Sunday, 25 February 2018

ವಿಭಕ್ತಿ ಪ್ರತ್ಯಯಗಳು || Kannada grammar

➖➖➖➖➖➖➖➖➖➖➖
🔘 ವಿಭಕ್ತಿ ಪ್ರತ್ಯಯಗಳು 🔘
➖➖➖➖➖➖➖➖➖➖➖

ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.

ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.

ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು”

ಅಥವಾ “ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.”

ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ…

ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು…

➖➖➖➖➖➖➖➖➖➖➖
💢 ವಿಭಕ್ತಿ ಪ್ರತ್ಯಯಗಳ ವಿಧಗಳು 💢
➖➖➖➖➖➖➖➖➖➖➖

ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ
ಎಂಟು ವಿಧಗಳಿವೆ.

ವಿಭಕ್ತಿಯ ಹೆಸರು +ಪ್ರತ್ಯಯ

1)ಪ್ರಥಮ-ಉ
2)ದ್ವೀತಿಯಾ-ಅನ್ನು
3)ತೃತೀಯ -ಇಂದ
4)ಚತುರ್ಥಿ -ಇಗೆ
5)ಪಂಚಮಿ -ದೆಸೆಯಿಂದ
6)ಷಷ್ಠಿವಿಭಕ್ತಿ -ಅ
7)ಸಪ್ತಮಿ -ಅಲ್ಲಿ
8)ಸಂಭೋಧನ-ಏ,ಇರಾ

ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟು

➖➖➖➖➖➖➖➖➖➖➖

💢ವಿಭಕ್ತಿಗಳು ಕಾರಕಾರ್ಥಗಳು ಪ್ರತ್ಯಯಗಳು💢

1)ಪ್ರಥಮ  ಉ
2)ದ್ವಿತೀಯ - ಅನ್ನು
3)ತೃತೀಯ - ಇಂದ
4)ಚತುರ್ಥೀ ಸಂಪ್ರಧಾನ ಗೆ
5)ಪಂಚಮಿ ಅಪಧಾನ- ದೆಸೆಯಿಂದ
6)ಷಷ್ಠಿ ಸಂಭಂಧ -ಅ
7)ಅಪ್ತಮಿ ಅಧಿಕರಣ -ಅಲ್ಲಿ

8)ಸಂಬೋಧನ ಅಭಿಮುಖೀ ಏ.ಆಕರಣ
➖➖➖➖➖➖➖➖➖➖➖

💢 ಹಳಗನ್ನಡ ವಿಭಕ್ತಿ ಪ್ರತ್ಯಯಗಳು💢

ವಿಭಕ್ತಿ ಪ್ರತ್ಯಯ ರೂಪಗಳು

1)ಪ್ರಥಮಾ ಮ್ ಮ್ ರಾಮಂ
2)ದ್ವಿತೀಯಾ ಅಮ್ ರಾಮನಂ
3)ತೃತೀಯ ಇಮ್ ರಾಮನಿಂ
4)ಚತುರ್ಥೀ ಗೆ ರಾಮಂಗೆ
5)ಪಂಚಮಿ ಅತ್ತಣಿಂ ರಾಮನತ್ತಣಿಂ
6)ಷಷ್ಠಿ ಅ ರಾಮನ
7)ಸಪ್ತಮಿ ಒಳ್ ರಾಮನೊಳ್
➖➖➖➖➖➖➖➖➖➖➖

No comments:

Post a Comment