ಭಾರತದ ಸಂವಿಧಾನದ ಬಗ್ಗೆ ಮಾಹಿತಿ
ಭಾರತದ ಸಂವಿಧಾನ
ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ಡಿಸೆಂಬರ್ ೯, ೧೯೪೭ ರಿಂದ ನವೆಂಬರ್ ೨೬, ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ ೨೬, ೧೯೫೦ರಂದುಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವಆಚರಿಸಲಾಗುತ್ತದೆ. ಭಾರತದ ಸಂವಿಧಾನ ಇಲ್ಲಿಯ ವರಿಗಿನ ಮೂಲದ ಪ್ರಕಾರ ೩೬೫( ನಂತರ೪೬೭) ವಿಧಿಗಳು ೨೨ (ನಂತರ೨೫)ಭಾಗಗಳಲ್ಲಿಯೂ, ೮(ನಂತರ ೧೨) ಅನುಚ್ಛೇದಗಳನ್ನೂ,, ೧೧೮ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.
ಭಾರತ
ಈ ಲೇಖನದ ವರ್ಗ:
ಭಾರತ ದೇಶದ
ಸರ್ಕಾರ ಮತ್ತು ರಾಜಕೀಯ
ಸಂವಿಧಾನ
ಮೂಲಭೂತ ಹಕ್ಕುಗಳು,
ಸಿದ್ಧಾಂತಗಳು
ಮತ್ತು ಮೂಲಭೂತ ಕರ್ತವ್ಯಗಳು
ರಾಷ್ಟ್ರಪತಿbyv
ರಮಾನಾಥ ಕೋವಿಂದ್
ಉಪರಾಷ್ಟ್ರಪತಿ
ಹಮೀದ್ ಅನ್ಸಾರಿ
ಸರ್ಕಾರ
ಪ್ರಧಾನ ಮಂತ್ರಿ
ನರೇಂದ್ರ ಮೋದಿ
ಉಪಪ್ರಧಾನಿ
ಸಚಿವರು
ಸಂಸತ್ತು
ರಾಜ್ಯ ಸಭೆ
ಸಭಾಧ್ಯಕ್ಷ
ಹಮೀದ್ ಅನ್ಸಾರಿ
ಲೋಕ ಸಭೆ
ಸಭಾಧ್ಯಕ್ಷ
ಸುಮಿತ್ರಾ ಮಾಹಜನ್
ಇತ್ತೀಚಿನ ಚುನಾವಣೆ
೨೦೦೪ರ ಭಾರತದ ಸಾರ್ವತ್ರಿಕ ಚುನಾವಣೆ
ವಿಧಾನಸಭೆ ಚುನಾವಣೆಗಳು
ರಾಜಕೀಯ ಪಕ್ಷಗಳು
ಸರ್ವೋಚ್ಛ ನ್ಯಾಯಾಲಯ
ಮುಖ್ಯನ್ಯಾಯಮೂರ್ತಿ
ಹೆಚ್.ಎಲ್ ದತ್ತು
ಉಚ್ಛ ನ್ಯಾಯಾಲಯಗಳು
ಜಿಲ್ಲಾ ನ್ಯಾಯಾಲಯಗಳು
ರಾಜ್ಯಗಳು ಮತ್ತು ಪ್ರಾಂತ್ಯಗಳು
ಮಾನವ ಹಕ್ಕುಗಳು
ರಾಜಕೀಯ ಹಗರಣಗಳು
ಅಂತರರಾಷ್ಟ್ರೀಯ ಸಂಬಂಧಗಳು
ವೀಕ್ಷಿಸಿ • ಚರ್ಚಿಸಿ • ಸಂಪಾದಿಸಿ
ಸಂವಿಧಾನದ ಮಹತ್ವ/ಪ್ರಾಮುಖ್ಯತೆಸಂಪಾದಿಸಿ
ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನುಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ.
ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು - ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನುಖಚಿತವಾಗಿ ವಿಧಿಸುತ್ತದೆ .
ಸಂವಿಧಾನವು ೩೭೦ನೇ ವಿಧಿ ಮತ್ತು ಸಂವಿಧಾನ ಆಜ್ಞೆ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಕುರಿತು), ೧೯೫೪ರಲ್ಲಿ ಒದಗಿಸಲಾದ ಕೆಲವು ಅಪವಾದಗಳು ಮತ್ತು ಬದಲಾವಣೆಗೊಳಪಟ್ಟು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್
No comments:
Post a Comment