Monday, 5 March 2018

World biggest rubber ball || ಜಗತ್ತಿನ ಅತಿದೊಡ್ಡ ರಬ್ಬರ್‌ ಚೆಂಡು!*

*##ಮಾಹಿತಿ ವೇದಿಕೆ##*

*##ಮಾಹಿತಿ ವೇದಿಕೆ##*

*ಜಗತ್ತಿನ ಅತಿದೊಡ್ಡ ರಬ್ಬರ್‌ ಚೆಂಡು!*
############
*ಚಿತ್ರವಿಚಿತ್ರ ದಾಖಲೆಗಳನ್ನು ಮಾಡುತ್ತಾ ವಿಶ್ವದಾಖಲೆಗೆ ಪಾತ್ರರಾಗುವ ಅನೇಕ ಸಾಹಸಿಗರನ್ನು ನೋಡುತ್ತಿರುತೆ ¤àವೆ, ಅವರ ಬಗ್ಗೆ ಕೇಳುತ್ತಿರುತ್ತೇವೆ. ಅಂಥ ದಾಖಲೆಗಳ ಪಟ್ಟಿಗೆ ಹೊಸದೊಂದು ದಾಖಲೆ ಸೇರ್ಪಡೆಯಾಗಿದೆ.*
##############
*ಉದ್ದಕ್ಕೆ-ದಪ್ಪಕ್ಕೆ ಮೀಸೆ ಬಿಡುವುದು, ಮೈ ತುಂಬಾ ಹಚ್ಚೆ ಹಾಕಿಸಿಕೊಳ್ಳೋದು, ಗಿರಿಜಾ ಮೀಸೆಯಿಂದ ಟ್ರಕ್‌ ಎಳೆಯೋದು, ಉದ್ದದ ಬಾವುಟ ಹಾರಿಸೋದು, ದೊಡ್ಡ ಚಪಾತಿ ಮಾಡೋದು....ಹೀಗೆ ಜನ ಚಿತ್ರ-ವಿಚಿತ್ರ ರೀತಿಯಲ್ಲಿ ವಿಶ್ವ ದಾಖಲೆ ಸೃಷ್ಟಿಸುತ್ತಾರೆ. ಈಗ ಅಂಥ ದಾಖಲೆಗಳ ಪಟ್ಟಿಗೆ ಮತ್ತೂಂದು ಸಾಹಸಗಾಥೆ ಸೇರ್ಪಡೆಯಾಗಿದೆ. ಫ್ಲೋರಿಡಾದ ಲ್ಯಾಂಡರ್‌ಹಿಲ್‌ ಎಂಬಲ್ಲಿನ ಚಿಕ್ಕ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಜೋಯಲ್‌ ಕೀರು ಎಂಬಾತ ಹೊಸದೊಂದು ದಾಖಲೆ ಸೃಷ್ಟಿಸಿ "ದಾಖಲೆ ವೀರ' ಅನಿಸಿಕೊಂಡಿದ್ದಾನೆ.*
############
*ಈತನ ಸಾಧನೆಯಾದರೂ ಏನು ಅಂತ ಯೋಚಿಸ್ತಾ ಇದ್ದೀರ?*
##############
*ಜೋಯಲ್‌ ಒಂದು ರಬ್ಬರ್‌ ಚೆಂಡು ತಯಾರಿಸಿದ್ದಾನೆ. ಅಷ್ಟೇನಾ, ಅಂತ ಮೂಗು ಮುರಿಯಬೇಡಿ. ಅದು ಸಾಧಾರಣ ರಬ್ಬರ್‌ ಚೆಂಡಲ್ಲ ಅನ್ನೋದೇ ಅದರ ವಿಶೇಷ. ಆ ಚೆಂಡು ತಯಾರಾಗಿರೋದು ರಬ್ಬರ್‌ನಿಂದ ಅಲ್ಲ, ಬದಲಿಗೆ ರಬ್ಬರ್‌ ಬ್ಯಾಂಡ್‌ಗಳಿಂದ. ಸುಮಾರು 1,75,000 ರಬ್ಬರ್‌ ಬ್ಯಾಂಡ್‌ಗಳನ್ನು ಬಳಸಿಕೊಂಡು ಆತ ಈ ರಬ್ಬರ್‌ ಚೆಂಡನ್ನು ತಯಾರಿಸಿದ್ದಾನೆ. ಅದು ಸುಮಾರು  8 ಅಡಿ (2.4ಮೀ)ಎತ್ತರ ಹಾಗೂ 25 ಅಡಿ 4 ಇಂಚು (6.7 ಮೀ) ವ್ಯಾಸವನ್ನು ಹೊಂದಿದೆ. ಅಷ್ಟೇ ಅಲ್ಲ, ಆ ಚೆಂಡಿನ ತೂಕ ಎಷ್ಟು ಗೊತ್ತಾ? ಬರೋಬ್ಬರಿ 4,097 ಕೆ.ಜಿ  (9,032 ಪೌಂಡ್‌)*

*ದಾಖಲೆ ಬರೆದ ಚೆಂಡು:*
###############
*ಈ ರಬ್ಬರ್‌ ಚೆಂಡು* *2008ರಲ್ಲಿಯೇ "ಜಗತ್ತಿನ ಅತಿ ದೊಡ್ಡ ಮಾನವ ನಿರ್ಮಿತ ರಬ್ಬರ್‌ ಚೆಂಡು' ಎಂಬ  ಕೀರ್ತಿಗೆ *
*ಭಾಜನವಾಯಿತಲ್ಲದೇ, ವಿಶ್ವದಾಖಲೆಯೊಂದಿಗೆ ಗಿನ್ನಿಸ್‌ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಗೊಂಡಿತು. ಜೋಯಲ್‌ ಕೀರು ತನ್ನ ಕೆಲಸದ ನಂತರದ ಬಿಡುವಿನ ವೇಳೆಯನ್ನು ಈ ಚೆಂಡು ತಯಾರಿಕೆಗಾಗಿ ವ್ಯಯಿಸಿದ್ದಲ್ಲದೆ, 2005ರ ನವೆಂಬರ್‌ನಿಂದ 2006ರ ನವೆಂಬರ್‌ವರೆಗೆ ಪೂರ್ಣ ಪ್ರಮಾಣದಲ್ಲಿ ಚೆಂಡು ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ. ಅಬ್ಬಬ್ಟಾ, ದಾಖಲೆಗಾಗಿ ಜನ ಎಷ್ಟೆಲ್ಲಾ ಕಷ್ಟ ಪಡ್ತಾರೆ ಅಲ್ವಾ?*
============
*ಈ ಹಿಂದೆ 1999ರಲ್ಲಿ ಡೆಲಾವೇರ್‌ ಜಾನ್‌ಬೈನ್‌ ಎಂಬಲ್ಲಿ ಸ್ಟೀವ್‌ ಮಿಲ್ಟನ್‌ ಎಂಬಾತ ಸುಮಾರು 85,000 ರಬ್ಬರ್‌ ಬ್ಯಾಂಡ್‌ಗಳನ್ನು ಬಳಸಿಕೊಂಡು ಚೆಂಡೊಂದನ್ನು ತಯಾರಿಸಿದ್ದ. 1600 ಕಿಲೋಗ್ರಾಂ ತೂಕದ ಆ ಚೆಂಡು ಜಗತ್ತಿನ ಅತಿದೊಡ್ಡ ರಬ್ಬರ್‌ ಚೆಂಡು ಎಂಬ  ವಿಶ್ವದಾಖಲೆಗೆ ಪಾತ್ರವಾಗಿತ್ತು. ಆ ದಾಖಲೆಯನ್ನು ಜೋಯಲ್‌ ಮುರಿದಿದ್ದಷ್ಟೇ ಅಲ್ಲ, ಹಳೆಯದ್ದಕ್ಕಿಂತ ಸರಿಸುಮಾರು ಮೂರುಪಟ್ಟು ತೂಕದ, ಅದಕ್ಕಿಂತ ದುಪ್ಪಟ್ಟು ಜಾಸ್ತಿ ರಬ್ಬರ್‌ ಬ್ಯಾಂಡ್‌ಗಳನ್ನು ಬಳಸಿಕೊಂಡು ದಾಖಲೆಯ ಚೆಂಡನ್ನು ನಿರ್ಮಿಸಿದ್ದಾನೆ.*

No comments:

Post a Comment