Sunday, 4 March 2018

Gk mcq for PSI, constable, SDA FDA

🌹🌹🌹🌹🌹🌹🌹

🔷Q). ಶಿವಾಜಿ ಜಯಂತಿಯನ್ನು ಎಂದು ಅಚರಿಸಲಾಯಿತು?

a) ಫೆಬ್ರುವರಿ 16
b) ಫೆಬ್ರುವರಿ 18
c) ಫೆಬ್ರುವರಿ 19
d) ಫೆಬ್ರುವರಿ 20
Answer) Description:
ಫೆಬ್ರುವರಿ 19 # 2018 ರ ಫೆಬ್ರುವರಿ 19 ರಂದು ಶಿವಾಜಿ ಜಯಂತಿಯನ್ನು ಆಚರಿಸಲಾಯಿತು. # ಛತ್ರಪತಿ ಶಿವಾಜಿಯವರು ಫೆಬ್ರುವರಿ 19, 1630 ರಂದು ಮಹಾರಾಷ್ಟ್ರದ ಶಿವನೇರಿ ಎಂಬಲ್ಲಿ ಜನಿಸಿದರು. # ಶಿವಾಜಿಯವರು ಏಪ್ರೀಲ್ 3, 1680 ರಲ್ಲಿ ನಿಧನರಾದರು

🔷Q). 2018ರ ಫೆಬ್ರುವರಿ 20 ರಂದು ರಾಜ್ಯ ಸರ್ಕಾರವು ಯಾರ ಜಯಂತಿಯನ್ನು ಆಚರಿಸಿತು?

a) ಕುವೆಂಪು ಜಯಂತಿ
b) ವಾಲ್ಮೀಕಿ ಜಯಂತಿ
c) ಸರ್ವಜ್ಞ ಜಯಂತಿ
d) ಶಿವಾಜಿ ಜಯಂತಿ
Answer) Description:
ಸರ್ವಜ್ಞ ಜಯಂತಿ # 2018ರ ಫೆಬ್ರುವರಿ 20 ರಂದು ರಾಜ್ಯ ಸರ್ಕಾರವು ಸಂತ ಕವಿ ಸರ್ವಜ್ಞ ಜಯಂತಿಯನ್ನು ಆಚರಿಸಿತು. ಸಂತ ಕವಿ ಸರ್ವಜ್ಞರು 16 ಶತಮಾನದಲ್ಲಿ ಜೀವಿಸಿದ್ದರು. ಇವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರಿನಲ್ಲಿ ಜನಿಸಿದ್ದರು.

🔷Q). ಯಾವ ರಾಷ್ಟ್ರವು 2019 ರಿಂದ "ಕಾರ್ಬನ್ ತೆರಿಗೆ" ವಿಧಿಸಲು ಅಲ್ಲಿನ ಸರ್ಕಾರವು ಮುಂದಾಗಿದೆ?

a) ನೇಪಾಳ
b) ಸಿಂಗಪುರ
c) ಚೀನಾ
d) ಆಸ್ಟ್ರೇಲಿಯಾ
Answer) Description:
ಸಿಂಗಪುರ # ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಮುಂದಿನ 2019 ರಿಂದ ಕಾರ್ಬನ್ ತೆರಿಗೆ ವಿಧಿಸಲು ಸಿಂಗಪುರ ಸರ್ಕಾರ ಮುಂದಾಗಿದೆ. # 2019 ರಿಂದ ಜಾಗತಿಕ ಹವಾಮಾನ ಒಪ್ಪಂದ ಸಿಂಗಪುರದಲ್ಲಿ ಕಾರ್ಯರೂಪಕ್ಕೆ ಬರಲಿದೆ.

🔷Q). ಇತ್ತೀಚೆಗೆ ಇ.ಎಸ್.ಪಿ.ಎನ್ ಕ್ರಿಕೆಟ್ ಇನ್ಫೊ ವಾರ್ಷಿಕ ಪ್ರಶಸ್ತಿ ಪಡೆದ ಭಾರತದ ಆಟಗಾರರು ಯಾರು?

a) ಹರ್ಮನ್ ಪ್ರೀತ್ ಕೌರ್.
b) ಕುಲದೀಪ್ ಯಾದವ್.
c) ಯಜುವೇಂದ್ರ ಚಾಹಲ್.
d) ಮೇಲಿನ ಎಲ್ಲರೂ
Answer) Description:
ಮೇಲಿನ ಎಲ್ಲರೂ # ಇತ್ತೀಚೆಗೆ ಇ.ಎಸ್.ಪಿ.ಎನ್ ಕ್ರಿಕೆಟ್ ಇನ್ಫೊ ವಾರ್ಷಿಕ ಪ್ರಶಸ್ತಿ ಯನ್ನು ಒಟ್ಟು 12 ಆಟಗಾರರಿಗೆ ನೀಡಿದ್ದಾರೆ. ಅದರಲ್ಲಿ 3 ಜನ ಭಾರತೀಯ ಆಟಗಾರರಾದ ಹರ್ಮನ್ ಪ್ರೀತ್ ಕೌರ್, ಕುಲದೀಪ್ ಯಾದವ್ , ಯಜುವೇಂದ್ರ ಚಾಹಲ್ ಮುಂತಾದವರು ಪಾತ್ರರಾಗಿದ್ದಾರೆ.

🔷Q). 2018 ರ ಕತಾರ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ನ ಫೈನಲ್ ನಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರು ಯಾರ ವಿರುದ್ದ ಪ್ರಶಸ್ತಿ ಜಯಿಸಿದ್ದಾರೆ

a) ಮರಿಯಾ ಶರಪೋವಾ
b) ವಿಕ್ಟೋರಿಯಾ ಅಜೆರೆಂಕಾ
c) ಗಾರ್ಬೈನ್ ಮುಗುರುಜಾ
d) ಏಂಜಲಿಕಾ ಕೆರ್ಬರ್
Answer) Description:
ಗಾರ್ಬೈನ್ ಮುಗುರುಜಾ # 2018 ರ ಕತಾರ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ನ ಫೈನಲ್ ನಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರು 3-6, 6-3, 6-4 ರ ಸೆಟ್ ಗಳಿಂದ ಸ್ಪೇನ್ ಆಟಗಾರ್ತಿ ಗಾರ್ಬೈನ್ ಮುಗುರುಜಾ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದಾರೆ.

🔷Q). ಇತ್ತೀಚೆಗೆ ಯಾವ ತಂಡದ ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರ್ತಿ ಅಲೆಕ್ಸ್ ಬ್ಲ್ಯಾಕ್ ವೆಲ್ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ?

a) ನ್ಯೂಜಿಲ್ಯಾಂಡ್
b) ಇಂಗ್ಲೆಂಡ್
c) ಆಸ್ಟ್ರೇಲಿಯಾ
d) ದಕ್ಷಿಣ ಆಫ್ರಿಕಾ
Answer) Description:
ಆಸ್ಟ್ರೇಲಿಯಾ # 2018 ರ ಫೆಬ್ರುವರಿ 19 ರಂದು ಆಸ್ಟ್ರೇಲಿಯಾ ತಂಡದ ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರ್ತಿ ಅಲೆಕ್ಸ್ ಬ್ಲ್ಯಾಕ್ ವೆಲ್ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. # 34 ವರ್ಷದ ಅಲೆಕ್ಸ್ ಬ್ಲ್ಯಾಕ್ ವೆಲ್ ಅವರು 2003 ರಲ್ಲಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಇವರು 5000ಕ್ಕಿಂತ ಹೆಚ್ಚು ರನ್ ದಾಖಲಿಸಿದ ಆಸ್ಟ್ರೇಲಿಯಾದ ನಾಲ್ಕನೇ ಆಟಗಾರ್ತಿಯಾಗಿದ್ದರು.

🔷Q). 2018 ರ ಐ.ಪಿ.ಎಲ್ ಟೂರ್ನಿಯ ಆಡಿಯೊ ಹಾಗೂ ವಿಡಿಯೋ ಪ್ರಸಾರದ ಹಕ್ಕುಗಳನ್ನು ಯಾವ ಟಿ.ವಿ ಚಾನೆಲ್ ಪಡೆದುಕೊಂಡಿದೆ?

a) ಸೋನಿ ಸಿಕ್ಸ್
b) ದಿ.ಸ್ಟಾರ್ ಇಂಡಿಯಾ
c) ಟೆನ್ ಸ್ಪೋರ್ಟ್ಸ್
d) ಜಿಯೋ ಚಾನೆಲ್
Answer) Description:
ದಿ.ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ # 2018 ರ ಐ.ಪಿ.ಎಲ್ ಟೂರ್ನಿಯ ಆಡಿಯೊ ಹಾಗೂ ವಿಡಿಯೋ ಪ್ರಸಾರದ ಹಕ್ಕುಗಳನ್ನು ದಿ.ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ.

🔷Q). ಇತ್ತೀಚೆಗೆ ಯಾವ ಕೇಂದ್ರ ಸಚಿವರು ಮಹದಾಯಿ ವಿವಾದವನ್ನು ನ್ಯಾಯಮಂಡಳಿ ಹೊರಗೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ದನಿರುವುದಾಗಿ ತಿಳಿಸಿದ್ದಾರೆ?

a) ಉಮಾಭಾರತಿ
b) ನಿತಿನ್ ಗಡ್ಕರಿ
c) ಪ್ರಹ್ಲಾದ್ ಜೋಶಿ
d) ರಾಜನಾಥ ಸಿಂಗ್
Answer) Description:
ನಿತಿನ್ ಗಡ್ಕರಿ # ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಜಲಸಂಪನ್ಮೂಲ ಸಚಿವರಾದ ನಿತಿನ್ ಗಡ್ಕರಿ ಅವರು ಮಹದಾಯಿ ವಿವಾದವನ್ನು ನ್ಯಾಯಮಂಡಳಿ ಹೊರಗೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಶೇ 100 ರಷ್ಟು ಸಿದ್ದನಿರುವುದಾಗಿ ತಿಳಿಸಿದ್ದಾರೆ.

No comments:

Post a Comment