Monday, 16 April 2018

ಭಾರತದ ಸಂವಿಧಾನದ ಭಾಗಗಳು:* Indian Constitution


*ಭಾರತದ ಸಂವಿಧಾನದ ಭಾಗಗಳು:*

*ಸಂವಿಧಾನದ ಭಾಗಗಳು ಮತ್ತು ಪ್ರಮುಖ ಅಧ್ಯಾಯಗಳು*

#ಭಾಗ1. ಕೇಂದ್ರ ಮತ್ತು ಅದರ ಆಡಳಿತದ ಮೇಲೆ.( ಲೇಖನಗಳು 1-4).

#ಭಾಗ2. ಪೌರತ್ವ ದ ಮೇಲೆ. (ಲೇಖನಗಳು 5-11).

#ಭಾಗ3. ಮೂಲಭೂತ ಹಕ್ಕುಗಳು
(ಲೇಖನಗಳು 12-35).
14-18 ಸಮಾನತೆಯ ಹಕ್ಕು,
19-22 ಸ್ವಾತಂತ್ರ್ಯದ ಹಕ್ಕು,
23-24 ಶೋಷಣೆಯ ವಿರುದ್ಧ ಹಕ್ಕು,
25-28 ಧಾರ್ಮಿಕ ಸ್ವಾತಂತ್ರ್ಯದ ಹಕ್ಕು,
29-31 ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು,
32-35 ಸಾಂವಿಧಾನಿಕ ಪರಿಹಾರದ ಹಕ್ಕು.

#ಭಾಗ4. ರಾಜ್ಯನೀತಿ ನಿರ್ದೇಶಕ ತತ್ವಗಳು.
ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತುಗಳನ್ನೊಳಗೊಂಡ ಲೇಖನಗಳು 36 – 51.

#ಭಾಗ4(A). ಪ್ರತಿ ಭಾರತೀಯ ನಾಗರಿಕನ ಮೂಲಭೂತ ಕರ್ತವ್ಯಗಳು.

#ಭಾಗ5. ಭಾರತದ ಒಕ್ಕೂಟ.

ಅಧ್ಯಾಯ 1 –  ಕಾರ್ಯಾಂಗ ದ ಬಗ್ಗೆ .
(ಲೇಖನಗಳು 52-78)

ಅಧ್ಯಾಯ 2 –  ಸಂಸತ್ತು ಬಗ್ಗೆ.
(ಲೇಖನಗಳು 79-122)

ಅಧ್ಯಾಯ 3-   ರಾಷ್ಟ್ರಪತಿಗಳ ಶಾಸಕಾಂಗ ಅಧಿಕಾರಗಳ ಬಗ್ಗೆ.
( ಲೇಖನ ೧೨೩ ಸಂಸತ್ತಿನ ವಿರಾಮಕಾಲದಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಝ್ನೆ ಹೊರಡಿಸುವ ಬಗ್ಗೆ)

ಅಧ್ಯಾಯ 4-   ಕೇಂದ್ರ ನ್ಯಾಯಾಂಗದ ಬಗ್ಗೆ.
( ಲೇಖನಗಳು 124-147)

ಅಧ್ಯಾಯ 5-   ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಬಗ್ಗೆ.
( ಲೇಖನಗಳು 148-151)

# ಭಾಗ6. ರಾಜ್ಯಗಳ ಬಗ್ಗೆ ಲೇಖನಗಳು.

#ಭಾಗ7. ಮೊದಲನೆ ಅನುಚ್ಛೇಧದ ‘ಬಿ’ ಭಾಗದಲ್ಲಿರುವ ರಾಜ್ಯಗಳ ಬಗ್ಗೆ ಲೇಖನಗಳು.

#ಭಾಗ8. ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ.

#ಭಾಗ9. ಪಂಚಾಯತಿ ಪದ್ಧತಿಯ ಬಗ್ಗೆ ಲೇಖನಗಳು.

#ಭಾಗ9.(A). ನಗರಪಾಲಿಕೆಗಳ ಬಗ್ಗೆ ಲೇಖನಗಳು.

#ಭಾಗ10.  ಪರಿಶಿಷ್ಟ ಪಂಗಡಗಳಿರುವ ಪ್ರದೇಶಗಳ ಬಗ್ಗೆ ಲೇಖನಗಳು.

# ಭಾಗ11.  ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳ ಬಗ್ಗೆ.

#ಭಾಗ12.  ಹಣಕಾಸು, ಸ್ವತ್ತು, ಒಪ್ಪಂದಗಳು ಮತ್ತು ದಾವೆಗಳ ಬಗ್ಗೆ.

#ಭಾಗ13.  ಭಾರತದ ಸಂಸ್ಥಾನದ ಒಳಗೆ ವ್ಯಾಪಾರ ಮತ್ತು ವಾಣಿಜ್ಯಗಳ ಬಗ್ಗೆ ಲೇಖನಗಳು.

#ಭಾಗ14.  ರಾಜ್ಯ ಮತ್ತು ಕೇಂದ್ರದಡಿಯಲ್ಲಿರುವ ಸೇವೆಗಳ ಬಗ್ಗೆ ಲೇಖನಗಳು.

#ಭಾಗ14(A).  ಆಯೋಗಗಳ ಬಗ್ಗೆ ಲೇಖನಗಳು.

#ಭಾಗ15.  ಚುನಾವಣೆಗಳ ಬಗೆಗಿನ ಲೇಖನಗಳನ್ನು ಒಳಗೊಂಡಿದೆ.

#ಭಾಗ16.  ಕೆಲ ವರ್ಗಗಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವ ಬಗ್ಗೆ ಲೇಖನಗಳು.

#ಭಾಗ17.   ಅಧಿಕೃತ ಭಾಷೆಗಳ ಬಗ್ಗೆ ಲೇಖನಗಳು.

#ಭಾಗ18.  ತುರ್ತುಪರಿಸ್ಥಿತಿಗಳ ಮುನ್ನೇರ್ಪಾಡಿನ ಬಗ್ಗೆ ಲೇಖನಗಳು.

#ಭಾಗ19.   ಇತರೆ ವಿಷಯಗಳು.

#ಭಾಗ20.   ಸಂವಿಧಾನದ ತಿದ್ದುಪಡಿಯ ಬಗೆಗಿನ ಲೇಖನಗಳು.

#ಭಾಗ21.  ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ ಮುನ್ನೇರ್ಪಾಡುಗಳ ಬಗ್ಗೆ ಲೇಖನಗಳು.

# ಭಾಗ_22.  ಸಂಕ್ಷಿಪ್ತ ಶೀರ್ಷಿಕೆ, ಪ್ರಾರಂಭದ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆಯ ಬಗ್ಗೆ ಲೇಖನಗಳು.

No comments:

Post a Comment