Monday, 16 April 2018

Ice-VII ಅಥವಾ ಐಸ್-VII ಏನಿದು..?

Ice-VII ಅಥವಾ ಐಸ್-VII

ಏನಿದು..?

ಇದು ಮಂಜುಗಡ್ಡೆಯ ವಿವಿಧ ರೂಪಗಳಲ್ಲಿ ಒಂದು. ಸಾಮಾನ್ಯವಾಗಿ ಬಳಸುವ ಮಂಜುಗಡ್ಡೆಯನ್ನು " ice-I" ಎಂದು ಕರೆಯಲಾಗುತ್ತದೆ. ಐಸ್-II (ರೋಂಬಸ್ ಆಕಾರದ ಸ್ಫಟಿಕಗಳು), ಐಸ್-III (ಟೆಟ್ರೊಗನಲ್ ಆಕಾರದ ಸ್ಫಟಿಕಗಳು) ಇತ್ಯಾದಿ.... ಹಾಗೂ ಐಸ್-VII ವನ್ನು ವಜ್ರದಲ್ಲಿ ಪತ್ತೆಹಚ್ಚಲಾಗಿದೆ. ಮ್ಯಾಂಟಲ್ ನಲ್ಲಿರುವಾಗ ವಜ್ರವು ಹೊಂದಿರುವಷ್ಟೇ ಅತಿಯಾದ ಒತ್ತಡವನ್ನು ಅದನ್ನು ಹೊರತೆಗೆದಾಗಲೂ ಇರುತ್ತದೆ. ಇದೇ ಕಾರಣದಿಂದ ವಜ್ರದಲ್ಲಿರುವ ಮಂಜುಗಡ್ಡೆ(ವಜ್ರದೊಳಗೆ ನೀರು ಸಂಕುಚಿತಗೊಂಡಿರುತ್ತದೆ)ಯ ಅಂಶವು ಬದಲಾಗುವುದಿಲ್ಲ. 

ಐಸ್-VII ನ ವಿಶಿಷ್ಟ ಗುಣಲಕ್ಷಣಗಳು : ಘನ ಸ್ಫಟಿಕವಾಗಿದೆ, ಒತ್ತಡವು ವ್ಯಾಪಕವಾಗಿ ಹೆಚ್ಚಾಗುತ್ತಿದ್ದರೂ ಕೂಡ ಇದು ಸ್ಥಿರವಾಗಿರುತ್ತದೆ, ಐಸ್-I ಗಿಂತ 1.5 ಪಟ್ಟು ಹೆಚ್ಚು ಸಾಂದ್ರವಾಗಿದೆ, ಐಸ್-VII ವನ್ನು ಕೊಠಡಿ ತಾಪಮಾನದಲ್ಲಿಯೂ ರಚಿಸಬಹುದು. ಕಡಿಮೆ ಉಷ್ಣತೆ ಮತ್ತು 30,000 ವಾಯುಮಂಡಲ ಒತ್ತಡ (3 gigapascals) ದ ಅಗತ್ಯವಿರುತ್ತದೆ

No comments:

Post a Comment