Wednesday, 25 July 2018

ನಿಮಗಿವು ಗೊತ್ತಿರಲಿ....

*ನಿಮಗಿವು ಗೊತ್ತಿರಲಿ....              

*ಅಷ್ಟಾವರಣಗಳು ಯಾವವು?*
ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ
*ಪಂಚ ಆಚಾರಗಳು ಯಾವವು?*  ಶಿವಾಚಾರ, ಸದಾಚಾರ, ಲಿಂಗಾಚಾರ, ಭೃತ್ಯಾಚಾರ, ಗಣಾಚಾರ
*ಷಟಸ್ಥಲಗಳು ಯಾವವು?*
ಭಕ್ತ , ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ
*ಅಷ್ಟಮದಗಳು ಯಾವವು?*
ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದ
*ಬಸವಣ್ಣನವರ ಕಾರ್ಯಸ್ಥಳ ಯಾವುದು?*
ಬಸವ ಕಲ್ಯಾಣ
*ಅಕ್ಕಮಹಾದೇವಿ ಜನ್ಮಸ್ಥಳ ಯಾವುದು?*
ಉಡುತಡಿ
*ಉಡತಡಿ ಸದ್ಯಕ್ಕೆ ಯಾವ ಜಿಲ್ಲೆಯಲ್ಲಿದೆ?*
ಶಿವಮೊಗ್ಗ ಜಿಲ್ಲೆ
*ಅಲ್ಲಮ ಪ್ರಭುಗಳ ಜನ್ಮಸ್ಥಳ?*
ಬಳ್ಳಿಗಾವಿ
*ಅಲ್ಲಮ ಪ್ರಭುದೇವರ ಪೂರ್ವಾಶ್ರಮದ ಜಾತಿ ಯಾವುದು?*
ನಟವರ ಜಾತಿ
*ಅಲ್ಲಮ ಪ್ರಭುಗಳ ತಂದೆ ಹೆಸರು ಏನು?*
ನಿರಹಂಕಾರ
*ಅಲ್ಲಮ ಪ್ರಭುಗಳ ತಾಯಿ ಹೆಸರು ಏನು?*
ಸುಜ್ಞಾನಿದೇವಿ
*ಅಲ್ಲಮ ಪ್ರಭುಗಳ ದೀಕ್ಷಾಗುರುಗಳು ಯಾರು?*
ಅನಿಮಿಷದೇವರು
*ವ್ಯೋಮಕಾಯ ಬಿರುದು ಪಡೆದವರು ಯಾರು?*
ಅಲ್ಲಮಪ್ರಭುದೇವರು
*ಅನುಭವ ಮಂಟಪದ ಪ್ರಥಮ ಅಧ್ಯಕ್ಷರು ಯಾರು?*
ಅಲ್ಲಮಪ್ರಭುದೇವರು
*ಅನುಭವ ಮಂಟಪದ ದ್ವೀತೀಯ ಅಧ್ಯಕ್ಷರು ಯಾರು?*
ಚನ್ನ ಬಸವಣ್ಣನವರು
*ಅನುಭವ ಮಂಟಪದ ತೃತೀಯ ಅಧ್ಯಕ್ಷರು ಯಾರು?*
ಸಿದ್ಧರಾಮೇಶ್ವರರು
*ಕನ್ನಡದ ಪ್ರಥಮ ಕವಿಯತ್ರಿ ಯಾರು?*
ಅಕ್ಕಮಹಾದೇವಿಯವರು
*ಶರಣನಾಗಿ ಮಾರ್ಪಟ್ಟ ಕಾಶ್ಮೀರದ ರಾಜನ ಹೆಸರು ಯಾವುದು?* 
ಮಹಾದೇವ ಭೂಪಾಲ
*ಬಸವಣ್ಣನವರ ತಂದೆ ಹೆಸರು ಏನು?*
ಮಾದರಸ
*ಬಸವಣ್ಣನವರ ತಾಯಿ ಹೆಸರು ಏನು?*
ಮಾದಲಾಂಬಿಕೆ
*ಅಕ್ಕಮಹಾದೇವಿಯವರ ತಂದೆ ಹೆಸರು ಏನು?*
ನಿರ್ಮಲಶೆಟ್ಟಿ
*ಅಕ್ಕಮಹಾದೇವಿಯವರ ತಾಯಿ ಹೆಸರು ಏನು?*
ಸುಮತಿ
*ಬಸವಣ್ಣವನರು ಮನೆ ಬಿಟ್ಟಾಗ ವಯಸ್ಸು ಎಷ್ಟು?*
ಎಂಟು ವರುಷ
*ಅಕ್ಕಮಹಾದೇವಿಯವರ ವಚನಾಂಕಿತ ಯಾವುದು?*
ಚನ್ನಮಲ್ಲಿಕಾರ್ಜುನ
*ಗುಹೇಶ್ವರ ಇದು ಯಾರ ವಚನಾಂಕಿತ?*
ಅಲ್ಲಮಪ್ರಭುದೇವರದು
*ಚನ್ನಬಸವಣ್ಣನವರ ವಚನಾಂಕಿತ ಯಾವುದು?*
ಕೂಡಲಚನ್ನಸಂಗಮದೇವ
*ಬಸವಣ್ಣವನರು ಸೋದರಳಿಯ ಯಾರು?*
ಚನ್ನಬಸವಣ್ಣನವರು
*ಮಾರಯ್ಯಪ್ರಿಯ ಅಮರೇಶ್ವರಲಿಂಗ ಇದು ಯಾರ ವಚನಾಂಕಿತ?*
ಆಯ್ದಕ್ಕಿ ಲಕ್ಕಮ್ಮನವರದು
*ಅಕ್ಕನಾಗಮ್ಮನ ಮಗ ಯಾರು?*
ಚನ್ನಬಸವಣ್ಣನವರು
*ಚನ್ನಬಸವಣ್ಣನವರ ತಂದೆ ಯಾರು?*
ಶಿವಸ್ವಾಮಿಯವರು
*ಅಕ್ಕನಾಗಮ್ಮನ ಪತಿಯ ಹೆಸರು?*
ಶಿವಸ್ವಾಮಿಯವರು
*ಅಕ್ಕನಾಗಮ್ಮನ ವಚನಾಂಕಿತ ಯಾವುದು?*
ಬಸವಣ್ಣಪ್ರಿಯ ಚನ್ನಸಂಗ
*ವೀರ ಗಣಾಚಾರಿ ಯಾರ ಬಿರುದು?*
ಮಡಿವಾಳ ಮಾಚಿದೇವರು
*ಕಲಿದೇವರ ದೇವ ಇದು ಯಾರ ವಚನಾಂಕಿತ?*
ಮಡಿವಾಳ ಮಾಚಿದೇವರು
*ಅನುಭವ ಮಂಟಪದಲ್ಲಿ ಅಂತರ್ಜಾತಿ ವಿವಾಹಕ್ಕೋಳಗಾದ ವಧುವರರು ಹೆಸರು?*
ಶೀಲವಂತ ಹಾಗೂ ಲಾವಣ್ಯವತಿ
*ಶೀಲವಂತನ ತಂದೆ ಯಾರು?*
ಹರಳಯ್ಯನವರು
*ಶೀಲವಂತನ ತಾಯಿ ಯಾರು?*
ಕಲ್ಯಾಣಮ್ಮನವರು
*ಲಾವಣ್ಯವತಿಯ ತಂದೆ ಯಾರು?* 
ಮಧುವರಸರು
*ಕಲ್ಯಾಣ ಕ್ರಾಂತಿಗೆ ಕಾರಣ?*
ಅಂತರ್ಜಾತಿ ವಿವಾಹ ಎಂದು ಕರೆಯಲ್ಪಡುವ  ಸ್ವಧಮೀ೯ಯ ವಿವಾಹ.
*ಕಲ್ಯಾಣದಲ್ಲಿ ಅನುಭವ ಮಂಟಪದ ಕಾಲಾವದಿ*
  27ವರ್ಷಗಳು
*ಅಮರಗಣಂಗಳ ಸಂಖ್ಯೆ ಎಷ್ಟು?*  
770
*ಬಸವಣ್ಣನವರ ಲಿಂಗೈಕ್ಯ ಸ್ಥಳ?*
ಕೂಡಲಸಂಗಮ
*ಅಕ್ಕಮಹಾದೇವಿಯ ಲಿಂಗೈಕ್ಯ ಸ್ಥಳ?*
ಕದಳಿಬನ (ಶ್ರೀ ಶೈಲ)
*ಅಲ್ಲಮ ಪ್ರಭುದೇವರಲಿಂಗೈಕ್ಯ ಸ್ಥಳ?*
ಶ್ರೀ ಶೈಲ
*ಚನ್ನಬಸವಣ್ಣನವರು ಲಿಂಗೈಕ್ಯ ಸ್ಥಳ?* ಉಳವಿ
*ಸಿದ್ಧರಾಮೇಶ್ವರ ಲಿಂಗೈಕ್ಯ ಸ್ಥಳ?* ಸೋಲಾಪೂರ
*ಬಸವಣ್ಣನವರ ಧರ್ಮಪತ್ನಿಯ ಲಿಂಗೈಕ್ಯ ಸ್ಥಳ?*
ತಂಗಡಗಿ
*ಶಿವನಾಗಮಯ್ಯ ಇವರ ವಚನಾಂಕಿತ ಯಾವುದು?*
ನಾಗಪ್ರಿಯ ಚೆನ್ನರಾಮೇಶ್ವರ
*ಕದಳಿಬನ ಯಾವ ರಾಜ್ಯದಲ್ಲಿದೆ?*
ಆಂಧ್ರಪ್ರದೇಶ

No comments:

Post a Comment