Wednesday, 14 March 2018

Indian waterfalls || ಜಲಪಾತಗಳು

ಜಲಪಾತಗಳು

ಅಣಶಿ ಜಲಪಾತ

ಅಣಶಿ ಜಲಪಾತವು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ಒಂದು ಜಲಪಾತ. ಈ ಜಲಪಾತವು ಸುಮಾರು 150 ಅಡಿಗಳಿಗಿಂತಲೂ ಎತ್ತರದಿಂದ ಧುಮುಕುತ್ತದೆ. ಇದು ಕಾರವಾರ – ದಾಂಡೇಲಿ ಹೆದ್ದಾರಿಯಲ್ಲಿ ಕಾರವಾರದಿಂದ ಸುಮಾರು 32 ಕಿ.ಮೀ ದೂರದ ರಸ್ತೆ ಬದಿಯಲ್ಲಿದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ. ಈ ಜಲಪಾತವನ್ನು ನೋಡಲು ಪ್ರತಿ ವಷ೯ ಪ್ರವಾಸಿಗರು ಬರುತ್ತಾರೆ. ಇದು ಕದ್ರಾ ಆಣೆಕಟ್ಟೆಯಿಂದ ಸುಮಾರು 8 ಕಿ.ಮೀ ದೂರದಲ್ಲಿದೆ.

ಅಚಕನ್ಯ ಜಲಪಾತ

ಅಚಕನ್ಯ ಜಲಪಾತವು ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ತಾಲ್ಲೂಕಿನಲ್ಲಿ ಬರುತ್ತದೆ. ಅಂಬುತೀಥ೯ದಲ್ಲಿ ಹುಟ್ಟುವ ಶರಾವತಿ ನದಿಯು ಇಲ್ಲಿ ಸಣ್ಣ ಜಲಪಾತವನ್ನು ನಿರ್ಮಿಸಿದೆ. ತೀಥ೯ಹಳ್ಳಿಯಿಂದ ಹೊಸನಗರಕ್ಕೆ ಹೋಗುವಾಗ 10 ಕಿ.ಮೀ ಗಳ ನಂತರ ಸಿಗುವ ಅರಳಸುಳಿ ಎಂಬಲ್ಲಿ ಈ ಜಲಪಾತವನ್ನು ನೋಡಬಹುದಾಗಿದೆ.

ಉಂಚಳ್ಳಿ ಜಲಪಾತ
ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಜಲಪಾತ. ಇದರ ಎತ್ತರ ಸುಮಾರು 116 ಮೀಟರ್. ಈ ಜಲಪಾತವು ಕನಾ೯ಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ 30 ಕಿ.ಮೀ ದೂರದಲ್ಲಿದೆ. 1845 ರಲ್ಲಿ ಈ ಜಲಪಾತವನ್ನು ಪತ್ತೆ ಹಚ್ಚಿದ ಅಧಿಕಾರಿ ಜೆ.ಡಿ. ಲುಷಿಂಗ್ಟನ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ಜಲಪಾತವು ನೀರು ಬೀಳುವಾಗ ಮಾಡುವ ಶಬ್ದದಿಂದ ಸ್ಥಳೀಯರು ಇದನ್ನು “ಕೆಪ್ಪ ಜೋಗ “ ಎಂದೂ ಕೂಡ ಕರೆಯುತ್ತಾರೆ.

ಆಲೇಖಾನ್ ಜಲಪಾತ
ಆಲೇಖಾನ್ ಜಲಪಾತವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆಲೇಖಾನ್ ಎಸ್ಟೇಟ್ ನಿಂದ ಹರಿದು ಬರುವ ನೀರಿನಿಂದ ನಿಮಿ೯ತವಾಗಿರುವ ಒಂದು ಸುಂದರ ಜಲಪಾತವಾಗಿದೆ. ಸುಮಾರು 40 ಅಡಿಗಳಷ್ಟು ಎತ್ತರವಿರುವ ಇದು ಚಾಮು೯ಡಿ ಘಾಟ್ ದಲ್ಲಿ ಕಂಡುಬರುತ್ತದೆ. ಕೊಟ್ಟಿಗೆಹಾರದಿಂದ ಚಾಮು೯ಡಿಗೆ ಹೋಗುವ ರಸ್ತೆಯಲ್ಲಿ ಮಲಯಮಾರುತ ಅತಿಥಿಗೃಹದ ನಂತರ ಆಲೇಖಾನ್ ಎಸ್ಟೇಟ್ ಬಳಿ ಎಡಗಡೆ ಇರುವ ಒಂದು ಸಣ್ಣ ಬಸ್ಸು ತಂಗುದಾಣದ ಹಿಂಭಾಗದಲ್ಲಿ ಇದೆ.

ಕಪಿಲ ಜಲಪಾತ
ಕಪಿಲ ಜಲಪಾತವು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರದಿಂದ ಸುಮಾರು 8 ಕಿ.ಮೀ ದೂರ ಇರುವ ಕಬ್ಬರಗಿ ಎಂಬ ಗ್ರಾಮದಿಂದ ಸುಮಾರು 3 ಕಿ.ಮೀ ದೂರವಿದೆ. ನಂತರ ಕಾಲ್ನಡಿಗೆಯಲ್ಲಿ 1.5 ಕಿ.ಮೀ ದೂರ ಕ್ರಮಿಸಿ ಜಲಪಾತವನ್ನು ತಲುಪಬಹುದು.

ಕಲ್ಹತ್ತಿಗಿರಿ ಜಲಪಾತ
ಕಲ್ಹತ್ತಿಗಿರಿ ಜಲಪಾತವು ಬೀರೂರು ಹತ್ತಿರದ ಲಿಂಗದಹಳ್ಳಿಯಿಂದ ಕೆಮ್ಮಣ್ಣುಗುಂಡಿಗೆ ಹೋಗುವಾಗ ಸುಮಾರು 10 ಕಿ.ಮೀ ಮೊದಲು ಸಿಗುತ್ತದೆ. ಕೆಮ್ಮಣ್ಣುಗುಂಡಿ ಮುಖ್ಯ ರಸ್ತೆಯಿಂದ 1 ಕಿ.ಮೀ ಒಳಗಡೆ ಚಲಿಸಿದರೆ ಜಲಪಾತವನ್ನು ನೋಡಬಹುದು. ಈ ಜಲಪಾತವನ್ನು ವೀಕ್ಷಿಸಲು ಸಕಾ೯ರಿ ಅತಿಥಿ ಗೃಹದ ಪಡಸಾಲೆ ಉತ್ತಮವಾದ ಸ್ಥಳ. ಜಲಪಾತವು ಸುಮಾರು 300 ಅಡಿ ಎತ್ತರದಿಂದ ಧುಮುಕುತ್ತದೆ.

ಕೂಡ್ಲುತೀಥ೯ ಜಲಪಾತ

ಕೂಡ್ಲುತೀಥ೯ ಜಲಪಾತ ಹೆಬ್ರಿಯಿಂದ 20 ಕಿ.ಮೀ ದೂರದಲ್ಲಿದೆ. ಸೀತಾ ನದಿಯ ಉಗಮ ಸ್ಥಳವಾಗಿದ್ದು, ರಸ್ತೆ ಸಂಪಕ೯ದಿಂದ 4 ಕಿ.ಮೀ ದೂರದಲ್ಲಿದೆ. 4 ಕಿ.ಮೀ ಚಾರಣದ ನಂತರ ರಮ್ಯ ಮನೋಹರ ಜಲಪಾತವು ಎದುರುಗೊಳ್ಳುವುದು. ಚಾರಣದ ಮಧ್ಯ ಹಚ್ಚ ಹಸುರಿನ ಪರಿಸರವೂ ಮನಸ್ಸಿಗೆ ಮುದ ನೀಡುತ್ತದೆ. ಜಲಪಾತವನ್ನು ನೋಡಬಯಸುವವರು ಉಡುಪಿ ಅಥವಾ ಶಿವಮೊಗ್ಗದಿಂದ ಬಸ್ಸಿನಲ್ಲಿ ಪ್ರಯಾಣ ಬೆಳಸಬಹುದು.

ಕೆಸವೆ ಜಲಪಾತ

ಕೆಸವೆ ಜಲಪಾತವು ಸುಮಾರು 30 ಅಡಿಗಳಷ್ಟು ಎತ್ತರವಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಕೆಸವೆ ಗ್ರಾಮದ ಬಳಿ ಬರುತ್ತದೆ.

ಗೋಕಾಕ್ ಜಲಪಾತ

ಗೋಕಾಕ್ ಜಲಪಾತವು ಕನಾ೯ಟಕದ ಎರಡನೇ ದೊಡ್ಡ ಜಲಪಾತವಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕದಿಂದ 6 ಕಿ.ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭಾ ನದಿಯಿಂದ ಉಂಟಾಗುತ್ತದೆ. ಗೋಕಾಕ್ ಜಲಪಾತವು ಅಮೇರಿಕಾ ದೇಶದ ನಯಾಗಾರ ಜಲಪಾತವನ್ನು ಹೋಲುವುದರಿಂದ ಇದನ್ನುಭಾರತದ ನಯಾಗಾರ್ ಎಂದು ಕರೆಯಲಾಗುತ್ತದೆ. 180 ಅಡಿಯಿಂದ ದುಮುಕುವ ನೀರು ಇಲ್ಲಿ ನಯನ ಮನೋಹರ ದೃಶ್ಯವನ್ನು ನಿಮಿ೯ಸಿದೆ. ಜೂನ್ ಆರಂಭದಿಂದ ಡಿಸೆಂಬರ್ ವರೆಗೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಗೊಡಚಿನಮಲ್ಕಿ ಜಲಪಾತ

ಗೊಡಚಿನಮಲ್ಕಿ ಜಲಪಾತವು ಗೋಕಾಕ್ ಜಲಪಾತದಿಂದ ಸುಮಾರು 19 ಕಿ.ಮೀ ದೂರದಲ್ಲಿದೆ. ಗೋಕಾಕ್ ಪಟ್ಟಣದಿಂದ 8 ಕಿ.ಮೀ ದೂರ ಕ್ರಮಿಸಿ ಗೋಕಾಕ್ ಜಲಪಾತ ನೋಡಿದ ನಂತರ ಅಲ್ಲಿಂದ ಮುಂದುವರಿದು ಸುಮಾರು 9 ಕಿ.ಮೀ ಕ್ರಮಿಸಿದರೆ ಗೊಡಚಿಮಲ್ಕಿ ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮದಿಂದ ವಾಹನದಲ್ಲಿ ಮುಂದುವರೆದು 2 ಕಿ.ಮೀ ದೂರ ಕ್ರಮಿಸಿದರೆ ಜಲಪಾತವನ್ನು ತಲುಪಬಹುದಾಗಿದೆ.

ಚುಂಚಿ ಜಲಪಾತ

ಚುಂಚಿ ಜಲಪಾತ ಅಕಾ೯ವತಿ ನದಿಯು ಸೃಷ್ಟಿಸಿರುವ ಸುಂದರ ಜಲಪಾತ. ಇದು ಸುಮಾರು 70 ಅಡಿಗಳಷ್ಟು ಎತ್ತರವಿದ್ದು, ಕನಕಪುರದಿಂದ ಮೇಕೆದಾಟು ಸಂಗಮಕ್ಕೆ ಹೋಗುವ ದಾರಿಯಲ್ಲಿ ಮುಖ್ಯ ರಸ್ತೆಯಿಂದ 5 ಕಿ.ಮೀ ದೂರದಲ್ಲಿದೆ.

ಬಕ೯ಣ ಜಲಪಾತ

ಬಕ೯ಣ ಜಲಪಾತ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಇದು ಕನಾ೯ಟಕದ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಇದು ಸೀತಾ ನದಿಯಿಂದ ಸೃಷ್ಟಿಯಾಗುತ್ತದೆ ಹಾಗೂ ಒಟ್ಟು ಸುಮಾರು 850 ಅಡಿಗಳಾಗಿದೆ.

ಬೆಣ್ಣೆಹೊಳೆ ಜಲಪಾತ

ನದಿ : ಅಘನಾಶಿನಿ

ಜಲಪಾತದ ಎತ್ತರ : 200 ಅಡಿ

ಸ್ಥಳ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕು

ದೂರ : ಬೆಂಗಳೂರಿನಿಂದ ಸುಮಾರು 440 ಕಿ.ಮೀ ಶಿರಸಿಯಿಂದ ಸುಮಾರು 26 ಕಿ.ಮೀ.

ಸಮೀಪದ ಪಟ್ಟಣಗಳು : ಶಿರಸಿ

ಸಮೀಪದ ಪ್ರಮುಖ ಆಕಷ೯ಣೆಗಳು :ಉಂಚಳ್ಳಿ ಜಲಪಾತ, ಶಿರಸಿ, ಮಾರಿಕಾಂಬೆ ದೇವಾಲಯ, ಯಲ್ಲಾಪುರ, ಬನವಾಸಿ

ಮಗೆಬೈಲ್ ಜಲಪಾತ

ಮಗೆಬೈಲ್ ಜಲಪಾತ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗ ಎಂಬ ಹಳ್ಳಿ ಹತ್ತಿರ ಈ ಜಲಪಾತವಿದೆ.

ಮಲ್ಲಳ್ಳಿ ಜಲಪಾತವು ಸೋಮವಾರ ಪೇಟೆಯಿಂದ ಸುಮಾರು 25 ಕಿ.ಮಿ ದೂರದಲ್ಲಿದೆ.

ಸಿರಿಮನೆ ಜಲಪಾತ

ಸಿರಿಮನೆ ಜಲಪಾತವು ಶೃಂಗೇರಿ ತಾಲ್ಲೂಕಿನಲ್ಲಿದೆ. ಪುಟ್ಟ ಜಲಪಾತವಾದರೂ ಮಳೆಗಾಲದಲ್ಲಿ ನೋಡಲು ಅತಿ ಸುಂದರ ಶೃಂಗೇರಿ ಬಳಿಯ ಕಿಗ್ಗ ಮೂಲಕ ಇಲ್ಲಿಗೆ ತಲುಪಬಹುದು.

No comments:

Post a Comment