Wednesday, 11 April 2018

Current affairs

#11 ನೇ #ಏಪ್ರಿಲ್, 2018-ಪ್ರಚಲಿತ ಘಟನೆಗಳು
#ರಾಷ್ಟ್ರೀಯ

1. ದೇಶದ ವೇಗದ ವಿದ್ಯುತ್ ಚಾಲಿತ ರೈಲಿಗೆ ಚಾಲನೆ:

* ದೇಶದ ಮೊದಲ ಅಧಿಕ ವೇಗದ ವಿದ್ಯುತ್ ಚಾಲಿತ ರೈಲು ಇಂಜಿನ್‌ಗೆ ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ಚಾಲನೆ ನೀಡಿದರು.

* ಈ ಮೂಲಕ 12,000 ಅಶ್ವಶಕ್ತಿ ಮತ್ತು ಅದಕ್ಕೂ ಹೆಚ್ಚಿನ ಶಕ್ತಿಯ ವಿದ್ಯುತ್ ಇಂಜಿನ್‌ಗಳನ್ನು ಹೊಂದಿರುವ ಪ್ರಮುಖ ರಾಷ್ಟಗಳಾದ ರಷ್ಯಾ, ಚೀನಾ, ಜರ್ಮನಿ ಮತ್ತು ಸ್ವೀಡನ್‌ಗಳ ಸಾಲಿಗೆ ಭಾರತವೂ ಸೇರ್ಪಡೆಗೊಂಡಿದೆ.

* ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಪೂರ್ಣಗೊಂಡ ಅತಿ ದೊಡ್ಡ ಯೋಜನೆ ಇದಾಗಿದೆ.

* ಫ್ರಾನ್ಸ್ ನ ಅಲ್‌ಸ್ಟೋಮ್ ಈ ಇಂಜಿನ್ ರೂಪಿಸಿದೆ.

* ಇದು 12,000 ಅಶ್ವಶಕ್ತಿ (ಎಚ್‌ಪಿ) ಸಾಮರ್ಥ್ಯ ಹೊಂದಿದ್ದು, ಗಂಟೆಗೆ 120 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು.

* ಒಂದು ಅಧಿಕ ವೇಗದ ವಿದ್ಯುತ್ ಚಾಲಿತ ರೈಲು ಇಂಜಿನ್ ನಿರ್ಮಾಣಕ್ಕೆ ಸುಮಾರು 25 ಕೋಟಿ ರೂ. ವೆಚ್ಚವಾಗಲಿದೆ.

* ಬಿಹಾರದ ಮಾಧೇಪುರ ಕಾರ್ಖಾನೆಯಲ್ಲಿ ಈ ಇಂಜಿನ್ ಸಿದ್ದಪಡಿಸಲಾಗಿದೆ.

* ಅಲ್‌ಸ್ಟೋಮ್ ಜತೆಗೆ ಭಾರತೀಯ ರೈಲ್ವೆಯ ಮೊದಲ ಜಂಟಿ ಸಹಭಾಗಿತ್ವದ ಯೋಜನೆ ಇದಾಗಿದೆ.

* 2015ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

* 2019ರೊಳಗೆ ಈ ಫ್ಯಾಕ್ಟರಿಯಲ್ಲಿ ಐದು ಲೋಕೋಮೋಟಿವ್‌ಗಳನ್ನು ಸಿದ್ದಪಡಿಸಲಾಗುತ್ತದೆ.

* ಉಳಿದ ನಾಲ್ಕು ಇಂಜಿನ್ ಗಳು ಇದೇ ಆರ್ಥಿಕ ವರ್ಷದಲ್ಲಿ ಹಳಿಗೆ ಬರಲಿವೆ.

No comments:

Post a Comment