ವಿರುದ್ಧಾರ್ಥಕ ಶಬ್ದಗಳು :
ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು.
ಕೆಳಗೆ ಕೆಲವು ಪ್ರಮುಖ ವಿರುದ್ಧ ಪದಗಳನ್ನು ನೀಡಲಾಗಿದೆ.
ಅಕ್ಷಯ x ಕ್ಷಯ
ಅದೃಷ್ಟ x ದುರಾದೃಷ್ಟ
ಅನುಭವ x ಅನನುಭವ
ಅನಾಥ x ನಾಥ
ಅಪೇಕ್ಷೆ x ಅನಪೇಕ್ಷೆ
ಅಭಿಮಾನ x ನಿರಭಿಮಾನ
ಅಭ್ಯಾಸ x ದುರಭ್ಯಾಸ (ಕೆಟ್ಟಅಭ್ಯಾಸ ಅರ್ಥದಲ್ಲಿ), ನಿರಭ್ಯಾಸ ( ಯಾವ ಅಭ್ಯಾಸ ಇಲ್ಲ ಎಂಬ ಅರ್ಥದಲ್ಲಿ)
ಅಮೃತ x ವಿಷ
ಅಮೂಲ್ಯ x ನಿಕೃಷ್ಟ (ಅನಮೂಲ್ಯ)
ಅರ್ಥ x ಅನರ್ಥ
ಅವಶ್ಯಕ x ಅನಾವಶ್ಯಕ
ಅಸೂಯೆ x ಅನಸೂಯೆ
ಆಚಾರ x ಅನಾಚರ
ಆಡಂಬರ x ನಿರಾಡಂಬರ
ಆತಂಕ x ನಿರಾತಂಕ
ಆದರ x ಅನಾದರ
ಆಧುನಿಕ x ಪ್ರಾಚೀನ
ಆಯಾಸ x ಅನಾಯಾಸ
ಆರಂಭ x ಅಂತ್ಯ
ಆರೋಗ್ಯ x ಅನಾರೋಗ್ಯ
ಆಸೆ x ನಿರಾಸೆ
ಆಹಾರ x ನಿರಾಹಾರ
ಇಂಚರ x ಕರ್ಕಶ
ಇಂದು x ನಾಳೆ (ನಿನ್ನೆ)
ಇಹಲೋಕ x ಪರಲೋಕ
ಉಗ್ರ x ಶಾಂತ
ಉಚ್ಚ x ನೀಚ
ಉತ್ತಮ x ಕಳಪೆ (ಅಧಮ)
ಉತ್ಸಾಹ x ನಿರುತ್ಸಾಹ
ಉದಾರ x ಅನುದಾರ
ಉನ್ನತ x ಅವನತ
ಉನ್ನತಿ x ಅವನತಿ
ಉಪಕಾರ x ಅಪಕಾರ
ಉಪಯೋಗ x ನಿರುಪಯೋಗ
ಉಪಾಯ x ನಿರುಪಾಯ
ಉಪಾಹಾರ x ಪ್ರಧಾನಾಹಾರ
ಊರ್ಜಿತ x ಅನೂರ್ಜಿತ
ಒಂಟಿ x ಜೊತೆ (ಗುಂಪು)
ಒಡೆಯ x ಸೇವಕ
ಒಣ x ಹಸಿ
ಕನಸು x ನನಸು
ಕನ್ಯೆ x ಸ್ತ್ರೀ
ಕಲ್ಮಶ x ನಿಷ್ಕಲ್ಮಶ
ಕಾಲ x ಅಕಾಲ
ಕೀರ್ತಿ x ಅಪಕೀರ್ತಿ
ಕೃತಜ್ಞ x ಕೃತಘ್ನ
ಖಂಡ x ಅಖಂಡ
ಗೌರವ x ಅಗೌರವ
ಚಲ x ನಿಶ್ಚಲ
ಚಿಂತೆ x ನಿಶ್ಚಿಂತೆ
ಚೇತನ ಅಚೇತನ
ಜಂಗಮ x ಸ್ಥಾವರ
ಜನ x ನಿರ್ಜನ
ಜನನ x ಮರಣ
ಜಯ x ಅಪಜಯ
ಜಲ x ನಿರ್ಜಲ
ಜಾತ x ಅಜಾತ
ಜಾತಿ x ವಿಜಾತಿ
ಜ್ಞಾನ x ಅಜ್ಞಾನ
ಟೊಳ್ಳು x ಗಟ್ಟಿ
ತಂತು x ನಿಸ್ತಂತು
ತಜ್ಞ x ಅಜ್ಞ
ತಲೆ x ಬುಡ
ತೇಲು x ಮುಳುಗು
ದಾಕ್ಷಿಣ್ಯ x ನಿರ್ದಾಕ್ಷಿಣ್ಯ
ಧೈರ್ಯ x ಅಧೈರ್ಯ
ನಂಬಿಕೆ x ಅಪನಂಬಿಕೆ
ನಗು x ಅಳು
ನಾಶ x ಅನಾಶ
ನಿಶ್ಚಿತ x ಅನಿಶ್ಚಿತ
ನೀತಿ x ಅನೀತಿ
ನ್ಯಾಯ x ಅನ್ಯಾಯ
ಪ್ರಜ್ಞೆ x ಮೂರ್ಚೆ
ಪಾಪ x ಪುಣ್ಯ
ಪುರಸ್ಕಾರ x ತಿರಸ್ಕಾರ
No comments:
Post a Comment