ಬಿಜೆಪಿ ಮುಂದಿರುವ ಸಾಧ್ಯತೆಗಳು...
ಬಂದಿರುವ ಫಲಿತಾಂಶ
ಒಟ್ಟು ಕ್ಷೇತ್ರಗಳು : 222
ಬಿಜೆಪಿ - 104
ಕಾಂಗ್ರೆಸ್ - 78
ಜೆಡಿಎಸ್ - 38
ಇತರೆ - 2
ಮ್ಯಾಜಿಕ್ ನಂಬರ್ 112
ಸಾಧ್ಯತೆ 1 :
ಬಹುಮತಕ್ಕೆ ಬಿಜೆಪಿಗೆ ಬೇಕಿರೋದು 8 ಸ್ಥಾನ
ಕಾಂಗ್ರೆಸ್ + ಜೆಡಿಎಸ್ + ಇತರೆ ಸೇರಿ - 118
ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ಬಿಜೆಪಿಗೆ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಆಹ್ವಾನ ನೀಡುತ್ತಾರೆ. ಬಿಜೆಪಿ ಸರ್ಕಾರ ರಚಿಸಿ ರಾಜ್ಯಪಾಲರು ಬಹುಮತ ಸಾಬೀತಿಗೆ ಕೊಡುವ ಸುಮಾರು ಒಂದು ವಾರ ಕಾಲಾವಕಾಶದಲ್ಲಿ ಆಪರೇಷನ್ ನಡೆಸಿ ಜೆಡಿಎಸ್ ಮತ್ತು ಕಾಂಗ್ರೆಸ್ ನ 15 ಜನರ ಕೈಲಿ ರಾಜಿನಾಮೆ ಕೊಡಿಸಿದರೆ ಅಥವಾ 15 ಶಾಸಕರು ಬಹುಮತ ಸಾಬೀತು ಮಾಡುವಾಗ ಗೈರಾಗುವಂತೆ ನೋಡಿಕೊಂಡರೆ ಸ್ಥಾನದ ಸಂಖ್ಯೆ 207 ಆಗಿ ಬಹುಮತಕ್ಕೆ 104 ಸ್ಥಾನ ಸಾಕಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮುಂಬರುವ ಚುನಾವಣೆಯಲ್ಲಿ ರಾಜಿನಾಮೆ ಕೊಡಿಸಿದ 15 ಕ್ಷೇತ್ರ, ಕುಮಾರಸ್ವಾಮಿ ಗೆದ್ದ ಎರಡರಲ್ಲಿ ಬಿಡಲಿರುವ 1 ಕ್ಷೇತ್ರ ಮತ್ತು ಚುನಾವಣೆ ಮುಂದೂಡಲ್ಪಟ್ಟಿದ್ದ ಆರ್ ಆರ್ ನಗರ ಮತ್ತು ಜಯನಗರ ಈ ಎರಡೂ ಕ್ಷೇತ್ರಗಳನ್ನು ಸೇರಿಸಿ ಒಟ್ಟು 18 ಕ್ಷೇತ್ರಗಳಲ್ಲಿ 9 ಸ್ಥಾನವನ್ನು ಬಿಜೆಪಿ ಗೆದ್ದರೂ 5 ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿ ಆಳ್ವಿಕೆ ಮಾಡುತ್ತದೆ.
ಸಾಧ್ಯತೆ 2 :
ಬಿಜೆಪಿ ಬಹುಮತ ಸಾಬೀತಿಗೆ ವಿಫಲವಾಗಿ ರಾಜ್ಯಪಾಲರು ಕಾಂಗ್ರೆಸ್, ಜೆಡಿಎಸ್ ಮತ್ತು ಇತರೆ ಪಕ್ಷಗಳಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರೆ, ಬಿಜೆಪಿ ಆಪರೇಷನ್ ನಡೆಸಿ ಬಿಜೆಪಿ ಎದುರು ಪಕ್ಷದ 7 ಜನರನ್ನು ಸಭೆಗೆ ಗೈರಾಗುವಂತೆ ನೋಡಿಕೊಂಡರೆ ಅವರ ಸಂಖ್ಯಾ ಬಲ 111 ಕ್ಕೆ ಕುಸಿದು ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುತ್ತಾರೆ. 2019 ರವರೆಗೂ ರಾಷ್ಟ್ರಪತಿ ಆಳ್ವಿಕೆ ನಡೆಸಿ 2019 ರ ಲೋಕ ಸಭಾ ಚುನಾವಣೆಯ ಜೊತೆಗೆ ರಾಜ್ಯ ಚುನಾವಣೆಯೂ ನಡೆದರೆ ಮೋದಿ ಅಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದು ಐದು ವರ್ಷ ಸುಭದ್ರ ಸರ್ಕಾರ ಆಡಳಿತ ನಡೆಸುತ್ತದೆ.
ಸಾಧ್ಯತೆ 3 : ಜೆಡಿಎಸ್ + ಕಾಂಗ್ರೆಸ್ + ಇತರೆ ಪಕ್ಷಗಳಿಗೆ ಖಿಚಡಿ ಸರ್ಕಾರ ರಚನೆ ಮಾಡಲು ಬಿಟ್ಟು ಅವರ ಕಿತ್ತಾಟಗಳನ್ನು ನೋಡಿ ಜನ ರೋಸಿಹೋಗುವಂತೆ ಮಾಡಿ 2019 ರಲ್ಲಿ ಸರ್ಕಾರ ಉರುಳಿಸಿ ಅಥವಾ ಅದೇ ಬಿದ್ದುಹೋಗಲು ಬಿಟ್ಟು ಲೋಕಸಭಾ ಚುನಾವಣೆಯೊಟ್ಟಿಗೆ ರಾಜ್ಯದ ಚುನಾವಣೆಯೂ ನಡೆಯುವಂತೆ ನೋಡಿಕೊಂಡು ಗೆಲುವು ಸಾಧಿಸಿ ಅಧಿಕಾರ ಹಿಡಿದು 5 ವರ್ಷ ಸರ್ಕಾರ ನಡೆಸುವುದು.
#ಸಾಧ್ಯಾಸಾಧ್ಯತೆ
ರಾಜಿನಾಮೆ ಹೇಗೆ ಕೊಡಿಸುವುದು??
1. ಹಣದ ಆಸೆ
2. ಸಚಿವ ಸ್ಥಾನದ ಆಮಿಷ
3. ಜಾತಿಯ ಆಧಾರದಲ್ಲಿ ಲಿಂಗಾಯತ ಶಾಸಕರನ್ನು ಬಿಜೆಪಿಗೆ ಸೆಳೆಯುವುದು
4. ವಿರೋಧಿ ಪಕ್ಷದೊಳಗೆ ಇರುವ ಅತೃಪ್ತ ವಿರೋಧಿ ಬಣಗಳನ್ನು ಬಿಜೆಪಿಯತ್ತ ಸೆಳೆಯುವುದು.
ಉದಾ : ಡಿಕೆಶಿ ಬಣ, ಸಿದ್ಧರಾಮಯ್ಯ ಬಣ(!!), etc etc
.
No comments:
Post a Comment