಪಕ ಹೆನ್ರಿ ರಾಯ್ಸ್ ನಿಧನ
1989: ನೊಬೆಲ್ ಪುರಸ್ಕೃತ ಭೌತಶಾಸ್ತ್ರಜ್ಞ ಎಮಿಲೋ ಜಿ. ಸೆಗ್ರೆ ನಿಧನ
1994: ಅಮೆರಿಕದ ಅಧ್ಯಕ್ಷ ರಿಚರ್ಡ್ ಎಂ ನಿಕ್ಸನ್ ನಿಧನ
2007: ಮಧುರಂ ನಾರಾಯಣನ್ ಬುದ್ಧಿ ಮಾಂದ್ಯ ಮಕ್ಕಳ ಕೇಂದ್ರದ ಸಂಸ್ಥಾಪಕ ಹಾಗೂ ಮಾಜಿ ಏರ್ ವೈಸ್ ಮಾರ್ಷಲ್ ವಿ. ಕೃಷ್ಣಸ್ವಾಮಿ ನಿಧನ
2009: ಕನ್ನಡದ ಹಿರಿಯ ಕವಿ, ಕತೆಗಾಗಾರ, ವಿಮರ್ಶಕ ದೇಶ ಕುಲಕರ್ಣಿ ನಿಧನ
2011: ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕಾರ ಪಂಡಿತ್ ಮಾಧವ ಗುಡಿ ನಿಧನ
2013: ಸುಪ್ರೀಂ ಕೋರ್ಟಿನ ಪ್ರಧಾನ ನ್ಯಾಯಾಧೀಶರಾದ ಜೆ.ಎಸ್. ವರ್ಮಾ ನಿಧನ
2013: ಪ್ರಸಿದ್ಧ ಪಿಟೀಲು ವಾದಕ ಲಾಲ್ಗುಡಿ ಜಯರಾಮನ್ ನಿಧನ
2013: ‘99 ಸೆಂಟ್ಸ್ ಓನ್ಲಿ’ ಮಾರಾಟ ಮಳಿಗೆಗಳ ಸ್ಥಾಪಕ, ಅಮೆರಿಕದ ಉದ್ಯಮಿ ಡೇವ್ ಗೋಲ್ಡ್ ನಿಧನ.
No comments:
Post a Comment