Thursday, 19 July 2018

ಕರ್ನಾಟಕ ರಾಜ್ಯ : ಇಣುಕು ನೋಟ.


ಕರ್ನಾಟಕ ರಾಜ್ಯ : ಇಣುಕು ನೋಟ.
★★★ ಕರ್ನಾಟಕ ನಮ್ಮ ರಾಜ್ಯ ★★★
=> ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
=>
ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
=>
ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
=>
ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
=>
ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
=>
ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
=>
ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
=>
ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
=> 1953
ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
=> 1
ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
=>
ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
=> 1973
ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
=>
ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

No comments:

Post a Comment