'ನನ್ನ ಪ್ರೀತಿಯ ಬಂಧುಗಳೆ' 💐💐ಮುಂದಿನ ತಿಂಗಳು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ ಅದರ ಉದ್ದೇಶ ತಮ್ಮ ತಮ್ಮ ಊರುಗಳಲ್ಲಿ ರಕ್ಷಣೆಗೆ 'CRPF' ಯೋಧರು ಬರುತ್ತಿದ್ದಾರೆ. ಒಬ್ಬ ದೇಶ ಕಾಯುವ ಯೋಧ ನಿಮ್ಮ ಹಳ್ಳಿಗೆ ಬರುತ್ತಿದ್ದಾನೆ ಅಂದರೆ ಎಷ್ಟು ಹೆಮ್ಮೆಯ ಸಂಗತಿ ಅಲ್ವಾ, ಅವರ ಸೇವೆ ಮಾಡಲು ಇದೊಂದು ಉತ್ತಮ ಅವಕಾಶ. ನಿಮ್ಮ ಹಳ್ಳಿಗಳಿಗೆ ಬರಲಿರುವ ಯೋಧರಿಗೆ ಉಳಿಯಲು ಒಳ್ಳೆಯ ಸ್ವಚ್ಛವಾದ ಸರಕಾರಿ ಕೊಠಡಿ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ವಿದ್ಯುತ್ ಸೌಲಭ್ಯ ಕಲ್ಪಿಸಿ ಕೊಡಿ ಅಂತ ಅವರು ಕೇಳುವುದಿಲ್ಲ. ಆದರೆ ಯಾವ ಊರುಗಳಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿರುತ್ತದೇಯೋ ಅಂತಹ ಹಳ್ಳಿಗಳಲ್ಲಿ ನಮ್ಮ ಭಾರತೀಯ ಯೋಧರ ಕಡೆ ಗಮನ ಕೊಡಿ. ಈ ಸಲ ಕಪ್ ನಮ್ಮದೇ ಲೋಟ ತಟ್ಟೇ ಅನ್ನುವುದು ಬಿಟ್ಟು ಅದೇ ಲೋಟ ತಟ್ಟೇಯಲ್ಲಿ ಮಜ್ಜಿಗೆ, ಮೊಸರು, ಎಳನೀರೂ ಹಾಗೇ ತಂಪಾದ ಪಾನೀಯ ಊಟ ಉಪಾಹಾರ ಕೊಟ್ಟು ನಮ್ಮ ಕರ್ನಾಟಕ ಏನು ಎಂಬುದನ್ನು ತೋರಿಸಿ. ನಿಮ್ಮ ಸೇವೆಗೆ ಎಂದು ಜೀವನ ಮುಡಿಪಾಗಿ ಇಟ್ಟಿರುವ ಯೋಧರಿಗೆ ಒಂದು ದಿನ ಅವರ ಸೇವೆ ಮಾಡಲು ನಿಮಗೆ ಅವಕಾಶ ಸಿಗುತ್ತಿದೆ ಅದನ್ನು ಉಪಯೋಗಿಸಿಕೊಳ್ಳಿ. ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಜೈ ಹಿಂದ್ ಜೈ ಭಾರತ ಮಾತೆ.
No comments:
Post a Comment