Tuesday, 3 April 2018

Ias kas SDA FDA KPSC

👉 ಭಾರತ ಸರಕಾರ – *ಸತ್ಯಮೇವ ಜಯತೇ* – ಸತ್ಯವೇ ಜಯಿಸುತ್ತದೆ.

👉 ಲೋಕಸಭೆ – *ಧರ್ಮಚಕ್ರ ಪ್ರವರ್ತನಾಯ*  –ಧರ್ಮಚಕ್ರವನ್ನು ಪರಿಪಾಲಿಸಲು

👉 ಸರ್ವೋಚ್ಛ ನ್ಯಾಯಾಲಯ – *ಯತೋ ಧರ್ಮಸ್ತತೋ ಜಯಃ* – ಎಲ್ಲಿ ಧರ್ಮವಿರುತ್ತದೋ
ಅಲ್ಲಿ ಜಯವಿರುತ್ತದೆ.

👉 ಆಲ್ ಇಂಡಿಯಾ ರೇಡಿಯೋ – *ಬಹುಜನ ಹಿತಾಯ ಬಹುಜನ ಸುಖಾಯ* – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.

👉 ದೂರದರ್ಶನ – *ಸತ್ಯಂ ಶಿವಂ ಸುಂದರಂ*

👉 ಗೋವಾರಾಜ್ಯ – *ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್* – ಎಲ್ಲರೂ ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.

👉 ಭಾರತೀಯ ಜೀವ ವಿಮಾ ನಿಗಮ –  *ಯೋಗಕ್ಷೇಮಂ ವಹಾಮ್ಯಹಮ್* – ನಿಮ್ಮೆಲ್ಲರ
ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.

👉 ಅಂಚೆ ಇಲಾಖೆ – *ಅಹರ್ನಿಶಂ ಸೇವಾಮಹೇ* – ಹಗಲು ರಾತ್ರಿ ನಿಮ್ಮ ಸೇವೆಗಾಗಿ.

👉 ಕಾರ್ಮಿಕರ ಸಂಸ್ಥೆ – *ಶ್ರಮ ಮೇವ ಜಯತೇ* – ಶ್ರಮವೇ ಜಯಿಸುತ್ತದೆ.

👉 ಭಾರತೀಯ ಸಂಖ್ಯಾ ಸಂಸ್ಥೆ – *ಭಿನ್ನೇಷ್ವೇಕಸ್ಯ ದರ್ಶನಮ್* – ವಿವಿಧತೆಯಲ್ಲಿ ಏಕತೆ.

👉 ಭೂಸೇನೆ – *ಸೇವಾ ಅಸ್ಮಾಕಂ ಧರ್ಮಃ* – ಸೇವೆಯೇ ನಮ್ಮ ಧರ್ಮ.

👉 ವಾಯು ಸೇನೆ – *ನಭಸ್ಪೃಶಂ ದೀಪ್ತಮ್* – ಆಕಾಶವೇ ದೀಪ.

👉 ನೌಕಾಸೇನೆ – *ಶಂ ನೋ ವರುಣಃ* – ವರುಣನಿಗೆ
ನಮಸ್ಕಾರ.

👉 ಮುಂಬಯಿ ಪೋಲಿಸ್ – *ಸದ್ರಕ್ಷಣಾಯ ಖಲನಿಗ್ರಹಣಾಯ* – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.

👉 ಹಿಂದಿ ಅಕಾಡೆಮಿ - *ಅಹಮ್ ರಾಷ್ಪ್ರೀ ಸಂಗಮನೀ ವಸೂನಾಮ್*– ನಾನು ರಾಷ್ಟ್ರದಲ್ಲಿ ಸಂಘಜೀವಿಯಾಗಿ ಬದುಕುತ್ತೇನೆ.

👉 ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – *ಹವ್ಯಭಿರ್ಭಗಃ ಸವುತುರ್ವರೆಣ್ಯಂ*

👉 ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – *ಯೋಗಃ ಕರ್ಮಸು ಕೌಶಲಮ್* – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.

👉 ವಿಶ್ವವಿದ್ಯಾಲಯ ಅನುದಾನ ಆಯೋಗ –
*ಜ್ಞಾನವಿಜ್ಞಾನಂ ವಿಮುಕ್ತಯೇ*

👉 ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – *ಗುರುಃ ಗುರುತಮೋ ಧಾಮಃ* – ಗುರುಗಳಲ್ಲಿ ಗುರುತಮವೇ ಇರಬೇಕು.

👉 ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ –
*ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ* – ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.

👉 ಇಂದ್ರಪ್ರಸ್ಥ ವಿಶ್ವವಿದ್ಯಾಲಯ – *ಜ್ಯೋತಿರ್ವೃಣೀತ ತಮಸೋ ವಿಜ್ಞಾನನ್* – ಜ್ಯೋತಿ ಬೆಳಗಲಿ ಕತ್ತಲೆ ದೂರವಾಗಲಿ.

👉 ಕಾಶಿ ಹಿಂದೂ ವಿಶ್ವವಿದ್ಯಾಲಯ – *ವಿದ್ಯಯಾ ಅಮೃತಮಶ್ನುತೇ* – ವಿದ್ಯೆಯಿಂದ ಅಮೃತ ಸಿಗುತ್ತದೆ.

👉 ಆಂಧ್ರ ವಿಶ್ವವಿದ್ಯಾಲಯ – *ತೇಜಸ್ವಿನಾವಧೀತಮಸ್ತು* - ನಾವೆಲ್ಲರೂ ತೇಜಸ್ವಿಗಳಾಗೋಣ.

👉 ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – *ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ ನಿಬೋಧತ* – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ
ನಿಲ್ಲದಿರಿ.

👉 ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – *ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ* – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.

👉 ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – *ಶ್ರುತಂ ಮೇ ಗೋಪಾಯ* – ಶ್ರುತಿಗಳು ನಮ್ಮನ್ನು ರಕ್ಷಿಸಲಿ.

👉 ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – *ಜ್ಞಾನಂ ಸಮ್ಯಗ್ ವೇಕ್ಷಣಮ್* – ಜ್ಞಾನವೇ ಸರಿಯಾದ ಕಣ್ಣು.

👉 ಕಾಲಿಕಟ್ ವಿಶ್ವವಿದ್ಯಾಲಯ – *ನಿರ್ಮಯ ಕರ್ಮಣಾ ಶ್ರೀಃ* – ಶ್ರಮದಿಂದ ಸಂಪತ್ತು ಸಿಗುತ್ತದೆ.

👉 ದೆಹಲಿ ವಿಶ್ವವಿದ್ಯಾಲಯ – *ನಿಷ್ಠಾ ಧೃತಿಃ ಸತ್ಯಮ್* –
ನಂಬಿಕೆ , ಬುದ್ಧಿ , ಸತ್ಯ

👉 ಕೇರಳ ವಿಶ್ವವಿದ್ಯಾಲಯ – *ಕರ್ಮಣಿ ವ್ಯಜ್ಯತೆ ಪ್ರಜ್ಞಾ* – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.

👉 ರಾಜಸ್ಥಾನ ವಿಶ್ವವಿದ್ಯಾಲಯ – *ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ* – ಜಗತ್ತಿನ ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..

👉 ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – *ಯುಕ್ತಿಹೀನಃ ವಿಚಾರೇ ತು ಧರ್ಮಹೀನಃ ಪ್ರಜಾಯತೇ* – ಮನುಷ್ಯ ಯುಕ್ತಿಹೀನ ವಿಚಾರಗಳಿಂದ ಧರ್ಮಹೀನನೆನಿಸಿಕೊಳ್ಳುತ್ತಾನೆ

👉 ವನಸ್ಥಲೀ ವಿದ್ಯಾಪೀಠ – *ಸಾ ವಿದ್ಯಾ ಯಾ ವಿಮುಕ್ತಯೆ* – ಯಾವ ವಿದ್ಯೆ ನಮ್ಮನ್ನು ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.

👉 ಎನ್.ಸಿ.ಇ.ಆರ್.ಟಿ – *ವಿದ್ಯಯಾ ಅಮೃತಮಶ್ನುತೇ*

👉 ಕೇಂದ್ರೀಯ ವಿದ್ಯಾಲಯ – *ತತ್ ತ್ವಂ ಪೂಷನ್ ಅಪಾವೃಣು*

👉 ಸಿ.ಬಿ,ಎಸ್.ಇ – *ಅಸತೋ ಮಾ ಸದ್ಗಮಯ* – ಕತ್ತಲಿನಿಂದ ಬೆಳಕಿನೆಡೆಗೆ.

👉 ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – *ಕರ್ಮ ಜ್ಯಾಯೋ ಹಿ ಅಕರ್ಮಣಃ* – ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.

👉 ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – *ಧಿಯೋ ಯೋನಃ ಪ್ರಚೋದಯಾತ್* –
ಸದ್ಬುದ್ಧಿ ನಮ್ಮನ್ನು ಪ್ರಚೋದಿಸಲಿ.

👉 ಮದನ್ ಮೋಹನ ಮಾಲವೀಯ ತಾಂತ್ರಿಕ
ಮಹಾವಿದ್ಯಾಲಯ – *ಯೋಗಃ ಕರ್ಮಸು ಕೌಶಲಮ್*

👉 ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – *ಸಂಗಚ್ಛಧ್ವಂ ಸಂವದಧ್ವಮ್* - ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.

👉 ರಾಷ್ಟ್ರೀಯ ಕಾನೂನು ವಿದ್ಯಾಲಯ – *ಧರ್ಮೋ ರಕ್ಷತಿ ರಕ್ಷಿತಃ* – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.

No comments:

Post a Comment