Friday, 4 May 2018

ವಾಯುಮಾಲಿನ್ಯ ರಾಜಧಾನಿ ಭಾರತ?

ವಾಯುಮಾಲಿನ್ಯ ರಾಜಧಾನಿ ಭಾರತ?*
================
*ನವದೆಹಲಿ: ವಾಯು ಮಾಲಿನ್ಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ವಿಶ್ವದ ಅತಿಕಲುಷಿತ 15 ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳಿವೆ! ಕಾನ್ಪುರ, ಫರೀದಾಬಾದ್, ವಾರಾಣಸಿ, ಗಯಾದಲ್ಲಿ ಭಾರಿ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2010-2016ರ ಅವಧಿಯಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸಿ ವರದಿ ಸಿದ್ದಪಡಿಸಲಾಗಿದೆ*
*ವರದಿ ಹೇಳಿದ್ದೇನು?:*
=================
*ವಿಶ್ವದಲ್ಲಿ ಶೇ. 90 ಜನರು ಕಲುಷಿತ ಗಾಳಿ ಸೇವಿಸುತ್ತಿದ್ದಾರೆ. ಪ್ರತಿ ವರ್ಷ 70 ಲಕ್ಷಕ್ಕೂ ಅಧಿಕ ಜನರು ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಕಾಯಿಲೆ ಗಳಿಂದ ಮೃತರಾಗುತ್ತಿದ್ದಾರೆ. ವಾಯು ಮಂಡಲ ಅಥವಾ ಸುತ್ತಲಿನ ಪರಿಸರದಲ್ಲಿ ಉಂಟಾದ ಮಾಲಿನ್ಯದಿಂದ 2016ರಲ್ಲಿ 42 ಲಕ್ಷ ಜನರು ಜೀವ ಕಳೆದುಕೊಂಡಿದ್ದಾರೆ. ಇಂಧನ, ತಂತ್ರಜ್ಞಾನ ಮತ್ತಿತರ ಕಾರಣಗಳಿಂದ ಉಂಟಾದ ಮಾಲಿನ್ಯದಿಂದ 38 ಲಕ್ಷ ಜನರು ಮೃತರಾಗಿದ್ದರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.*
==============

No comments:

Post a Comment