Wednesday, 11 April 2018

11 ನೇ ಏಪ್ರಿಲ್, 2018-ಪ್ರಚಲಿತ ಘಟನೆಗಳು

11 ನೇ ಏಪ್ರಿಲ್, 2018-ಪ್ರಚಲಿತ ಘಟನೆಗಳು

3. ಅನುಷ್ಕಾಗೆ ಫಾಲ್ಕೆ ಎಕ್ಸಲೆನ್ಸ್ ಅವಾರ್ಡ್:

* ಅನುಷ್ಕಾಗೆ ಫಾಲ್ಕೆ ಎಕ್ಸಲೆನ್ಸ್ ಅವಾರ್ಡ್ ಬಾಲಿವುಡ್ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ಈ ಬಾರಿಯ ದಾದಾಸಾಹೇಬ್ ಫಾಲ್ಕೆ ಎಕ್ಸಲೆನ್ಸ್ ಅವಾರ್ಡ್‌ಗೆ ಆಯ್ಕೆಯಾಗಿದ್ದಾರೆ.

* ಯಶಸ್ವಿ ನಿರ್ಮಾಪಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

* ಇದು ಭಾರತ ಸರ್ಕಾರ ಪ್ರದಾನ ಮಾಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಿಂತ ಭಿನ್ನ, ಮುಂಬೈ ಮೂಲದ ದಾದಾಸಾಹೇಬ್ ಫಾಲ್ಕೆ ಫೌಂಡೇಷನ್ ಎಂಬ ಸಂಸ್ಥೆ ಈ ಪ್ರಶಸ್ತಿ ನೀಡುತ್ತದೆ.

* ಪ್ರತಿವರ್ಷ ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಈ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುತ್ತದೆ.

* ಭಾರತ ಸರ್ಕಾರ ನೀಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಭಾರತೀಯ ಸಿನಿಮಾ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ.

* ಕ್ಲೀನ್ ಸ್ಲೇಟ್ ಫಿಲ್ಮ್ಸ್ ಹೆಸರಿನ ಪ್ರೊಡಕ್ಷನ್ ಕಂಪನಿ ಸ್ಥಾಪಿಸಿದ ಅನುಷ್ಕಾ ಹಲವು ಹೊಸ ಪ್ರಯೋಗಗಳ ಮೂಲಕ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ.

* ಇವರ ಮೊದಲ ಮೂರು ಸಿನಿಮಾಗಳಾದ ಎನ್‌ಎಚ್10, ಫಿಲ್ಲೌರಿ ಮತ್ತು ಪಾರಿ ಸಿನಿಮಾಗಳು ಭರ್ಜರಿ ಜನಪ್ರಿಯತೆ ಗಿಟ್ಟಿಸಿದ್ದವು.

* ಅನುಷ್ಕಾ 1988ರ ಮೇ 1ರಂದು ಅಯೋಧ್ಯೆಯಲ್ಲಿ ಜನಿಸಿದವರಾದರೂ, ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ.

* ಇವರು ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಮುಂಬೈಗೆ ತೆರಳಿದರು.

* 2008ರಲ್ಲಿ ತೆರೆಕಂಡ ಶಾರುಕ್ ಖಾನ್ ಜತೆಗೂಡಿ ಅಭಿನಯಿಸಿರುವ ರಬ್ ನೆ ಬನಾದಿ ಜೋಡಿ ಸಿನಿಮಾದ ಅದ್ಭುತ ಯಶಸ್ಸಿನೊಂದಿಗೆ ಅನುಷ್ಕಾ ಜನಪ್ರಿಯತೆಯ ಉತ್ತುಂಗಕ್ಕೇರಿತ್ತು.

* 25ನೇ ವಯಸ್ಸಿನಲ್ಲಿ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿದ್ದರು.

* ಬ್ಯಾಂಡ್ ಬಜಾ ಭಾರತ್ (2010), ಜಬ್ ತಕ್ ಹೈ ಜಾನ್ (2012), ಪಿಕೆ (2014), ಸುಲ್ತಾನ್ (2016) ಇವರ ಇತರೆ ಯಶಸ್ವಿ ಚಿತ್ರಗಳಾಗಿವೆ.

* ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿಯನ್ನು ವಿವಾಹವಾಗಿದ್ದಾರೆ.

* ಇವರು 7 ಬಾರಿ ಫಿಲ್ಮಫೇರ್ ಅವಾರ್ಡ್‌ಗೆ ಭಾಜನರಾಗಿದ್ದಾರೆ

No comments:

Post a Comment