Sunday, 18 March 2018

Gk MCQ

ಾರ್ಷಿಕ ಯೋಜನೆಯ ಅವಧಿ ಯಾವುದು?

1)1980-85
2)1981-86
3)1985-90
4)1974-80

A✔️✔️

ಈ ಕೆಳಗಿನವುಗಳಲ್ಲಿ ಪತ್ರ ಹರಿತ್ತನ್ನು ಹೊಂದಿರುವ ಲೋಹ ಯಾವುದು?

1) ಮೆಗ್ನಿಷಿಯಂ
2) ಸೋಡಿಯಂ
3) ಕ್ಯಾಲ್ಸಿಯಂ
4) ಪೋಟ್ಯಾಷಿಯಂ

A✔️✔️

ಆಮ್ಲಗಳು ಲೋಹಗಳೊಂದಿಗೆ ವರ್ತಿಸಿ ಈ ಕೆಳಗಿನ ಯಾವ ಅನಿಲವನ್ನು ಬಿಡುಗಡೆ ಮಾಡುತ್ತವೆ?

1)ಜಲಜನಕ
2)ಆಮ್ಲಜನಕ
3)ಇಂಗಾಲದ ಡೈ ಆಕ್ಸೈಡ್
4)ಸಾರಜನಕ

A✔️✔️

ಎಲೆಯು ತಯಾರಿಸಿದ ಆಹಾರವನ್ನು ಸಸ್ಯದ ಎಲ್ಲಾ ಭಾಗಗಳಿಗೆ ಸಾಗಾಣಿಕೆ ಮಾಡುವ ಆಹಾರ ವಾಹಕ ಅಂಗಾಂಶ ಯಾವುದು?

1)ಕ್ಸೈಲಂ
2)ಫ್ಲೋಯಂ
3)ಪೇರಂಕೈಮಾ
4)ಏರಂಕೈಮಾ

B✔️✔️
━━━━━━━━━━━━━━
ಕೃಪೆ :- ಜ್ಞಾನಜ್ಯೋತಿ ಟೆಲಿಗ್ರಾಂ

━━━━━━━━━━━━━━
💥ಜ್ಞಾನಜ್ಯೋತಿ
ಚರ್ಚಾಕೂಟ💥
[UPSC & KPSC]
━━━━━━━━━━━━━━
# ದಿನಾಂಕ 15-3-2018 ರಂದು ಕೇಳಿದ ಕ್ವೀಜ್ ಪ್ರಶ್ನೆಗಳಿಗೆ  ಸರಿಯಾದ ಉತ್ತರಗಳು #
━━━━━━━━━━━━━━
ಯಾವುದೇ ವ್ಯಕ್ತಿಯನ್ನು ಅವನು ಹುಟ್ಟಿದ ಸ್ಥಳ, ಜಾತಿ, ಲಿಂಗ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬಾರದೆಂದು ತಿಳಿಸುವ ಸಂವಿಧಾನದ ವಿಧಿ ಯಾವುದು?

1)14ನೇ ವಿಧಿ
2)15ನೇ ವಿಧಿ
3)16ನೇ ವಿಧಿ
4)18ನೇ ವಿಧಿ

B✔️✔️

ಹೆಬಿಯಸ್ ಕಾರ್ಪಸ್ ಎಂಬುದು ಒಂದು ವಿಧದ ರಿಟ್ ಆಗಿದ್ದು ಇದು ಯಾವುದಾದರೂ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿದ್ದರೆ ಆತನನ್ನು 24 ಗಂಟೆಯೊಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕೆಂದು ತಿಳಿಸುತ್ತದೆ. ಹಾಗಾದರೆ ಹೆಬಿಯಸ್ ಕಾರ್ಪಸ್ ಪದದ ಅರ್ಥವೇನು?

1)to be certified
2)we order
3)to have a body
4)by what authority

C✔️✔️

ಅವಿರೋಧವಾಗಿ ಆಯ್ಕೆಯಾದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವವರು ಯಾರು?

1)ನೀಲಂ ಸಂಜೀವ ರೆಡ್ಡಿ
2)ಗ್ಯಾನಿ ಜೇಲ್ಸಿಂ್ಗ್
3)ಆರ್ ವೆಂಕಟರಾಮನ್
4)ಬಿ ಡಿ ಜತ್ತಿ

A✔️✔️

ಭಾರತದ ಅಟಾರ್ನಿ ಜನರಲ್ರ ವರ ಕಾರ್ಯಗಳು ಹಾಗೂ ಜವಾಬ್ದಾರಿಗಳು ಯಾವುವು?

ಎ)ಭಾರತ ಸರ್ಕಾರಕ್ಕೆ ರಾಷ್ಟ್ರಪತಿಗಳು ಸೂಚಿಸಿದ ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುವುದು.

ಬಿ)ರಾಷ್ಟ್ರಪತಿ ಸೂಚಿಸಿದ ಕಾನೂನಿಗೆ ಸಂಬಂಧಿಸಿದ ಕಾರ್ಯ ಗಳನ್ನು ಮಾಡುವುದು.

ಸಿ)ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಎಲ್ಲಾ ಮೊಕದ್ದಮೆಗಳಲ್ಲಿ ಭಾಗವಹಿಸುವುದು.

ಸಂಕೇತಗಳು:

1)ಎ ಮತ್ತು ಬಿ ಮಾತ್ರ
2)ಬಿ ಮತ್ತು ಸಿ ಮಾತ್ರ
3)ಎ ಮತ್ತು ಸಿ ಮಾತ್ರ
4)ಎ, ಬಿ ಮತ್ತು ಸಿ

D✔️

ಪ್ರಸ್ತುತ ರಾಜ್ಯಸಭಾ ಸದಸ್ಯರ ಸಂಖ್ಯೆ 245. ಇದರಲ್ಲಿ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?

1)4
2)8
3)10
4)12

A✔️✔️

ಈ ಕೆಳಗಿನವುಗಳಲ್ಲಿ ಅತಿ ಕಡಿಮೆ ಅವಧಿಯನ್ನು ಹೊಂದಿದ್ದ ಲೋಕಸಭೆ ಯಾವುದು?

1) 10ನೇ ಲೋಕಸಭೆ
2) 12ನೇ ಲೋಕಸಭೆ
3) 5ನೇ ಲೋಕಸಭೆ
4) 7ನೇ ಲೋಕಸಭೆ

B✔️✔️

ರಾಜ್ಯಸಭೆಯಲ್ಲಿ ಕಲಾಪಗಳು ನಡೆಯಲು ಹಾಜರಿರಬೇಕಾದ ಕನಿಷ್ಠ ಸದಸ್ಯರ ಸಂಖ್ಯೆ ಎಷ್ಟು?

1)30
2)25
3)40
4)50

B✔️✔️ರಾಜ್ಯಸಭೆ

ಭಾರತ ಸರ್ಕಾರದ ವೆಚ್ಚಕ್ಕೆಂದು ಸದನವು ಮಂಜೂರು ಮಾಡುವ ಹಣವನ್ನು ವಿನಿಯೋಗಿಸಿದರ ಬಗ್ಗೆ ಪರಿಶೀಲಿಸುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಎಷ್ಟು ಜನ ಸದಸ್ಯರನ್ನು ಒಳಗೊಂಡಿರುತ್ತದೆ?

1)20 ಜನ
2)30 ಜನ
3)27 ಜನ
4)22 ಜನ

D✔️✔️

ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಮೊದಲ ಬಾರಿಗೆ ಜಾರಿಗೆ ಬಂದ ವರ್ಷ ಯಾವುದು?

1)1960
2)1964
3)1965
4)1958

A✔️👆

ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಎಲ್ಲಾ ಕಾನೂನುಗಳಿಗೆ ಭಾರತದ ಎಲ್ಲಾ ನ್ಯಾಯಾಲಯಗಳು ಬದ್ಧವಾಗಿರಬೇಕೆಂದು ತಿಳಿಸುವ ಸಂವಿಧಾನದ ವಿಧಿ ಯಾವುದು?

1)140ನೇ ವಿಧಿ
2)142ನೇ ವಿಧಿ
3)141ನೇ ವಿಧಿ
4)143ನೇ ವಿಧಿ

C✔️✔️

ರಾಷ್ಟ್ರಪತಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಹೊಂದಿರುವ ರಾಜ್ಯ ಎಂದರೆ ಉತ್ತರ ಪ್ರದೇಶ. ಹಾಗಾದರೆ ಅತಿ ಕಡಿಮೆ ಮತಗಳನ್ನು ಹೊಂದಿರುವ ರಾಜ್ಯ ಯಾವುದು?

1)ಸಿಕ್ಕಿಂ
2)ಅರುಣಾಚಲ ಪ್ರದೇಶ
3)ತ್ರಿಪುರಾ
4)ಗೋವಾ

A✔️✔️

174ನೇ ವಿಧಿಯನ್ವಯ ರಾಜ್ಯ ಶಾಸಕಾಂಗದ ಅಧಿವೇಶನವನ್ನು ಕರೆಯುವ, ಮುಂದೂಡುವ ಹಾಗೂ ವಿಸರ್ಜಿಸುವ ಅಧಿಕಾರವನ್ನು ಹೊಂದಿರುವವರು ಯಾರು?

1)ಮುಖ್ಯಮಂತ್ರಿ
2)ವಿಧಾನಸಭಾ ಸ್ಪೀಕರ್
3)ರಾಜ್ಯಪಾಲ
4)ವಿಧಾನ ಪರಿಷತ್ ಸಭಾಪತಿ

C✔️✔️

ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ಪ್ರದಕ್ಷಿಣೆ ಹಾಕುವ (ಹಿಮ್ಮುಖ ಚಲನೆಯನ್ನು ಹೊಂದಿರುವ) ಗ್ರಹ ಯಾವುದು?

1)ಶುಕ್ರ
2)ಬುಧ
3)ಗುರು
4)ಶನಿ

A✔️✔️

ಭೂಮಿಯ ಕೇಂದ್ರಗೋಳದಲ್ಲಿ ಹೆಚ್ಚಾಗಿ ಕಂಡುಬರುವ ಖನಿಜಗಳೆಂದರೆ?

1)ಸಿಲಿಕೇಟ್ ಮತ್ತು ಮೆಗ್ನಿಷಿಯಂ

2)ಕಬ್ಬಿಣ ಮತ್ತು ನಿಕ್ಕಲ್

3)ಸಿಲಿಕೇಟ್ ಮತ್ತು ಕಬ್ಬಿಣ

4)ಮೆಗ್ನಿಷಿಯಂ ಮತ್ತು ಕಬ್ಬಿಣ

B✔️✔️👆

ಮೇಲಿಂದ ಮೇಲೆ ತಮ್ಮ ಕಾರ್ಯಾಚರಣೆಯಿಂದ ಭೂಗರ್ಭದಲ್ಲಿನ ಶಿಲಾವಸ್ತುಗಳನ್ನು ಹೊರಚಿಮ್ಮುವ ಜ್ವಾಲಾಮುಖಿಗಳಿಗೆ ಜಾಗೃತ ಜ್ವಾಲಾಮುಖಿ ಎನ್ನುವರು. ಹಾಗಾದರೆ ಈ ಕೆಳಗಿನವುಗಳಲ್ಲಿ ಜಾಗೃತ ಜ್ವಾಲಾಮುಖಿ ಯಾವುದು?

1)ಮೌಂಟ್ ಫ್ಯುಜಿಯಾಮ
2)ಕಿಲಿಮಂಜಾರೊ
3)ಮೌಂಟ್ ಆಕಾಂಕಾಗುವಾ
4)ಪಾರಿಕುಟಿನ್

D✔️✔️

ವಾಯುಮಂಡಲದ ಈ ಕೆಳಗಿನ ಯಾವ ಸ್ತರವನ್ನು ಉಲ್ಕೆಗಳು ಕರಗುವ ಸ್ತರವೆಂದು ಕರೆಯುವರು?

1)ಸಮೋಷ್ಣ ಮಂಡಲ
2)ಅಯಾನು ಮಂಡಲ
3)ಮಧ್ಯ ಮಂಡಲ
4)ಪರಿವರ್ತನ ಮಂಡಲ

C✔️✔️

ಉಪೋಷ್ಣ ವಲಯಗಳ ಹೆಚ್ಚು ಒತ್ತಡ ಪಟ್ಟಿಗಳಿಂದ ಸಮಭಾಜಕ ವೃತ್ತದ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಬೀಸುವ ಮಾರುತಗಳಿಗೆ ಏನೆಂದು ಕರೆಯುವರು?

1)ಪ್ರತಿವಾಣಿಜ್ಯ ಮಾರುತಗಳು
2)ವಾಣಿಜ್ಯ ಮಾರುತಗಳು
3)ಧೃವೀಯ ಮಾರುತಗಳು
4)ಮಾನ್ಸೂನ್ ಮಾರುತಗಳು

B✔️✔️

ಈ ಕೆಳಗಿನವುಗಳಲ್ಲಿ ದೇಶದ ಆರ್ಥಿಕತೆಯ ದೃಷ್ಟಿಯಿಂದ ಹೆಚ್ಚು ಬೆಲೆ ಬಾಳುವ ಸಸ್ಯಗಳನ್ನು ಒದಗಿಸುವ ಅರಣ್ಯಗಳು ಯಾವುವು?

1)ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳು

2)ಉಷ್ಣವಲಯದ ತೇವಯುವ ಸದಾ ಹಸಿರಾಗಿರುವ ಅರಣ್ಯಗಳು

3)ಮ್ಯಾಂಗ್ರೋವ್ ಅರಣ್ಯಗಳು

4)ಸೂಚಿಪರ್ಣದ ಅರಣ್ಯಗಳು

A✔️✔️

💥ಜ್ಞಾನಜ್ಯೋತಿ
ಚರ್ಚಾಕೂಟ💥

ಅರ್ಥಶಾಸ್ತ್ರದ ಪಿತಾಮಹ ಆ್ಯಡಂಸ್ಮಿತ್ ತಮ್ಮ `ವೆಲ್ತ್ ಆಫ್ ನೇಷನ್ಸ್’ ಕೃತಿಯನ್ನು ಪ್ರಕಟಗೊಳಿಸಿದ ವರ್ಷ ಯಾವುದು?

1)1772
2)1774
3)1776
4)1778

C✔️✔️

ಭಾರತ ಸರ್ಕಾರವು ಜುಲೈ 24, 1991 ರಂದು ಜಾರಿಗೆ ತಂದ ನೂತನ ಕೈಗಾರಿಕಾ ನೀತಿಯ ಉದ್ದೇಶಗಳು ಯಾವುವು?

ಎ)ವಿದೇಶಿ ಬಂಡವಾಳ ಹೂಡಿಕೆ ನೀತಿಯನ್ನು ಉದಾರೀಕರಣ ಗೊಳಿಸುವುದು.

ಬಿ)ಸಾರ್ವಜನಿಕ ರಂಗಕ್ಕೆ ಮೀಸಲಿಟ್ಟಿರುವ ಕೈಗಾರಿಕೆಗಳ ಸಂಖ್ಯೆಯನ್ನು ಕಡಿಮೆಗೊಳಿಸವುದು.

ಸಿ)ಮಧ್ಯವರ್ತಿ ಮತ್ತು ಬಂಡವಾಳ ಸರಕುಗಳಿಗೆ ಸಂಬಂಧಿಸಿದಂತೆ ಆಮದು ನೀತಿಯನ್ನು ಉದಾರೀಕ ರಿಸುವುದು.

ಡಿ)ಉತ್ಪಾದನಾ ಸಾಮಥ್ರ್ಯ ಮತ್ತು ಉದ್ಯೋಗಗಳಲ್ಲಿ ಪ್ರಗತಿ ಸಾಧಿಸುವುದು.

ಸಂಕೇತಗಳು:

1)ಎ ಮತ್ತು ಬಿ ಮಾತ್ರ
2)ಎ ಮತ್ತು ಸಿ ಮಾತ್ರ
3)ಎ, ಬಿ ಮತ್ತು ಸಿ ಮಾತ್ರ
4)ಮೇಲಿನ ಎಲ್ಲವೂ

D✔️✔️

No comments:

Post a Comment