1. ಭಾರತವು 15,200 ಕಿ ಮೀ ಭೂಗಡಿ ಪ್ರದೇಶವನ್ನು ಮತ್ತು 7516.5 ಕಿ ಮೀ ಜಲಗಡಿ ಪ್ರದೇಶವನ್ನು ಹೊಂದಿದೆ.
2. ರಾಷ್ಟ್ರೀಯ ರಕ್ಷಣಾ ಕಾಲೇಜು - ನವದೆಹಲಿ
3. ರಕ್ಷಣಾ ಸೇವಾ ಸಿಬ್ಬಂದಿ ತರಬೇತಿ ಕೇಂದ್ರ - ಉದಕಮಂಡಲ
4. ಭಾರತೀಯ ಮಿಲಿಟರಿ ಅಕಾಡೆಮಿ - ಡೆಹ್ರಾಡೂನ್
5. ರಾಷ್ಟ್ರೀಯ ರಕ್ಷಣಾ ಅಕಾಡೆಮಿ - ಖಡಕ್ ವಾಸ್ಲಾ , ಪುಣೆ.
6. ಕರ್ನಾಟಕ ಸರ್ಕಾರವು 1964 ರಲ್ಲಿ ಪಶು ಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದೆ.
7. ಮಕ್ಕಳ ಸಹಾಯವಾಣಿ 1098.
8. ಭೂ ಸೇನೆಯ ಮುಖ್ಯಸ್ಥರನ್ನು ಜನರಲ್ ಎನ್ನುವರು ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ.
9. ನೌಕಾದಳದ ಮುಖ್ಯಸ್ಥರನ್ನು ಆಡ್ಮಿರಲ್ ಎನ್ನುವರು
10. ಕರ್ನಾಟಕದ ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆಯಿದೆ.
11. ವಾಯುಪಡೆಯ ಮುಖ್ಯಸ್ಥರನ್ನು ಏರ್ ಚೀಫ್ ಮಾರ್ಷಲ್ ಎನ್ನುವರು, ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ.
12. ಆಡಳಿತ ಅನುಕೂಲಕ್ಕಾಗಿ ವಾಯುಪಡೆಯನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ.
13. ಭಾರತದಲ್ಲಿ ಸುಮಾರು 47000 ಕ್ಕೂ ಹೆಚ್ಚು ಸಸ್ಯವರ್ಗಗಳನ್ನು ಗುರುತಿಸಲಾಗಿದೆ.
14. ಸುಮಾರು 90000 ಬಗೆಯ ವೈವಿದ್ಯಮಯ ಪ್ರಾಣಿಗಳಿವೆ ಅವುಗಳಲ್ಲಿ 1232 ಬಗೆಯ ಪಕ್ಷಿವಾರ್ಗ ಮತ್ತು 2546 ಬಗೆಯ ಮೀನುವಾರ್ಗ ಒಳಗೊಂಡಿದೆ.
15. ಭಾರತದ ರಾಷ್ಟ್ರ ದ್ವಜದಲ್ಲಿ ಮಧ್ಯದಲ್ಲಿ ನೀಲಿಬಣ್ಣದ ಚಕ್ರವಿದೆ ಅದರಲ್ಲಿ 24 ಗೆರೆಗಳಿವೆ.
16. ರಾಷ್ಟ್ರ ದ್ವಜದ ಉದ್ದಗಲಗಳ ಅನುಪಾತ 3:2.
17. ರಾಷ್ಟ್ರ ದ್ವಜದ ಚಕ್ರವು ಸಾರಾನಾಥದ ಅಶೋಕ ಸ್ತಂಬದದಲ್ಲಿರುವ ಚಕ್ರದ ಪ್ರತಿರೂಪವಾಗಿದೆ.
18. ರಾಷ್ಟ್ರ ಲಾಂಛನವು ಸಾರಾನಾಥದ ಅಶೋಕ ಸ್ತಂಬದದಲ್ಲಿರುವ ಮೇಲುಬಾಗದ ರೂಪಾಂತರವಾಗಿದೆ.
19. ಮೂಲ ಶಿಲ್ಪಕೃತಿಯಲ್ಲಿ ನಾಲ್ಕು ಸಿಂಹಗಳು ನಾಲ್ಕು ದಿಕ್ಕುಗಳಿಗೆ ಮುಖಮಾಡಿ ಒಂದಕ್ಕೊಂದು ಬೆನ್ನು ಮಾಡಿ ಗುಂಡಾಗಿರುವ ಪೀಠವೊಂದರ ಮೇಲೆ ನಿಂತಿದೆ. ಅದರ ನಾಲ್ಕು ದಿಕ್ಕಿನಲ್ಲಿ ಒಂದೊಂದು ಚಕ್ರವಿದೆ. ಆ ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಹಗಳ ಚಿತ್ರವಿದೆ.
20. ಭಾರತವು ನಮ್ಮ ರಾಷ್ಟ್ರ ಲಾಂಛನವನ್ನು 26 ಜನವರಿ 1950 ರಂದು ಅಂಗೀಕರಿಸಿತು.
21. ರಾಷ್ಟ್ರ ಲಾಂಛನದ ಪೀಟದ ಕೆಳಗೆ ದೇವನಾಗರಿ ಲಿಪಿಯಲ್ಲಿ "ಸತ್ಯಮೇವ ಜಯತೇ" ಎಂಬ ಮುಂಡಕ ಉಪನಿಷತ್ತಿನ ವಾಕ್ಯವಿದೆ.
22. ರವೀಂದ್ರ ನಾಥ್ ಟಾಗೋರ್ ಬರೆದ (1911) ರಾಷ್ಟ್ರ ಗೀತೆಯನ್ನು (ನ್ಯಾಶನಲ್ ಆಂತಮ್)ಸಂವಿಧಾನ ಸಭೆಯು 24 23. ಜನವರಿ 1950 ರಂದು ಅಂಗೀಕರಿಸಿತು .
23. ರಾಷ್ಟ್ರಗೀತೆಯನ್ನು ಹಾಡಲು ಬೇಕಾಗುವ ಅವಧಿ 52 ಸೆಕೆಂಡುಗಳು.
24. ಸಂವಿಧಾನದಲ್ಲಿ ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ಪಡೆದಿರುವ ವಂದೇಮಾತರಂ (ನ್ಯಾಶನಲ್ ಸಾಂಗ್) ಅನ್ನು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ರವರ "ಆನಂದ ಮಠ" ಕಾದಂಬರಿ ಇಂದ ಆರಿಸಿಕೊಂಡಿದೆ.
25. ರಾಷ್ಟ್ರೀಯ ಪ್ರಾಣಿ - ಹುಲಿ
26. ರಾಷ್ಟ್ರೀಯ ಪಕ್ಷಿ - ನವಿಲು
27. ರಾಷ್ಟ್ರೀಯ ಹೂ - ತಾವರೆ
28. ಭಾರತ ಸರ್ಕಾರವು 1957 ಮಾರ್ಚ್ 22 ರಂದು "ರಾಷ್ಟ್ರೀಯ ಪಂಚಾಂಗ" ವನ್ನು ಆಚರಣೆಗೆ ತಂದಿತು.
29. ಪಂಚಾಂಗವನ್ನು ರೂಪಿಸುವಲ್ಲಿ ವಿಜ್ಞಾನಿ ಮೇಘನಾದ ಸಹ ಪ್ರಮುಖ ಪಾತ್ರ ವಹಿಸಿದ್ದರು.
30. ರಾಷ್ಟ್ರೀಯ ಪಂಚಾಂಗವು ಶಕವರ್ಷವನ್ನು ಅಳವಡಿಸಿಕೊಂಡಿದೆ ಅಂದರೆ ಇದು ಕ್ರೈಸ್ತ ವರ್ಷಕ್ಕಿಂತ 78 ವರ್ಷ ನಂತರ ಪ್ರಾರಂಭವಾಗುತ್ತದೆ. ವರ್ಷಾರಂಭ ಸಾಮಾನ್ಯವಾಗಿ ಮಾರ್ಚ್ 22 ಅಧಿಕ ವರ್ಷದಲ್ಲಿ ಅದು ಮಾರ್ಚ್ 21.
31. ಗಾಂಧಿ ಜಯಂತಿ ಆಕ್ಟೋಬರ್-2
32. ಅಂಬೇಡ್ಕರ್ ಜಯಂತಿ ಏಪ್ರಿಲ್ - 14
33. ಎರಡನೆಯ ರಾಷ್ಟ್ರಪತಿ ರಾಧಾಕೃಷ್ಣನ್ ಜನ್ಮದಿನ ಹಾಗೂ ಶಿಕ್ಷಕರ ದಿನ ಸೆಪ್ಟೆಂಬರ್ - 5
34. ಪ್ರಥಮ ಪ್ರದಾನಿ ಜವಾಹರ್‌ಲಾಲ್ ನೆಹರು ಜನ್ಮದಿನ ಹಾಗೂ ಮಕ್ಕಳ ದಿನ ನವೆಂಬರ್ - 14
35. ಕನ್ನಡ ರಾಜ್ಯ (ಮೈಸೂರು ರಾಜ್ಯ) ಒಂದುಗೂಡಿದ ದಿನ 1956 ನವೆಂಬರ್ 1 ಕನ್ನಡ ರಾಜ್ಯೋತ್ಸವ.
36. ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದ್ದು ದೇವರಾಜ ಅರಸು 1973 ನವೆಂಬರ್ 1 ರಂದು.
37. ಸ್ವಾಮಿ ವಿವೇಕಾನಂದ ರವರು ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಇವರ ಜನ್ಮ ದಿನವನ್ನು ರಾಷ್ಟ್ರೀಯ ಯುವಜನದಿನವೆಂದು ಅಂದರೆ ಜನವರಿ 12 ರಂದು ಆಚರಿಸಲಾಗುತ್ತದೆ.
38. ಯೂರೋಪ್ ಒಟ್ಟೂ ದೇಶಗಳ ಸಂಖ್ಯೆ 56.
39. ಯೂರೋಪ್ 10 ಪಶ್ಚಿಮದಿಂದ 60 ಪೂರ್ವ ರೇಖಾಂಶ ಹಾಗೂ ಉತ್ತರದಿಂದ 72 ಉತ್ತರ ಅಕ್ಷಾಂಶಗಳಲ್ಲಿ ನೆಲೆಗೊಂಡಿದೆ.
40. ಯೂರೋಪ್ ಪ್ರಪಂಚದ ಎರಡೆನೆಯ ಚಿಕ್ಕ ಭೂಖಂಡ. ಅದರ ಒಟ್ಟೂ ವಿಸ್ತೀರ್ಣ 10.4 ಮಿಲಿಯನ್ ಚ. ಕಿ . ಮೀ.
41. ಯೂರೋಪ್‌ನ ಮೂರು ಕಡೆ ನೀರಿನಿಂದ ಆವೃತ್ತವಾಗಿದೆ. ಉತ್ತರದಲ್ಲಿ ಬೇರೆಂಟ್ ಸಮುದ್ರ, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ದಕ್ಷಿಣದಲ್ಲಿ ಮೆಡಿಟರೆನಿಯನ್ ಸಮುದ್ರ.
42. ಯೂರೋಪಿನ ಪೂರ್ವ ಭಾಗದಲ್ಲಿ ಏಷ್ಯಾ ಖಂಡವಿದ್ದು ಅದನ್ನು ಯುರಲ್ಸ್ ಪರ್ವತ, ಕಕಾಸಸ್ ಪರ್ವತ ಮತ್ತು ಕ್ಯಾಸ್ಪಿಯನ್ ಸಮುದ್ರಗಳು ಯೂರೋಪಿನಿಂದ ಬೇರ್ಪಡಿಸುತ್ತದೆ. ದಕ್ಷಿಣಕ್ಕೆ ಆಫ್ರಿಕಾ ಖಂಡವಿದೆ.
43. ಯೂರೋಪಿನ ಅತಿ ಎತ್ತರದ ಬಿಂದು ಕಕಾಸಸ್ ಪರ್ವತ ಸರಣಿಯ ಮೌಂಟ್ ಎಲ್ ಬ್ರೂಸ್ (5633).ಅತ್ಯಂತ ತಗ್ಗಾದ ಸ್ಥಳ ಕ್ಯಾಸ್ಪಿಯನ್ ಸಮುದ್ರ.
44. ಆಫ್ರಿಕಾ ಖಂಡವು ಏಷ್ಯಾದ ನಂತರ ಪ್ರಪಂಚದ ಎರಡನೆಯ ದೊಡ್ಡ ಖಂಡವಾಗಿದೆ.
45. ಆಫ್ರಿಕಾ ಖಂಡವು 52 ದೇಶಗಳನ್ನು ಒಳಗೊಂಡಿದೆ.
46. ಆಫ್ರಿಕಾ ಖಂಡವು 37 ಉತ್ತರ ಮತ್ತು 35 ಡಿಗ್ರಿ ದಕ್ಷಿಣ ಅಕ್ಷಾಂಶ ಹಾಗೂ 17 ಡಿಗ್ರಿ ಪಶ್ಚಿಮ ಮತ್ತು 50 ಡಿಗ್ರಿ ಪೂರ್ವ ರೇಖಾಂಶಗಳ ನಡುವೆ ನೆಲೆಸಿದೆ.
47. ಭೂಮದ್ಯ ರೇಖೆಯು ಹೆಚ್ಚ್ಹು ಕಡಿಮೆ ಈ ಖಂಡದ ಮದ್ಯ ಭಾಗದಲ್ಲಿ ಹಾಯ್ದು ಹೋಗುವುದರಿಂದ ಇದನ್ನು "ಕೇಂದ್ರೀಯ
ಖಂಡ" ಎಂದು ಕರೆಯುತ್ತಾರೆ.
48. ಆಫ್ರಿಕಾದ ಒಟ್ಟೂ ವಿಸ್ತೀರ್ಣ 30.4 ಮಿಲಿಯನ್ ಚ. ಕಿ. ಮೀ ಮತ್ತು ದಕ್ಷಿನೂತ್ತರವಾಗಿ 8000 ಕಿ. ಮೀ ಹಾಗೂ ಪೂರ್ವ ಪಸ್ಚಿಮವಾಗಿ 7400 ಕಿ. ಮೀ ಅಗಲವಾಗಿದೆ.
49. ಅಲ್ ಘಿರಮ್ (ಟುನಿಸಿಯ) ಆಫ್ರಿಕಾದ ಉತ್ತರದ ತುದಿಯಾದರೆ ಆಗುಲ್ಹಾಸ್ ದ
ಕ್ಷಿಣದ ತುದಿಯಾಗಿದೆ.
50. ಆಫ್ರಿಕಾದ ಬಹುತೇಕ ಭೂ ಭಾಗವು ಒಂದಿಲ್ಲೊಂದು ಸಮುದ್ರ ಅಥವಾ ಮಹಾಸಾಗರಗಳಿಂದ ಸುತ್ತುವರಿಯಲ್ಪಟ್ಟಿದೆ. ಉತ್ತರದಲ್ಲಿ ಮೆಡಿಟರೇನಿಯನ್, ಪಶ್ಚಿಮಕ್ಕೆ ಅಟ್ಲಾಂಟಿಕ್, ಪೂರ್ವಕ್ಕೆ ಕೆಂಪು ಸಮುದ್ರ ಹಾಗೂ ಹಿಂದೂ ಮಹಾಸಾಗರಗಳು ಸುತ್ತು ವರಿದಿದೆ.
51. ಜೀಬ್ರಾಲ್ಟರ್ ಜಲಸಂದಿಯೂ ಯೂರೋಪ್ ಖಂಡದಿಂದ ಕೆಂಪು ಸಮುದ್ರದಿಂದ ಅರೇಬಿಯಾ ಪರ್ಯಾಯ ದ್ವೀಪದಿಂದ ಆಫ್ರಿಕಾವನ್ನು ಪ್ರತ್ಯೇಕಿಸುತ್ತದೆ.
52. ಸುಡಾನ್ ತಗ್ಗು ಪ್ರದೇಶವು ಬಿಳಿ ಮತ್ತು ನೀಲಿ ನೈಲ್ ನದಿಗಳು ಹರಿಯುವ ಮತ್ತು ಪ್ರಪಂಚದಲ್ಲೇ ಅತಿ ವಿಸ್ತಾರವಾಗಿರುವ ಜವುಗು ಭೂಮಿಯನ್ನು ( ಸಡ್, Sudd) ಹೊಂದಿದೆ.
53. ಆಫ್ರಿಕಾದ ಟಾಂಗ ನಿಕ ಸರೋವರವು ಪ್ರಪಂಚದ ಎರಡನೆಯ ಅತಿ ಆಳದ ಸರೋವರವಾಗಿದೆ. ಇದು ಸುಮಾರು 1436 ಮೀ ಆಳವಾಗಿದೆ.
54. ಆಫ್ರಿಕಾದ ಸೀಳು ಕಣಿವೆಯ ಎರಡು ಸಾಲಿನ ನಡುವೆ ಇರುವ ವಿಕ್ಟೋರಿಯಾ ಸರೋವರವು ಆಫ್ರಿಕಾದ ಬಹು ದೊಡ್ಡ ಸರೋವರವಾಗಿದೆ. ಇದು ಸುಮಾರು 69481 ಚ. ಕಿ. ಮೀ ವಿಸ್ತಾರವಾಗಿದೆ. ಇಲ್ಲಿಂದ ನೈಲ್ ನದಿ ಉಗಮವಾಗುತ್ತದೆ.
55. ಆಫ್ರಿಕಾದ ಖಂಡದ ಅತ್ಯಂತ ಎತ್ತರವಾದ ಶಿಖರಗಳು ಕಿಲಿಮಂಜಾರೋ ಪರ್ವತಗಳು. ಎತ್ತರ ಸುಮಾರು 5895 ಮೀ ಗಳು.
56. ಆಫ್ರಿಕಾದ ಅತ್ಯಂತ ತಗ್ಗು ಪ್ರದೇಶ ಅಸಲ್ (ಜಿಬೋಟಿ) ಸರೋವರವಾಗಿದೆ.
57. ಸೂಯೆಜ್ ಕಾಲುವೆಯು ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರವನ್ನು ಸಂಪರ್ಕಿಸುತ್ತದೆ ಮತ್ತು ಇದು ಪ್ರಪಂಚದಲ್ಲೇ ಹೆಚ್ಚು ಹಡಗು ಸಂಚರಿಸುವ ಸಾಗರ ಮಾರ್ಗವಾಗಿದ್ದು ಯುರೋಪ್ ಮತ್ತು ಏಷ್ಯಾಗಳ ನ್ನು ಕಡಿಮೆ ಅಂತರದಿಂದ ಸಂಪರ್ಕಿಸುತ್ತದೆ.
58. ನೈಲ್ ನದಿಯು ಪ್ರಪಂಚದ ಅತ್ಯಂತ ಉದ್ದವಾದ ನದಿ ಇದು 6650 ಕಿ ಮೀ ಉದ್ದ ಹರಿಯುತ್ತದೆ. ವಿಕ್ಟೋರಿಯಾ ಸರೋವರದಲ್ಲಿ ಉಗಮ ಗೊಂಡು ಮೆಡಿಟರೇನಿಯನ್ ಸಮುದ್ರದಲ್ಲಿ ಸಂಗಮವಾಗುತ್ತದೆ.
59. ಕ್ಯಾಮರೂನ್ ಆಫ್ರಿಕಾದ ಅತ್ಯಂತ ತೇವದ ಪ್ರದೇಶವಾಗಿದ್ದು 1016 ಸೆಂ. ಮೀ ವಾರ್ಷಿಕ ಮಳೆಯನ್ನು ಪಡೆಯುತ್ತದೆ.
60. ಪ್ರಪಂಚದ ಒಟ್ಟೂ ವಜ್ರದ ನಿಕ್ಷೇಪದಲ್ಲಿ ಶೇ 80 ಭಾಗವು ಆಫ್ರಿಕಾ ಒಂದರಲ್ಲೇ ಕಂಡುಬರುತ್ತದೆ. ಬೋನ್ಸ್ ವಾನ , ಜೈರೆ , ಮತ್ತು ದಕ್ಷಿಣ ಆಫ್ರಿಕಾಗಲು ಹೆಚ್ಚು ವಜ್ರ ಉತ್ಪಾದಿಸುವ ದೇಶಗಳು.
61. ಲಿಬಿಯಾದ ಇಲ್ ಅಜಿಜಿಯಾದಲ್ಲಿ ಪ್ರಪಂಚದಲ್ಲೇ ಅತಿಹೆಚ್ಚು ಉಷ್ಣಾಂಶ 50 ಡಿಗ್ರೀ ಸೆಲ್ಷಿಯಸ್ ಧಾಕಲಾಗುತ್ತದೆ.
62. ಅಡ್ಡಾಕ್ಷ ಎಂಬ ಪ್ರಾಣಿ ನೀರು ಕುಡಿಯುವುದಿಲ್ಲ ಬದಲಾಗಿ ತನಗೆ ಬೇಕಾದ ನೀರನ್ನು ತಾನು ತಿನ್ನುವ ಹುಲ್ಲು ಮತ್ತು ಸಸ್ಯಗಳಿಂದ ಪಡೆಯುತ್ತದೆ.
63. ಪಿಗ್ಮಿಗಳು ಪ್ರಪಂಚದಲ್ಲೇ ಅತಿ ಗಿಡ್ಡ ಜನರಾಗಿದ್ದು ಇವರು ಕಾಂಗೊ ಕಣಿವೆಯಲ್ಲಿ ವಾಸಿಸುತ್ತಾರೆ.
No comments:
Post a Comment