Monday, 16 April 2018

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರೆ: 66 ಪದಕಗಳೊಂದಿಗೆ 3ನೇ ಸ್ಥಾನ ಪಡೆದ ಭಾರತ*

*🏆ಉಪಯುಕ್ತ ಮಾಹಿತಿ🏆*

*ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರೆ: 66 ಪದಕಗಳೊಂದಿಗೆ 3ನೇ ಸ್ಥಾನ ಪಡೆದ ಭಾರತ*

ಭಾರತದ ಬ್ಯಾಡ್ಮಿಂಟನ್‌ ತಂಡ

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 21ನೇ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾನವಾರ ತೆರೆ ಬಿದ್ದಿದ್ದು,  26 ಚಿನ್ನಗಳೊಂದಿಗೆ ಒಟ್ಟು 66 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಮೂರನೇ ಸ್ಥಾನ ಪಡೆದಿದೆ.

ಕ್ರೀಡಾಕೂಟದಲ್ಲಿ ಆಷ್ಟ್ರೇಲಿಯಾ 80 ಚಿನ್ನದ ಪದ ಸೇರಿದಂತೆ ಒಟ್ಟು 197 ಪದಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದರೆ, ಇಂಗ್ಲೆಂಡ 45 ಚಿನ್ನ ಸೇರಿ ಒಟ್ಟು 136 ಪದಕಗಳೊಂದಿಗೆ ಎರಡನೆಯ ಸ್ಥಾನವನ್ನು ಪಡೆದಿದೆ.

ಇನ್ನು ಮೂರನೇ ಸ್ಥಾನದಲ್ಲಿರುವ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಪದಕಗಳನ್ನು ಪಡೆದಿದೆ.

ಕ್ರೀಡಾಕೂಟದ ಕೊನೆಯ ದಿನವಾದ ಇಂದು, ಸೈನಾ ನೆಹ್ವಾಲ್ ಅವರು ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಹಾಗೂ ವಿಶ್ವದ ಮೂರನೇ ಶ್ರೇಯಾಂಕಿತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಈ ವರ್ಷದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದವರು.
ಸಂಗ್ರಹ:-ಶಿವು ಯಾದವಾಡ ಶಿಕ್ಷಕರು

ಸೈನಾ ನೆಹ್ವಾಲ್ - ಮಹಿಳಾ ಸಿಂಗಲ್ಸ್(ಬ್ಯಾಡ್ಮಿಂಟನ್)

ನೀರಾಜ್ ಚೋಪ್ರಾ - ಪುರುಷರ ಜಾವೆಲಿನ್ ಥ್ರೋ

ಭಾರತ - ಮಿಶ್ರ ತಂಡ(ಬ್ಯಾಡ್ಮಿಂಟನ್) 

ಗೌರವ್ ಸೋಲಂಕಿ - ಪುರುಷರ 52 ಕೆಜಿ

ವಿಕಾಸ್ ಕೃಷ್ಣನ್ - ಪುರುಷರ 75 ಕೆಜಿ

ಎಮ್ಸಿ ಮೇರಿ ಕೋಮ್ - ಮಹಿಳಾ 45-48 ಕೆಜಿ

ಜಿತು ರಾಯ್ - ಪುರುಷರ 10 ಮಿ ಏರ್ ಪಿಸ್ತೋಲ್

ಅನೀಶ್ - ಪುರುಷರ 25 ಮೀ ರಾಪಿಡ್ ಫೈರ್ ಪಿಸ್ತೋಲ್

ಸಂಜೀವ್ ರಜಪೂತ್ - ಪುರುಷರ 50 ಮೀ ರೈಫಲ್ 3 ಸ್ಥಾನಗಳು

ಮನು ಭೇಕರ್ - ಮಹಿಳಾ 10 ಮಿ ಏರ್ ಪಿಸ್ತೋಲ್

ಹೀನಾ ಸಿಧು - ಮಹಿಳಾ 25 ಮಿ ಪಿಸ್ತೋಲ್

ತೇಜಸ್ವಿಣಿ ಸಾವಂತ್ - ಮಹಿಳೆಯರ 50 ಮೀ ರೈಫಲ್ 3 ಸ್ಥಾನಗಳು

ಶ್ರೇಯಾಸಿ ಸಿಂಗ್ - ಮಹಿಳಾ ಡಬಲ್ ಟ್ರಾಪ್

ಭಾರತ - ಪುರುಷರ ತಂಡ

ಮಣಿಕಾ ಬತ್ರಾ - ಮಹಿಳಾ ಸಿಂಗಲ್ಸ್

ಭಾರತ - ಮಹಿಳಾ ತಂಡ

ಸತೀಶ್ ಕುಮಾರ್ ಶಿವಲಿಂಗಮ್ - ಪುರುಷರ 77 ಕೆಜಿ

ವೆಂಕತ್ ರಾಹುಲ್ ರಾಗಲಾ - ಪುರುಷರ 85 ಕಿ.ಗ್ರಾಂ

ಚಾನು ಸೈಕೋಮ್ ಮಿರಾಬಾಯ್ - ಮಹಿಳಾ 48 ಕೆಜಿ

ಸಂಜಿತಾ ಚಾನು ಖುಮುಕ್ಚಮ್ - ಮಹಿಳಾ 53 ಕೆಜಿ

ಪುನಾಮ್ ಯಾದವ್ - ಮಹಿಳಾ 69 ಕೆಜಿ

ಸುಮಿತ್ - ಪುರುಷರ ಫ್ರೀಸ್ಟೈಲ್ 125 ಕೆಜಿ

ರಾಹುಲ್ ಅವೇರ್ - ಪುರುಷರ ಫ್ರೀಸ್ಟೈಲ್ 57 ಕೆಜಿ

ಬಜರಂಗ - ಪುರುಷರ ಫ್ರೀಸ್ಟೈಲ್ 65 ಕೆಜಿ

ಸುಶೀಲ್ ಕುಮಾರ್- ಪುರುಷರ ಫ್ರೀಸ್ಟೈಲ್ 74 ಕೆಜಿ

ವಿನೆಶ್ - ಮಹಿಳಾ ಫ್ರೀಸ್ಟೈಲ್ 50 ಕೆಜಿ

No comments:

Post a Comment