ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು
ಭಾರತದ ಒಟ್ಟು ಗಡಿ 21,300 ಕಿ.ಮೀ.
— ಭೂ ಗಡಿ: 15,200 ಕಿ.ಮೀ.
— ಜಲ ಗಡಿ: 6,100 ಕಿ.ಮೀ.
— ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ: 7,516.6 ಕಿ.ಮೀ.
★ ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳು ಒಟ್ಟು 7, ಅವುಗಳು
*.ವಾಯುವ್ಯದಲ್ಲಿ : ಪಾಕಿಸ್ತಾನ ಮತ್ತು ಅಫಘಾನಿಸ್ತಾನ.
*.ಉತ್ತರದಲ್ಲಿ : ಚೀನಾ, ನೇಪಾಳ ಮತ್ತು ಭೂತಾನ್.
*.ಪೂರ್ವದಲ್ಲಿ : ಮಯನ್ಮಾರ್ ಹಾಗು ಬಾಂಗ್ಲಾದೇಶ.
★ ಭಾರತ ಮತ್ತು ಪಾಕಿಸ್ತಾನ:
*. ಅಂತರ್ರಾಷ್ಟ್ರೀಯ ಗಡಿರೇಖೆ:— ರಾೄಡ್ ಕ್ಲಿಪ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3310 ಕಿ.ಮೀ.
*. ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ.
*. ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು:— ಗುಜರಾತಿನ ಕಛ್ ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.
★ ಭಾರತ ಮತ್ತು ಚೀನಾ:
*. ಅಂತರ್ರಾಷ್ಟ್ರೀಯ ಗಡಿರೇಖೆ:— ಮ್ಯಾಕ್ ಮಹೋನ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3917 ಕಿ.ಮೀ.
*. ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ,
ಅರುಣಾಚಲ ಪ್ರದೇಶ.
*. ಚೀನಾದೊಂದಿಗಿನ ವಿವಾದಿತ ಪ್ರದೇಶಗಳು:— ಆಕ್ ಸಾಯ್ ಚಿನ್ (ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ.
★ ಭಾರತ ಮತ್ತು ಅಫಘಾನಿಸ್ತಾನ:
*. ಅಂತರ್ರಾಷ್ಟ್ರೀಯ ಗಡಿರೇಖೆ:— ಡ್ಯೂರಾಂಡ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 80 ಕಿ.ಮೀ.
*. ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: — ಜಮ್ಮು ಕಾಶ್ಮೀರ.
★ ಭಾರತ ಮತ್ತು ನೇಪಾಳ:
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1752 ಕಿ.ಮೀ.
*. ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ.
*. ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:— ಕಪಾಲಿನಿ, ಸುಸ್ತಾ.
★ ಭಾರತ ಮತ್ತು ಭೂತಾನ್:
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 587 ಕಿ.ಮೀ.
*. ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ
.★ ಭಾರತ ಮತ್ತು ಮಯನ್ಮಾರ್:
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1536 ಕಿ.ಮೀ.
*. ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ.
*. ಕೆಲವೆಡೆ ‘ಇರವಾಡಿ ನದಿ’ಯು ಅಂತರಾಷ್ಟ್ರೀಯ ಗಡಿಯಾಗಿದೆ.
★ ಭಾರತ ಮತ್ತು ಬಾಂಗ್ಲಾದೇಶ:
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 4096 ಕಿ.ಮೀ.
*. ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ.
No comments:
Post a Comment