*☀ದಿನ ವಿಶೇಷ:ಮೇ-01☀*
✳️✳️ *ದಿನಾಚರಣೆಗಳು:* ✳️✳️
*ಕಾರ್ಮಿಕರ ದಿನಾಚರಣೆ*
‘ಮೇ ದಿನ’ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಸಮಾಜವಾದಿ ಮತ್ತು ಕಮ್ಮ್ಯೂನಿಸ್ಟ್ ರಾಷ್ಟ್ರಗಳು ಹಾಗೂ ಸಂಘಟನೆಗಳು 19ನೇ ಶತಮಾನದಿಂದ ಆಚರಿಸಲು ಮೊದಲುಮಾಡಿವೆ. 1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿದೆ.
*ಮಹಾರಾಷ್ಟ್ರ ದಿನ ಮತ್ತು ಗುಜರಾತ್ ದಿನ*
1960ರ ವರ್ಷದಲ್ಲಿ ಮುಂಬೈ ಪ್ರಾಂತ್ಯವನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಎಂಬ ಪ್ರತ್ಯೇಕ ರಾಜ್ಯಗಳನ್ನಾಗಿ ಈ ದಿನದಂದು ಪರಿಗಣಿಸಿದ್ದರಿಂದ ಈ ಎರಡೂ ರಾಜ್ಯಗಳ ಜನರು ತಮ್ಮ ತಮ್ಮ ರಾಜ್ಯೋತ್ಸವ ಆಚರಣೆಯನ್ನು ನಡೆಸುತ್ತಾರೆ.
✳️✳️ *ಘಟನೆಗಳು:* ✳️✳️
ಕ್ರಿಸ್ತ ಪೂರ್ವ 475: ರೋಮನ್ ರಾಯಭಾರಿಯಾದ ಪ್ಯುಬ್ಲಿಯಸ್ ವಲೇರಿಯಸ್ ಪೋಪ್ಲಿಕೋಲ ಎಂಬಾತ ವೆಲಿ ಮತ್ತು ಸಬೈನ್ಸ್ ಮೇಲೆ ವಿಜಯೋತ್ಸವವನ್ನು ಆಚರಿಸಿದ
1851: ರಾಣಿ ವಿಕ್ಟೋರಿಯಾ ಅವರಿಂದ ಬೃಹತ್ ಕೈಗಾರಿಕಾ ವಸ್ತುಪ್ರದರ್ಶನ ಉದ್ಘಾಟನೆ
1884: ಅಮೆರಿಕದಲ್ಲಿ ದಿನಕ್ಕೆ 8 ಗಂಟೆಗಳ ಅವಧಿಯ ಕಾರ್ಮಿಕ ದಿನದ ಬೇಡಿಕೆಯು ಘೋಷಣೆಗೊಂಡಿತು.
1886: ಅಮೆರಿಕದ ಎಲ್ಲೆಡೆಗಳಲ್ಲಿ ಯಾವುದೇ ಸಂಭಳದ ಕಡಿತವಿಲ್ಲದೆ 8 ಗಂಟೆಗಳ ಅವಧಿಯ ಕಾರ್ಮಿಕ ದಿನದ ಬೇಡಿಕೆಯ ಪ್ರತಿಭಟನೆಗಳು ನಡೆದವು.
1897: ಸ್ವಾಮಿ ವಿವೇಕಾನಂದರು ಕೋಲ್ಕತದಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು.
1925: ವಿಶ್ವದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾದ ಆಲ್-ಚೀನಾ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್ಸ್ ಅಧಿಕೃತವಾಗಿ ಸ್ಥಾಪಿಸಲ್ಪಟ್ಟಿತು.
1930: ಕುಬ್ಜ ಗ್ರಹವಾದ ಪ್ಲೂಟೋವನ್ನು ಹೆಸರಿಸಲಾಯಿತು
1931: ನ್ಯೂಯಾರ್ಕ್ ನಗರದ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ ಸಮರ್ಪಣೆಗೊಂಡಿತು
1933: ಇಂಗ್ಲೆಂಡ್ ಮತ್ತು ಭಾರತ ನಡುವಣ ದೂರವಾಣಿ ಸೇವೆ ಆರಂಭ
1956: ಜೋನಾಸ್ ಸಲ್ಕ್ ಅವರು ತಯಾರಿಸಿದ ಪೋಲಿಯೋ ಲಸಿಕೆಯನ್ನು ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆ ಮಾಡಲಾಯಿತು.
1960: ಮುಂಬೈ ಪ್ರಾಂತ್ಯವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಾಗಿ ವಿಂಗಡನೆಗೊಂಡಿತು.
1989: ಅಮೆರಿಕದ ಫ್ಲೋರಿಡಾದಲ್ಲಿನ ಆರ್ಲ್ಯಾಂಡೋ ಬಳಿಯಲ್ಲಿ, ವಾಲ್ಟ್ ಡಿಸ್ನಿ ವರ್ಲ್ಡ್ ಸಂಸ್ಥೆಯು ತನ್ನ ಆವರಣದಲ್ಲಿ ಡಿಸ್ನಿ-ಎಂ.ಜಿ.ಎಂ. ಸ್ಟುಡಿಯೋ ಆರಂಭಿಸಿತು
1998: ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ 760 ಕಿಲೋಮೀಟರ್ ಉದ್ದದ ಕೊಂಕಣ ರೈಲ್ವೇಗೆ ಹಸಿರು ನಿಶಾನೆ
2002: ಓಪನ್ ಆಫೀಸ್ (OpenOffice.org) ತನ್ನ ಪ್ರಥಮ ಸುದೃಢ ಎನ್ನಬಹುದಾದ ಆವೃತ್ತಿ 1,0 ಅನ್ನು ಬಿಡುಗಡೆ ಮಾಡಿತು
2003: ಅಮೆರಿಕ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ. ಬುಷ್ ಅವರು ‘ಗುರಿ ಸಾಧಿಸಿದ’ ಭಾಷಣ ಎಂದು ಬಣ್ಣಿತಗೊಂಡಿರುವ ಇರಾಖ್ ಮೇಲಿನ ಆಕ್ರಮಣದಲ್ಲಿನ ವಿಜಯವನ್ನು ಘೋಷಿಸಿದರು
2008: “ಚಲಿಸುವ ರೈಲನ್ನು ಹತ್ತುವ ಸಂದರ್ಭದಲ್ಲಿ ಮೃತರಾದ/ ಗಾಯಗೊಂಡ ವ್ಯಕ್ತಿಯ ಕುಟುಂಬವೂ ಪರಿಹಾರ ಪಡೆಯಲು ಅರ್ಹ” ಎಂಡ್ ಸುಪ್ರೀಂ ಕೋರ್ಟ್
2008: ಪ್ರಸಾರ ಭಾರತಿಯ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಭಟ್ನಾಗರ್ ನೇಮಕ
2008: 17 ನಿಮಿಷಗಳಿಗೂ ಹೆಚ್ಚುಕಾಲ ಉಸಿರಾಟ ಸ್ಥಗಿತಗೊಳಿಸಿಕೊಂಡು, ಬಳಿಕ ಆರಾಮ ಸ್ಥಿತಿಗೆ ಮರಳಿದ ಪ್ರಖ್ಯಾತ ಜಾದೂಗಾರ ಡೇವಿಡ್ ಬ್ಲೇನ್
2009: ಕೇಂದ್ರದ 'ಹೊಸ ಪಿಂಚಣಿ ಯೋಜನೆ ಪ್ರಾರಂಭ
✳️✳️ *ಜನನ:* ✳️✳️
1852: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞರಾದ ಸಾಂಟಿಯಾಗೋ ರೇಮನ್ ವೈ ಕಜಾಲ್ ಜನನ
1919: ಹಿನ್ನೆಲೆ ಗಾಯಕ ಮನ್ನಾಡೆ ಜನನ
1948: ಕವಯಿತ್ರಿ ಶಶಿಕಲಾ ವೀರಯ್ಯ ಸ್ವಾಮಿ ಜನನ
1955: ಉದ್ಯಮಿ ಆನಂದ ಮಹೇಂದ್ರ ಜನನ
1968: ವ್ಯಂಗ್ಯಚಿತ್ರಕಾರ ಡಾ. ಸತೀಶ್ ಶೃಂಗೇರಿ ಜನನ
✳️✳️ *ನಿಧನ:* ✳️✳️
1700: ಇಂಗ್ಲಿಷ್ ಕವಿ, ನಾಟಕಕಾರ ಮತ್ತು ವಿಮರ್ಶಕ ಜಾನ್ ಡ್ರೈಡೆನ್ ನಿಧನ
2008: ಖ್ಯಾತ ಗಾಂಧೀವಾದಿ ನಿರ್ಮಲಾ ದೇಶಪಾಂಡೆ ನಿಧನ
No comments:
Post a Comment