*___________________*
*ಡಿಜಿಟಲ್ ವಹಿವಾಟಿಗೆ ಹೊಸ ಸೂತ್ರ*
*ನವದೆಹಲಿ: ಎಲ್ಲ ಇಲಾಖೆಗಳ ನಗದು ಪಾವತಿ ಕೌಂಟರ್ಗಳಲ್ಲಿ ಡಿಜಿಟಲ್ ಪೇಮೆಂಟ್ಗೆ ಅಗತ್ಯವಾಗಿರುವ ಭಿಮ್ ಯುಪಿಐ, ಕ್ಯೂಆರ್ ಕೋಡ್ ಮತ್ತಿತರ ಸೌಲಭ್ಯಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜತೆಗೆ ಡಿಜಿಟಲ್ ವಹಿವಾಟು ಹೆಚ್ಚಿಸಲು 6 ಅಂಶದ ಸೂತ್ರವೊಂದನ್ನು ಸರ್ಕಾರ ಸಿದ್ದಪಡಿಸಿದೆ.*
*ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಇಲಾಖೆ ಕಾರ್ಯದರ್ಶಿ ಕಳೆದ ವಾರ ನಡೆಸಿರುವ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೆದ್ದಾರಿಗಳ ಟೋಲ್ ಪಾವತಿ, ಸಣ್ಣ ವ್ಯಾಪಾರಿಗಳನ್ನು ಡಿಜಿಟಲ್ ವಹಿವಾಟಿನ ವ್ಯಾಪ್ತಿಗೆ ತರಲು ಇರುವ ಮಾರ್ಗಗಳ ಕುರಿತೂ ಸಭೆಯಲ್ಲಿ ರ್ಚಚಿಸಲಾಗಿದೆ.*
*__________________*
*ಆರು ಅಂಶದ ಸೂತ್ರ*
*1 ಎಲ್ಲ ಸರ್ಕಾರಿ ಕಚೇರಿಯ ಕೌಂಟರ್ಗಳಲ್ಲಿ ಭೀಮ್ಯುುಪಿಐ ಕ್ಯೂಆರ್ ಕೋಡ್ ಹಾಗೂ ಡಿಜಿಟಲ್ ಪಾವತಿ ಸ್ವೀಕೃತಿ ಕುರಿತ ಫಲಕ ಅಳವಡಿಸುವುದು*
*2 ಯುಪಿಐ ಮೂಲಕ ಪಾವತಿ ಮಾಡುವಂತೆ ಗ್ರಾಹಕರ ಮೊಬೈಲ್ಗೆ ಸಂದೇಶ ರವಾನಿಸುವುದು*
*3 ದೇಶಾದ್ಯಂತ 6 ಕೋಟಿಗೂ ಅಧಿಕ ವ್ಯಾಪಾರಿಗಳಿದ್ದಾರೆ. ಪ್ರಸ್ತುತ 31 ಲಕ್ಷ ಪಿಒಎಸ್ ಟರ್ವಿುನಲ್ ಇವೆ. ಉಳಿದ ವ್ಯಾಪಾರಿಗಳನ್ನು ಈ ವ್ಯಾಪ್ತಿಗೆ ತರಲು ಆಂದೋಲನ ನಡೆಸುವುದು*
*4 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತುತ ಶೇ. 20 ವಾಹನ ಸವಾರರು ಮಾತ್ರ ಡಿಜಿಟಲ್ ಮೂಲಕ ಶುಲ್ಕ ಪಾವತಿ ಮಾಡುತ್ತಿದ್ದಾರೆ. ಹೀಗಾಗಿ ಆದಷ್ಟು ಹೆಚ್ಚಿನ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆ ಮಾಡುವುದು.*
*5 ಸರ್ಕಾರ ಗ್ರಾಹಕರಿಗೆ ನೀಡುವ ಬಿಲ್ಗಳಲ್ಲಿ (ವಿದ್ಯುತ್, ನೀರು, ಫೋನ್) ಕ್ಯೂಆರ್ ಕೋಡ್ ಕಡ್ಡಾಯವಾಗಿ ಮುದ್ರಿಸುವುದು*
*6 ಮಹಾನಗರಗಳಲ್ಲಿ ನ್ಯಾಷನಲ್ ಮೊಬಿಲಿಟಿ ಕಾರ್ಡ್ಗೆ ಹೆಚ್ಚಿನ ಆದ್ಯತೆ ನೀಡುವುದು*
*_____________________,*
No comments:
Post a Comment