✅✅ *:ವಾಯು ಸಾರಿಗೆ :* ✅✅
*ಭಾರತದಲ್ಲಿ ವಾಯು ಸಾರಿಗೆಯು ಪ್ರಾಮುಖ್ಯತೆ ಪಡೆಯುತ್ತಿದೆ. ಬಾರತದ ಕೈಗಾರಿಕೋದ್ಯಮಿ ಜೆ.ಆರ್.ಡಿ ಟಾಟಾರವರು ಪ್ರಪ್ರಥಮವಾಗಿ 1931ರಲ್ಲಿ ಮುಂಬಯಿ ಮತ್ತು ಕರಾಚಿ ನಡುವೆ ವಿಮಾನ ಹಾರಾಟ ನಡೆಸಿದರು. 1953 ರಲ್ಲಿ ಸ್ಥಾಪಿಸಲ್ಪಟ್ಟ ಏರ್ ಇಂಡಿಯಾ ಸಂಸ್ಥೆಯು ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಒದಗಿಸುತ್ತದೆ. ಇಂಡಿಯನ್ ಏರ್‍ಲೈನ್ಸ್ ಸಂಸ್ಥೆಯು ದೇಶದ ಒಳಗೆ ಮತ್ತು ನೆರೆಯ ರಾಷ್ಟ್ರಗಳಿಗೆ ವಿಮಾನ ಯಾನ ಸೌಲಭ್ಯ ಒದಗಿಸುತ್ತಿದೆ. 2007ರಲ್ಲಿ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‍ಲೈನ್ಸ್‍ಗಳನ್ನು ವಿಲೀನಗೊಳಿಸಿ ಮಾರ್ಚ 30, 2007 ರಂದು ನ್ಯಾಷನಲ್ ಏವಿಯೇಷನ್ ಕಂಪನಿ ಆಫ್ ಇಂಡಿಯಾ ಲಿ. ಅನ್ನು ರಚಿಸಲಾಗಿದೆ. ಇದರ ಮುಖ್ಯ ಕಛೇರಿ ಮುಂಬಯಿಯಲ್ಲಿದೆ. ನೂತನ ಏರ್‍ಲೈನ್ಸ್‍ನ ಬ್ರಾಂಡ್ ಹೆಸರು ಏರ್ ಇಂಡಿಯಾ ಎಂದು ಹಾಗೂ ಇದರ ಲಾಂಛನ ಮಹಾರಾಜ. ಈಗ ಹೊಸ ಏರ್ ಇಂಡಿಯಾವು ದೇಶೀಯ ಮತ್ತು ಅಂತರರಾಷ್ಟ್ರೀಯ ವೈಮಾನಿಕ ಸೇವೆಗಳೆರಡನ್ನೂ ನೀಡುತ್ತಿದೆ. ಇದರ ಜೊತೆಗೆ ಇಂದು ಹಲವಾರು ಖಾಸಗಿ ವಿಮಾನಯಾನ ಸಂಸ್ಥೆಗಳು ಭಾರತದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಸೌಲಭ್ಯವನ್ನು ಒದಗಿಸುತ್ತಿದೆ.*
✈️✈️ *ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು : * ✈️✈️
*1. ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣ(ಡಂಡಂ) ಕೊಲ್ಕತ್ತಾ*
*2. ಜವಾಹರ್‍ಲಾಲ್ ನೆಹರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಸಾಂತಾ ಕ್ರುಜ್) ಮುಂಬಯಿ*
*3. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವದೆಹಲಿ*
*4. ರಾಜಾಸಾಂಸಿ ವಿಮಾನ ನಿಲ್ದಾಣ ಅಮೃತಸರ*
*5. ಮೀನಾಂಬಾಕಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಚೆನ್ನೈ*
*6. ಅಂತರರಾಷ್ಟ್ರೀಯ ವಿಮಾನ
ನಿಲ್ದಾಣ ತಿರುವನಂತಪುರಂ*
*7. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಗೋವಾ*
*8. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಗುವಾಹತಿ*
*9. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೊಚಿನ್*
*10. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೈದರಾಬಾದ್*
*11. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು*
*=============*
✈️✈️ *ಪ್ರಮುಖ ಅಂತರ್‍ದೇಶೀಯ ವಿಮಾನ ನಿಲ್ದಾಣಗಳು* ✈️✈️✈
* *ಬಜ್ಪೆ ಮಂಗಳೂರು(ಕರ್ನಾಟಕ)*
* *ಅವತಾಸಿ ಲಕ್ನೋ(ಉತ್ತರಪ್ರದೇಶ)*
* *ಬಾಮ್ರೌಲಿ
ಅಲಹಾಬಾದ್(ಉತ್ತರಪ್ರದೇಶ)*
* *ಚಕೇರಿ ಕನ್ಪುರ್(ಉತ್ತರಪ್ರದೇಶ)*
* *ಕಟಕ್ ಭುವನೇಶ್ವರ್(ಒರಿಸ್ಸಾ)*
* *ದೀಸಾ ಪಾಲನ್‍ಪುರ(ಗುಜರಾತ್)*
* *ದೀಪಾ ಪಾಲನ್‍ಪುರ(ಗುಜರಾತ್)*
* *ಡಾಬಕ್
* ಉದಯಪುರ(ರಾಜಸ್ಥಾನ)*
* *ಜುಹು ಮುಂಬಯಿ(ಮಹಾರಾಷ್ಟ್ರ)
*
* *ಕೇಸದ್ ಜುನಾಗಢ್(ಗುಜರಾತ್)*
* *ಸಪ್ಪರ್ ಜಂಗ್ ನವದೆಹಲ*ಿ
* *ಸೈಂಟ್ ಥಾಮಸ್ ಮೌಂಟ್ ಚೆನ್ನೈ*
*=============*
*ಹಡುಗು ಯಾನ : *
*==============*
*ಭಾರತದಲ್ಲಿ 4 ಪ್ರಮುಖ ಹಡಗು ಕಟ್ಟೆಗಳಿವೆ. ಅವಂದರೆ..*,
*1. ಗೌರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ಲಿ. ಕೊಲ್ಕತ್ತಾ*
*2. ಮರ್ಮಗೋವ ಡಾಕಾ ಲಿ.ಗೋವ*
*3. ಹಿಂದೂಸ್ತಾನ್ ಶಿಪ್‍ಯಾರ್ಡ್ ಲಿ ವಿಶಾಲಪಟ್ಟಣ*
*4. ಕೊಚಿನ್ ಶಿಪ್‍ಯಾರ್ಡ, ಕೊಚಿನ್*
*==============*
⤵️⤵️ *ಭಾರತದಲ್ಲಿ ಮುಖ್ಯ ಬಂದರುಗಳು : *⤵️⤵️
*=============*
*ಭಾರತದಲ್ಲಿ ಒಟ್ಟು 12 ದೊಡ್ಡ ಬಂದರುಗಲೀವೆ. ಅವುಗಳಲ್ಲಿ 6 ಬಂದರುಗಳು ಪಶ್ಚಿಮ ಕರಾವಳಿಯಲ್ಲಿದ್ದು, 6 ಬಂದರುಗಳು ಪರ್ವ ಕರಾವಳಿಯಲ್ಲಿವೆ. ಒಟ್ಟು 7600 ಕಿ.ಮೀ ಉದ್ದದ ಕರಾವಳಿ ತೀರವನ್ನು ಹೊಂದಿರುವ ಭಾರತವು 12 ದೊಡ್ಡ ಬಂದರುಗಳ ಜೊತೆಗೆ 181 ಉಪ ಬಂದರುಗಳನ್ನು ಮತ್ತು ಮಧ್ಯಂತರ ಬಂದರುಗಳನ್ನು ಹೊಂದಿದೆ. ಪಶ್ಚಿಮ ಕರಾವಳಿಯಲ್ಲಿರುವ ಪ್ರಮುಖ ಬಂದರುಗಳೆಂದರೆ: ಕಾಂಡ್ಲಾ, ಮುಂಬತಿ ಜವಾಹರಲಾಲ ನೆಹರು ಬಂದರು(ಮುಂಬಯಿ) ನವಮಂಗಳೂರು, ಮರ್ಮಗೋವಾ ಮತ್ತು ಕೊಚಿನ್ ಬಂದರುಗಳು ಪೂರ್ವ ಕರಾವಳಿಯಲ್ಲಿ ತೂತುಕುಡಿ ಚೆನ್ನೈ, ವಿಶಾಕಪಟ್ನಂ ಎನ್ನೋರ್(ಚೆನ್ನೈ ಸಮೀಪ) ಕೊಲ್ಕತ್ತ ಮತ್ತು ಪಾರಾದೀಪ್ ಬಂದರುಗಳಿವೆ.*
*=============*
📌📌 *ಭಾರತದ ಮುಖ್ಯ(ದೊಡ್ಡ) ಬಂಧರುಗಳು*📌📌
*ಬಂಧರು ರಾಜ್ಯ ಸಮುದ್ರ ತೀರ*
*1. ಮುಂಬಯಿ ಮಹಾರಾಷ್ಟ್ರ ಅರೇಬಿಯನ್ ಸಮುದ್ರ*
*2. ಕಲ್ಕತ್ತ ಪಶ್ಚಿಮ ಬಂಗಾಳ ಬಂಗಾಳ ಕೊಲ್ಲಿ*
*3. ಕೊಚಿನ್ ಕೇರಳ ಅರೇಬಿಯನ್ ಸಮುದ್ರ*
*4. ಚೆನ್ನೈ ಗೋವಾ ಅರೇಬಿಯನ್ ಸಮುದ್ರ*
*5. ಮರ್ಮಗೋವಾ ಗೋವಾ ಅರೇಬಿಯನ್ ಸಮದ್ರ*
*6. ನವ ಮಂಗಳೂರು ಕರ್ನಾಟಕ ಅರೇಬಿಯನ್ ಸಮುದ್*
*7. ತೂತುಕೂಡಿ ತಮಿಳುನಾಡು ಹಿಂದೂ ಮಹಾಸಾಗರ*
*8. ವಿಶಾಕ ಪಟ್ಟಣಂ ಆಂಧ್ರಪ್ರದೇಶ ಬಂಗಾಳ ಕೊಲ್ಲಿ*
*9. ಪಾರಾದೀಪ್ ಒರಿಸ್ಸಾ ಬಂಗಾಳ ಕೊಲ್ಲಿ*
*10. ನವಸೇವ ಮುಂಬಯಿ ಅರೇಬಿಯನ್ ಸಮುದ್*
*11. ಎನ್ನೋರ್ ತಮಿಳುನಾಡು ಬಂಗಾಳಕೊಲ್ಲಿ
🔴🔴 *ರಸ್ತೆ ಸಾರಿಗೆ : *🔴🔴
*===========*
*ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಸೇರಿದಂತೆ,*
*ಒಟ್ಟರೆ, 5,603,293 ಕಿ.ಮೀ ಉದ್ದದ ರಸ್ತೆ ಜಾಲವಿದೆ. ದೇಶಕ್ಕೆ ಸ್ವಾತಂತ್ರ್ಯ ಬರುವ ವೇಳೆಯಲ್ಲಿ ದೇಶದಲ್ಲಿದ್ದ ಒಟ್ಟು ರಾಷ್ಟ್ರೀಯ ಹೆದ್ದಾರಿಗಳು, 1,28000 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳು 4,70000 ಕಿ.ಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ 26,50,000 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳಿವೆ. ದೇಶದ ಒಟ್ಟಾರೆ ಶೇ. 70 ರಷ್ಟು ಸರಕು ಸಾಗಾಣಿಕೆ ಮತ್ತು ಶೇ. 85 ರಷ್ಟು ಪ್ರಯಾಣಿಕರ ಸಾಗಾಣಿಕೆಯು ರಸ್ತೆ ಸಾರಿಗೆಯ ಮೂಲಕ ನಡೆಯುತ್ತದೆ...
No comments:
Post a Comment