1. ಚುನಾವಣೆ ಪದದ ಮೂಲ ಪದ ಯಾವುದು?
ಉ: ಚುನಾವಣೆ ಪದದ ಮೂಲ ಪದ ಎಲಿಗೆರೆ{eligere}
2. ಚುನಾವಣೆ ಎಂದರೇನು?
ಉ: ಮತದಾರರು ಮತ ನೀಡುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚುನಾವಣೆ ಎನ್ನುವರು.
3. ಸಾರ್ವತ್ರಿಕ ಚುನಾವಣೆ ಎಂದರೇನು?
ಉ: ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ಸಾರ್ವತ್ರಿಕ ಚುನಾವಣೆ ಎನ್ನುವರು.
4. ಉಪ ಚುನಾವಣೆ ಎಂದರೇನು?ಉದಾಹರಣೆ ನೀಡಿ?
ಉ: ಒಬ್ಬ ಚುನಾಯಿತ ಪ್ರತಿನಿಧಿಯ ರಾಜೀನಾಮೆ,ಮರಣ ಅಥವ ಅನರ್ಹತೆಯಿಂದ ತೆರವಾಗುವ ಸ್ಥಾನಕ್ಕೆ ಆರು ತಿಂಗಳೊಳಗೆ ಜರುಗುವ ಚುನಾವಣೆಗೆ ಉಪ ಚುನಾವಣೆ ಎನ್ನುವರು.
5. ಮರು ಚುನಾವಣೆ ಎಂದರೇನು?
ಉ: ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತಗಟ್ಟೆಯ ವಶ, ಮತ ಯಂತ್ರದಲ್ಲಿನ ತೊಂದರೆ, ಮತ ಪಟ್ಟಿಯಲ್ಲಿನ ದೋಷಗಳಿಂದ ನಿರ್ದಿಷ್ಟ ಮತಗಟ್ಟೆಯ ಚುನಾವಣೆಯನ್ನು ಮುಂದೂಡಿ ನಡೆಸಲಾಗುವ ಚುನಾವಣೆಗೆ ಮರು ಚುನಾವಣೆ ಎನ್ನುವರು.
6. ಮಧ್ಯಂತರ ಚುನಾವಣೆ ಎಂದರೇನು?
ಉ: ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕಿಂತ ಮೊದಲೇ ಜರುಗುವ ಚುನಾವಣೆಯಲ್ಲಿ ಮತ ನೀಡುವುದನ್ನು ಮಧ್ಯಂತರ ಚುನಾವಣೆ ಎನ್ನುವರು.ಉದಾ:2004ರಲ್ಲಿ ಐದು ವರ್ಷ ಅವಧಿ ಮುಗಿಯುವುದಕ್ಕಿಂತ ಮೊದಲೇ ಜರುಗಿದ ಲೋಕಸಭೆಯ ಚುನಾವಣೆಗಳು.
7. ಪ್ರತ್ಯಕ್ಷ ಚುನಾವಣೆ ಎಂದರೇನು?
ಉ: ಮತದಾರರು ಮಧ್ಯವರ್ತಿಗಳ ನೆರವಿಲ್ಲದೆ ತಾವೇ ನೇರವಾಗಿ ಮತ ನೀಡುವ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕೆ ಪ್ರತ್ಯಕ್ಷ ಚುನಾವಣೆ ಎನ್ನುವರು.
8. ಪ್ರತ್ಯಕ್ಷ ಚುನಾವಣೆಗೆ ಉದಾಹರಣೆ ಕೊಡಿ.
ಉ: ಭಾರತದಲ್ಲಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳು.
9. ಪರೋಕ್ಷ ಚುನಾವಣೆ ಎಂದರೇನು?
ಉ: ದ್ದೇಶದ ಮುಖ್ಯಸ್ಥ ಜನರಿಂದ ನೇರವಾಗಿ ಮತ ಪಡೆಯದೇ ಜನರ ಪ್ರತಿನಿಧಿಗಳಿಂದ ಮತ ಪಡೆಯುವುದನ್ನು ಪರೋಕ್ಷ ಚುನಾವಣೆ ಎನ್ನುವರು.
10. ಪರೋಕ್ಷ ಚುನಾವಣೆಗೆ ಉದಾಹರಣೆ ಕೊಡಿ.
ಉ: ರಾಷ್ಟ್ರಪತಿ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ.
No comments:
Post a Comment