👉Mission KAS-2018👈
🌻 *ಪ್ರಚಲಿತ ಘಟನೆಗಳು* 🌻
🍀ಭಾರತೀಯ ರಾಯಭಾರ ಕಚೇರಿಯ ದೂರವಾಣಿ ಲೈನ್ ದುರ್ಬಳಕೆ🍀
👉ವಾಷಿಂಗ್ಟನ್: ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ದೂರವಾಣಿಯ ಲೈನ್ ಬಳಸಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
👉ತಮ್ಮ ಕಚೇರಿಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಈ ಹುನ್ನಾರ ನಡೆದಿದ್ದು, ಇದರ ಬಗ್ಗೆ ಆಂತರಿಕ ತನಿಖೆ ನಡೆಸಿ ಕರೆಗಳ ಮೇ ನಿಗಾ ವಹಿಸುವಂತೆ ಅಮೆರಿಕ ಸರ್ಕಾರಕ್ಕೆ ರಾಯಭಾರ ಕಚೇರಿ ಹೇಳಿದೆ.
👉‘ಭಾರತೀಯ ಪ್ರಜೆಗಳಿಗೆ ಕರೆ ಮಾಡಿ ಅವರ ಕ್ರೆಡಿಟ್ ಕಾರ್ಡ್, ಪಾಸ್‌ಪೋರ್ಟ್ ಮತ್ತಿತರ ವೈಯಕ್ತಿಕ ಮಾಹಿತಿಗಳಲ್ಲಿ ತಪ್ಪು ಇರುವುದಾಗಿ ನಂಬಿಸಲಾಗುತ್ತದೆ.
👉 ಆ ಮೂಲಕ ಅವರಿಂದ ಹಣದ ಬೇಡಿಕೆಯೊಡ್ಡಿ, ಇವುಗಳನ್ನು ಸರಿಪಡಿಸುವುದಾಗಿ ಹೇಳಲಾಗುತ್ತಿದೆ. ಈ ಕೃತ್ಯ ಮುಂದುವರಿದರೆ ಭಾರತ ಹಾಗೂ ಅಮೆರಿಕದ ಭದ್ರತಾ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
👉ಅಮೆರಿಕದಲ್ಲಿ ವಾಸಿಸುತ್ತಿರುವ ಕೆಲ ಭಾರತೀಯ ಪ್ರಜೆಗಳು ಇಂತಹ ಕರೆಗಳನ್ನು ಸ್ವೀಕರಿಸಿದ್ದು, ಅವರು ಈ ಬಗ್ಗೆ ರಾಯಭಾರ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವೀಸಾ ಅರ್ಜಿದಾರರು ಕೂಡಾ ಇಂತಹ ಕರೆಗಳನ್ನು ಸ್ವೀಕರಿಸಿದ್ದಾರೆ.
👉ದೂರು ದಾಖಲಾಗುತ್ತಿದ್ದಂತೆಯೇ ಭಾರತೀಯ ರಾಯಭಾರಿ ಅಧಿಕಾರಿಗಳು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
👉 ಯಾವ ಬ್ಯಾಂಕ್ ಖಾತೆಗೆ ಜನರು ಹಣ ವರ್ಗಾವಣೆ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ
🌻 *ಚುಟುಕು ಮಾಹಿತಿ*🌻
🌞 *ಭಾರತದ ರಾಯಭಾರ ಕಛೇರಿ*🌞
👉ಸ್ಥಳ : ವಾಷಿಂಗ್ಟನ್ ಡಿಸಿ
👉ವಿಳಾಸ : 2107 ಮ್ಯಾಸಚೂಸೆಟ್ಸ್ ಅವೆನ್ಯೂ , NW
👉ಅಂಬಾಸಿಡ : ಶ್ರೀ.ನವ್ತೆಜ್ ಸರ್ನಾ
👉ವೆಬ್ಸೈಟ್ : http://www.indianembassy.org
👉ಭಾರತವು ನ್ಯೂಯಾರ್ಕ್ ನಗರ , ಸ್ಯಾನ್ ಫ್ರಾನ್ಸಿಸ್ಕೊ , ಅಟ್ಲಾಂಟಾ , ಹೂಸ್ಟನ್ ಮತ್ತು ಚಿಕಾಗೊಗಳಲ್ಲಿಯೂ ಸಹ ದೂತಾವಾಸಗಳನ್ನು ಹೊಂದಿದೆ , ಅವುಗಳು ಎಲ್ಲಾ ಭಾರತೀಯ ದೂತಾವಾಸದೊಂದಿಗೆ ಸಂಬಂಧ ಹೊಂದಿವೆ.
No comments:
Post a Comment