Monday, 6 August 2018

ಎಚ್ಚರ. ಹಗುರವಾಗಿ ತೆಗೆದುಕೊಳ್ಳಬೇಡಿ. ಪೂರ್ತಿ ಓದಿ.*

ಎಚ್ಚರ. ಹಗುರವಾಗಿ ತೆಗೆದುಕೊಳ್ಳಬೇಡಿ. ಪೂರ್ತಿ ಓದಿ.*

ಕಳೆದ ಕೆಲವು ತಿಂಗಳುಗಳಿಂದ ಬಿಡುಗಡೆಯಾಗುತ್ತಿರುವ ಮೊಬೈಲ್ ಗಳಲ್ಲಿ ಹಲವಾರು ಮೊಬೈಲ್ ಗಳು ಸ್ಪೋಟಗೊಂಡು ಹಲವರಿಗೆ ಸುಟ್ಟ ಗಾಯಗಳಾದ ಅಥವಾ ಸಣ್ಣಪುಟ್ಟ ಹಾನಿಯಾದ ಮತ್ತು ಜೀವ ಕಳೆದುಕೊಂಡ ಘಟನೆಗಳು ಕೇಳುತ್ತಿದ್ದೇವೆ. ಇದನ್ನು ಯಾರೇ ಆಗಲಿ ಸಡಿಲವಾಗಿ ತೆಗೆದುಕೊಳ್ಳಬೇಡಿ.

  ಈಗ ಬರುತ್ತಿರುವ ಮೋಬೈಲ್ ಗಳಲ್ಲಿ ಬ್ಯಾಟರಿಯ ಗಾತ್ರ, ಪ್ರೊಸೆಸರ್, ಡಿಸ್ಪ್ಲೆ ಗಳು ಒಂದಕ್ಕೊಂದು ಹೊಂದಾಣಿಕೆಯಾಗದೆ ಅಥವಾ ಬ್ಯಾಟರಿ ಯ ಗುಣಮಟ್ಟ ಕಳಪೆಯಾಗಿದ್ದರೆ ಇಂತಹ ಘಟನೆ ನಡೆಯುವುದು ಕಟ್ಟಿಟ್ಟ ಬುತ್ತಿ. ಮತ್ರು ಮೊಬೈಲನ್ನು ಚಾರ್ಜ್ ಮಾಡಲಿಟ್ಟು Headphones ಬಳಸುವುದರಿಂದ ನೇರವಾಗಿ ವಿದ್ಯುತ್ ನಮ್ಮ ಕಿವಿಗೆ ಅಂಟಿರುತ್ತದೆ.  ಇನ್ನು ಇದರಲ್ಲಿ ಚಿಕ್ಕ ಅಥವಾ ದೊಡ್ಡ Brand ಎಂಬ ವಾದ ಮಾಡಬೇಡಿ. ಅದೆಷ್ಟೋ IPhone, Samsung 40,000 ₹ ಬೆಲೆಬಾಳುವ ಮೊಬೈಲ್ ಗಳೂ ಸಹ ಸ್ಪೋಟಗೊಂಡ ಘಟನೆ ಲೆಕ್ಕವಿಲ್ಲದಷ್ಟು.

   ನಮ್ಮಲ್ಲಿ ಹೆಚ್ಚು Samsung, Mi, Asus, Oppo ಮುಂತಾದ Brand ಗಳು. ಇವುಗಳಲ್ಲಿ ನಾವು ಆ ಮೊಬೈಲ್ ಗಳ‌ ಶಕ್ತಿಗಿಂತ ಹೆಚ್ಚು ಅದರಲ್ಲಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ದಿನದ 24 ಘಂಟೆಗಳ ಕಾಲ Internet On ಆಗಿರುತ್ತದೆ.‌ Whatsapp Facebook ಗಳನ್ನು ಚಿಕ್ಕ Application ಗಳೆಂದು ಭಾವಿಸದಿರಿ. ಅವುಗಳು ನಮ್ಮ ಮೊನೈಲಿನ ಅರ್ಧಕ್ಕಿಂತ ಹೆಚ್ಚು ಭಾಗ ಆವರಿಸಿರುತ್ತದೆ. ಇನ್ನು ಹೆಚ್ಚು Size ನ ಗೇಮ್ಸ್ ಹಾಕದರೆ ಪ್ರೊಸೆಸರ್ ನ ಮೇಲೆ ಬಲ‌ ಹೆಚ್ಚಾಗುತ್ತಾ ಹೋಗುತ್ತದೆ.‌ ತಹ ಹಲವು ಕಾರಣಗಳಿಂದ ನಮ್ಮ ಮೊಬೈಲ್ ಸ್ಪೋಟಗೊಳ್ಳುವ ಸಂಭವವಿದೆ. ಇದರಿಂದ ಮುನ್ನೆಚ್ಚರಿಕೆಗಾಗಿ ಕೆಲವು ಉಪಾಯ ಎಲ್ಲರ ಒಳಿತಿಗೋಸ್ಕರ ಇಲ್ಲಿದೆ.

1. ಚಾರ್ಜ್ ಮಾಡಲು ಇಟ್ಟು ಮೊಬೈಲ್ ಬಳಸುವುದರಿಂದ ದೂರವಿರಿ. ಬ್ಯಾಟರಿಯ ಮೇಲೆ ಒತ್ತಡ ಹೆಚ್ಚಾಗಿ ಬಿಸಿಯಾಗಿ ಸ್ಪೋಟಿಸಬಹುದು.

2.  ಚಾರ್ಜ್ ಮಾಡಲು ಇಟ್ಟ ಮೊಬೈಲ್ ನಲ್ಲಿ Headphones ಹಾಕಿ ಬಳಸದಿರಿ. headphone ಮತ್ತು Charging connector ಗೆ ಒಳಗಿನಿಂದ ನೇರ ಸಂಪರ್ಕವಿರುವುದರಿಂದ ಸ್ವಲ್ಪ ನೀರಿನ ಅಂಶ ಬೆವರು ತಾಗಿದರೂ ವಿದ್ಯುತ್ ಹರಡುವ ಸಂಭವವಿದೆ.

3. ನೀರು ತಾಗಿದ ಕೈಯಿಂದ ಚಾರ್ಜ್ ಮಾಡುವ ಮೊಬೈಲ್ ಹಿಡಿಯಬೇಡಿ.

4. ನಿಮ್ಮ ಮೊಬೈಲ್ ಹೆಚ್ಚು ಬಳಕೆಯಿಂದ ಬಿಸಿಯಾದರೆ ತಕ್ಷಣ Internet ಬಂದ್ ಮಾಡಿ.

5. ಬಿಸಿಯಾದ ಮೊಬೈಲ್ ನಲ್ಲಿ ಕರೆ ಬಂದರೆ ಹೆಚ್ಚು ಹೊತ್ತು ಮಾತನಾಡಬೇಡಿ.

6. ಕಿವಿಗೆ ನೀರು ತಾಗಿದ್ದರೆ ಕರೆ ಸ್ವೀಕರಿಸುವಾಗ ಎಚ್ಚರ.

7. ರಾತ್ರಿ‌ ಮಲಗುವಾಗ ಮೊಬೈಲ್ ದೂರವಿಟ್ಟು ಮಲಗಿ.

8. ರಾತ್ರಿ ಮೋಬೈಲನ್ನು ಚಾರ್ಜ್ ಮಾಡಲು ಇಟ್ಟು ಮಲಗಬೇಡಿ.

9. ಮೊಬೈಲ್ 3, 3:30 ಘಂಟೆಗಿಂತ ಹೆಚ್ಚು ಚಾರ್ಜ್ ಮಾಡಬೇಡಿ.

10. ಉತ್ತಮ ಗುಣಮಟ್ಟದ ಚಾರ್ಜರ್ ಖರೀದಿಸಿ.

11. ಮೋಬೈಲನ್ನು ಚಿಕ್ಕ ಮಕ್ಕಳ ಬಳಿ ಇಡಬೇಡಿ. ಅದರಿಂದ ಬರುವ ವಿಕಿರಣಗಳು ಮಕ್ಕಳ ಮೆದುಳಿಗೆ ಮಾರಕ.

12. ಮೊಬೈಲ್ ಚಾರ್ಜ್ ಇಡುವಾಗ ಬಟ್ಟೆಯ ಮೇಲೆ ಅಥವಾ ತಲೆ‌ದಿಂಬಿನ ಮೇಲೆ ಇಡಬೇಡಿ.

13. ಮೊಬೈಲನ್ನು ತಲೆದಿಂಬಿನ ಕೆಳಗೆ ಯಾವತ್ತೂ ಇಡಬೇಡಿ. ಬ್ಯಾಟರಿಗೆ ಮತ್ತು ಪ್ರೊಸೆಸರ್ ಗೆ ಗಾಳಿ ಸಿಗದೆ ಒತ್ತಡದಿಂದ ಮೊಬೈಲ್ ಬಿಸಿಯಾಗುತ್ತದೆ.

14. ಕೊನೆಯಲ್ಲಿ ಇನ್ನೊಮ್ಮೆ ಮೊಬೈಲ್ ಬಿಸಿಯಾದಾಗ Internet ಬಳಸಬೇಡಿ. ಅಧಿಕ ಸಮಯ ಮೊಬೈಲಿನ Data connection off ಮಾಡಿ ಇಡಿ.

ಧನ್ಯವಾದಗಳು. ತಮ್ಮ ಎಲ್ಲ ಸಹಪಾಠಿ, ಸಂಬಂಧಿಕರಿಗೆ Forward ಮಾಡಿ. ಆಗುವ ಅನಾಹುತಿಂದ ದೂರವಿಡಿ.

No comments:

Post a Comment