*✏✏ಸೇನಾಬಲ ಭಾರತ ವಿಶ್ವ ನಂ.4✏✏*
*ಭಾರತೀಯ ಸೇನಾಪಡೆ ಜಾಗತಿಕವಾಗಿ 4ನೇ ಬಲಾಢ್ಯ ಸೇನಾಪಡೆ ಎಂಬ ಹೆಗ್ಗಳಿಕೆ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗ್ಲೋಬಲ್ ಫೈರ್ಪವರ್ (ಜಿಇಪಿ) ಲಿಸ್ಟ್ 2017ರ ಪ್ರಕಾರ ಅಮೆರಿಕ, ರಷ್ಯಾ ಮತ್ತು ಚೀನಾ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.*
*ಮಿಲಿಟರಿ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ, ಕೈಗಾರಿಗೆ ಮತ್ತು ಭೌಗೋಳಿಕ ಸಂರಚನೆ, ಲಭ್ಯವಿರುವ ಮಾನವಸಂಪನ್ಮೂಲ, ರಕ್ಷಣಾ ಬಜೆಟ್ ಗಾತ್ರ ಸೇರಿ ಒಟ್ಟು 50 ಅಂಶಗಳನ್ನು ಆಧರಿಸಿ ಜಿಇಪಿ ಲಿಸ್ಟ್ಗಾಗಿ ಸಮೀಕ್ಷೆ ನಡೆಸಲಾಗುತ್ತದೆ. ಘೋಷಿತ ಅಥವಾ ಅಘೋಷಿತವಾಗಿ ಅಣ್ವಸ್ತ್ರಗಳನ್ನು ಹೊಂದಿರುವ ಅಂಶವನ್ನು ಕೂಡ ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ, ಭಾರತ ಬಲಾಢ್ಯ ಸೇನೆ ಹೊಂದಿರುವ ಮೊದಲ 5 ರಾಷ್ಟ್ರಗಳ ಪೈಕಿ ಒಂದೆನಿಸಿಕೊಂಡಿದೆ.*
*ಯೋಧರ ಸಂಖ್ಯೆಯಲ್ಲಿ ಮುಂಚೂಣಿ*: *ಭಾರತ ಒಟ್ಟು 42.07 ಲಕ್ಷ ಯೋಧರ ಬಲವನ್ನು ಹೊಂದಿದೆ. ಹಾಗಾಗಿ, 23 ಲಕ್ಷ ಯೋಧರನ್ನು ಹೊಂದಿರುವ ಚೀನಾವನ್ನು ಅದು ಹಿಂದಿಕ್ಕಿದೆ. ಮೀಸಲು ಯೋಧರ ಸಂಖ್ಯೆಯಲ್ಲಿ 28.44 ಲಕ್ಷ ಯೋಧರನ್ನು ಹೊಂದಿರುವ ಭಾರತ, 14.52 ಲಕ್ಷ ಯೋಧರನ್ನು ಹೊಂದಿರುವ ಚೀನಾವನ್ನು ಹಿಂದಿಕ್ಕಿದೆ.*
*3 ಲಕ್ಷ ಯೋಧರನ್ನು ಕಡಿತಗೊಳಿಸಿದ ಚೀನಾ*
*2015ರಲ್ಲೇ ಘೋಷಿಸಿದ್ದ ಕ್ಸಿ: ಚೀನಾದ ಅಧ್ಯಕ್ಷ ಹಾಗೂ ಪಿಎಲ್ಎ ಮುಖ್ಯಸ್ಥರಾದ ಕ್ಸಿ ಜಿನ್ಪಿಂಗ್ 2015ರಲ್ಲೇ ಯೋಧರ ಸಂಖ್ಯೆ ಕಡಿತಗೊಳಿಸುವ ಘೋಷಣೆ ಮಾಡಿದ್ದರು. 1980ರಲ್ಲಿ ಚೀನಾ ಸೇನೆ 4.5 ದಶಲಕ್ಷ ಯೋಧರನ್ನು ಹೊಂದಿತ್ತು. 1985ರಲ್ಲಿ ಇದನ್ನು 3 ದಶಲಕ್ಷಕ್ಕೆ ಇಳಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ಯೋಧರ ಸಂಖ್ಯೆಯಲ್ಲಿ ಮಾರ್ಪಾಡು ಮಾಡಿ 2.3 ದಶಲಕ್ಷಕ್ಕೆ ಇಳಿಸಲಾಗಿದೆ.*
*ಚೀನಾ ರಕ್ಷಣಾ ಬಜೆಟ್ ಹೆಚ್ಚಳ*
*ಚೀನಾ ಸೋಮವಾರ ತನ್ನ ರಕ್ಷಣಾ ಬಜೆಟ್ ಪ್ರಕಟಿಸಿದ್ದು, ಒಟ್ಟಾರೆ 11,39,464 ಕೋಟಿ ರೂ. ನಿಗದಿಪಡಿಸಿದೆ. ಭಾರತದ ರಕ್ಷಣಾ ಬಜೆಟ್ಗಿಂತ ಇದು ಮೂರು ಪಟ್ಟು ಹೆಚ್ಚಾಗಿದೆ. ಸೋಮವಾರ ಆರಂಭವಾದ ಚೀನಾದ ಸಂಸತ್ ಅಧಿವೇಶನದಲ್ಲಿ ಈ ಬಜೆಟ್ ಅನ್ನು ಮಂಡಿಸಲಾಗಿದೆ. ಮಿಲಿಟರಿ ತರಬೇತಿಯನ್ನು ಆಧುನೀಕರಣಗೊಳಿಸುವ ಜತೆಗೆ ದೇಶದ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿಯ ಹಿತಾಸಕ್ತಿ ಕಾಯಲು ಸೇನೆಯನ್ನು ಯುದ್ಧ ಸನ್ನದ್ಧ ಗೊಳಿಸಲು ಈ ಮೊತ್ತವನ್ನು ಬಳಸಲಾಗುವುದು ಎಂದು ಚೀನಾದ ಪ್ರಧಾನಿ ಲೀ ಕೆಕಿಯಾಂಗ್ ಹೇಳಿದ್ದಾರೆ. ರಾಷ್ಟ್ರದ ಸಮಗ್ರ ಆರ್ಥಿಕ ಅಭಿವೃದ್ಧಿ ಗುರಿ ಸಾಧಿಸುವ ಜತೆಗೆ ದೇಶದ ಗಡಿರಕ್ಷಣೆಗಾಗಿ 2017ನೇ ಸಾಲಿನಲ್ಲಿದ್ದ -ಠಿ;10,67,835 ರಕ್ಷಣಾ ಬಜೆಟನ್ನು ಈ ಬಾರಿ ಶೇ.8.1 ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.*
No comments:
Post a Comment