Saturday, 5 May 2018

News

*ಸಾಹಿತ್ಯ ನೊಬೆಲ್​ಗೆ ಗ್ರಹಣ*
=================
*ಸ್ಟಾಕ್​ಹೋಮ್:  ಎರಡನೇ ವಿಶ್ವಯುದ್ಧದ ಬಳಿಕ ಇದೇ ಮೊದಲ ಸಲ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆಯನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಲಾಗಿದೆ. ನೈತಿಕತೆ ಎತ್ತಿ ಹಿಡಿಯುವ ಸಲುವಾಗಿ ಈ ಕ್ರಮ ಕೈಗೊಂಡಿದ್ದು, 2019ರಲ್ಲಿ ಎರಡೂ ವರ್ಷದ ಪ್ರಶಸ್ತಿಗಳನ್ನು ಒಟ್ಟಿಗೆ ನೀಡಲಾಗುವುದು ಎಂದು ನೊಬೆಲ್ ಪ್ರತಿಷ್ಠಾನ ಸ್ಪಷ್ಟಪಡಿಸಿದೆ.*
================
*ಆದಾಗ್ಯೂ, ಸಾಹಿತ್ಯ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳ ನೊಬೆಲ್ ಪುರಸ್ಕೃತರ ಹೆಸರುಗಳನ್ನು ನಿಗದಿತ ವೇಳಾ ಪಟ್ಟಿಯಂತೆ ಪ್ರಕಟಿಸುವುದಾಗಿ ಪ್ರತಿಷ್ಠಾನ ಹೇಳಿಕೊಂಡಿದೆ.*
=============
*ಪ್ರಶಸ್ತಿ ತಡೆಗೆ ಕಾರಣವೇನು?: *
==============
*ಪುರಸ್ಕೃತರ ಆಯ್ಕೆಗಾಗಿ ಅಕಾಡೆಮಿಯಲ್ಲಿ 18 ಸದಸ್ಯರ ಸಮಿತಿ ಇದೆ. ಈ ಸಮಿತಿಗೆ ಕಾಯಂ ಸದಸ್ಯರಿದ್ದು, ಈ ಪೈಕಿ ಒಬ್ಬ ಸದಸ್ಯೆಯ ಪತಿಯ ವಿರುದ್ಧ 18 ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಹಾಗೆಯೇ ಈ ಆರೋಪಿತ ವ್ಯಕ್ತಿ ಅಕಾಡೆಮಿಯ ಇತರೆ ಕೆಲವು ಸದಸ್ಯರ ಜತೆ ಹಣಕಾಸು ವ್ಯವಹಾರ ಹೊಂದಿದ ಆರೋಪವೂ ಇದೆ. ಈ ಗೊಂದಲಗಳ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯಿಂದ 7 ಸದಸ್ಯರು ಹೊರ ನಡೆದಿದ್ದಾರೆ. ಆಲ್​ಫ್ರಡ್ ನೊಬೆಲ್ ವಿಲ್ ಪ್ರಕಾರ ಆಯ್ಕೆ ಸಮಿತಿಯಲ್ಲೇ ಇಂತಹ ಗೊಂದಲಗಳಿದ್ದಾಗ ಪ್ರಶಸ್ತಿ ಘೋಷಣೆ ಮಾಡುವಂತಿಲ್ಲ. ಆಯ್ಕೆ ಸಮಿತಿ ಸದಸ್ಯೆ ಕತ್ರಿನಾ ಫ್ರೋಸ್ಟನ್ಸನ್ ಅವರ ಪತಿ ಜೀನ್ ಕ್ಲೌಡ್ ಅರ್ನಾಲ್ಟ್ ಈ ಹಿಂದೆ ಕೆಲವು ಬಾರಿ ನೊಬೆಲ್ ಪ್ರಶಸ್ತಿ ಆಯ್ಕೆ ಕುರಿತ ಮಾಹಿತಿ ಸೋರಿಕೆ ಮಾಡಿರುವ ಆರೋಪವನ್ನೂ ಎದುರಿಸುತ್ತಿದ್ದಾರೆ. ಇವೆಲ್ಲ ಗೊಂದಲ ಆಧರಿಸಿ ಸ್ವೀಡನ್ ಹಾಗೂ ಕೆಲವೆಡೆ ‘ಮಿ ಟೂ’ ಅಭಿಯಾನ ಕೂಡ ನಡೆದಿತ್ತು. ಹೀಗಾಗಿ ನೊಬೆಲ್ ಪ್ರತಿಷ್ಠಾನ ನಡೆಸಿದ ತುರ್ತು ಸಭೆಯಲ್ಲಿ ಪ್ರಶಸ್ತಿ ಘೋಷಣೆ ಮಾಡದಿರುವ ತೀರ್ಮಾನ ಮಾಡಲಾಗಿದೆ.*
===========
*ಪ್ರಶಸ್ತಿ ಘೋಷಣೆ ಅಸಾಧ್ಯ ಎನ್ನುವ ಸ್ಥಿತಿ ಅಥವಾ ಪ್ರಶಸ್ತಿಯ ಘನತೆಗೆ ಕುತ್ತು ಬರುವ ಸಂದರ್ಭದಲ್ಲಿ ಮುಂದೂಡುವ ಅವಕಾಶವಿದೆ. ಪ್ರಶಸ್ತಿಯ ಗೌರವ ಹಾಗೂ ನೂರಾರು ವರ್ಷಗಳ ಶ್ರೀಮಂತ ಇತಿಹಾಸಕ್ಕೆ ಕಪ್ಪು ಚುಕ್ಕೆ ಬರದಂತೆ ನೋಡಿಕೊಳ್ಳುವ ಹೊಣೆ ಪ್ರತಿಷ್ಠಾನದ ಮೇಲಿದೆ.*
=============
| *ಕಾರ್ಲ್ ಹೆನ್ರಿಕ್ ಹೆಲ್ಡಿನ್, ನೊಬೆಲ್ ಪ್ರತಿಷ್ಠಾನದ ಅಧ್ಯಕ್ಷ*
==============
*49 ಬಾರಿ ಪ್ರಶಸ್ತಿ ನೀಡಿಲ್ಲ!*
=================
*ನೊಬೆಲ್ ಪ್ರಶಸ್ತಿಯನ್ನು 1901ರಿಂದ ವಿಜ್ಞಾನ, ವೈದ್ಯ, ಸಾಹಿತ್ಯ ಹಾಗೂ ಶಾಂತಿ ವಿಭಾಗದಲ್ಲಿ ನೀಡಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಒಟ್ಟು 49 ಬಾರಿ ನೊಬೆಲ್ ಪ್ರಶಸ್ತಿ ವಿತರಣೆಯಾಗಿಲ್ಲ. ಎರಡೂ ವಿಶ್ವ ಯುದ್ಧದ ಸಂದರ್ಭದಲ್ಲಿ ಪ್ರಶಸ್ತಿ ಘೋಷಣೆಯಾಗಿರಲಿಲ್ಲ.*
=================
*ಒಟ್ಟಾರೆ ನೊಬೆಲ್ ಪ್ರಶಸ್ತಿ ಘೋಷಣೆಯಾಗದ ವರ್ಷ: 1915, 1919, 1925, 1927, 1936, 1949*
==============
*ಸಾಹಿತ್ಯ ನೊಬೆಲ್ ಪ್ರಶಸ್ತಿ ಘೋಷಣೆಯಾಗದ ವರ್ಷ:*
===================
*1914, 1918, 1935 (ಯಾರೂ ಅರ್ಹರಿರಲಿಲ್ಲ), 1940, 1941, 1942, 1943 (ವಿಶ್ವಯುದ್ಧ ಸಂದರ್ಭ)*

=================

No comments:

Post a Comment