Thursday, 19 April 2018

Current affairs

*____________________*

*ಚಂದ್ರಯಾನ-2 ಉಡಾವಣೆ ಅಕ್ಟೋಬರ್-ನವೆಂಬರ್ ಗೆ ಮುಂದೂಡಿಕೆ: ಇಸ್ರೋ*

*ನವದೆಹಲಿ: ಈ ತಿಂಗಳಲ್ಲಿ ಉಡಾವಣೆಯಾಗಬೇಕಿದ್ದ ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಉಡಾವಣೆ ಅಕ್ಟೋಬರ್ - ನವೆಬಂರ್ ತಿಂಗಳಿಗೆ ಮುಂದೂಡಿಕೆಯಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ ಶಿವನ್ ಅವರು ಬುಧವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.*

👉 *ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಚಂದ್ರಯಾನ-2 ಉಡಾವಣೆ ಮಾಡಲಾಗುವುದು ಎಂದು ಶಿವನ್ ಅವರು ಇಂದು ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರಿಗೆ ತಿಳಿಸಿರುವುದಾಗಿ ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.*

👉 *ಚಂದ್ರಯಾನ - 2 ಉಡಾವಣೆ ಮಾಡುವ ಮುನ್ನ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸುವಂತೆ ರಾಷ್ಟ್ರ ಮಟ್ಟದ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಚಂದ್ರಯಾನ ಉಡಾವಣೆ ಮುಂದೂಡಲಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.*

👉 *ಚಂದ್ರಯಾನ-2 ನಲ್ಲಿ ಇಸ್ರೋ, ಗ್ರಹವೊಂದರ ಮೇಲ್ಮೈನಲ್ಲಿ ಉರುಳುತ್ತ ಮಾದರಿಯನ್ನು ಸಂಗ್ರಹಿಸುವ 'ರೋವರ್‌' ಎಂಬ ತಂತ್ರಜ್ಞಾನವನ್ನುಇದೇ ಮೊದಲ ಬಾರಿಗೆ ಬಳಕೆ ಮಾಡುತ್ತಿದೆ. ಭೂಮಿಯ ಉಪಗ್ರಹ ಚಂದ್ರನ ಅಂಗಳಕ್ಕೆ ಇಸ್ರೋ ಕಳುಹಿಸುತ್ತಿರುವ 2ನೇ ಉಪಗ್ರಹ ಇದಾಗಿದೆ.*

👉 *ಇತ್ತೀಚಿನ ವರ್ಷಗಳಲ್ಲಿ ಇಸ್ರೋ ಹಲವಾರು ಐತಿಹಾಸಿಕ ಸಾಧನೆಗಳನ್ನು ಮಾಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಒಂದೇ ಏಟಿಗೆ ಎರಡು ಕಕ್ಷೆಗಳಿಗೆ 104 ಉಪಗ್ರಹಗಳನ್ನು ತಲುಪಿಸುವ ಮೂಲಕ ಮೇರು ಸಾಧನೆ ಮಾಡಿತ್ತು.*

👉 *2008 ಅಕ್ಟೋಬರ್‌ 22ರಲ್ಲಿ, ಆಂಧ್ರ ಪ್ರದೇಶದ ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಚಂದ್ರಯಾನ-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-1 ಮೂಲಕ ಚಂದ್ರನ ಅಂಗಳದಲ್ಲಿ ನೀರು ಪತ್ತೆ ಮಾಡಿದ ಖ್ಯಾತಿ ಹೊಂದಿದೆ.*
*______________________*

No comments:

Post a Comment