Monday, 6 August 2018

ಕೊನೆಗೂ ಬಗೆಹರೀತಾ ಬರ್ಮುಡಾ ಟ್ರಯಾಂಗಲ್​ ಮಿಸ್ಟರ

ಕೊನೆಗೂ ಬಗೆಹರೀತಾ ಬರ್ಮುಡಾ ಟ್ರಯಾಂಗಲ್​ ಮಿಸ್ಟರಿ*

*<<ವಿಮಾನ, ಹಡಗುಗಳು ನಾಪತ್ತೆಗೆ ರಕ್ಕಸ ಅಲೆಗಳೇ ಕಾರಣ!>>*

*ವಿಜ್ಞಾನಿಗಳಿಗೆ ಅಕ್ಷರಶಃ ತಲೆ ನೋವಾಗಿ ಪರಿಣಮಿಸಿದ್ದ ಹಾಗೂ ಇದುವರೆಗೂ 75ಕ್ಕೂ ಹೆಚ್ಚು ವಿಮಾನಗಳು, ಸಾವಿರಾರು ಜನ ನಾಪತ್ತೆಯಾಗಿರುವ ಬರ್ಮುಡಾ ಟ್ರಯಾಂಗಲ್​ ಮಿಸ್ಟರಿಗೆ ಕಾರಣ ದೊರೆತಿದೆ.*

ಹೌದು, ಬರ್ಮುಡಾ ಟ್ರಯಾಂಗಲ್​ ಮಿಸ್ಟರಿಯನ್ನು ಹುಡುಕುತ್ತಾ ಹೊರಟ ಎಷ್ಟೋ ಮಂದಿ ಇಲ್ಲಿಯವರೆಗೆ ನಾಪತ್ತೆಯಾಗಿದ್ದರೂ, ಕೆಲ ವಿಜ್ಞಾನಿಗಳು ಅಲ್ಲಿ ವಿಮಾನಗಳು, ಹಡಗುಗಳು ನಾಪತ್ತೆಯಾಗಿರುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಬರ್ಮುಡಾ ಟ್ರಯಾಂಗಲ್​ನಲ್ಲಿ ನಾಪತ್ತೆಯಾದ ವಿಮಾನಗಳು ಮತ್ತು ಮುಳುಗುವ ಹಡಗುಗಳ ಅವಶೇಷಗಳು ಇದುವರೆಗೆ ಪತ್ತೆಯಾಗಿರುವುದು ಅಪರೂಪವಾಗಿದ್ದು, ಇದಕ್ಕೆಲ್ಲಾ 100 ಅಡಿಯ ರಕ್ಕಸ ಅಲೆಗಳೇ ಕಾರಣ ಎಂದು ಸೌತಾಂಪ್ಟನ್​ ಮೂಲದ ಸಂಶೋಧಕರು ಹೇಳಿದ್ದಾರೆ.

100 ಅಡಿ ಬಂದರೆ ಹಡಗು ಮುಳುಗುತ್ತೆ!
ಈ ಸಂಶೋಧಕರು 1918ರ ವಿಶ್ವ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೆರಿಕ ಸೇನೆಗೆ ತೈಲ ಪೂರೈಸುತ್ತಿದ್ದ ಯುಎಸ್​ಎಸ್​​ ಸೈಕ್ಲೋಪ್ಸ್​ ಹಡಗಿನ ಮಾದರಿಯನ್ನ ನಿರ್ಮಾಣ ಮಾಡಿದ್ದರು. ಈ ಹಡಗನ್ನ ಒಳಾಂಗಣ ಸಿಮ್ಯುಲೇಟರ್​ ಹೊಂದಿರೋ ಬೃಹತ್​ ನೀರಿನಲ್ಲಿ ಚಲಿಸುವಂತೆ ಮಾಡಿದ್ರು. ಸಿಮ್ಯುಲೇಟರ್​ಗಳನ್ನ ಬಳಸಿ 100 ಅಡಿ ಎತ್ತರದ ಅಲೆಗಳನ್ನ ಸೃಷ್ಟಿಸಿದ್ರು. ಆಗ ಹಡಗು ಮುಳುಗಿ ಹೋಗಿದೆ ಅಂತಾ ಸಂಶೋಧಕರು ಹೇಳಿದ್ದಾರೆ.

ಇದಕ್ಕೂ ಮುಂಚೆ, ಕೆಲವರು ಬರ್ಬುಡಾ ಟ್ರಯಾಂಗಲ್​ನಲ್ಲಿ ಇದ್ದಕ್ಕಿದ್ದಂತೆ ವಿಮಾನಗಳು, ಹಡಗುಗಳು ನಾಪತ್ತೆಯಾಗುವುದಕ್ಕೆ ಏಲಿಯನ್​ಗಳು ಕಾರಣ ಎಂದರೆ, ಕೆಲವರು ಸಮುದ್ರದಲ್ಲಿರುವ ನಿಗೂಢ ಜೀವಿಗಳು ಕಾರಣ ಎಂದು ಹೇಳುತ್ತಿದ್ದರು. ಆದರೆ, ಇದಕ್ಕೆ ಪೂರಕವಾಗಿ ಯಾರೂ ಯಾವ ದಾಖಲೆಗಳನ್ನು ಒದಗಿಸಿರಲಿಲ್ಲ.

*ರಕ್ಕಸ ಅಲೆ ಏಳಲು ಕಾರಣವೇನು?*

ಬರ್ಮುಡಾ ಟ್ರಯಾಂಗಲ್​ ಫ್ಲೋರಿಡಾ, ಪೋರ್ಟೋರಿಕೋ ಮತ್ತು ಬರ್ಮುಡಾ ಪ್ರದೇಶಗಳ ನಡುವೆ ಇದೆ. ಈ ಸಮುದ್ರದಲ್ಲಿ ನಾನಾ ದಿಕ್ಕುಗಳಿಂದ ಮಾರುತಗಳು ಬೀಸುತ್ತವೆ. ಈ ರೀತಿ ವಿವಿಧ ದಿಕ್ಕುಗಳಿಂದ ಮಾರುತಗಳು ಬೀಸುವುದರಿಂದ ನಾನಾ ದಿಕ್ಕಿಗೆ ಚಲಿಸುತ್ತಿದ್ದ ಅಲೆಗಳ ಮೇಲೆ ಪ್ರಭಾವ ಬೀರಿ, ಈ ರೀತಿಯ ರಕ್ಕಸ ಅಲೆಗಳು ಏಳುವುದಕ್ಕೆ ಕಾರಣವಾಗುತ್ತದೆ.ಈ ರಕ್ಕಸ ಅಲೆಗಳಿಗೆ ಸಿಲುಕುವ ಹಡಗುಗಳು, ಅಲೆಗಳ ಹೊಡೆತ ತಾಳಲಾರದೆ ಮುಳುಗಿ ಹೋಗುವ ಜತೆಗೆ, ಅಪಘಾತವಾದ ಸಮುದ್ರದಿಂದ ಬಹುದೂರಕ್ಕೆ ಸಾಗುತ್ತವೆ. ಹೀಗಾಗಿಯೇ ಹಡಗುಗಳು, ವಿಮಾನಗಳ ಅವಶೇಷಗಳು ಸಿಗುತ್ತಿಲ್ಲ ಎಂದು ಅಂತಾ ಸಂಶೋಧಕರು ಹೇಳಿದ್ದಾರೆ.

*ಗುರುತ್ವಾಕರ್ಷಣ ಶಕ್ತಿ ವ್ಯತ್ಯಯ?*

ವರ್ಷದ ಹಿಂದೆ ಕೊಲಾರಾಡೋ ವಿವಿಯ ವಿಜ್ಞಾನಿಗಳು, ಬರ್ಮುಡಾ ಟ್ರಯಾಂಗಲ್​ನಲ್ಲಿ ಅಷ್ಟಕೋನಾಕೃತಿಯ ಕೆಲವು ಪ್ರದೇಶಗಳಿದ್ದು, ಇಲ್ಲಿ ಇದ್ದಕ್ಕಿದ್ದಂತೆ ಹವಾಮಾನದಲ್ಲಿ ಭಾರಿ ಏರುಪೇರಾಗುತ್ತದೆ. ಇದ್ದಕ್ಕಿದ್ದಂತೆ ಹವಾಮಾನದಲ್ಲಿ ಆಗುವ ಏರುಪೇರಿನಿಂದ ಈ ಪ್ರದೇಶದಲ್ಲಿ ಗುರುತ್ವಾಕರ್ಷಣ ಶಕ್ತಿಯಲ್ಲಿ ವ್ಯತ್ಯಯವಾಗುತ್ತದೆ. ಹೀಗಾಗಿ ವಿಮಾನಗಳು ಮತ್ತು ಹಡಗುಗಳು ಈ ಪ್ರದೇಶದಲ್ಲಿ ನಾಪತ್ತೆಯಾಗಲು ಕಾರಣ ಎಂದಿದ್ದರು. ಇದಕ್ಕೆ ಉಪಗ್ರಹ ಚಿತ್ರಗಳನ್ನೂ ಕೂಡ ಸಾಕ್ಷ್ಯವಾಗಿ ನೀಡಿದ್ದರು. ಈ ವಿಜ್ಞಾನಿಗಳು ಹೇಳಿದ್ದ ಕಾರಣಗಳ ಜತೆಗೆ ಈಗ ಸಿಮ್ಯುಲೇಟರ್​ಗಳನ್ನ ಬಳಸಿ ಅದೇ ರೀತಿಯ ಸಮುದ್ರದ ಅಲೆಗಳನ್ನ ಸೃಷ್ಟಿಸಿ, ಸಂಶೋಧನೆ ನಡೆಸಿದ್ದಾರೆ.

ಸದ್ಯ ಬರ್ಮುಡಾ ಟ್ರಯಾಂಗಲ್​ನಲ್ಲಿ ವಿಮಾನಗಳು, ಹಡಗುಗಳ ನಾಪತ್ತೆಯಾಗುವ ಕುರಿತು ಎರಡು ವೈಜ್ಞಾನಿಕ ಕಾರಣಗಳು ಸಿಕ್ಕಿದ್ದರೂ, ಈ ಕುರಿತು ಮತ್ತಷ್ಟು ಸಂಶೋಧನೆಗಳು ನಡೆಯುತ್ತಲೇ ಇವೆ.

No comments:

Post a Comment