Saturday, 5 May 2018

ವಿಶ್ವದ ಮೊದಲ ಮಹಿಳಾ ವಿಶೇಷ ರೈಲು ಇರುವುದು ಎಲ್ಲಿ ಗೊತ್ತಾ?

ವಿಶ್ವದ ಮೊದಲ ಮಹಿಳಾ ವಿಶೇಷ ರೈಲು ಇರುವುದು ಎಲ್ಲಿ ಗೊತ್ತಾ?*
==============
*ಮುಂಬೈ,ಮೇ 5: ಮುಂಬೈನ ಪಶ್ಚಿಮ ರೈಲ್ವೆಯ ಚರ್ಚ್‌ಗೇಟ್ ಮತ್ತು ಬೋರಿವಲಿ ನಿಲ್ದಾಣಗಳ ಮಧ್ಯೆ ಆರಂಭಗೊಂಡಿದ್ದ ವಿಶ್ವದ ಮೊದಲ ಮಹಿಳಾ ವಿಶೇಷ ರೈಲು ಶನಿವಾರ 26 ವರ್ಷಗಳನ್ನು ಪೂರ್ಣಗೊಳಿಸಿದೆ.*
=============
*ಪಶ್ಚಿಮ ರೈಲ್ವೆಯು ಕೇವಲ ಮಹಿಳಾ ಪ್ರಯಾಣಿಕರಿಗಾಗಿ 1992,ಮೇ 5ರಂದು ಈ ವಿಶೇಷ ಲೋಕಲ್ ರೈಲನ್ನು ಆರಂಭಿಸಿತ್ತು. ಆರಂಭದಲ್ಲಿ ದಿನಕ್ಕೆ ಎರಡು ಬಾರಿ ಮಾತ್ರ ಸಂಚರಿಸುತ್ತಿದ್ದ ಈ ರೈಲುಗಳು ಈಗ ಬೆಳಿಗ್ಗೆ ಮತ್ತು ಸಂಜೆ ದಟ್ಟಣೆಯ ಅವಧಿಯಲ್ಲಿ ತಲಾ ನಾಲ್ಕು ಸೇವೆಗಳನ್ನು ಒದಗಿಸುತ್ತಿವೆ.*
===========
*ಇಡೀ ರೈಲನ್ನು ಮಹಿಳಾ ಪ್ರಯಾಣಿಕರಿಗಾಗಿ ಅರ್ಪಿಸಿದ್ದು ಐತಿಹಾಸಿಕ ವಿದ್ಯಮಾನವಾಗಿದೆ ಮತ್ತು ಪಶ್ಚಿಮ ರೈಲ್ವೆಯು ಇತರ ರೈಲ್ವೆಗಳಿಗೆ ಆದರ್ಶಪ್ರಾಯವಾಗಿದೆ ಎಂದು ಅದರ ವಕ್ತಾರ ರವೀಂದ್ರ ಭಾಕರ್ ಹೇಳಿದರು.*
============
*ಮೊದಲು ಚರ್ಚ್‌ಗೇಟ್ ಮತ್ತು ಬೋರಿವಲಿ ನಿಲ್ದಾಣಗಳ ಮಧ್ಯೆ ಸಂಚರಿಸುತ್ತಿದ್ದ ಈ ರೈಲನ್ನು 1993ರಲ್ಲಿ ವಿರಾರ್‌ವರೆಗೆ ವಿಸ್ತರಿಸಲಾಗಿತ್ತು.*
============
*ಈ ರೈಲು ಪ್ರತಿದಿನ ಲಕ್ಷಾಂತರ ಮಹಿಳಾ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುತ್ತಿದ್ದು,ಇದೀಗ ವಿಶ್ವದ ಉಪನಗರ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಮೈಲಿಗಲ್ಲು ಎಂದೇ ಪರಿಗಣಿಸಲ್ಪಟ್ಟಿದೆ ಎಂದು ಪಶ್ಚಿಮ ರೈಲ್ವೆಯು ಹೇಳಿಕೆಯಲ್ಲಿ ತಿಳಿಸಿದೆ.*

===============

No comments:

Post a Comment