Thursday, 19 April 2018

ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸ್ವೀಡನ್‌ ನೆರವು

ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸ್ವೀಡನ್‌ ನೆರವು

👉 *ಸ್ಟಾಕ್‌ಹೋಮ್‌: ಸೇನಾ ಮತ್ತು ಭದ್ರತಾ ಕ್ಷೇತ್ರಗಳ ಪರಸ್ಪರ ಸಹಕಾರ ಬಲವರ್ಧನೆಗೆ ಭಾರತ ಮತ್ತು ಸ್ವೀಡನ್‌ ಮುಂದಾಗಿವೆ. ಸೈಬರ್‌ ಸುರಕ್ಷತೆ, ರಕ್ಷಣಾ ವಲಯದ ಉತ್ಪಾದನೆಗೆ ವಿನೂತನ ಸಹಭಾಗಿತ್ವ ಮತ್ತು ಜಂಟಿ ಕ್ರಿಯಾಯೋಜನೆಗೆ ಎರಡೂ ರಾಷ್ಟ್ರಗಳು ಸಹಿ ಹಾಕಿವೆ.*

👉 *ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವೀಡನ್‌ ಪ್ರಧಾನಿ ಸ್ಟೀಫನ್‌ ಲೋಫ್‌ವೆನ್‌ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.*

👉 *ಸುಸಜ್ಜಿತ ನಗರ (ಸ್ಮಾರ್ಟ್‌ಸಿಟಿ) ನಿರ್ಮಾಣ, ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಕೆಯಲ್ಲಿ ಸ್ವೀಡನ್‌, ಭಾರತಕ್ಕೆ ನೆರವು ನೀಡಲಿದೆ ಎಂದು ಮೋದಿ ತಿಳಿಸಿದರು.*

👉 *ಇಂಡಿಯಾ–ನಾರ್ಡಿಕ್‌ ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಾರ್ವೆ, ಡೆನ್ಮಾರ್ಕ್‌, ಫಿನ್ಲೆಂಡ್‌, ಐಸ್‌ಲ್ಯಾಂಡ್‌ ಪ್ರಧಾನಿಗಳ ಜತೆ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು.*

👉 *ಉದ್ಯಮಿಗಳು ಮತ್ತು ವಿವಿಧ ಕಂಪೆನಿಗಳ ಸಿಇಒಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದ ಮೋದಿ ಅವರು, ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ, ಶುದ್ಧ ಇಂಧನ, ವಾಣಿಜ್ಯ ವಹಿವಾಟು ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದರು.*
*

No comments:

Post a Comment