Tuesday, 3 April 2018

ತ್ರಿವಳಿ ತಲಾಕ್ || teen talak

*ತ್ರಿವಳಿ ತಲಾಕ್*

►►ಇತಿಹಾಸದ ಪುಟಕ್ಕೆ ಸೇರಲಿದೆ ಮುಸ್ಲಿಮರ ತ್ರಿವಳಿ ತಲಾಖ್
►►ಇದು ಕುರಾನ್‌ನಲ್ಲಿಯೂ ಇಲ್ಲ. ಸಂವಿಧಾನಕ್ಕೂ ವಿರೋಧ
►►ಸುಪ್ರೀಂ ಕೋರ್ಟ್‌ನಿಂದ ಹೊರಬಿತ್ತು ಮಹತ್ವದ ತೀರ್ಪು

#ಒಂದೇ_ದೇಶ_ಒಂದೇ_ಕಾನೂನಿಗೆ_ಮುನ್ನುಡಿ_ಸುಪ್ರೀಂ_ಐತಿಹಾಸಿಕ_ತೀರ್ಪು

ನವದೆಹಲಿ: ತ್ರಿವಳಿ ತಲಾಖ್ ರದ್ದುಗೊಳಿಸಿ ಸುಪ್ರಿಂ ಕೋರ್ಟ್ ಆಗಸ್ಟ್ -22 ರಂದು ಐತಿಹಾಸಿಕ ತೀರ್ಪು ನೀಡಿದೆ. #ತ್ರಿವಳಿ_ತಲಾಖ್_ಸಂವಿದಾನ_ಬಾಹಿರ ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲವಾದ್ದರಿಂದ #ತ್ರಿವಳಿ_ತಲಾಖ್_ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳ ಬಹುಮತದ ತೀರ್ಪಿನ ಆಧಾರದ ಮೇಲೆ ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ #ಜೆ_ಎಸ್_ಖೇಹರ್ ನೇತೃತ್ವದ ಪಂಚ ಸದಸ್ಯರ(ಖೇಹರ್, ಕುರಿಯನ್ ಜೋಸೆಫ್, ರೋಹಿಂಗ್ಟನ್ ಎಫ್ ನಾರಿಮನ್, ಉದಯ್ ಲಲಿತ್, ಎಸ್ ಅಬ್ದುಲ್ ನಜೀರ್ ) ನ್ಯಾಯಪೀಠ ತ್ರಿವಳಿ ತಲಾಖ್ ನಿಷೇಧಿಸಬೇಕಿದ್ದರೆ ಸಂಸತ್ ನಲ್ಲಿ  ಕಾನೂನು ಜಾರಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಐವರು ನ್ಯಾಯಮೂರ್ತಿಗಳಲ್ಲಿ ಮೂವರು ನ್ಯಾಯಮೂರ್ತಿಗಳು ತ್ರಿವಳಿ ತಲಾಖ್ ವಿರುದ್ಧ ತೀರ್ಪು ಪ್ರಕಟಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ತ್ರಿವಳಿ ತಲಾಖ್ಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಒಟ್ಟುಗೂಡಿಸಿ ಸತತ ಆರು ದಿನ ವಿಚಾರಣೆ ನಡೆಸಿತ್ತು. ಮೇ 18ರಂದು ವಿಚಾರಣೆ ಪೂರ್ಣಗೊಂಡಿತ್ತು. ತೀರ್ಪು ಕಾದಿರಿಸಲಾಗಿತ್ತು.

ಕಾನೂನು ಜಾರಿಗೆ ತರುವ ತನಕ ತ್ರಿವಳಿ ತಲಾಖ್ ನೀಡುವುದಕ್ಕೆ #6ತಿಂಗಳ_ಕಾಲ_ಸುಪ್ರಿಂ_ಕೋರ್ಟ್ ತಡೆಯಾಜ್ಞೆ ನೀಡಿದೆ. ಅದಕ್ಕೂ ಮೊದಲು ಕಾನೂನು ಜಾರಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

#ಅಖಿಲ_ಭಾರತೀಯ_ಮುಸ್ಲಿಂ_ವೈಯಕ್ತಿಕ_ಕಾನೂನು_ಮಂಡಳಿ,

ತಲಾಖ್ ನೀಡದಂತೆ 'ನಿಖಾನಾಮ' (ವಿವಾಹ) ಸಂದರ್ಭದಲ್ಲೇ ಸಲಹೆ ನೀಡುತ್ತೇವೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸುಧಾರಣೆಗೆ ನಾವೂ ಶ್ರಮಿಸುತ್ತಿದ್ದೇವೆ ಎಂದು ಹೇಳಿತ್ತು. ಕಳೆದ 1400 ವರ್ಷಗಳಿಂದ ಇದು ನಡೆದು ಬಂದಿದೆ ಎಂದು ತಲಾಖ್ ಪರವಾಗಿ ವಾದಿಸಿತ್ತು.

ತ್ರಿವಳಿ ತಲಾಖ್ ಪದ್ಧತಿಯು ಇಸ್ಲಾಂ ಧರ್ಮದ ಮೂಲಭೂತ ಅಂಶ ಅಲ್ಲ ಎಂದು ,#ಕೇಂದ್ರಸರ್ಕಾರ ಪ್ರತಿಪಾದಿಸಿತ್ತು.

ಈ ವಿಚಾರವನ್ನು ಲಿಂಗ ಸಮಾನತೆ, ಸಾಂವಿಧಾನಿಕ ನೈತಿಕತೆ ಮತ್ತು ಆತ್ಮಸಾಕ್ಷಿಯ  ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿತ್ತು.

ತ್ರಿವಳಿ ತಲಾಖ್ ಎಂಬುದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಣ ಸಂಘರ್ಷ ಅಲ್ಲ. ಇದು ಮುಸ್ಲಿಂ ಸಮುದಾಯದೊಳಗಿನ ಮತ್ತು ಹೆಂಗಸರ ನಡುವಿನ ಸಂಘರ್ಷ ಎಂದು ಸರ್ಕಾರ ವಾದಿಸಿತ್ತು

#ತ್ರಿವಳಿ_ತಲಾಕ್:#ಕಾನೂನು_ಹೋರಾಟದ_ಹೆಜ್ಜೆಗುರುತುಗಳು

ತ್ರಿವಳಿ ತಲಾಖ್ ವಿವಾದವನ್ನು ಸುಪ್ರೀಂ ಕೋರ್ಟ್ ಗೆ ತೆಗೆದುಕೊಂಡು ಹೋದವರು #ಉತ್ತರಾಖಂಡ್ ಮೂಲದ #ಶಯರಾ_ಬಾನೊ ಎಂಬುವವರು. ತ್ರಿವಳಿ ತಲಾಖ್ ಮುಸ್ಲಿಂ ಧರ್ಮದಲ್ಲಿರುವ ಒಂದು ಪದ್ಧತಿಯಾಗಿದ್ದು, ಅದರಂತೆ ಪತಿ ಮೂರು ಬಾರಿ ತಲಾಖ್ ಎಂದು ಬಾಯಲ್ಲಿ ಹೇಳಿ ಪತ್ನಿಗೆ ವಿಚ್ಛೇದನ ನೀಡಬಹುದು. ಮೋದಿ ಸರ್ಕಾರ ಈ ಪದ್ಧತಿಗೆ ವಿರೋಧ ವ್ಯಕ್ತಪಡಿಸಿದ್ದು, ತ್ರಿವಳಿ ತಲಾಖ್ ನ್ನು ವಿರೋಧಿಸುವವರಿಗೆ ಬಲಸಿಕ್ಕಿದಂತಾಗಿತ್ತು.

ಮುಸ್ಲಿಂ ಧರ್ಮದಲ್ಲಿರುವ ತ್ರಿವಳಿ ತಲಾಖ್, ನಿಕಾಹ್ ಹಲಾಲ್ ಮತ್ತು ಬಹುಪತ್ನಿತ್ವ
#ಸಂವಿಧಾನ_ವಿಧಿ_25(1) ರಡಿ ಮಹಿಳೆಯರ ಸಮಾನತೆಯ ಹಕ್ಕು ಮತ್ತು ಗೌರವವನ್ನು ಉಲ್ಲಂಘಿಸುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ. ಇಲ್ಲಿಯವರೆಗೆ ನ್ಯಾಯಾಲಯದಲ್ಲಿ ಯಾವ ರೀತಿಯಲ್ಲಿ ಕಾನೂನು ಹೋರಾಟ ನಡೆಯಿತು ಎಂಬುದನ್ನು ತಿಳಿದುಕೊಳ್ಳೋಣ.

ಮೇ 11ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ನ್ಯಾಯಪೀಠ, ಅರ್ಜಿ ವಿಚಾರಣೆ ಆರಂಭಿಸಿತು. ತ್ರಿವಳಿ ತಲಾಖ್ ನ ಸಾಂವಿಧಾನಿಕ ಮೌಲ್ಯ ಮತ್ತು ಅದು ಇಸ್ಲಾಂ ಧರ್ಮಕ್ಕೆ ಅಗತ್ಯವೇ ಎಂಬ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.ಪಿತೃ ಪ್ರಧಾನ ಹೊಂದಿರುವ ಮುಸಲ್ಮಾನರಲ್ಲಿ ಮಹಿಳೆಯರಿಗೆ ಕೂಡ ಸಮಾನ ಸ್ವಾತಂತ್ರ್ಯ ನೀಡಬೇಕು, ತಲಾಖ್ ಎಂಬ ಅನಿಷ್ಟ ಆಚರಣೆಯನ್ನು ತೆಗೆದುಹಾಕಬೇಕೆಂದು, ಅದು ಅಸಂವಿಧಾನಿಕವೆಂದು ಘೋಷಿಸಬೇಕೆಂದು  ಉತ್ತರಾಖಂಡ್ ಮೂಲದ ಬೊನೊ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. 37 ವರ್ಷದ ಶಯರಾ ಬೊನೊ ಉತ್ತರಾಖಂಡ್ ನ ಉದಮ್ ಸಿಂಗ್ ನಗರ್ ನಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದು ತಾವು ತಮ್ಮಪತಿಯ ಒತ್ತಡದಿಂದ 6 ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಗಿ ಹೇಳಿದ್ದಾರೆ.

#2015ರಲ್ಲಿ ಬೊನೊಗೆ ಅವರ ಪತಿ ಮೂರು ಬಾರಿ ತಲಾಖ್, ತಲಾಖ್, ತಲಾಖ್ ಎಂದು ಪತ್ರದಲ್ಲಿ ಬರೆದುಕೊಟ್ಟಿದ್ದರಂತೆ. ಇದರಿಂದ ನೊಂದು ಕೊನೆಗೂ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.

#ಅಕ್ಟೋಬರ್_16_2015:ಮುಸ್ಲಿಂ ಧರ್ಮದಲ್ಲಿ ಮಹಿಳೆಯರು ಭಾರೀ ಲಿಂಗ ತಾರತಮ್ಯವನ್ನು ಹೊಂದಿದ್ದಾರೆ, ವಿಚ್ಛೇದನ ವಿಷಯದಲ್ಲಿ ಅವರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಕ್ತ ನ್ಯಾಯಪೀಠ ಸ್ಥಾಪಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಕೋರಿಕೆ.

#2016_ಫೆಬ್ರವರಿ_5:ತ್ರಿವಳಿ ತಲಾಖ್, ನಿಖಾಹಲಾಲಾ ಮತ್ತು ಬಹುಪತ್ನಿತ್ವದ ಸಾಂವಿಧಾನಿಕ ಮೌಲ್ಯವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿ ವಿಚಾರಣೆಗೆ ಅಟೊರ್ನಿ ಜನರಲ್ ಮುಕುಲ್ ರೊಹಟ್ಗಿಗೆ ಸುಪ್ರೀಂ ಕೋರ್ಟ್ ನಿರ್ದೇಶನ.

#2016_ಮಾರ್ಚ್_28:ಮಹಿಳೆ ಮತ್ತು ಕಾನೂನು ಬಗ್ಗೆ ಉನ್ನತ ಮಟ್ಟದ ತಂಡದ ವರದಿಯ ಪ್ರತಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ.

#2016_ಜೂನ್_29:ಸಾಂವಿಧಾನಿಕ ಚೌಕಟ್ಟಿನೊಳಗೆ  ಮುಸಲ್ಮಾನರಲ್ಲಿರುವ ತ್ರಿವಳಿ ತಲಾಖ್ ನ್ನು ಪರೀಕ್ಷಿಸುವಂತೆ ಸುಪ್ರೀಂ ಕೋರ್ಟ್ ಆದೇಶ.

#2016_ಅಕ್ಟೋಬರ್_7:ಭಾರತದ ಸಂವಿಧಾನ ಇತಿಹಾಸದಲ್ಲಿ ತ್ರಿವಳಿ ತಲಾಖ್ ನ್ನು ಸುಪ್ರೀಂ ಕೋರ್ಟ್ ನಲ್ಲಿ

ವಿರೋಧಿಸಿದ ಕೇಂದ್ರ ಸರ್ಕಾರ. ಲಿಂಗ ಸಮಾನತೆ ಮತ್ತು ಜಾತ್ಯತೀತತೆಗೆ ಒತ್ತಾಯ.

#ಫೆಬ್ರವರಿ_14_2017:ಮುಖ್ಯ ವಿಷಯದ ಜೊತೆಗೆ ಹಲವು ಸಂವಾಧಾತ್ಮಕ ಮನವಿಯನ್ನು ಸೇರಿಸಲು ಸುಪ್ರೀಂ ಕೋರ್ಟ್ ಅವಕಾಶ.

#ಫೆಬ್ರವರಿ_16_2017:ತ್ರಿವಳಿ ತಲಾಖ್ ವಿಷಯದ ಕುರಿತು ವಿಚಾರಣೆ ನಡೆಸಲು ಐದು ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠ ರಚನೆ.

#ಮಾರ್ಚ್_27_2017:ತ್ರಿವಳಿ ತಲಾಖ್ ವಿರುದ್ಧದ ಮನವಿ ಪುರಸ್ಕೃತವಲ್ಲ ಯಾಕೆಂದರೆ ಈ ವಿಷಯ ನ್ಯಾಯಾಂಗದ ಹೊರಗಿನದ್ದು ಎಂದು ಅಖಿಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿ ಸುಪ್ರೀಂ ಕೋರ್ಟ್ ಗೆ ಹೇಳಿಕೆ.

#ಮಾರ್ಚ್_30_2017:ಈ ವಿಷಯ ಗಂಭೀರವಾದದ್ದುಮತ್ತು ಮುಸ್ಲಿಂ ಜನಾಂಗದ ಮಹಿಳೆಯರ ಭಾವನೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿ ಮೇ 11ರಿಂದ ಸಾಂವಿಧಾನ ಪೀಠ ವಿಚಾರಣೆ ಆರಂಭ.

#ಮೇ_11_2017:ಪ್ರತಿ ದಿನ ವಿಚಾರಣೆ ಆರಂಭಿಸಿದ ಸಂವಿಧಾನ ಪೀಠ.

#ಮೇ_18_2017:ಆರು ದಿನಗಳ ಕಾಲ ಸತತ ವಾದ-ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಪೀಠ, ತೀರ್ಪನ್ನು ಕಾಯ್ದಿರಿಸಲಾಗಿತ್ತು ಈ ತೀರ್ಪನ್ನು Aug 22 ರಂದು ಮಂಡಿಸಿತು.

No comments:

Post a Comment