*ವಿಷಯ :- ಭೂಗೋಳ ಶಾಸ್ತ್ರ (IMP)*
1) ಭಾರತದಲ್ಲಿನ ದೊಡ್ಡ ಮರಭೂಮಿ ಯಾವುದು ??
*Ans. ಥಾರ್ ಮರುಭೂಮಿ ✅✅*
2) ಅತಿ ಒಣ ಪ್ರದೇಶ ಯಾವುದು ??
*Ans. ಡೆತ್ ವ್ಯಾಲಿ ಪ್ರದೇಶ ✅✅*
3) ಭಾರತದ ಅತೀ ಸಿಹಿ ನೀರಿನ ಸರೋವರ ಯಾವುದು ??
*Ans. ಊಲರ ಸರೋವರ ✅✅*
4) ಭಾರತದ ಸರೋವರಗಳ ನಗರ ಯಾವುದು ??
*Ans. ಉದಯಪೂರ ✅✅*
5) ಆಫ್ರಿಕಾ ಖಂಡದ ಅತ್ಯಂತ ದೊಡ್ಡ ಸರೋವರ ಯಾವುದು ??
*Ans. ವಿಕ್ಟೋರಿಯಾ ✅✅*
6) ಬೆಸ್ಟಾಲ ಇದು ಯಾವ ಶಿಲೆಗೆ ಉದಾಹರಣೆ ??
*Ans. ಅಗ್ನಿಶಿಲೆ ✅✅*
7) ಪ್ರಪಂಚದ ಚಿಲುಮೆಗಳ ನಾಡು ಯಾವದು ??
*Ans. ಐಸಲ್ಯಾಂಡ ✅✅*
8) ಪಂಚ ಸರೋವರಗಳ ನಾಡು ಯಾವುದು ??
*Ans. ಅಮೆರಿಕಾ ✅✅*
9) ಹುಸ್ಸೆನ ಸಾಗರ ಸರೋವರ ಯಾವ ಜಿಲ್ಲೆಯಲ್ಲಿದೆ ??
*Ans. ಹೈದರಾಬಾದ್ ✅✅*
10) ಭಾರತದ ಅಮೃತ ಶಿಲೆಗಳ ನಾಡು ಯಾವುದು ??
*Ans. ರಾಜಸ್ತಾನ ✅✅*
*🌾ವ್ಯವಸಾಯ*
# ವ್ಯವಸಾಯವು ಮಾನವ ನ ಪುರಾತನ ವೃತ್ತಿಗಳಲ್ಲೊಂದಾಗಿದೆ.
# ಭೂಮಿಯನ್ನು ಉಳುಮೆಮಾಡಿ, ಸಸ್ಯಗಳನ್ನು ಪೋಷಿಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗಗಳನ್ನು ಪಡೆಯುವುದೇ 'ವ್ಯವಸಾಯ'ವಾಗಿದೆ.
# ವ್ಯಾವಸಾಯವು ಪಶುಪಾಲನೆ, ಕೋಳಿಸಾಕಣೆ, ರೇಷ್ಮೆ ಕೃಷಿ ಮತ್ತು ಜೀನುಸಾಕಣೆಗಳನ್ನು ಒಳಗೊಂಡಿದೆ.
# ಇದು ಮಾನವನಿಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಪೂರೈಸುವುದಲ್ಲದೆ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುವುದು.
# "ಭಾರತದ ಆಹಾರದ ವ್ಯವಸ್ಥೆಯಲ್ಲಿ ವ್ಯಾವಸಾಯವು ಪ್ರಮುಖ ಪಾತ್ರ ವಹಿಸಿದೆ."
# ವ್ಯವಸಾಯದ ವಿಧಾನಗಳು
ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೇಸಾಯ ಪದ್ಧತಿಗಳು ರೂಢಿಯಲ್ಲಿವೆ.
# ವ್ಯವಸಾಯದ ಮುಖ್ಯ ಲಕ್ಷಣಗಳಾದ ಭೂಬಳಕೆ, ಬೆಳೆಸುವ ಬೆಳೆಗಳು, ತಳಿ, ಇಳುವರಿ, ಬಳಸುವ ಕೃಷಿ ಉಪಕರಣಗಳು ಮತ್ತು ಗೊಬ್ಬರಗಳ ಬಳಕೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಭೂಸ್ವರೂಪ, ವಾಯುಗುಣ, ಮಳೆ ಹಂಚಿಕೆ, ಮಣ್ಣಿನ ವಿಧಗಳು ಮಾರುಕಟ್ಟೆ ತಾಂತ್ರಿಕತೆ, ಬಂಡವಾಳ ಹೂಡಿಕೆ, ಕಾರ್ಮಿಕರ ಲಭ್ಯತೆ ಮುಂತಾದವು.
⏩ ಭಾರತದಲ್ಲಿ ರೂಢಿಯಲ್ಲಿರುವ ಪ್ರಮುಖ ವ್ಯವಸಾಯದ ವಿಧನಗಳೆಂದರೆ,
೧. ಪ್ರಾಚೀನಕಾಲದ ಜೀವನಾಧಾರ ಬೇಸಾಯ
೨. ವಾಣಿಜ್ಯ ಬೇಸಾಯ
೩. ಮಿಶ್ರ ಬೇಸಾಯ
೪. ತೋಟಗಾರಿಕೆ
*🌾ಜೀವನಾಧಾರ ಬೇಸಾಯ :*
# ಜನರು ತಮ್ಮ ಗೃಹ ಬಲಕೆಗಾಗಿ ಮಾತ್ರ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕೆ 'ಜೀವನಾಧಾರ ಬೇಸಾಯ' ಎನ್ನುತ್ತಾರೆ.
# ಈ ಬೇಸಾಯ ಪದ್ಧತಿಯು ಈಶಾನ್ಯ ಭಾರತ, ಒರ್ರಿಸ್ಸಾ ಮತ್ತು ಮಧ್ಯಪ್ರದೇಶದ ಬೆಟ್ಟಗಳಲ್ಲಿ ರೂಢಿಯಲ್ಲಿದೆ.
# ಈ ಪದ್ಧತಿಯ ಲಕ್ಷಣಗಳೆಂದರೆ ಚಿಕ್ಕ ಪ್ರಮಾಣದ ಭೂ ಹಿಡುವಳಿ, ಪುರಾತನ ಹಾಗೂ ಸರಳ ಕೃಷಿ ಉಪಕರಣಗಳ ಬಳಕೆ, ಅವೈಜ್ಞಾನಿಕ ಕೃಷಿ ವಿಧಾನ ಮುಂತಾದವು. ಇದರಲ್ಲಿ ಎರಡು ವಿಧಗಳಿವೆ
*💐ವರ್ಗಾವಣೆ ಬೇಸಾಯ :*
# ವರ್ಗಾವಣೆ ಬೇಸಾಯ ಪದ್ಧತಿ ಎಂದರೆ ಅರಣ್ಯದ ಕೆಲವು ಭಾಗಗಳಲ್ಲಿ ಮರಗಳನ್ನು ಕಡಿದು, ಅಲ್ಲಿ ವಿಸ್ತರಿಸಿ ಬೇಸಾಯ ಮಾಡುವುದು.
# ಹಲವು ವರ್ಷಗಳ ಬೀಸಯದ ನಂತರ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಬೇಸಾಯಗಾರರು ಇತರ ಪ್ರದೇಶಗಳಿಗೆ ವಲಸೆ ಹೋಗುವರು.
# ಈ ಬೇಸಾಯದಿಂದ ಮಣ್ಣಿನ ಸವಕಳಿ ಉಂಟಾಗಿ ಕಡಿಮೆ ಇಳುವರಿ ಕೊಡುತ್ತದೆ.
# ಈ ಬಗೆಯ ಬೇಸಾಯವನ್ನು ಕರ್ನಾಟಕದಲ್ಲಿ 'ಕುಮರಿ', ಅಸ್ಸಾಂನಲ್ಲಿ 'ಜೂಮ್', ಕೇರಳದಲ್ಲಿ 'ಪೊನಂ' ಮತ್ತು ಆಂಧ್ರಪ್ರದೇಶದಲ್ಲಿ 'ಪೋಡು' ಎಂದು ಕರೆಯುತ್ತಾರೆ.*
*🌾ಸ್ಥಿರ ಬೇಸಾಯ :*
# ಸ್ಥಿರ ಬೇಸಾಯ ಪದ್ಧತಿಯಲ್ಲಿ ಜನರು ಅನುಕೂಲಕರವಾದ ಪ್ರದೇಶಗಳಲ್ಲಿ ಸ್ಥಿರವಾಗಿ ನೆಲೆಸಿ ವ್ಯವಸಾಯವನ್ನು ಮಾಡುತ್ತಾರೆ.
# ಆದರೆ ವ್ಯವಸಾಯದ ವಿಧಾನ, ಬಳಸುವ ಬೀಜ ಇವು ಸಾಂಪ್ರದಾಯಿಕವಾಗಿರುತ್ತವೆ.
# ಕೃಷಿ ಉತ್ಪಾದನೆಯನ್ನು ರೈತರು ತಮ್ಮ ಮನೆಯ ಉಪಯೋಗಕ್ಕಾಗಿ ಬಳಸಿಕೊಂಡು ಉಳಿದ ಹೆಚ್ಚಿನ ಉತ್ಪಾದನೆಯನ್ನು ತಮಗೆ ಬೇಕಾದ ಇತರ ವಸ್ತುಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದರು. ಈಗ ಮಾರಾಟ ಮಾಡುತ್ತಾರೆ.
*🍎ವಾಣಿಜ್ಯ ಬೇಸಾಯ :*
# ವ್ಯಾಪಾರದ ಉದ್ದೇಶದಿಂದ ಬೆಳೆಗಳ ಉತ್ಪಾದನೆ ಹಾಗು ಪ್ರಾಣಿಗಳ ಸಾಕಣೆಯನ್ನು ವಾಣಿಜ್ಯ ಬೇಸಾಯವೆಂದು ಕರೆಯುವರು.
# ಈ ಪದ್ಧತಿಯಲ್ಲಿ ವಿಸ್ತಾರವಾಗಿರುವ ಕೃಷಿ ಭೂಮಿಯು ಒಂದೇ ಬೆಳೆಯ ಉತ್ಪಾದನೆಗೆ ಬಳಕೆಯಾಗುವುದು.
# ಈ ಬೆಲೆಯ ಉತ್ಪಾದನೆಗೆ ಭೂಸ್ವರೂಪ, ಮಣ್ಣು, ನೀರು, ವಾಯುಗುಣಗಳು ಹೆಚ್ಚು ಸೂಕ್ತವಾಗಿರುತ್ತವೆ. ಯಂತ್ರೋಪಕರಣ, ರಸಗೊಬ್ಬರ, ಸುಧಾರಿತ ಬೀಜ, ಕೀಟ ನಶಕಗಳನ್ನು ಯಥೇಚ್ಛವಾಗಿ ಬಳಸುವರು.
# ಹತ್ತಿ, ಎಣ್ಣೆ ಕಾಳುಗಳು, ತಂಬಾಕು, ಮೆಣಸಿನಕಾಯಿ ಮತ್ತು ಕಬ್ಬು ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ.
*🐏ಮಿಶ್ರ ಬೇಸಾಯ :🐓*
# ಕೃಷಿ ಬೆಳೆಗಳ ಬೇಸಾಯದ ಜೊತೆಗೆ ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ, ರೇಷ್ಮೆ ಕೃಷಿ ಮುಂತಾದವು ಮಿಶ್ರ ಬೇಸಾಯ ಪದ್ಧತಿಗಳಾಗಿವೆ.
# ಭಾರತದ ಅನೇಕ ಕಡೆಗಳಲ್ಲಿ ಈ ಬೇಸಾಯ ಪದ್ಧತಿ ರೂಢಿಯಲ್ಲಿದೆ.
☀️ಈ ಪದ್ಧತಿಯ ಪ್ರಮುಖ ಗುಣಲಕ್ಷಣಗಳೆಂದರೆ
೧. ಈ ವ್ಯವಸಾಯದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುವುದು
೨. ವೈಜ್ಞಾನಿಕ ಕೃಷಿ ವಿಧಾನಗಳನ್ನು ಅನುಸರಿಸಲಾಗುವುದು.
೩. ಇದಕ್ಕೆ ಸಾಕಷ್ಟು ಬಂಡವಾಳ ಅಗತ್ಯ.
*🌴ತೋಟಗಾರಿಕೆ ಬೇಸಾಯ :*
# ಭಾರತದ ಮುಖ್ಯ ಬೇಸಾಯ ಪದ್ಧತಿಗಳಲ್ಲಿ ತೋಟಗಾರಿಕೆ ಬೇಸಾಯವು ಒಂದಾಗಿದೆ.
# ಕಾಫಿ, ಚಹಾ, ರಬ್ಬರ್ ಹಾಗೂ ಸಾಂಬಾರ್ ಪದಾರ್ಥಗಳು, ತೆಂಗು, ಅಡಿಕೆ, ವೀಳ್ಯದೆಲೆ ಮುಂತಾದವು ತೋಟಗಾರಿಕೆ ಬೆಳೆಗಲ್ಲಿ ಮುಖ್ಯವಾದುವು.
# ಒಂದೇ ಬೆಳೆಯನ್ನು ವಿಸ್ತಾರವಾದ ತೋಟದಲ್ಲಿ ಬೆಳೆಯಲಾಗುವುದು.
# ಭಾರತದಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಈ ಬೇಸಾಯ ಪದ್ಧತಿಯು ರೂಢಿಯಲ್ಲಿದೆ. ಇದರಿಂದ ವಿದೇಶಿ ವಿನಿಮಯದ ಗಳಿಕೆಯೂ ಆಗುತ್ತದೆ.
💬ರಾಮ ಸೇತು
# ಭಾರತದ ದಕ್ಷಿಣ ತುತ್ತತುದಿಯಾದ ಪಂಬನ್ ದ್ವೀಪದಿಂದ ಶ್ರೀಲಂಕಾದ ಮುಕುಟ ತುದಿಯಾದ ಮನ್ನಾರ್ ದ್ವೀಪಗಳ ನಡುವೆ ರಾಮಸೇತು ಸಂಪರ್ಕ
# ಉದ್ದ: 50 ಕಿ.ಮೀ
# ಆಳ: 30-35 ಅಡಿ
# ಪರ್ಯಾಯ ಹೆಸರು : ಆಡಂ ಬ್ರಿಡ್ಜ್
# 1480ರ ಚಂಡಮಾರುತ ಅಪ್ಪಳಿಸುವವರೆಗೂ ಸೇತುವೆಯನ್ನು ನಡೆದುಕೊಂಡೇ ದಾಟಬಹುದಾಗ
ಿತ್ತು.
No comments:
Post a Comment