ರಷ್ಯಾದ ಶಸ್ತ್ರಾಸ್ತ್ರ ಖರೀದಿ: ಭಾರತ ವಿರುದ್ಧದ ನಿರ್ಬಂಧ ತೆರವು*
ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿ ಮಾಡಲು ಇದ್ದ ನಿರ್ಬಂಧವನ್ನು ತೆಗೆದುಹಾಕುವ ಮಸೂದೆಗೆ ಅಮೆರಿಕ ಸಂಸತ್ ಅನುಮೋದನೆ ನೀಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿ ಬಿದ್ದರೆ, ಕಾಯ್ದೆಯಾಗಿ ಜಾರಿಯಾಗಲಿದೆ.
*ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಆಕ್ಟ್–2019 (ಎನ್‌ಡಿಎಎ–19) ಕಾಯ್ದೆಯು ಭಾರತಕ್ಕೆ ರಕ್ಷಣಾ ಸಾಮಗ್ರಿ ಖರೀದಿಗೆ ದಾರಿ ಮಾಡಿಕೊಟ್ಟಿದೆ*. 87–10 ಮತಗಳ ಅಂತರದಿಂದ ಮಸೂದೆ ಅಂಗೀಕಾರಗೊಂಡಿದೆ. ರಷ್ಯಾದ ಎಸ್–400 ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವುದು ಭಾರತಕ್ಕೆ ಇನ್ನು ಸುಲಭವಾಗಲಿದೆ ಎಂದು ಶ್ವೇತಭವನ ಹೇಳಿದೆ.
*ಪಾಕಿಸ್ತಾನಕ್ಕೆ ನೀಡುತ್ತಿದ್ದ ಅನುದಾನಕ್ಕೆ ಕತ್ತರಿ:*
ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನಕ್ಕೆ ಅಮೆರಿಕವು ಪ್ರತಿ ವರ್ಷ ನೀಡುತ್ತಿದ್ದ ನೆರವಿನಲ್ಲಿ ಈ ಬಾರಿ ಭಾರಿ ಕಡಿತ ಮಾಡಿದೆ. ಭದ್ರತೆ ಸಂಬಂಧಿ ಅನುದಾನವನ್ನು ₹1000 ಕೋಟಿಗೆ ಮಿತಿಗೊಳಿಸಿದೆ. ಕಳೆದ ವರ್ಷ ಇದೇ ಕಾರಣಕ್ಕೆ ಸುಮಾರು ₹4800 ಕೋಟಿಯನ್ನು ತೆಗೆದಿರಿಸಲಾಗಿತ್ತು. ಒಟ್ಟು ₹46 ಲಕ್ಷ ಕೋಟಿ ಮೊತ್ತದ
ರಕ್ಷಣಾ ವೆಚ್ಚ ಮಸೂದೆಗೆ ಅಮೆರಿಕ ಸಂಸತ್ ಗುರುವಾರ ಅಂಗೀಕಾರ ನೀಡಿದೆ.
No comments:
Post a Comment