*☀ದಿನ ವಿಶೇಷ:ಮೇ-07*☀
*ಘಟನೆಗಳು:* ಅಮೆರಿಕದ ಬಹಳ ಕಾಲದಿಂದ ಉಳಿದಿರುವ ಪತ್ರಿಕೆಯಾದ ಕೇಂಬ್ರಿಡ್ಜ್ ಕ್ರಾನಿಕಲ್ ಪತ್ರಿಕೆಯು ಮೊಟ್ಟ ಮೊದಲ ಬಾರಿಗೆ ಪ್ರಕಟಗೊಂಡಿತು. ಜಾರ್ಜ್ ಈಸ್ಟ್ ಮನ್ ಮೊದಲ ಬಾರಿಗೆ ಅಮೆರಿಕನ್ ಮಾರುಕಟ್ಟೆಗೆ ಕೊಡಕ್ ಕ್ಯಾಮರಾವನ್ನು ಪರಿಚಯಿಸಿದರು. ಅಲೆಗ್ಸಾಂಡರ್ ಸ್ಟೆಪಾನೋವಿಕ್ ಪೊಪೋವ್ ಅವರು ತಮ್ಮ ಲೈಟ್ನಿಂಗ್ ಡಿಟೆಕ್ಟರ್ ಅನ್ನು ಪ್ರದರ್ಶಿಸಿದರು. ಇದು ಪ್ರಾರಂಭಿಕ ಮಾದರಿಯ ರೇಡಿಯೋ ಡಿಟೆಕ್ಟರ್ ಆಗಿತ್ತು. ಎರಡನೇ ವಿಶ್ವಮಹಾಯುದ್ಧದಲ್ಲಿ ಜನರಲ್ ಆಲ್ಫ್ರೆಡ್ ಅವರು ಯಾವುದೇ ಷರತ್ತೂ ಇಲ್ಲದೆ ಜರ್ಮನಿಯ ಕಡೆಯ ಶರಣಾಗತಿ ಪತ್ರಕ್ಕೆ ಫ್ರಾನ್ಸ್ ದೇಶದ ರೀಮ್ಸ್ ಎಂಬಲ್ಲಿ ಸಹಿ.
*ಜನನ:*
1861: ನೊಬೆಲ್ ಪುರಸ್ಕೃತ ಕವಿ, ನಾಟಕಕಾರ, ರಾಷ್ಟ್ರಗೀತೆಯ ಕರ್ತೃ ರಬೀಂದ್ರನಾಥ ಠಾಗೂರ್ ಜನನ
1867: ನೊಬೆಲ್ ಸಾಹಿತ್ಯ ಪುರಸ್ಕೃತ ವ್ಲಾಡಿಸ್ಲಾವ್ ರೆಮೆಂಟ್ ಜನನ
1871: ಮಹಾನ್ ವಿದ್ವಾಂಸ ಹಿರಿಯಣ್ಣ ಜನನ
1880: ಭಾರತೀಯ ದರ್ಶನ ಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ ಪಾಂಡುರಂಗ ವಾಮನ್ ಕಾನೆ ಜನನ
1893: ಸಾಹಿತಿ ಹೊಯಿಸಳ ಜನನ
1912: ಗುಜರಾತಿ ಸಾಹಿತಿ ಪನ್ನಾಲಾಲ್ ಪಟೇಲ್ ಜನನ
1939: ನೊಬೆಲ್ ಪುರಸ್ಕೃತ ಜೀವ ವಿಜ್ಞಾನಿ ಸಿಡ್ನಿ ಆಲ್ಟ್ ಮ್ಯಾನ್ ಜನನ
*ನಿಧನ:*
1924: ಬ್ರಿಟಿಷರಿಂದ ಅಮಾನುಷವಾಗಿ ಕೊಲ್ಲಲ್ಪಟ್ಟ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು
1971: ವಿದ್ವಾಂಸ, ಸಂಶೋಧಕ, ಸಾಹಿತಿ ಪ್ರೊ. ಡಿ. ಎಲ್. ನರಸಿಂಹಾಚಾರ್ಯ ನಿಧನ
1998: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಅಲ್ಲನ್ ಮೆಕ್ಲಿಯಾಡ್ ಕಾರ್ಮ್ಯಾಕ್ ನಿಧನ
2011: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ವಿಲ್ಲರ್ಡ್ ಬೋಯ್ಲೆ ನಿಧನ
No comments:
Post a Comment