ಚುನಾವಣೆ ಮತ್ತು ಚುನಾವಣಾ ಆಯೋಗದ ಕುರಿತ ಪ್ರಶ್ನೋತ್ತರಗಳು*
1. ಚುನಾವಣೆ ಪದದ ಮೂಲ ಪದ ಯಾವುದು?
Ans : ಚುನಾವಣೆ ಪದದ ಮೂಲ ಪದ ಎಲಿಗೆರೆ{eligere}
2. ಚುನಾವಣೆ ಎಂದರೇನು?
Ans :ಮತದಾರರು ಮತ ನೀಡುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚುನಾವಣೆ ಎನ್ನುವರು.
3. ಸಾರ್ವತ್ರಿಕ ಚುನಾವಣೆ ಎಂದರೇನು?
Ans :ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ಸಾರ್ವತ್ರಿಕ ಚುನಾವಣೆ ಎನ್ನುವರು.ಉದಾ:2014ರ ಏಪ್ರಿಲ್ ಹಾಗು ಮೇನಲ್ಲಿ ನಡೆದ ಭಾರತದಲ್ಲಿನ ಚುನಾವಣೆಗಳು.
4. ಉಪ ಚುನಾವಣೆ ಎಂದರೇನು?
Ans :ಒಬ್ಬ ಚುನಾಯಿತ ಪ್ರತಿನಿಧಿಯ ರಾಜೀನಾಮೆ,ಮರಣ ಅಥವ ಅನರ್ಹತೆಯಿಂದ ತೆರವಾಗುವ ಸ್ಥಾನಕ್ಕೆ ಆರು ತಿಂಗಳೊಳಗೆ ಜರುಗುವ ಚುನಾವಣೆಗೆ ಉಪ ಚುನಾವಣೆ ಎನ್ನುವರು.
5. ಮರು ಚುನಾವಣೆ ಎಂದರೇನು?
Ans :ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತಗಟ್ಟೆಯ ವಶ, ಮತ ಯಂತ್ರದಲ್ಲಿನ ತೊಂದರೆ, ಮತ ಪಟ್ಟಿಯಲ್ಲಿನ ದೋಷಗಳಿಂದ ನಿರ್ದಿಷ್ಟ ಮತಗಟ್ಟೆಯ ಚುನಾವಣೆಯನ್ನು ಮುಂದೂಡಿ ನಡೆಸಲಾಗುವ ಚುನಾವಣೆಗೆ ಮರು ಚುನಾವಣೆ ಎನ್ನುವರು.
6. ಮಧ್ಯಂತರ ಚುನಾವಣೆ ಎಂದರೇನು?
Ans :ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕಿಂತ ಮೊದಲೇ ಜರುಗುವ ಚುನಾವಣೆಯಲ್ಲಿ ಮತ ನೀಡುವುದನ್ನು ಮಧ್ಯಂತರ ಚುನಾವಣೆ ಎನ್ನುವರು.ಉದಾ:2004ರಲ್ಲಿ ಐದು ವರ್ಷ ಅವಧಿ ಮುಗಿಯುವುದಕ್ಕಿಂತ ಮೊದಲೇ ಜರುಗಿದ ಲೋಕಸಭೆಯ ಚುನಾವಣೆಗಳು.
7. ಪ್ರತ್ಯಕ್ಷ ಚುನಾವಣೆ ಎಂದರೇನು?
Ans : ಮತದಾರರು ಮಧ್ಯವರ್ತಿಗಳ ನೆರವಿಲ್ಲದೆ ತಾವೇ ನೇರವಾಗಿ ಮತ ನೀಡುವ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕೆ ಪ್ರತ್ಯಕ್ಷ ಚುನಾವಣೆ ಎನ್ನುವರು.
8. ಪ್ರತ್ಯಕ್ಷ ಚುನಾವಣೆಗೆ ಉದಾಹರಣೆ ಕೊಡಿ.
Ans : ಭಾರತದಲ್ಲಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳು.
9. ಪರೋಕ್ಷ ಚುನಾವಣೆ ಎಂದರೇನು?
Ans : ದ್ದೇಶದ ಮುಖ್ಯಸ್ಥ ಜನರಿಂದ ನೇರವಾಗಿ ಮತ ಪಡೆಯದೇ ಜನರ ಪ್ರತಿನಿಧಿಗಳಿಂದ ಮತ ಪಡೆಯುವುದನ್ನು ಪರೋಕ್ಷ ಚುನಾವಣೆ ಎನ್ನುವರು.
10. ಪರೋಕ್ಷ ಚುನಾವಣೆಗೆ ಉದಾಹರಣೆ ಕೊಡಿ.
Ans : ರಾಷ್ಟ್ರಪತಿ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ.
11. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು?
Ans : ಜಾತಿ,ಲಿಂಗ,ಧರ್ಮ,ವರ್ಣ ಮುಂತಾದವುಗಳ ಆಧಾರದ ಮೇಲೆ ತಾರತಮ್ಯ ಮಾಡದೇ ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಅರ್ಹ ಪ್ರಜೆಗಳಿಗೆಲ್ಲ ಮತ ನೀಡಲು ಅವಕಾಶವಿರುವ ಚುನಾವಣೆಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನುವರು.
12. ಭಾರತದಲ್ಲಿ ಮತ ಚಲಾಯಿಸಲು ಕನಿಷ್ಟ ವಯೋಮಿತಿ ಎಷ್ಟು?
Ans : ಭಾರತದಲ್ಲಿ ಮತ ಚಲಾಯಿಸಲು ಮತದಾರನಿಗೆ ಕನಿಷ್ಟ ವಯೋಮಿತಿ 18 ವರ್ಷಗಳು.
13. ಭಾರತ ಚುನಾವಣಾ ಆಯೋಗದಲ್ಲಿ ಎಷ್ಟು ಸದಸ್ಯರಿದ್ದಾರೆ?
Ans : ಭಾರತ ಚುನಾವಣಾ ಆಯೋಗದಲ್ಲಿ ಮೂವರು ಸದಸ್ಯರಿದ್ದಾರೆ.
14. ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ಯಾರು ನೇಮಿಸುತ್ತಾರೆ?
Ans : ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ರಾಷ್ಟ್ರಪತಿ ನೇಮಿಸುತ್ತಾರೆ
15. ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರವಧಿ ಎಷ್ಟು?
Ans : ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರವಧಿ 6 ವರ್ಷಗಳು.
16. EVM ಅನ್ನು ವಿಸ್ತರಿಸಿ.
Ans : EVM ಅನ್ನು ವಿಸ್ತರಿಸಿದರೆ ವಿದ್ಯುನ್ಮಾನ ಮತ ಯಂತ್ರ [ELECTRONIC VOTING MASSION] ಎಂದಾಗುತ್ತದೆ.
17. EPIC ಅನ್ನು ವಿಸ್ತರಿಸಿ.
Ans : EPIC ಅನ್ನು ವಿಸ್ತರಿಸಿದರೆ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ [ELECTORS PHOTO IDENTITY CARD] ಎಂದಾಗುತ್ತದೆ.
18. ಮತದಾರನ ಗುರುತಿನ ಚೀಟಿ ಎಂದರೇನು?
Ans : ಮತದಾರನ ಭಾವಚಿತ್ರ,ವಿಳಾಸ,ಮತಕ್ಷೇತ್ರ ಸಂಖೆ ಇತ್ಯಾದಿಗಳನ್ನುಳ್ಳ ಚುನಾವಣಾ ಆಯೋಗ ಹಂಚಿದ ಪತ್ರವೇ ಮತದಾರನ ಗುರುತಿನ ಚೀಟಿಯಾಗಿದೆ.
19. ವಿದ್ಯುನ್ಮಾನ ಮತ ಯಂತ್ರ ಎಂದರೇನು?
Ans : ಮತದಾರ ಸುಲಭವಾಗಿ ಮತ ನೀಡಲು ನೆರವಾಗುವ ವಿದ್ಯುತ್ ಚಾಲಿತ ಯಂತ್ರವೇ ವಿದ್ಯುನ್ಮಾನ ಮತ ಯಂತ್ರವಾಗಿದೆ.
20. ರಾಜಕೀಯ ಪಕ್ಷ ಎಂದರೇನು?
Ans : ರಾಜಕೀಯವಾಗಿ ಏಕಾಭಿಪ್ರಾಯ ಹೊಂದಿದ್ದು,ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸರ್ಕಾರವನ್ನು ನಿಯಂತ್ರಿಸಲು ಸಂಘಟಿತವಾದ ಜನರ ಗುಂಪಿಗೆ ರಾಜಕೀಯ ಪಕ್ಷ ಎನ್ನಬಹುದು.
21. ಭಾರತದಲ್ಲಿ ಎಂತಹ ಪಕ್ಷಪದ್ಧತಿ ಇದೆ?
Ans :ಭಾರತದಲ್ಲಿ ಬಹು ಪಕ್ಷಪದ್ಧತಿ ಇದೆ.
22. ರಾಷ್ಟ್ರೀಯ ಪಕ್ಷ ಎಂದರೇನು?
Ans : ರಾಷ್ಟ್ರದ ಹಿತಾಸಕ್ತಿ ಕಾಪಾಡಲು ರಾಷ್ಟ್ರದಾದ್ಯಂತ ಅಸ್ತಿತ್ವದಲ್ಲಿರುವ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಎನ್ನುವರು.
23. ಪ್ರಾದೇಶಿಕ ಪಕ್ಷ ಎಂದರೇನು?
Ans : ನಿರ್ದಿಷ್ಟ ಪ್ರದೇಶದ ನೆಲ.ಜಲ.ಭಾಷೆಯಂತಹ ಹಿತಾಸಕ್ತಿಗಳನ್ನು ಕಾಪಾಡಲು ಬದ್ಧವಾಗಿರುವ ರಾಜಕೀಯ ಪಕ್ಷವೇ ಪ್ರಾದೇಶಿಕ ಪಕ್ಷವಾಗಿದೆ.
24. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು ಯಾರು?
Ans : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು A O ಹ್ಯೂಮ್.
25. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಸ್ಥಾಪನೆಯಾಯಿತು?
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1885ರಲ್ಲಿ ಸ್ಥಾಪನೆಯಾಯಿತು.
26. NDA ಅನ್ನು ವಿಸ್ತರಿಸಿ.
Ans : NDA ಅನ್ನು ವಿಸ್ತರಿಸಿದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ [NATIONAL DEMOCRATIC ALLIANCE] ಎಂದಾಗುತ್ತದೆ.
27. UPA ವಿಸ್ತರಿಸಿ.
Ans : UPA ವಿಸ್ತರಿಸಿದರೆ ಸಂಯುಕ್ತ ಪ್ರಗತಿಪರ ಒಕ್ಕೂಟ [UNITED PROGRESSIVE ALLIANCE] ಎಂದಾಗುತ್ತದೆ.
28. BJP ಪಕ್ಷ ಯಾವಾಗ ಅಸ್ಥಿತ್ವಕ್ಕೆ ಬಂದಿತು?
Ans : BJP ಪಕ್ಷ 1980ರಲ್ಲಿ ಅಸ್ಥಿತ್ವಕ್ಕೆ ಬಂದಿತು.
29. ಭಾರತೀಯ ಕಮ್ಯುನಿಷ್ಟ್ ಪಕ್ಷ ಯಾವಾಗ ಅಸ್ಥಿತ್ವಕ್ಕೆ ಬಂದಿತು?
Ans : ಭಾರತೀಯ ಕಮ್ಯುನಿಷ್ಟ್ ಪಕ್ಷ 1924ರಲ್ಲಿ ಅಸ್ಥಿತ್ವಕ್ಕೆ ಬಂದಿತು.
30. ಪಕ್ಷಾಂತರ ಎಂದರೇನು?
Ans : ಒಬ್ಬ ಚುನಾಯಿತ ಪ್ರತಿನಿಧಿಯು ತನ್ನ ಪಕ್ಷಕ್ಕೆ ರಾಜೀನಾಮೆ ನೀಡದೇ ಬೇರೊಂದು ಪಕ್ಷ ಸೇರುವುದನ್ನು ಪಕ್ಷಾಂತರ ಎನ್ನುವರು.
31. ಪಕ್ಷಾಂತರ ನಿಷೇಧ ಕಾಯಿದೆಯು ಯಾವಾಗ ಜಾರಿಗೊಂಡಿತು?
Ans : ಪಕ್ಷಾಂತರ ನಿಷೇಧ ಕಾಯಿದೆಯು 1985ರಲ್ಲಿ ಜಾರಿಗೊಂಡಿತು.
32. ಪಕ್ಷಾಂತರ ನಿಷೇಧ ಕಾಯಿದೆ ಎಂದರೇನು?
Ans : ಚುನಾಯಿತ ಪ್ರತಿನಿಧಿಗಳ ಪಕ್ಷಾಂತರದ ಚಟುವಟಿಕೆಗಳನ್ನು ತಡೆಯಲು ಜಾರಿಗೊಂಡ ಕಾನೂನೇ ಪಕ್ಷಾಂತರ ನಿಷೇಧ ಕಾಯಿದೆಯಾಗಿದೆ.
33. ಪಕ್ಷಾಂತರಕ್ಕಿರುವ ಇತರ ಹೆಸರುಗಳಾವುವು?
Ans : ಫ಼್ಲೋರ್ ಕ್ರಾಸಿಂಗ್ ಹಾಗು ಕಾರ್ಪೇಟ್ ಕ್ರಾಸಿಂಗ್ ಎಂಬುವು ಪಕ್ಷಾಂತರಕ್ಕಿರುವ ಇತರ ಹೆಸರುಗಳಾಗಿವೆ.
34. ಪಕ್ಷಾಂತರ ನಿಷೇಧ ಕಾಯಿದೆಯನ್ನು ಯಾರು ಜಾರಿಗೆ ತಂದರು?
Ans : ಪಕ್ಷಾಂತರ ನಿಷೇಧ ಕಾಯಿದೆಯನ್ನು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಜಾರಿಗೆ ತಂದರು.
35. NOTA ಅನ್ನು ವಿಸ್ತರಿಸಿ.
Ans : NOTA ಅನ್ನು ವಿಸ್ತರಿಸಿದರೆ ಮೇಲಿನ ಯಾರೂ ನನ್ನ ಆಯ್ಕೆಯಲ್ಲ [NON OF THE ABOVE] ಎಂದಾಗುತ್ತದೆ.
36. ಭಾರತದ ಮೊದಲ ಪ್ರಧಾನಿ ಯಾರು?
Ans : ಭಾರತದ ಮೊದಲ ಪ್ರಧಾನಿ ಕಾಂಗ್ರೆಸ್ ಪಕ್ಷದ ಜವಾಹರಲಾಲ್ ನೆಹರು.
37. ಭಾರತದ ಮೊದಲ ಮಹಿಳಾ ಪ್ರಧಾನಿ ಯಾರು?
Ans : ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ.
38. ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಯಾರು?
Ans : ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಮುರಾರ್ಜಿ ದೇಸಾಯಿ.
39. ಭಾರತದ ಮೊದಲ ಕನ್ನಡಿಗ ಪ್ರಧಾನಿ ಯಾರು?
Ans : ಭಾರತದ ಮೊದಲ ಕನ್ನಡಿಗ ಪ್ರಧಾನಿ H.D. ದೇವೇಗೌಡ
40. ಭಾರತದ ಮೊದಲ ದಲಿತ ಮುಖ್ಯಮಂತ್ರಿ ಯಾರು?
Ans : ಭಾರತದ ಮೊದಲ ದಲಿತ ಮುಖ್ಯಮಂತ್ರಿ ಉತ್ತರ ಪ್ರದೇಶದ ಮಾಯಾವತಿ
No comments:
Post a Comment