*==================*
*ವಿಶ್ವದ ಮೊದಲ ಮಹಿಳಾ ರೈಲು*
*ಮುಂಬೈ: ಪಶ್ಚಿಮ ರೈಲ್ವೆ ವಲಯವು ಇಲ್ಲಿನ ಚರ್ಚ್‌ಗೇಟ್ ಮತ್ತು ಬೊರಿವಲಿ ನಿಲ್ದಾಣಗಳ ನಡುವೆ ಮಹಿಳಾ ಪ್ರಯಾಣಿಕರಿಗಾಗಿಯೇ ಪರಿಚಯಿಸಿದ ವಿಶ್ವದ ಮೊದಲ ಮಹಿಳಾ ವಿಶೇಷ ರೈಲು*
*ಪಶ್ಚಿಮ ರೈಲ್ವೆಯು 1992ರ ಮೇ 5ರಂದು ಈ ಎರಡು ನಿಲ್ದಾಣಗಳ ನಡುವೆ ಮಹಿಳಾ ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಉಪನಗರ ರೈಲು ಸಂಚಾರ ಆರಂಭಿಸಿತ್ತು.*
*ಚರ್ಚ್‌ಗೇಟ್ ಮತ್ತು ಬೊರಿವಲಿ ನಡುವೆ ಸಂಚರಿಸುತ್ತಿದ್ದ ಮಹಿಳಾ ವಿಶೇಷ ರೈಲನ್ನು 1993ರಲ್ಲಿ ವಿರರ್ ನಿಲ್ದಾಣಕ್ಕೂ ವಿಸ್ತರಿಸಲಾಗಿತ್ತು.*
*‘ಇಡೀ ರೈಲನ್ನು ಮಹಿಳಾ ಪ್ರಯಾಣಿಕರಿಗೆ ಅರ್ಪಿಸಿ, ಪಶ್ಚಿಮ ರೈಲ್ವೆಯು ಇತಿಹಾಸ ನಿರ್ಮಿಸಿದೆ. ಬೇರೆ ರೈಲ್ವೆ ವಲಯಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ.*
*ವಿಶ್ವದ ಯಾವುದೇ ಉಪನಗರ ರೈಲು ಸಂಚಾರ ಸೇವೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಈ ರೀತಿ, ದಟ್ಟಣೆಯ ಮಾರ್ಗದಲ್ಲಿ ನಿರಂತರ ಸೇವೆ ಒದಗಿಸಿ, 26 ವರ್ಷ ಪೂರೈಸಿರುವುದು ಒಂದು ಮೈಲುಗಲ್ಲು’ ಎಂದು ಪಶ್ಚಿಮ ರೈಲ್ವೆಯ ಮುಖ್ಯ ವಕ್ತಾರ ರವೀಂದ್ರ ಭಾಕರ್ ತಿಳಿಸಿದ್ದಾರೆ.*
*ಪಶ್ಚಿಮ ರೈಲ್ವೆಯನ್ನು ಅನುಕರಿಸುತ್ತಿರುವ ಕೇಂದ್ರ ರೈಲ್ವೆ ವಲಯವು 1992ರ ಜುಲೈ 1ರಿಂದ ಮಹಿಳೆಯರಿಗಾಗಿಯೇ ಛತ್ರಪತಿ ಶಿವಾಜಿ ಟರ್ಮಿನಸ್– ಕಲ್ಯಾಣ್ ನಡುವೆ ಉಪನಗರ ರೈಲು ಸೇವೆಯನ್ನು ಒದಗಿಸುತ್ತಿದೆ.*
*=================*
No comments:
Post a Comment