Tuesday, 20 March 2018

ಅವಿಶ್ವಾಸ ಗೊತ್ತುವಳಿ ಮಂಡನೆ. ( No confidence motion )*

*##ಮಾಹಿತಿ ವೇದಿಕೆ##*

    *##ನಿಮಗಿದು ಗೊತ್ತಿರಲಿ##*
============
*ಅವಿಶ್ವಾಸ ಗೊತ್ತುವಳಿ ಮಂಡನೆ. ( No confidence motion )*
===============
*ವೈಎಸ್ಆರ್ ಕಾಂಗ್ರೆಸ್ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ NDA ಸರಕಾರಕ್ಕೆ No confidence motionವನ್ನು ಪ್ರಸ್ತಾಪಿಸಿದೆ. NDA ಸರ್ಕಾರದ ಅಧಿಕಾರಾವಧಿಯಲ್ಲಿ ಇದೇ ಮೊದಲ No confidence motion ಆಗಿದೆ. ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಪಡೆಯಲು ಲೋಕಸಭೆಯ 50 ಸದಸ್ಯರ ಬೆಂಬಲ ಬೇಕಾಗುತ್ತದೆ. ಆದರೆ ಲೋಕಸಭೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ನ ಒಂಬತ್ತು ಸಂಸದರಷ್ಟೇ ಇದ್ದಾರೆ. 536 ಸ್ಥಾನಗಳಿರುವ ಲೋಕಸಭೆಯಲ್ಲಿ ಬಿಜೆಪಿಯೊಂದೇ 274 ಸದಸ್ಯರ ಬಲ ಹೊಂದಿದೆ.*
=============
*ಏನಿದು ಅವಿಶ್ವಾಸ ಗೊತ್ತುವಳಿ ಮಂಡನೆ..?*
##############
*ಲೋಕಸಭೆಯಲ್ಲಿ ಸಂಪೂರ್ಣ ಮಂತ್ರಿ ಮಂಡಲದ ವಿರುದ್ಧ ಸರಕಾರದ ಮೇಲೆ ಭರವಸೆ ಇರದಿದ್ದಾಗ ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಮಾಡಲಾಗುತ್ತದೆ. ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಪಡೆಯಲು ಲೋಕಸಭೆಯ 50 ಸದಸ್ಯರ ಬೆಂಬಲ ಬೇಕಾಗುತ್ತದೆ. ಈ ನಿಲುವಳಿಗೆ ಪ್ರಧಾನಿ ಅಥವಾ ಸಚಿವರು ಪ್ರತ್ಯುತ್ತರ ನೀಡುತ್ತಾರೆ. ಸರ್ಕಾರವು ಬಹುಮತವನ್ನು ಸಾಬೀತು ಮಾಡಲು ವಿಫಲವಾದರೆ ರಾಜೀನಾಮೆ ನೀಡಬೇಕಾಗುತ್ತದೆ. ಒಂದು ವೇಳೆ ಪ್ರಧಾನಿ ರಾಜೀನಾಮೆ ನೀಡಲು ನಿರಕರಿಸಿದರೆ ರಾಷ್ಟ್ರಪತಿಯು ಅವರನ್ನು ಒತ್ತಾಯಪೂರ್ವಕವಾಗಿ ತೆಗೆದುಹಾಕುತ್ತಾರೆ. ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಯಾವುದೇ ಪ್ರಧಾನ ಮಂತ್ರಿಯನ್ನು ಇಲ್ಲಿಯವರೆಗೆ ಬಲವಂತವಾಗಿ ತೆಗೆದುಹಾಕಲಾಗಿಲ್ಲ.* *ರಾಜ್ಯಸಭೆಯುadjournment motion, censure motion ಅಥವಾ no-confidence motion ಗಳನ್ನು ಸರಕಾರದ ವಿರುದ್ಧ ಹೊರಡಿಸುವಂತಿಲ್ಲ.* *ಸಂವಿಧಾನದಲ್ಲಿ "no-confidence motion" ಬಗ್ಗೆ ಉಲ್ಲೇಖವಿಲ್ಲ.*

#############

No comments:

Post a Comment