📚 *ಜ್ಞಾನ ಸಂಗಮ*📚
*==================*
*ವಿಶ್ವ ಆರೋಗ್ಯ ದಿನದ ಶುಭಶಾಯಗಳು*
♦ *ವಿಶ್ವ ಆರೋಗ್ಯ ದಿನ ಎಂದರೇನು? ಇದರ ಮಹತ್ವವೇನು?*♦
ಆರೋಗ್ಯ ಒಂದು ರೀತಿ ವ್ಯಕ್ತಿ ವಿಕಾಸಕ್ಕೆ ದಾರಿ
ವಿಶ್ವದಾದ್ಯಂತ ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಹಲವು ವ್ಯಕ್ತಿಗಳ ಶ್ರಮದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಯಿತು.
ವಿಶ್ವದ ಸಕಲ ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು.
1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು. ಅಂತೆಯೇ 1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ ಒಂದು ವಿಷಯದ ಮೇಲ್ಪಂಕ್ತಿಯನ್ನು ಆರಿಸಿ ಆ ವಿಷಯದ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ಅನುಷ್ಠಾನಗೊಳಿಸಲು ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ.
ಆರೋಗ್ಯದ ಕಾಳಜಿಯ ಕುರಿತಾದ ಈ ವಿಷಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಹಲವು ಖ್ಯಾತನಾಮರು ಈ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೇ ಭಾಗಿಯಾಗಿ ಜನಹಿತ ಕಾರ್ಯಕ್ರಮಗಳಿಗೆ ಬಂಬಲ ನೀಡುತ್ತಾ ಬಂದಿದ್ದಾರೆ. ವಿಷಯದ ಕುರಿತಾದ ಪ್ರಸ್ತುತಿಗಳು ಕೇವಲ ಪುಸ್ತಕದ ಬದನೇಕಾಯಿಯಾಗಿ ಉಳಿಯದೇ , ವರ್ಷ ವಿಡಿ ಜನರ ಮನದಲ್ಲಿ ಹಸಿರಾಗಿ ಉಳಿಯಲು ಕ್ರಮ ಕೈಗೊಳ್ಳಲಾಗುತ್ತದೆ.
♦ *ವಿಶ್ವ ಆರೋಗ್ಯ ದಿನದ ಆಚರಣೆ ಹೇಗೆ?*♦
ಈ ಆಚರಣೆಯಲ್ಲಿ ಆಯಾ ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಓ), ಲಾಭರಹಿತ ಕಾರ್ಯನಿರ್ವಹಿಸುವ ಸಂಸ್ಥೆಗಳು ಭಾಗವಹಿಸಿ ಕಾರ್ಯಕ್ರಮಗಳ ಯಶಸ್ವಿಗೆ ಸಹಕರಿಸುತ್ತವೆ.
ಸಾರ್ವಜನಿಕರಿಗೆ ಆರೋಗ್ಯ ಮತ್ತು ವಿವಿಧ ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ಇದರಲ್ಲಿ ಭಾಗವಹಿಸುವ ಸಂಸ್ಥೆಗಳು ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಿ ಹೆಚ್ಚು ಹೆಚ್ಚು ಜನರಿಗೆ ಈ ಮಾಹಿತಿ ಲಭ್ಯವಾಗಲು ನೆರವಾಗುತ್ತವೆ.
♦ *ವಿಶ್ವ ಆರೋಗ್ಯ ದಿನವನ್ನೇಕೆ ಆಚರಿಸಬೇಕು?*♦
ಹೆಚ್ಚಿನವರಿಗೆ ಇದೊಂದು ದುಂದುವೆಚ್ಚದ ಮತ್ತು ಪ್ರಚಾರಕ್ಕಾಗಿ ಮಾಡಿರುವ ಕಾರ್ಯಕ್ರಮವೆಂದೇ ದೂರದಿಂದ ತೋರುತ್ತದೆ. ಆದರೆ ವಾಸ್ತವವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುರವರೆಲ್ಲಾ ಕೇವಲ ಸೇವಾಮನೋಭಾವನೆ ಮತ್ತು ಕೃತಾರ್ಥತೆ ಅನುಭವಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ.
ಅರಿವಿಲ್ಲದೇ ಜನತೆ ಆಚರಿಸುತ್ತಾ ಬಂದಿರುವ ಅನಾರೋಗ್ಯಕರ ಮತ್ತು ಪಿಡುಗುಗಳ ಬಗ್ಗೆ ಮಾಹಿತಿ ನೀಡಿ ಜನರನ್ನು ಸರಿದಾರಿಗೆ ತರಲು ಪ್ರಯತ್ನಪಡುತ್ತಾರೆ. ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ. ಇದರಿಂದ ಸಮಾಜದ ಆರೋಗ್ಯ ಉತ್ತಮಗೊಳ್ಳುತ್ತದೆ. ಆರೋಗ್ಯಕರ ಸಮಾಜ, ದೇಶದ ಶಕ್ತಿಯಾಗುತ್ತದೆ.
ಕೆಲವು ಪ್ರಮುಖ ಧ್ಯೇಯೋದ್ದೇಶಗಳು:
* ಅಧಿಕ ರಕ್ತದೊತ್ತಡಕ್ಕೆ ಕಾರಣ ಮತ್ತು ತಡೆಯುವ ನಿಟ್ಟಿನಲ್ಲಿ ಜನಸಾಮಾನ್ಯರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು
* ವಿವಿಧ ರೋಗಗಳಿಗೆ ತುತ್ತಾಗುವ ಕಾರಣಗಳು ಮತ್ತು ಅದರಿಂದ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿಗಳು
* ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಿರಲು ಕೈಗೊಳ್ಳಬೇಕಾದ ಕ್ರಮಗಳು
* ಕುಡಿಯುವ ನೀರಿದ ಸದ್ಬಳಕೆ, ಬಯಲು ಶೌಚಾಲಯದ ಅಪಾಯಗಳು ಮೊದಲಾದವು
♦ *ಅಭಿಯಾನದ ಪ್ರಮುಖ ಧ್ಯೇಯವಾಕ್ಯಗಳು:*♦
* 1950 ರಲ್ಲಿ - ನಿಮ್ಮ ಆರೋಗ್ಯಕ್ಕಾಗಿ ಲಭ್ಯವಿರುವ ಸೇವೆಗಳ ಬಗ್ಗೆ ಅರಿಯಿರಿ "Know your Health Services".
*1951 ರಲ್ಲಿ - ನಿಮ್ಮ ಮತ್ತು ವಿಶ್ವದ ಎಲ್ಲಾ ಮಕ್ಕಳಿಗೆ ಉತ್ತಮ ಆರೋಗ್ಯ "Health for your Child and World's Children".
*1952 ರಲ್ಲಿ - ಆರೋಗ್ಯಕರ ಪರಿಸರದಿಂದ ಆರೋಗ್ಯಕರ ಸಮಾಜ "Healthy surroundings make Healthy people".
*1953 ರಲ್ಲಿ - ಆರೋಗ್ಯವೇ ಭಾಗ್ಯ "Health is Wealth" ಈ ವರ್ಷದ ಧ್ಯೇಯವಾಕ್ಯ ವಿಶ್ವ ಆರೋಗ್ಯ ಸಂಸ್ಥೆ ಆಹಾರದ ಮೂಲಕ ಆಗಮಿಸುವ ರೋಗಗಳ ಕಾಳಜಿಯನ್ನು ಈ ವರ್ಷದ ವಿಷಯವನ್ನಾಗಿ ಆರಿಸಿಕೊಂಡಿದೆ.
2017 ರಲ್ಲಿ "From farm to plate, make food safe." (ಗದ್ದೆಯಿಂದ ತಟ್ಟೆಗೆ, ನಿಮ್ಮ ಆಹಾರ ಸುರಕ್ಷಿತವಾಗಿರಲಿ) ಎಂಬ ಧ್ಯೇಯವಾಕ್ಯವನ್ನು ಆಯ್ದುಕೊಂಡಿದೆ.
2018ರಂದು helth for all(ಎಲ್ಲರಿಗಾಗಿ ಆರೋಗ್ಯ) ಎಂಬ ಧ್ಯೇಯವಾಕ್ಯವನ್ನು ಆಯ್ದುಕೊಂಡಿದೆ.
♦ *ಪುಟ್ಟ ಮಾಹಿತಿ ಇದು ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ*♦
1. ದಿನಾಲು 10 ರಿಂದ 30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ.
10 ನಿಮಿಷಗಳ ಮೌನ ಆಚರಿಸಿ,
ಕನಿಷ್ಠ 6 ಘಂಟೆಗಳ ಕಾಲ ನಿದ್ದೆ ಮಾಡಿ.!!
2. ದಿನಾಲೂ ಮಾಡುವ ಪ್ರಾರ್ಥನೆ, ಧ್ಯಾನವು ಮನಸ್ಸನ್ನು ಹತೋಟಿಯಲ್ಲಿಡುತ್ತದೆ.
ಜೀವನದ ಜಂಜಾಟವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ.
3. ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ.
4.ಹಗಲು ಧಾರಾಳವಾಗಿ ನೀರು ಕುಡಿಯಿರಿ.
ರಾತ್ರಿ ಮಲಗುವಾಗ ನೀರು ಮಿತವಾಗಿರಲಿ.
5. ಮುಂಜಾನೆಯ ತಿಂಡಿ ರಾಜನಂತೆ ತಿನ್ನಿ,
ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ, ರಾತ್ರಿ ಊಟ ಭಿಕ್ಷುಕನಂತೆ ಇರಲಿ.
6. ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಕ್ಕಿಂತ ಗಿಡಗಳಲ್ಲಿ ಬಿಡುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಿ.
7. ಜಾಸ್ತಿ ಮುಗುಳು ನಗಿ.
ಹೆಚ್ಚೆಚ್ಚು ನಕ್ಕುಬಿಡಿ.
ದಿನಾಲೂ ಕನಿಷ್ಟ 3 ಜನರಿಗಾದರೂ ಮುಗುಳುನಗೆ ಬೀರಿ.
8. ಗಾಸಿಪ್ ಗಳಲ್ಲಿ ಕಾಲಕಳೆದು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
ಆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಬಳಸಿ.
9. ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕಳೇಯಬೇಡಿ.
ಜೀವನ ಚಿಕ್ಕದು.
ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ.
ಯಾಕೆಂದರೆ ಅವರ ಪಯಣ ಎಲ್ಲೆಂದು ನಿಮಗೆ ತಿಳಿದಿಲ್ಲ.
10. ದಿನಾಲೂ ಸ್ವಲ್ಪ ಸಮಯವಾದರೂ 70 ವರ್ಷಕ್ಕಿಂತ ಜಾಸ್ತಿ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರೊಡನೆ ಕಾಲ ಕಳೆಯಿರಿ.
11. ಎಲ್ಲಾ ವಾದಗಳನ್ನೂ ಗೆಲ್ಲಬೇಕಿಂದಿಲ್ಲ.
ಸೋತು ಗೆದ್ದುಬಿಡಿ.
12. ನಿಮ್ಮ ಸಂಗಾತಿಗೆ ಅವರ ಹಿಂದಿನ ತಪ್ಪುಗಳನ್ನು ಜ್ಞಾಪಿಸಿ ನಿಮ್ಮ ಇಂದಿನ ಸಂತೋಷವನ್ನು ಕೊಲ್ಲಬೇಡಿ.
13. ನಿಮ್ಮನ್ನು ನೀವೇ ಗಂಭೀರವಾಗಿ ತೆಗೆದುಕೊಳ್ಳಬೇಡಿ.
ಯಾಕೆಂದರೆ ಬೇರೆ ಯಾರೂ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.
14. ಜೀವನ ಒಂದು ಶಾಲೆಯಿದ್ದಂತೆ. ಸಮಸ್ಯೆಗಳು ಬೀಜಗಣಿತದ ಲೆಕ್ಕಗಳಂತೆ ಕರಗಿ ಉತ್ತಮ ಪಾಠ ಕಲಿಸುತ್ತವೆ. ಸಮಸ್ಯೆಗಳನ್ನು ಉತ್ಸಾಹದಿಂದ ಎದುರಿಸಿ.
15. ನಿಮ್ಮ ಉದ್ಯೋಗ ನಿಮ್ಮನ್ನು ನೀವು ನಿವೃತ್ತಿಯಾಗುವವರೆಗೂ ಕಾಯುವುದು. ನಿಮ್ಮ ಕುಟುಂಬ, ಸಂಬಂಧಿಗಳು ಮತ್ತು ಮಿತ್ರರು ಮಾತ್ರ ನಿಮ್ಮೊಡನೆ ಯಾವಾಗಲೂ ಇರುವವರು.
ಅವರಿಗೆ ಯಾವಾಗಲೂ ಸಮಯ ಕೊಡಿ.
16. ಎಲ್ಲರನ್ನೂ ಕ್ಷಮಿಸುತ್ತಾ, ಅವರ ತಪ್ಪುಗಳನ್ನು ಮರೆಯುತ್ತಾ ಮುಂದೆ ಸಾಗಿ.
17.ಸಿಟ್ಟು ತನ್ನ ವೈರಿ,
ಶಾಂತಿ ಪರರ ವೈರಿ ಎಂಬುದನ್ನು ಎಂದಿಗೂ ಮರೆಯದಿರಿ.
18.ನನ್ನನ್ನು ದ್ವೇಷಿಸುವವರನ್ನು ದ್ವೇಷಿಸಲು ನನಗೆ ಸಮಯವಿಲ್ಲ,
ಏಕೆಂದರೆ ನನ್ನನ್ನು ಪ್ರೀತಿಸುವವರ ಪ್ರೀತಿಯಲ್ಲಿ ನಾನು ತುಂಬಾ ಬ್ಯೂಜಿಯಾಗಿದ್ದೇನೆ.
ಎಂಬುದು ನಿಮ್ಮ ಮನೋಧೋರಣೆಯಾಗಿರಲಿ.
19.ನೀವು ಬೇಯಿಸುವ ಅನ್ನದ ನೀರು
ಅದು ನಿಮ್ಮ ಬೆವರಿನ ಹನಿಯಾಗಿರಬೇಕೆ ಹೊರತು,
ಬೇರೆಯವರ ಕಣ್ಣೀರಾಗದಂತೆ ನೋಡಿಕೊಳ್ಳಿ.
20.ಪ್ರತಿ ದಿನವೂ ಇದು ನಮ್ಮ ಕೊನೆಯ ದಿನವೆಂದು ತಿಳಿದು ಗಳಿಸಬೇಕು,
ಪ್ರತಿ ದಿನವೂ ಇದು ನಮ್ಮ ಮೊದಲ ದಿನವೆಂದು ತಿಳಿದು ಉಳಿಸಬೇಕು.
No comments:
Post a Comment