📚 *"ಜ್ಞಾನ ಸಂಗಮ"*📚
*====================*
*ಈ ಸೋಲಾರ್ ಪಾರ್ಕ್ ವಿಶ್ವದ ಅದ್ಭುತ!*
ಪಾವಗಡ:
*ಹದಿಮೂರು ಸಾವಿರ ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ 16500 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗಿರುವ 2000 ಮೆಗಾವಾಟ್ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಸೌರಪಾರ್ಕ್ನ ಮೊದಲನೇ ಹಂತ ಗುರುವಾರ ನಾಡಿಗೆ ಸಮರ್ಪಣೆಯಾಗಿದೆ. ತಿರುಮಣಿಯ ಶಕ್ತಿಸ್ಥಳದಲ್ಲಿ ತಲೆ ಎತ್ತಿರುವ ಸೌರಪಾರ್ಕ್ನ 600 ಮೆಗಾವಾಟ್ ಉತ್ಪಾದನೆ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.*
*ದೇಶದಲ್ಲೇ ಪ್ರಥಮ: ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಮುಂಚೂಣಿಯಲ್ಲಿದೆ. ಸದ್ಯ ರಾಜ್ಯ 3,628 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿದ್ದರೆ ತಮಿಳುನಾಡು 1822, ಗುಜರಾತ್ 1585, ಮಧ್ಯಪ್ರದೇಶ 1537 ಹಾಗೂ ತೆಲಂಗಾಣ 1000 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುತ್ತಿವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.*
*ಕರ್ನಾಟಕಕ್ಕೆ ಗೌರವ: ಕರ್ನಾಟಕಕ್ಕೆ ದೊಡ್ಡ ಗೌರವ ತಂದುಕೊಟ್ಟಿರುವ ಸೋಲಾರ್ ಪಾರ್ಕ್ ಜಗತ್ತಿನ 8ನೇ ಅದ್ಭುತ ಎಂದು ಸಿದ್ದರಾಮಯ್ಯ ಬಣ್ಣಿಸಿದರು.*
*ಸೋಲಾರ್ ಪಾರ್ಕ್ನಿಂದಾಗಿ ಪಾವಗಡ ತಾಲೂಕಿಗೆ ಹಿಂದುಳಿದ, ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಸದವಕಾಶ ಒದಗಿ ಬಂದಿದೆ. ಪಾವಗಡದ ಭಾಗ್ಯದ ಬಾಗಿಲು, ಅಭಿವೃದ್ಧಿ ಬಾಗಿಲು ತೆರೆದಿದೆ. ಭೂಮಿ ಬೆಲೆ ಹೆಚ್ಚಲಿದೆ. ಉದ್ಯೋಗ ಸೃಷ್ಟಿಯಾಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ಈ ಭಾಗದ ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಮನವಿ ಮಾಡಿದರು.*
.
*====================*
*2013ರಲ್ಲಿ 13 ಸಾವಿರ ಮೆ.ವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಈಗ 22,000 ಮೆ. ವಾಟ್ ಉತ್ಪಾದಿಸಲಾಗುತ್ತಿದ್ದು, ಅನೇಕ ಸಮಸ್ಯೆ, ಸವಾಲುಗಳ ನಡುವೆಯೂ ರಾಜ್ಯವು ವಿದ್ಯುತ್ ಸ್ವಾವಲಂಬನೆ ಸಾಧಿಸಿದೆ. ಇದು ರೈತರದ್ದೇ ಯೋಜನೆ. ರೈತರೇ ಮಾಲೀಕರಾಗಿರುವ ಈ ಯೋಜನೆಯನ್ನು ಪ್ರಧಾನಿ ಕೂಡ ಶ್ಲಾಘಿಸಿದ್ದಾ ರೆಂದರು. ಕ್ರೆಡಲ್ ಅಧ್ಯಕ್ಷ ರೋಣ ಶಾಸಕ ಜಿ.ಎಸ್. ಪಾಟೀಲ್, ಮಾಜಿ ಸಚಿವ ವೆಂಕಟರಮಣಪ್ಪ, ಸೋಲಾರ್ ಪಾರ್ಕ್ ಎಂಡಿ ಜಿ.ವಿ. ಬಲರಾಂ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್, ಜಿಪಂ ಸಿಇಒ ಅನ್ನೀಸ್ ಕಣ್ಮಣಿ ಜಾಯ್ ಮತ್ತಿತರರಿದ್ದರು.*
*ಸೋಲಾರ್ ಪಾರ್ಕ್ ಪ್ರದೇಶವನ್ನು ಪ್ರವಾಸಿ ತಾಣವಾಗಿ ರೂಪಿಸಲಾಗು ವುದು. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಲಾಗಿದೆ.*
_ ಡಿ.ಕೆ.ಶಿವಕುಮಾರ್, ಇಂಧನ ಸಚಿವರು ತಿಳಿಸಿದರು
*===================*
No comments:
Post a Comment