"ವಿಶ್ವವನ್ನೇ ಬದಲಾಯಿಸಿದ ಅಸಾಮಾನ್ಯ ಭಾರತೀಯ ವಿಜ್ಞಾನಿಗಳು ಇವರೆಲ್ಲರೂ!!
Kannada Gizbot 13 Mar. 2018 17:00
ಪ್ರತಿಯೊಬ್ಬರ ಜೀವನದಲ್ಲಿಯೂ ಅವರೆ ಗಮನಿಸದಷ್ಟು ಬದಲಾವಣೆ ಮಾಡಿರುವ ವಿಜ್ಞಾನವು ಇಂದು ದಿನ ಬಳಕೆಯ ವಸ್ತುಗಳಿಂದ ಹಿಡಿದು ಉನ್ನತ ತಂತ್ರಜ್ಞಾನದವರೆಗೆ ಸಾಗಿದೆ. ವಿಜ್ಞಾನದ ನೆರವಿಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಈಗ ಜೀವನವೇ ವಿಜ್ಞಾನ!!
ಇನ್ನು ವಿಶ್ವ ವಿಜ್ಞಾನ ಲೋಕಕ್ಕೆ ಭಾರತೀಯರ ಕೊಡುಗೆ ಏನು ಎಂದು ಪ್ರಶ್ನಿಸಿದರೆ ಎಲ್ಲರಿಗೂ ಥಟ್ಟನೆ ನೆನಪಾಗುವುದು 'ಸೊನ್ನೆ' ಎಂದು ಮಾತ್ರ! ಇಡೀ ವಿಶ್ವಕ್ಕೆ ಭಾರತೀಯರು ಸೊನ್ನೆಯನ್ನು ನೀಡಿರುವುದು ಅದ್ಬುತವೇ ಸರಿ. ಆದರೆ, ಸೊನ್ನೆಯೊಂದನ್ನು ಬಿಟ್ಟು ಭಾರತೀಯರು ವಿಶ್ವಕ್ಕೆ ನೀಡಿರುವ ಕೊಡುಗೆಗಳನ್ನು ನೆನಪಿಸಿಕೊಳ್ಳದೇ ಇರುವುದು ಮಾತ್ರ ದುರಂತ.!!
scientists
ಹಾಗೆಯೇ ವಿಜ್ಞಾನಿಗಳು ಎಂದರೆ ಐನ್‌ಸ್ಟೀನ್, ಐಸಾಕ್ ನ್ಯೂಟನ್ ಮತ್ತು ಸ್ಟೀಫನ್ ಹಾಕಿಂಗ್ ಎಂದು ಹೇಳುತ್ತಾರೆ ಹೊರತು ಭಾರತದ ಯಾವೊರ್ವ ಸಾಧಕ ವಿಜ್ಞಾನಿಯನ್ನು ಸಹ ನೆನೆಸಿಕೊಳ್ಳುವುದಿಲ್ಲ.! ಹಾಗಾಗಿ, ಭಾರತ ಕಂಡಂತಹ ಅಸಾಮಾನ್ಯ 7 ಜನ ಭಾರತೀಯ ವಿಜ್ಞಾನಿಗಳನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳೋಣ ಎಂಬುದಕ್ಕೆ ಇಂದಿನ ಲೇಖನ.!!
ಸಿ.ವಿ. ರಾಮನ್!!
ವಿಶ್ವದ ಭೌತ ವಿಜ್ಞಾನಕ್ಕೆ ಭಾರೀ ಕೊಡುಗೆಯನ್ನು ನೀಡಿದ ಸಿ.ವಿ. ರಾಮನ್ ಅವರು 1888 ನವೆಂಬರ್ 7ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜನಿಸಿದರು. 1930ರಲ್ಲಿ . ಇವರು ಆವಿಷ್ಕರಿಸಿದ ರಾಮನ್ ಪರಿಣಾಮಗಳಿಗೆ ಭೌತಶಾಸ್ತ್ರ ವಿಭಾಗದಲ್ಲಿ 'ನೊಬೆಲ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು 1970 ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮೃತಪಟ್ಟರು.
ಸರ್.ಎಂ ವಿಶ್ವೇಶ್ವರಯ್ಯ!!
1860ರಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಜನಿಸಿದ ಕರ್ನಾಟಕದ ಸುಪುತ್ರ ಸರ್.ಎಂ ವಿಶ್ವೇಶ್ವರಯ್ಯನವರು ವಿಶ್ವದ ಪ್ರಖ್ಯಾತ ಇಂಜಿನಿಯರ್‌ಗಳಲ್ಲಿ ಒಬ್ಬರು ಎಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಕರ್ನಾಟಕದಲ್ಲಿ ಕೆಆರ್ಎಸ್ ನಿರ್ಮಿಸಿದ ಇವರು ದೇಶದಲ್ಲಿ ಕಾಲುವೆ ನೀರಾವರಿ ವ್ಯವಸ್ಥೆ ನಿರ್ಮಾಣದಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಏಪ್ರಿಲ್ 14 1962ರಲ್ಲಿ ಈ ಭಾರತ ರತ್ನ ತನ್ನ ಸೇವೆಯನ್ನು ನಿಲ್ಲಿಸಿತು.!!
No comments:
Post a Comment