Monday, 26 March 2018

Indian Constitution

💦ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.

💦ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?
➡1921 ರಲ್ಲಿ.

💦ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?
➡ಲೋಕಸಭೆಯ ಸ್ಪೀಕರ್.

💦ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.

💦76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
➡ಅಟಾರ್ನಿ ಜನರಲ್.

💦ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
➡54 ನೇ.

💦ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?
➡333.

💦ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?
➡ 25-28.

💦324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
➡ಚುನಾವಣೆ ಆಯೋಗಕ್ಕೆ.

💦ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?
➡29.

💦371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?
➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.

💦ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ?
➡ಉಪರಾಷ್ಟ್ರಪತಿಯ.

💦ಸಂಸತ್ತಿನ ಮೇಲ್ಮನೇ ಯಾವುದು?
➡ರಾಜ್ಯಸಭೆ.

💦ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?
➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.

💦ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.

💦ಸಂಸತ್ತು ------ ಒಳಗೊಂಡಿದೆ?
➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.

💦ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?
➡315.

💦ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು?
➡35.

💦ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?
➡ಸಾರ್ವಜನಿಕ ಉದ್ದಿಮೆಗಳ ಸಮಿತಿ.

💦ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು?
➡ಸಿಎಜಿ ವರದಿಯನ್ನು ಪರಿಶೀಲಿಸುವುದು.

💦44 ನೇ ತಿದ್ದುಪಡಿಯಾದದ್ದು ಯಾವಾಗ?
➡1978 ರಲ್ಲಿ.

💦ಅಂದಾಜು ವೆಚ್ಚ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆ ಎಷ್ಟು?
➡30.

💦ಶಾಸನಸಭೆ ಕರೆಯುವುದು, ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.

💦ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವಅಧಿಕಾರ ---- ಗೆ ಇದೆ?
➡ ಸುಪ್ರೀಂಕೋರ್ಟ್.

💦ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು?
➡108.

💦ಯು ಪಿ ಎಸ್ ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು?
➡ರಾಷ್ಟ್ರಪತಿ.

💦ರಾಜ್ಯಸಭೆಯ ಅಧ್ಯಕ್ಷರು ಯಾರು?
➡ಉಪರಾಷ್ಟ್ರಪತಿ.

💦75 ನೇ ವಿಧಿ ಸಂಬಂಧಿಸಿರುವುದು ---- ಗೆ?
➡ಪ್ರಧಾನ ಮಂತ್ರಿ

💦ಲೋಕಸಭೆಯನ್ನು ---- ಎನ್ನುವರು
➡ಸಂಸತ್ತಿನ ಕೆಳಮನೆ.

💦ನ್ಯಾಯ ನಿರ್ಣಯ ನೀಡುವುದು ಯಾವುದು?
➡ ನ್ಯಾಯಾಂಗ.

💦ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?
➡5 ವರ್ಷ

💦ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?
➡75.

💦 ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
➡ಹೊಸದಿಲ್ಲಿ

💦ಲೋಕ ಅದಾಲತ್ ಎನ್ನುವುದು ಒಂದು -----. ➡ಜನತಾ ನ್ಯಾಯಾಲಯ.

💦ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು? ➡ಸರ್ವೋಚ್ಚ ನ್ಯಾಯಾಲಯ.

💦ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು.
➡ ಕಾನೂನುಗಳು.

💦ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು ------ ಎನ್ನುವರು.
➡ಏಕಸದನ ಪದ್ದತಿ.

💦ಸುವರ್ಣಸೌಧ ಎಲ್ಲಿದೆ?
➡ಬೆಳಗಾವಿ.

💦75 ನೇ ವಿಧಿ ಸಂಬಂಧಿಸಿರುವದು ------ಗೆ.
➡ಪ್ರಧಾನ ಮಂತ್ರಿ.

💦ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?
➡1929.

💦ಕೇಂದ್ರ ಮಂತ್ರಿ ಮಂಡಲ ----- ಗೆ ಬದ್ದವಾಗಿರುತ್ತದೆ.
➡ಲೋಕಸಭೆಗೆ.

💦ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು? ➡ಉಪರಾಷ್ಟ್ರಪತಿ.

💦ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?
➡5 ವರ್ಷ (56 ನೇ ವಿಧಿ).

💦ಅವಿರೋದವಾಗಿ ಆಯ್ಕೃಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ಸಭಾಪತಿ ಯಾರು?
➡ನೀಲಂ ಸಂಜೀವರೆಡ್ಡಿ

💦ರಾಷ್ಟ್ರಪತಿ ನಿಲಯಂ ಎಲ್ಲಿದೆ?
➡ಹೈದರಾಬಾದ್.

💦ಭಾರತದ ಸಂಸತ್ತಿನ ಎರಡು ಸದನಗಳು ಯಾವು?
➡1) ಲೋಕಸಭೆ.2) ರಾಜ್ಯಸಭೆ.

💦ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?
➡250.

💦2010 ರಲ್ಲಿ 21 ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಜಾರಿಗೊಳಿಸಲಾಯಿತು?
➡ಶಿಕ್ಷಣದ ಹಕ್ಕು

No comments:

Post a Comment