Wednesday, 11 April 2018

Current affairs

11 ನೇ ಏಪ್ರಿಲ್, 2018-ಪ್ರಚಲಿತ ಘಟನೆಗಳು

#ವಿಜ್ಞಾನ ಮತ್ತು ತಂತ್ರಜ್ಞಾನ:

1. ಹೊಸ ವರ್ಗದ ಆ್ಯಂಟಿಬಯೋಟಿಕ್ ಅಭಿವೃದ್ದಿ:

ಸಂಶೋಧಕರು ಹೊಸ ವರ್ಗದ ಆ್ಯಂಟಿಬಯೋಟಿಕ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಇವುಗಳಿಗೆ ಒಡಿಲೋರಾಬಿನ್ಸ್ (odilorhabdins) ಎಂದು ಹೆಸರಿಡಲಾಗಿದ್ದು, ಒಡಿಎಲ್ ಎಂದು ಕರೆಯಲಾಗುತ್ತದೆ.

* ಇವು ಡ್ರಗ್ ರೆಸಿಸ್ಟೆನ್ಸ್ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಬಲ್ಲವು.

* ಸಿಂಬಿಯಾಟಿಕ್ ಬ್ಯಾಕ್ಟಿರಿಯಾ ಎಂದೇ ಕರೆಯುವ ಒಂದು ಜಾತಿಯ ಮಣ್ಣುಹುಳಿವಿನಲ್ಲಿರುವ ಬ್ಯಾಕ್ಟೀರಿಯಾದಿಂದ ಹೊಸ ಆ್ಯಂಟಿಬಯೋಟಿಕ್ ಉತ್ಪಾದಿಸಲಾಗಿದೆ.

* ಈ ಬ್ಯಾಕ್ಟೀರಿಯಾ ಕೀಟಗಳ ನಾಶಕ್ಕೂ ಸಹಾಯಕವಾಗುತ್ತದೆ.

* ಜತೆಗೆ ಅಪಾಯಕಾರಿ ಬ್ಯಾಕ್ಟಿರಿಯಾಗಳ ವಿರುದ್ದ ಹೋರಾಡಬಲ್ಲದು.

* ಒಡಿಎಲ್ ಆ್ಯಂಟಿಬಯೋಟಿಕ್ ಅನ್ನು ಈಗಾಗಲೇ ಹಲವು ಹಂತಗಳಲ್ಲಿ ಪರೀಕ್ಷಿಸಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

* ಇಲಿಗಳ ಮೇಲೆ ಇದರ ಪ್ರಯೋಗ ನಡೆಸಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ.

* ವಿವಿಧ ಔಷಧಗಳಿಗೆ ಪ್ರತಿರೋಧಕ ಗುಣ ಬೆಳೆಸಿಕೊಂಡಿರುವ ಹಲವಾರು ರೋಗಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಗುಣ ಹೊಂದಿದೆ.

* ಇದು ರೋಗಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಜತೆಗೆ ಒಳ್ಳೆಯ ಉಪಯೋಗಕ್ಕೆ ಬರುವ ಬ್ಯಾಕ್ಟೀರಿಯಾಗಳನ್ನೂ ಕೊಲ್ಲುತ್ತದೆ.

* ಆದರೂ, ಗುಣಪಡಿಸಲಾಗದ ಸೋಂಕುಗಳ ಚಿಕಿತ್ಸೆಗೆ ಹೊಸ ಆ್ಯಂಟಿಬಯೋಟಿಕ್ ಬಳಸಬಹುದಾಗಿದೆ.

No comments:

Post a Comment