ಪ್ರಚಲಿತ“67 ವರ್ಷಗಳ ದುರಾಡಳಿತ ನೋಡಿಯೂ ಪ್ರಧಾನಿ ಮೋದಿಯವರನ್ನ ಅನುಮಾನಿಸುತ್ತಿದ್ದೀರಾ?”
“ಬದುಕಿದರೆ ಅದು ಭಾರತಕ್ಕಾಗಿ, ಸತ್ತರೆ ಅದು ಕೂಡಾ ಭಾರತಕ್ಕಾಗಿ. ಸತ್ತ ನಂತರವೂ ಗಂಗೆಯಲ್ಲಿ ತೇಲುತ್ತಿರುವ ನನ್ನ ಅಸ್ಥಿಗಳಿಗೆ ಯಾರಾದರು ಕಿವಿಗೊಟ್ಟು ಕೇಳಿದರೆ ಅಗಲೂ ಒಂದೇ ಶಬ್ದ ಕೇಳುವುದು ಅದು ಭಾರತ್ ಮಾತಾ ಕೀ ಜೈ” ಎಂದು ಹೇಳಿ ದೇಶ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಆ ಸಂತನಂತಿರುವ ನಾಯಕನನ್ನು ಸೋಲಿಸಿ ದೇಶಕ್ಕೆ ಮೋಸ ಮಾಡಿದ್ದು ನೆನಪಿದೆಯಾ? ಓ ಭಾರತೀಯರೇ ಅಂದು ನಾವು ಮೋಸ ಮಾಡ್ಬಿಟ್ವಿ ಅಂತ ಅನಿಸಲೇ ಇಲ್ಲವಾ? ದೇಶವನ್ನು ಸದೃಢವಾಗಿಸಲು ಬಂದ ನಾಯಕನನ್ನು ಸೋಲಿಸಿ ನಾವು ಮೋಸ ಮಾಡಿದ್ದೇವಲ್ಲ ನೆನಪಿದೆಯಾ?
ರಾಜಕಾರಣಿಗಳು ಜನರಿಗೆ ಮೋಸ ಮಾಡುವುದನ್ನು ನಾವೆಲ್ಲ ನೋಡಿದ್ವಿ ಆದರೆ ಈ ದೇಶದ ಜನರೇ ದೇಶಕ್ಕೆ ಮೋಸ ಮಾಡಿದ್ದರಲ್ಲ. ಏನದು ಮೋಸ ಗೊತ್ತಾ? ಆ ವ್ಯಕ್ತಿ ದೇಶದ ಸಂತನಂತಿದ್ದ, ಆ ವ್ಯಕ್ತಿಗೆ ಭಾರತವನ್ನು ಕಟ್ಟುವ ಕನಸು ಬಿಟ್ಟು ಬೇರೇನೂ ಇರಲಿಲ್ಲ. ಆಸ್ತಿ ಮಾಡುವ ಹಂಬಲವೂ ಇರಲಿಲ್ಲ. ಯಾಕಂದ್ರೆ ಅವರಿಗೆ ಹೆಂಡತಿ, ಮಕ್ಕಳು ಇರಲಿಲ್ಲ. ಭಾರತದ ಅತ್ಯಂತ ಪ್ರಾಮಾಣಿಕ, ಸಜ್ಜನ, ಕವಿ ಹೃದಯಿ, ಮಾಜಿ ಪ್ರಧಾನಿ “ಅಟಲ್ ಬಿಹಾರಿ ವಾಜಪೇಯಿ”ಯವರನ್ನು ನಾವೆಲ್ಲ ಸೇರಿ ಸೋಲಿಸಿ ದೇಶಕ್ಕೆ ಮೋಸ ಮಾಡಿದ್ದೇವಲ್ಲ ನೆನಪಿದೆಯಾ?
ನದಿಗಳ ಜೋಡಣೆಯ ಕನಸನ್ನು ಹೊತ್ತಿದ್ದ ಆ ನಾಯಕ, ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನನ್ನ ದೇಶವೂ ಇರಬೇಕೆಂದು ಕನಸು ಕಂಡು ಫೋಕ್ರಾನಿನಲ್ಲಿ ಅಣ್ವಸ್ತ್ರದ ಯಶಸ್ವಿ ಉಡಾವಣೆ ನಡೆಸಿ ಭಾರತವನ್ನು ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರನ್ನು ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿ ದೇಶಕ್ಕೆ ಮೋಸ ಮಾಡ್ಬಿಟ್ವಿ. ಆಯ್ತು ಅದು ಆದದ್ದು ಆಯ್ತು.
ಆದರೆ ಈಗ ಅಂತಹ ಪ್ರಮಾಣಿಕ, ದೇಶಭಕ್ತ ಪ್ರಧಾನಿಯವರು ನಮಗೆ ಸಿಕ್ಕಿದ್ದಾರೆ. ಇವರಿಗೂ ಮೋಸ ಮಾಡಿ ದೇಶಕ್ಕೆ ಮೋಸ ಮಾಡುವ ಪ್ಲ್ಯಾನ್ ಏನಾದರೂ ಇದಿಯಾ? ಈಗಾಗಲೇ ಅಟಲ್ ಬಿಹಾರಿ ವಾಜಪೇಯಿವರನ್ನು ಸೋಲಿಸಿ ದೇಶಕ್ಕೆ ಮೋಸ ಮಾಡಿದ್ದೇವೆ. ಈಗಲಾದರೂ ನಾವು ಎಚ್ಚೆತ್ತುಕೊಂಡು ದೇಶಕ್ಕೆ ಮೋಸ ಮಾಡುವುದನ್ನು ನಿಲ್ಲಿಸಬೇಕು. ನರೇಂದ್ರ ಮೋದಿಯವರು ರಾಷ್ಟ್ರವನ್ನು ಕಟ್ಟುವುದಕ್ಕಾಗಿ ಅದೆಷ್ಟು ಕೆಲಸ ಮಾಡುವುದಕ್ಕಾಗುತ್ತೋ ಅಷ್ಟು ಮಾಡುತ್ತಿದ್ದಾರೆ.
ಅವರ ಪ್ರಯತ್ನಕ್ಕೆ ನಾವು ಕೈ ಜೋಡಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಒಂದು ವೇಳೆ ಮೋದಿಯವರನ್ನು ಸೋಲಿಸಿದರೆ ದೇಶಕ್ಕೆ ಮೋಸ ಮಾಡಿದನಮತಾಗುತ್ತದೆ ಹೊರತು ಮೋದಿಯವರಿಗೆ ಇದರಿಂದ ಯಾವುದೇ ನಷ್ಟವಿಲ್ಲ, ಲಾಭವೂ ಇಲ್ಲ. ಒಂದು ವೇಳೆ ಮೋದಿಯವರನ್ನು ಸೋಲಿಸಿದರೆ ದೇಶವನ್ನ ಉಳಿಸೋಕೆ ನಾನು ನನ್ನ ಕೈಲಾದ ಪ್ರಯತ್ನ ಪಟ್ಟೆ ಆದರೆ ದೇಶದ ಜನತೆ ನನಗೆ ಬೆಂಬಲಿಸಲಿಲ್ಲ ಅಂತ ಮೋದಿಜೀ ಕೊರಗುತ್ತ ತಮ್ಮ ಜೀವನ ಕಳೆದುಬಿಡ್ತಾರೆ.
ಆದರೆ ಅದು ನಾವು ದೇಶಕ್ಕೆ ಮಾಡುವ ಮೋಸ ಎನ್ನುವುದನ್ನು ಮರೆಯಬೇಡಿ. ಸರಳ, ಸಜ್ಜನ, ಪ್ರಮಾಣಿಕ ದೇಶಭಕ್ತ ಲಾಲ್ ಬಹದ್ದೂರ್ ಶಾಸ್ತ್ರೀಯವರ ನಂತರ, ಕವಿ ಹೃದಯಿ, ದೇಶಭಕ್ತ ಅಟಲ್ ಬಿಹಾರಿ ವಾಜಪೇಯಿರನ್ನ ಹೊರತು ಪಡಿಸಿ ಈ ದೇಶ ಅಷ್ಟೊಂದು ಪ್ರಾಮಾಣಿಕ ನಾಯಕನನ್ನು ನೋಡಿದೆಯಾ? ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಅಟಲದ ಬಿಹಾರಿ ವಾಜಪೇಯಿ ಅವರ ನಂತರ ನಮಗೊಬ್ಬ ಪ್ರಮಾಣಿಕ ದೇಶಭಕ್ತ ನಾಯಕ ಸಿಕ್ಕಿದ್ದಾರೆ ಅನ್ನುವುದನ್ನು ಅಲ್ಲಗಳೆಯೋದಕ್ಕೆ ಆಗುವುದಿಲ್ಲ.
ಯಾವತ್ತಾದರೂ ಯಾರಾದರೂ ಮೋದಿಯವರ ಆಸ್ತಿಯ ಕುರಿತು ಮಾತನಾಡಿದ್ದಾರಾ? ಇಲ್ಲ ಮಾತಾಡಿಲ್ಲ ಯಾಕೆ ಗೊತ್ತಾ? ಮಾತಾಡಿದರೆ ಮೋದಿಯವರ ಪ್ರಾಮಾಣಿಕತೆ ಇಡೀ ಭಾರತಕ್ಕೆ ಗೊತ್ತಾಗುತ್ತೆ ಎನ್ನುವ ಭಯದಿಂದ. ಕೆಲ ತಿಂಗಳುಗಳ ಹಿಂದೆ ಮಾಧ್ಯಮವೊಂದು ನರೇಂದ್ರ ಮೋದಿಯವರ ಆಸ್ತಿ ಕುರಿತಾಗಿ ವರದಿ ನೀಡಿತ್ತು. ಆ ವರದಿಯ ಮಾಹಿತಿಗಳನ್ನು ನಿಮ್ಮ ಮುಂದಿಡುತ್ತೇನೆ. ಇದರಿಂದ ಮೋದಿಯವರ ಪ್ರಾಮಾಣಿಕತೆ ಸಾಬೀತಾಗುತ್ತದೆ.
ಮೋದಿಯವರ ಆಸ್ತಿಯ ವಿವರ ಮತ್ತು ಅವರ ಕುಟಂಬ:
ಮೋದಿಯವರು ಸಂತರಂತಿದ್ದಾರೆ. ಅವರು ಯಾವತ್ತೂ ಅಧಿಕಾರವನ್ನು ದುರೂಪಯೋಗವನ್ನು ಪಡಿಸಿಕೊಂಡವರಲ್ಲ. ಹಲವಾರು ಬಾರಿ ನಾವು ನೀವೆಲ್ಲ ನೋಡಿರಬಹುದು.
ಮೋದಿಯವರ ತಾಯಿ ಆಟೋದಲ್ಲಿ ಓಡಾಡ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಬ್ಯಾಂಕಿಗೆ ಹೋದರೆ ಸಾಲಿನಲ್ಲಿ ನಿಂತು ಜನಸಾಮಾನ್ಯರಂತೆ ಇರುತ್ತಾರೆ. ಇದರರ್ಥ ಮೋದಿಯವರು ಯಾವತ್ತೂ ತಮ್ಮ ಅಧಿಕಾರವನ್ನು ದುರೂಪಯೋಗ ಪಡಿಸಿಕೊಂಡಿಲ್ಲ.
1) ದೇಶದ ಪ್ರಧಾನಿಯ ಹಿರಿಯ ಅಣ್ಣ ಒಂದು ಚಿಕ್ಕ ಕಾರ್ಖಾನೆಯಲ್ಲಿ ಕೆಲಸ ಮಾಡಿ, ಈಗ ನಿವೃತ್ತಿ ಪಡೆದು ಅದರಿಂದ ಬಂದ ಪೆನ್ಶನ್ ಹಣದಿಂದ ಜೀವನ ಸಾಗಿಸುತ್ತಿದ್ದಾರೆ.
2) ಪ್ರಧಾನಿ ಮೋದಿಯವರ ಮತ್ತೊಬ್ಬ ಅಣ್ಣ ಒಂದು ಪುಟ್ಟ ಅಂಗಡಿ ನಡೆಸಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.
3) ಪ್ರಧಾನಿ ಮೋದಿಯವರ ತಮ್ಮ ಸಾಮಾನ್ಯ ಗುಮಾಸ್ತರಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
4) ಮೋದಿಯವರ ಸಹೋದರಿ ಒಂದು ಬಡಕುಟುಂಬದ ಸೊಸೆ. ಸಾಮಾನ್ಯ ಹುದ್ದೆಯಲ್ಲಿರುವಾತನ ಪತ್ನಿ.
5) ಒಂದು ಸಣ್ಣ ಅಂಗಡಿ ಇಟ್ಟುಕೊಂಡು ಅದರಿಂದ ತಮ್ಮ ಜೀವನವನ್ನು ಮೋದಿಯವರ ಚಿಕ್ಕಪ್ಪನ ಮಗ ನಡೆಸುತ್ತಿದ್ದಾರೆ.
6) ಮೋದಿವರ ಚಿಕ್ಕಪ್ಪನ ಮಗಳು ಬಸ್ ನಿರ್ವಾಹಕನ ಪತ್ನಿ. ಅದರಿಂದಲೇ ಅವರ ಜೀವನ ನಡೆದಿದೆ.
ಈ ಮೇಲೆ ಹೇಳಿದವರಾರಿಗೂ ತಿಂಗಳಿಗೆ 10-1 5 ಸಾವಿರಕ್ಕಿಂತ ಹೆಚ್ಚು ವರಮಾನವಿಲ್ಲ. ಇವರೆಲ್ಲಾ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಇವರ್ಯಾರು ಯಾವತ್ತೂ ಮೋದಿಯವರಿಂದ ಸಹಾಯ ಕೇಳಿಲ್ಲ. ಮೋದಿಯವರಂತೆಯೇ ಇವರೆಲ್ಲ ದೇಶಪ್ರೇಮಿಗಳು, ಸ್ವಾಭಿಮಾನಿಗಳು. ಯಾವತ್ತೂ ಮೋದಿಯವರ ಅಧಿಕಾರವನ್ನು ದುರೂಪಯೋಗ ಪಡಿಸಿಕೊಳ್ಳಬೇಕೆಂದು ಇವರು ಯೋಚನೆ ಮಾಡಿದವರಲ್ಲ. ಇನ್ನೊಂದು ವಿಷಯ ಮೋದಿಯವರ ಕುಟುಂಬದವರು ಯಾರೂ ಕೂಡಾ ಇಂದಿನವರೆಗೂ ದೆಹಲಿಯಲ್ಲಿರುವ ಪ್ರಧಾನ ಮಂತ್ರಿ ನಿವಾಸದೊಳಗೆಹೆಜ್ಜೆ ಇಟ್ಟಿಲ್ಲ.
ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿ ಈಗ ನಿವೃತ್ತಿ ಪಡೆದು ಬಂದ ಹಣದಿಂದ ಜೀವನ ಸಾಗಿಸುತ್ತಿರುವ ಮೋದಿಯವರ ಹಿರಿಯ ಅಣ್ಣನವರ ಮಗಳು ಕೆಲ ತಿಂಗಳುಗಳ ಹಿಂದೆ ತೀವ್ರ ಅನಾರೋಗ್ಯದಿಂದ ಬಳಲಿದ್ದರು. ಆಗಲೂ ಈ ಕುಟುಂಬದವರು ಮೋದಿಯವರ ಸಹಾಯವನ್ನು ಕೇಳಲಿಲ್ಲ. ಆ ಮಗು ತೀವ್ರ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿ ಉನ್ನತ ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಾಗದೆ ಸಾವನ್ನಪ್ಪಿತು. ಮೋದಿಯವರ ಹೆಸರು ಹೇಳಿದ್ದರೆ ಯಾವ ಆಸ್ಪತ್ರೆಯಲ್ಲಾದರೂ ಚಿಕಿತ್ಸೆ ಸಿಗುತ್ತಿತ್ತು ಆದರೆ ಇವರು ಮೋದಿಯವರ ಹೆಸರನ್ನು ಎಲ್ಲೂ ದುರೂಪಯೋಗ ಪಡಿಸಿಕೊಂಡಿಲ್ಲ.
ಸುಮಾರು 14 ವರ್ಷಗಳ ಕಾಲ ಗುಜರಾತ್ ನ್ನು ಮೋದಿಯವರು ಆಳಿದ್ದರು. ಮನಸ್ಸು ಮಾಡಿದ್ದರೆ ಬೇಕಾದಷ್ಟು ಹಣ ಮಾಡಿಕೊಳ್ಳಬಹುದರಿತ್ತು. ತಮ್ಮ ಕುಟುಂಬದವರಿಗೆ ಬೇಕಾದ ಹುದ್ದೆಯ ಕೆಲಸ ಕೊಡಿಸಬಹುದಿತ್ತು. ಆದರೆ ಮೋದಿಯವರು ಯಾವತ್ತೂ ಅಧಿಕಾರದ ದುರೂಪಯೋಗ ಮಾಡಲಿಲ್ಲ. ಕುಟುಂಬದವರಿಗೂ ಸಹಾ ಅದಕ್ಕೆ ಅವಕಾಶ ಕೊಟ್ಟಿಲ್ಲಾ.
ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಒಂದು ದಿನ ರಜೆ ಇಲ್ಲದೇ ದುಡಿಯುತ್ತಿದ್ದಾರೆ. ತಾಯಿ ಮತ್ತೆ ತಮ್ಮ ಬಂಧುಬಳಗವನ್ನು ಬಂಗಲೆಯಲ್ಲಿ ಕೂರಿಸಿಲ್ಲ. ವರ್ಷಕ್ಕೊಮ್ಮೆ ತಾಯಿಯ ಆಶಿರ್ವಾದಕ್ಕಾಗಿ ಮುಖ ಮಾಡ್ತಾರೆ ಅಷ್ಟೇ, ಆ ತಾಯಿ ಅನಾಥ ಆಶ್ರಮದಲ್ಲಿಲ್ಲ. ತನ್ನದೇ ಮಕ್ಕಳ ಜೊತೆ ಸಂತಸದಲ್ಲಿದ್ದಾಳೆ. ತನ್ನ ಮಗ ದೇಶದ ಪ್ರಧಾನಿ ಅನ್ನುವ ಸಂತಸಕ್ಕಿಂತ ಮತ್ತೇನು ಬೇಕು ಆ ತಾಯಿಗೆ.? ಇದ್ರಿಂದ ಹೆಚ್ಚು ಒಬ್ಬ ಮಗ ತಾಯಿಗೇ ಏನು ಕೊಡಲು ಸಾಧ್ಯ? ಆಕೆ ಕೊಟ್ಟ ಹತ್ತು ರೂಪಾಯಿಯೇ ಮೋದಿಗೆ ಶಕ್ತಿ. ಮೋದಿಯ ಪತ್ನಿಗೇ ತನ್ನ ಪತಿ ತೊರೆದ ಬಗ್ಗೆ ದುಃಖವಿಲ್ಲ. ಆಕೆ ಸತ್ತಿದ್ದಾಳೆ ಅಂತ ಮೋದಿ ಸುಳ್ಳು ಹೇಳಲಿಲ್ಲ. ಪತ್ನಿ ಇದ್ದಾಳೆ ಅನ್ನುವುದನ್ನ ಚುನಾವಣೆ ಸಂದರ್ಭ ತಿಳಿಸಿಯೇ ಮುಂದುವರಿದಿದ್ದು. ಮೋದಿ ಪತ್ನಿಯೇ ಮೋದಿ ಕುರಿತು ಹಾಡಿ ಹೊಗುಳುತ್ತಾಳೆ, ಮತ್ತೆ ಇತರರಿಗೆ ಏನು.? ಅಲ್ಲವೇ.? ಮೋದಿ ಹೆಣ್ಣು ಹುಚ್ಚನಲ್ಲ, ಭ್ರಷ್ಟನಲ್ಲ.
ವಿಶ್ವನಾಯಕನತ್ತ ಪಯಣಿಸುವುದು ಸುಲಭದ ವಿಚಾರವಲ್ಲ ಗೆಳೆಯರೇ, ಮೋದಿಯಿಂದ ಭಾರತದ ಹೆಸರು ವಿಶ್ವದಲ್ಲೇ ಮತ್ತೆ ಪ್ರಜ್ವಲಿಸುತ್ತಿರುವುದು ಅಷ್ಟೇ ಸತ್ಯ. ಮೋದಿಯಿಂದ ವಿಶ್ವವೇ ಭಾರತದತ್ತ ಮುಖ ಮಾಡುವಂತಾಗಿದೆ. ನಿಮ್ಮ ಅಕೌಂಟ್ಗೇ 15 ಲಕ್ಷ ಬರದೇ ಇರಬಹುದು, ಆದ್ರೆ, ವಿದೇಶದಕ್ಕೆ ರವಾನೆಯಾಗುತ್ತಿದ್ದ ಕಾಳಧನ ನಿಂತಿದೆ. ಮೋದಿಯ ಪ್ರತಿ ವಿಚಾರದ ಬಗ್ಗೆ ಇಲ್ಲಿ ಪ್ರಸ್ತಾಪಿಸಿದ್ರೆ, ನೀವು ಖಂಡಿತಾ ಮಾತು ನಿಲ್ಲಿಸಬೇಕಾಗುತ್ತೆ. ನಾನು ಭಕ್ತನಲ್ಲ, ಆದ್ರೆ ನಾನು ನನ್ನ ಪ್ರಧಾನಿಯ ಎಲ್ಲಾ ಆಗು ಹೋಗುಗಳನ್ನು ಸರಿಯಾಗಿಯೇ ವೀಕ್ಷಣೆ ಮಾಡಿದ್ದೇನೆ.
ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋಲಿಸಿ ದೇಶಕ್ಕೆ ಮೋಸ ಮಾಡಿದ್ದೇವೆ. ಈಗಲೂ ಅದೇ ಮಾಡಿದರೆ ನಮ್ಮ ಮಕ್ಕಳಿಗಾಗಿ ಎಂತಹ ರಾಷ್ಟ್ರವನ್ನ ನೋಡೋಕೆ ಬಿಟ್ಟು ಹೋಗ್ತೀವಿ ಅಂತ ಯೋಚಿಸಿ.
ಮೋದಿಜೀಯ ಪ್ರಾಮಾಣಿಕತೆಯನ್ನ ಪ್ರಶ್ನಿಸುವವರೇ,
* ಸೋನಿಯಾ ತನ್ನಳಿಯನಿಗೆ ತಿನ್ನೋಕೆ ನೀಡಿದ್ದ ಸಾವಿರಾರು ಕೋಟಿಯಂತೆ ಮೋದಿ ತಮ್ಮ ಸಂಬಂಧಿಕರಿಗೆ ನೀಡಿದ್ದಾರಾ?
* ತಮ್ಮ ಸಂಬಂಧಿಕರು, ಸಂಬಂಧಿಕರ ಯಾಕೆ ಸ್ವತಃ ತನ್ನ ತಾಯಿಯನ್ನ ಸೋನಿಯಾಳಂತೆ ಅಮೇರಿಕಾದಲ್ಲಿ ಚಿಕಿತ್ಸೆ ಕೊಡಿಸಿದ್ದಾರಾ?
* ಸ್ವಿಸ್ ಬ್ಯಾಂಕ್ ನಲ್ಲಿ ಭ್ರಷ್ಟ ರಾಜಕಾರಣಿಗಳಂತೆ ಅಕೌಂಟ್ ಓಪನ್ ಮಾಡಿಸಿದ್ದಾರಾ?
* ದಿಗ್ವಿಜಯ್ ಸಿಂಗ್, ಅಹಮದ್ ಪಟೇಲ್, ಗುಲಾಂ ನಬಿಯಂತಹ ದೇಶದ್ರೋಹಿಗಳನ್ನ ತಮ್ಮ ಸುತ್ತ ಇಟ್ಟುಕೊಂಡಿದ್ದಾರಾ? ಅದೂ ಇಲ್ಲ
* ಇಲ್ಲಿವರೆಗೂ ಒಂದು ರೂಪಾಯಿಯ ಹಗರಣ ಮೋದಿ ಸರ್ಕಾರದಲ್ಲಿ ಕೇಳಿ ಬಂದಿಲ್ಲ.
ರಾಜಕಾರಣಿಗಳೆಂದರೆ ಭ್ರಷ್ಠರು ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಮೋದಿಯವರನ್ನು ನೋಡಿದ ಮೇಲೆ ರಾಜಕೀಯದಲ್ಲಿ ಈ ತರಹದ ವ್ಯಕ್ತಿಯೂ ಇರ್ತಾರಾ ಅಂತ ಅನಿಸಿದೆ. ನಾವೆಲ್ಲಾ ಬರೀ ಆ ರಾಜಕಾರಣಿ ಅಷ್ಟು ಕೊಳ್ಳೆ ಹೊಡೆದ, ಈ ರಾಜಕಾರಣಿ ಇಷ್ಟು ಕೊಳ್ಳೆ ಹೊಡೆದ ಹೀಗೆ ಹತ್ತು ಹಲವಾರು ಸತ್ಯಾಂಶಗಳನ್ನು ನಾವು ಕೇಳಿದ್ದೇವೆ , ಕಣ್ಣಾರೆ ಕಂಡಿದ್ದೇವೆ. ಆದರೂ ಅವರನ್ನೇ ಗೆಲಿಸಿ ದೇಶಕ್ಕೆ ಮೋಸ ಮಾಡಿದ್ದೇವೆ.
ಒಂದಂತು ನೆನಪಿನಲ್ಲಿಟ್ಟುಕೊಳ್ಳಿ. ಮೋದಿಯವರಿವೆ ಇದರಿಂದ ಯಾವುದೇ ಉಪಯೋಗವಿಲ್ಲ. ಅವರು ದೇಶಭಕ್ತರಾಗಿರೋದರಿಂದ ಅವರ ನರನಾಡಿಗಳು ದೇಶಪ್ರೇಮದಿಂದ ಕೂಡಿವೆ. ಅವರಲ್ಲಿ ದೇಶವನ್ನು ಕಟ್ಟುವ ಉದ್ದೇಶ ಬಿಟ್ಟು ಬೇರೇನೂ ಇಲ್ಲ. ಓ…!! ಭಾರತೀಯರೇ ಈಗಲೂ ದೇಶಕ್ಕೆ ಮೋಸ ಮಾಡುವ ಉದ್ದೇಶವಿದ್ದರೆ ಮೋದಿಯಂತಹ ಪ್ರಾಮಾಣಿಕ ದೇಶಭಕ್ತನನ್ನು ಸೋಲಿಸಿ, ದೇಶಕ್ಕೆ ಮೋಸ ಮಾಡಿ.
No comments:
Post a Comment